82ರ ಹರೆಯದಲ್ಲಿರುವ ನಟ ಅಮಿತಾಭ್ ಬಚ್ಚನ್ ಅವರು ಶಾರುಖ್ ಖಾನ್ರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ಏನಿದು ವಿಷಯ?
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಾಲಿವುಡ್ ಕಂಡ ಅಪರೂಪದ ನಟ. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದಿಂದ ಹಿಡಿದು ಈ 82ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ. 82ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ.
ಇಂತಿಪ್ಪ ಬಿಗ್-ಬಿ ತಮ್ಮ 82ನೇ ವಯಸ್ಸಿನಲ್ಲಿ, ನಟ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ. ಹೌದು. 2024-25ನೇ ಸಾಲಿನಲ್ಲಿ 340 ಕೋಟಿ ರೂಪಾಯಿ ಆದಾಯ ಗಳಿಸುವ ಜೊತೆಗೆ 120 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟುವ ಮೂಲಕ ಅಮಿತಾಭ್ ಶಾರುಖ್ರನ್ನು ಹಿಂದಕ್ಕಟ್ಟಿದ್ದಾರೆ. ಈ ಮೂಲಕ, ಭಾರತೀಯ ನಟರಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟ ಎಂಬ ಕೀರ್ತಿ ಪಡೆದಿದ್ದಾರೆ. ಇಲ್ಲಿಯವರೆಗೆ ಈ ಪಟ್ಟ ಶಾರುಖ್ ಖಾನ್ ಅವರಿಗೆ ಇತ್ತು. ಇದೇ 15ರಂದು ಅಮಿತಾಭ್ ಅವರು, ಮುಂಗಡ ತೆರಿಗೆ ರೂಪದಲ್ಲಿ 52.50 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ವರದಿಯಾಗಿದೆ.
ಎಲ್ಲರ ಹಾಗೆ ನಾನೂ ಹೆಂಡ್ತಿಗೆ ಭಯ ಪಡ್ತೇನೆ ಎಂದ ಅಮಿತಾಭ್, ಮಿಡ್ನೈಟ್ ಗುಟ್ಟು ಹೇಳಿಯೇ ಬಿಟ್ರು!
ಅಷ್ಟಕ್ಕೂ ನಟಿ ಇಷ್ಟೊಂದು ಸಂಪಾದನೆ ಮಾಡಲು ಕಾರಣವಾಗಿದ್ದು, ಎಲ್ಲರಿಗೂ ತಿಳಿದಿರುವಂತೆ ಅವರು ಸಿನಿಮಾ ಮಾತ್ರವಲ್ಲದೇ ಹಲವಾರು ಬ್ರಾಂಡ್ ಗಳ ರಾಯಭಾರಿಯೂ ಆಗಿದ್ದಾರೆ. ಅದರ ಜಾಹೀರಾತುಗಳಿಂದ ಜೊತೆಗೆ ಕೌನ್ ಬನೇಗಾ ಕರೋಡ್ಪತಿ ಷೋನಿಂದ ಕೋಟಿ ಕೋಟಿಯಲ್ಲಿ ಸಂಪಾದನೆ ಮಾಡುತ್ತಿದ್ದಾರೆ. ಅದರ ಜೊತೆಗೆ, ಈಗ ಕಲ್ಕಿ 2 ಸಿನಿಮಾಕ್ಕೆ ಅಮಿತಾಭ್ ರೆಡಿ ಕೂಡ ಆಗಿದ್ದಾರೆ. ಇನ್ನು ತೆರಿಗೆ ವಿಷಯಕ್ಕೆ ಬರುವುದಾದರೆ ನಂಬರ್ 1 ಸ್ಥಾನದಲ್ಲಿದ್ದ ಶಾರುಖ್ ನಂ.2ಗೆ ಹೋಗಿದ್ದಾರೆ. 2024-25ನೇ ಸಾಲಿನಲ್ಲಿ ಶಾರುಖ್ ಪಾವತಿಸಿದ್ದು 92 ಕೋಟಿ ರೂ. ತೆರಿಗೆ. ಅವರಿಗಿಂತ ಶೇ. 30ರಷ್ಟು ಜಾಸ್ತಿ ತೆರಿಗೆಯನ್ನು ಅಮಿತಾಭ್ ಬಚ್ಚನ್ ಪಾವತಿಸಿದ್ದಾರೆ. ತಮಿಳುನಟ ವಿಜಯ್ ಅವರು, ಈ ಪಟ್ಟಿಯಲ್ಲಿ ಟಾಪ್ 3ನೇ ಸ್ಥಾನದಲ್ಲಿದ್ದಾರೆ. ಇವರು 80 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ.
ಪ್ರತಿ ವರ್ಷ ಅತಿ ಹೆಚ್ಚು ತೆರಿಗೆ ಪಾವತಿಸುವವರ ಸಿನಿಮಾ ನಟರ ಪಟ್ಟಿ ಸಿದ್ಧವಾಗುತ್ತದೆ. ಅದರಂತೆ ಇದೀಗ ಸಿದ್ಧವಾಗಿರುವ ಪಟ್ಟಿಯಲ್ಲಿ ಅಮಿತಾಭ್ ನಂಬರ್ 1 ಪಟ್ಟಕ್ಕೇರಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ, 2023-24ನೇ ಸಾಲಿನಲ್ಲಿ ಅವರು ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರು. ಆ ವರ್ಷದಲ್ಲಿ ಅವರು 74 ಕೋಟಿ ರೂ. ತೆರಿಗೆ ಪಾವತಿಸಿದ್ದರು. ಈ ಬಾರಿ ಹೆಚ್ಚು ತೆರಿಗೆ ಹಾಗೂ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವ ಮೂಲಕ ಅವರು ನಂಬರ್ ಒನ್ ಸ್ಥಾನಕ್ಕೆ ಜಿಗಿದಿದ್ದಾರೆ. ನಟ ಸಲ್ಮಾನ್ ಖಾನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು, 2024-25ರಲ್ಲಿ 75 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ.
ಕೆಬಿಸಿ ಷೋನಲ್ಲಿ ಅಮಿತಾಭ್ ಟೇಕ್ವಾಂಡೋ ಕಿಕ್! 82ರ ನಟನ ಎನರ್ಜಿಗೆ ಪ್ರೇಕ್ಷಕರು ಬೆರಗು- ವಿಡಿಯೋ ವೈರಲ್