ಇತ್ತೀಚೆಗೆ ನಿರೂಪಕ ಸೃಜನ್ ಲೋಕೇಶ್ ಅವರು ರಜನೀಕಾಂತ್ ಹೇಳಿದ ಕಥೆಯನ್ನು ಹೇಳಿದ್ದಾರೆ. ಈ ಕಥೆ ಅವರಿಗೆ ತುಂಬ ಇಷ್ಟ ಅಂತೆ.
ಸೆಲೆಬ್ರಿಟಿಗಳೇ ಇರಲೀ, ಸಾಧಕರೇ ಇರಲೀ ಅವರನ್ನು ನೋಡಿದಾಗ ಎಂಥ ಯಶಸ್ಸು, ಹೆಸರು, ಹಣ ಎಂದು ಮಾತನಾಡುತ್ತೇವೆ. ಆದರೆ ಅವರ ಹಿಂದಿನ ಪರಿಶ್ರಮ, ಮನಸ್ಥಿತಿಗಳ ಬಗ್ಗೆ ಯಾರೂ ಯೋಚಿಸೋದಿಲ್ಲ. ಇತ್ತೀಚೆಗೆ ಗೋಲ್ಡ್ ಕ್ಲಾಸ್ ವಿಥ್ ಮಯೂರ ಶೋನಲ್ಲಿ ಸೃಜನ್ ಲೋಕೇಶ್ ಅವರು ಮಾತನಾಡುತ್ತ, ರಜನೀಕಾಂತ್ ಹೇಳಿದ ಕಥೆಯನ್ನು ನೆನಪಿಸಿಕೊಂಡಿದ್ದಾರೆ. ಈ ಕಥೆ ಈಗ ವೈರಲ್ ಆಗ್ತಿದೆ.
“ರಜನೀಕಾಂತ್ ಅವರು ಒಂದು ಕಥೆ ಹೇಳ್ತಾರೆ, ಆ ಕಥೆ ನನಗೆ ತುಂಬ ಇಷ್ಟ. ಮೂರು ಜನ ಬೆಟ್ಟ ಹತ್ತಿರುತ್ತಾರೆ. ಆಗ ಅಲ್ಲಿದ್ದವರೆಲ್ಲ ಹಾವು ಬಂತು, ಚೇಳು ಬಂತು, ಹುಲಿ ಬಂತು ಅಂತ ಹೇಳುತ್ತಿರುತ್ತಾರೆ. ಅವರಲ್ಲಿ ಓರ್ವ ಮಾತ್ರ ಬೆಟ್ಟ ಹತ್ತಿದ್ದಾನೆ. ಯಾಕೆ ಅಂದರೆ ಅವನಿಗೆ ಇವಿ ಕೇಳಿಸುತ್ತಿರಲಿಲ್ಲ. ಕಿರುಚಿತ್ತದ್ದವರ ಮಾತು ಉಳಿದವರಿಗೆ ಕೇಳಿಸಿತು. ಹೀಗಾಗಿ ಅವರು ಹತ್ತಲು ಆಗಲಿಲ್ಲ. ನಾವು ಏನಾದರೂ ಮಾಡುವಾಗ ಸಾಕಷ್ಟು ಜನರು ಕಿರುಚುತ್ತಾರೆ. ಹಾಗಾಗಿ ನಾವು ಯಾರ ಮಾತನ್ನು ಕೇಳಬಾರದು. ಈ ಕಥೆಯಲ್ಲಿ ತುಂಬ ಒಳಾರ್ಥಗಳಿವೆ” ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.
75ರ ನಟನ ಜೊತೆ ಪೂಜಾ ಹೆಗ್ಡೆ ಐಟಂ ಡ್ಯಾನ್ಸ್, ಸಾಂಗ್ ಹಿಟ್ ಆದ್ರೂ ಮತ್ತೆ ಫೇಮಸ್!
ಸೃಜನ್ ಲೋಕೇಶ್ ಏನಂದ್ರು?
ಸೃಜನ್ ಲೋಕೇಶ್ ಮಾತನಾಡಿ, “ನಾನು ಯಾವ ಕಾಂಟ್ರವರ್ಸಿ, ಗಾಸಿಪ್‌ಗೆ ರಿಯಾಕ್ಟ್ ಮಾಡೋದಿಲ್ಲ. ನನ್ನ ತಾಯಿ, ನನ್ನ ಹೆಂಡ್ತಿಗೆ ನಾನು ಏನು ಅಂತ ಗೊತ್ತಿದೆ. ಜಿಮ್, ಮನೆ, ಶೂಟಿಂಗ್ ಇಷ್ಟೇ ನನ್ನ ಬದುಕು. ಈಗಲಂತೂ ನಾನು ಎರಡು ಕಿವಿ ಮುಚ್ಚಿಕೊಂಡು ಕೆಲಸ ಮಾಡುತ್ತೇನೆ. ಕೆಲಸದ ಮೂಲಕ ನಾನು ಎಲ್ಲರಿಗೂ ಉತ್ತರ ಕೊಡಬೇಕು. ನಾನು ಯಾರ ಬಗ್ಗೆಯೂ ಹಿಂದೆ ಮಾತಾಡೋದಿಲ್ಲ, ಅದು ನನಗೆ ಇಷ್ಟ ಆಗೋದಿಲ್ಲ. ನನ್ನ ಬಗ್ಗೆ ಇನ್ನೊಬ್ಬರು ನನ್ನ ಬೆನ್ನ ಹಿಂದೆ ಮಾತಾಡೋದು ಇಷ್ಟ ಇಲ್ಲ ಅಂದ್ಮೇಲೆ ನಾನು ಯಾಕೆ ಬೇರೆಯವರ ಬಗ್ಗೆ ಅವರ ಬೆನ್ನ ಹಿಂದೆ ಮಾತಾಡಲಿ? ನಮ್ಮಲ್ಲಿ, ನಮ್ಮ ಜೀವನದಲ್ಲಿ ಇಂದು ಏನಿದೆ? ಏನಿಲ್ಲ ಅಂತ ಗೊತ್ತಿದೆ, ಆದರೆ ನಾವು ಎಷ್ಟು ದಿನಗಳ ಕಾಲ ಬದುಕ್ತೀವಿ ಅಂತ ಗೊತ್ತಾ? ಹೀಗಾಗಿ ಇದೆಲ್ಲವೂ ಅನಗತ್ಯ” ಎಂದು ಹೇಳಿದ್ದಾರೆ.
ಅಪ್ಪಟ ಕನ್ನಡಿಗ, ನಮ್ಮ ಹೆಮ್ಮೆಯ ರಜನಿಕಾಂತ್: ತಲೈವಾ ಬಾಳಿನ ರೋಚಕ ಅಧ್ಯಾಯ!
ಸೃಜನ್ ಲೋಕೇಶ್ ಮಾತನಾಡಿ, “ನನ್ನ ಆತ್ಮೀಯನ ಸ್ನೇಹಿತನ ಜೊತೆ ನಾನು ಮಾತನಾಡುತ್ತಿಲ್ಲ. ಯಾರೋ ಏನೋ ಹೇಳಿದರು ಆ ಅಂತೆ ಕಂತೆಗಳಿಗೆ ನಮ್ಮ ಸಂಬಂಧ ಹಾಳಾಯ್ತು ಅಂದ್ರೆ ನಾನು ಏನು ಮಾಡಲಿ? ಭಗವಂತ ನಮಗೆ ಏನು ಕೊಡಬೇಕೋ ಅದನ್ನು ಕೊಟ್ಟೇ ಕೊಡುತ್ತಾನೆ. ಭಗವಂತ ದಡ್ಡ ಅಲ್ಲ, ಯಾವುದೇ ಸಂಬಂಧ ಇರಲೀ ನಾವು ಎದುರುಗಡೆ ಕಿತ್ತಾಡಬೇಕು, ಅಲ್ಲೇ ನಮಗೆ ತುಂಬ ಲಾಭಗಳಿವೆ. ಅದನ್ನು ಬಿಟ್ಟು ಅವನು ಹಾಗೆ ಅಂದ, ಇವನು ಹಾಗೆ ಅಂದ ಅಂತ ಮಾತಾಡಬಾರದು. ಈ ರೀತಿ ಅಂತೆ ಕಂತೆ ಮಾತುಗಳನ್ನು ಕೇಳೋದರಿಂದ ಸಾಕಷ್ಟು ಸಂಬಂಧ ಹಾಳಾಗ್ತಿವೆ. ಅದಕ್ಕಾಗಿ ನಾನು ಎಲ್ಲರಿಂದ ದೂರ ಇದ್ದೇನೆ” ಎಂದು ಹೇಳಿದ್ದಾರೆ.