ಬಾಲಿವುಡ್‌ನ ಜನಪ್ರಿಯ ಚಿತ್ರ ಜಬ್ ವಿ ಮೆಟ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರದಲ್ಲಿ ಕಾಣಿಸಿಕೊಂಡ ದಿವ್ಯ ಸೇತ್ ಪುತ್ರಿ ಮಿಹಿಕಾ ಸೇತ್ ನಿಧನರಾಗಿದ್ದಾರೆ. ಜುಲೈ 29 ರಂದು ತಾಯಿ, ಅಜ್ಜಿ ಜೊತೆ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದ ಮಿಹಿಕಿ ಇದೀಗ ಬಾರದ ಲೋಕಕ್ಕೆ ತೆರಳಿದ್ದಾರೆ.
ಮುಂಬೈ(ಆ.06) ಬಾಲಿವುಡ್ ಖ್ಯಾತ ಕುಟುಂಬದಲ್ಲಿ ಮೇಲಿಂದ ಮೇಲೆ ಆಘಾತಕಾರಿ ಸುದ್ದಿಗಳೇ ಹೊರಬರುತ್ತಿದೆ. ಇತ್ತೀಚೆಗೆ ಟಿ ಸೀರಿಸ್ ಸಹ ಸಂಸ್ಥಾಪಕ, ಬಾಲಿವುಡ್ ನಟ ಕ್ರಿಶನ್ ಕುಮಾರ್ ಪುತ್ರಿ ತಿಶಾ ಕುಮಾರ್ ಮೃತಪಟ್ಟ ಬೆನ್ನಲ್ಲೇ, ಇದೀಗ ಬಾಲಿವುಡ್ ನಟಿ ದಿವ್ಯ ಸೇತ್ ಕುಟುಂಬದಲ್ಲಿ ಮೌನ ಆವರಿಸಿದೆ. ದಿವ್ಯ ಸೇತ್ ಪುತ್ರಿ ಮಿಹಿಕಾ ಸೇತ್ ಶಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ತಾಯಿ ಹಾಗೂ ಅಜ್ಜಿ ಜೊತೆ ಕಾಣಿಸಿಕೊಂಡ ಪೋಟೋವನ್ನು ದಿವ್ಯ ಸೇತ್ ಹಂಚಿಕೊಂಡಿದ್ದರು. ಈ ಸಂಭ್ರಮದ ಕ್ಷಣದ ಒಂದೇ ವಾರದಲ್ಲಿ ಮಹಿಕಾ ಸೇತ್ ಮೃತಪಟ್ಟಿದ್ದಾರೆ.
ಕೆಲ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಿಹಿಕಾ ಸೇತ್ ಆಗಸ್ಟ್ ತಿಂಗಳ ಆರಂಭದಲ್ಲಿ ಜ್ವರ ಕಾಣಿಸಿಕೊಂಡಿದೆ. ಆಸ್ಪತ್ರೆ ದಾಖಲಾದ ಮಹಿಕಾ ಚೇತರಿಸಿಕೊಳ್ಳಲಿಲ್ಲ. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದೆ. ಆಗಸ್ಟ್ 5ರ ಸಂಜೆ ಮಹಿಕಾ ಮೃತಪಟ್ಟಿದ್ದಾರೆ. ಈ ಕುರಿತು ತಾಯಿ ದಿವ್ಯ ಸೇತ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.ಆಗಸ್ಟ್ 8 ರಂದು ಮಹಿಕಾ ಸೇತ್ ಗೌರವ ನಮನ ಪ್ರಾರ್ಥನೆ ನಡೆಯಲಿದೆ ಎಂದು ದಿವ್ಯ ಸೇತ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಅಪರ್ಣಾ ಬೆನ್ನಲ್ಲೇ ಕ್ಯಾನ್ಸರ್‌ಗೆ ಬಲಿಯಾದ ಬಾಲಿವುಡ್ ನಿರ್ಮಾಪಕನ ಪುತ್ರಿ ತಿಶಾ!
ಕಳೆದ ವಾರ ದಿವ್ಯ ಸೇತ್ ಮೂರು ಪೀಳಿಗೆಯ ಫೋಟೋ ಹಂಚಿಕೊಂಡಿದ್ದರು. ಜಬ್ ವಿ ಮೆಟ್ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ದಿವ್ಯ ಸೇತ್, ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿ ಸುಷ್ಮಾ ಸೇತ್ ಪುತ್ರಿ. ಜುಲೈ 29 ರಂದು ದಿವ್ಯ ಸೇತ್, ಸುಷ್ಮಾ ಸೇತ್ ಹಾಗೂ ಮಹಿಕಾ ಸೇತ್ ಜೊತೆಯಾಗಿರುವ ಫೋಟೋ ಹಂಚಿಕೊಂಡಿದ್ದರು. ಮೂರು ತಲೆಮಾರಿನ ಫೋಟೋ ಹಂಚಿಕೊಂಡು ಸಂಭ್ರಮಪಟ್ಟಿದ್ದರು.
ರಂಗಭೂಮಿ ನಟಿಯಾಗಿ, ಬಾಲಿವುಡ್ ನಟಿಯಾಗಿ ಹೆಸರು ಮಾಡಿರುವ ಸುಷ್ಮಾ ಸೇತ್ ಹಲವು ಸೂಪರ್ ಹಿಟ್ ಚಿತ್ರ ನೀಡಿದ್ದಾರೆ. 1978ರಲ್ಲಿ ಬಾಲಿವುಡ್‌ನ ಜೂನೂನ್ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟ ಸುಷ್ಮಾ ಸೇತ್, ಸಿಲ್ಸಿಲಾ, ಪ್ರೇಮ್ ರೋಗ್, ರಾಮ್ ತೇರಿ ಗಂಗಾ ಮೈಲಿ, ದೀವಾನಾ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
;
ಸುಷ್ಮಾ ಪುತ್ರಿ ದಿವ್ಯ ಸೇತ್ ಕೂಡ ಹಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸುಷ್ಮಾ ಸೇತ್‌ಗೆ ಸಿಕ್ಕಿದ್ದಷ್ಟು ಅವಕಾಶಗಳು ಸಿಗಲಿಲ್ಲ. ಸುಷ್ಮಾ ಸೇತ್ ಮೊಮ್ಮಗಲು ಮಿಹಿಕಾ ಸೇತ್ ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಇಹಲೋಕ ತ್ಯಜಿಸಿದ್ದಾಳೆ.
ಕೃಷ್ಣಕುಮಾರ್ ತೊಡೆ ಮೇಲೆ ಕುಸಿದು ಬಿದ್ದ ಸೋನು ನಿಗಮ್, ತಿಷಾ ಸಾವಿಗೆ ಕಂಗಾಲಾದ ಖ್ಯಾತ ಸಿಂಗರ್!