ಹಾರಿ ಹಾರಿ ಮೇಲೆ ಹೋಯ್ತು ಹೃತಿಕ್​ ಮಾಜಿ ಪತ್ನಿ ಡ್ರೆಸ್ಸು: ಬಾಯ್​ಫ್ರೆಂಡ್​ ಸುಸ್ತೋ ಸುಸ್ತು! ಕ್ಯಾಮೆರಾ ಎದುರೇ ಛೇ...

Published : Mar 18, 2025, 04:44 PM ISTUpdated : Mar 18, 2025, 04:51 PM IST
ಹಾರಿ ಹಾರಿ ಮೇಲೆ ಹೋಯ್ತು ಹೃತಿಕ್​ ಮಾಜಿ ಪತ್ನಿ ಡ್ರೆಸ್ಸು: ಬಾಯ್​ಫ್ರೆಂಡ್​ ಸುಸ್ತೋ ಸುಸ್ತು! ಕ್ಯಾಮೆರಾ ಎದುರೇ ಛೇ...

ಸಾರಾಂಶ

ಹೃತಿಕ್ ರೋಷನ್ ಮತ್ತು ಸುಸೈನ್ ಖಾನ್ ವಿಚ್ಛೇದನ ಪಡೆದಿದ್ದು, ಪ್ರಸ್ತುತ ಬೇರೆ ಸಂಬಂಧಗಳಲ್ಲಿದ್ದಾರೆ. ಹೃತಿಕ್ ಗಾಯಕಿ ಸಬಾ ಅಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಸುಸೈನ್ ಮಾಡೆಲ್ ಅರ್ಸ್ಲಾನ್ ಗೋನಿಯವರೊಂದಿಗೆ ಸಂಬಂಧ ಹೊಂದಿದ್ದಾರೆ. ಇತ್ತೀಚೆಗೆ, ಸಣ್ಣ ಡ್ರೆಸ್ ಧರಿಸಿದ್ದ ಸುಸೈನ್ ಫೋಟೋಶೂಟ್ ವೇಳೆ ಗಾಳಿಯಿಂದ ಮುಜುಗರಕ್ಕೊಳಗಾದರು. ಹೃತಿಕ್ ಮತ್ತು ಸಬಾ ಪ್ರವಾಸದಲ್ಲಿರುವ ಫೋಟೋಗಳು ವೈರಲ್ ಆಗಿವೆ.

ಬಾಲಿವುಡ್​ ನಟ ಹೃತಿಕ್​ ರೋಷನ್​ ಅವರು ಹೊಸ ಗರ್ಲ್​ಫ್ರೆಂಡ್​ ಜೊತೆ ಎಂಜಾಯ್​ ಮಾಡ್ತಿದ್ರೆ, ಅವರ ಮಾಜಿ ಪತ್ನಿ ಸುಸೈನ್​  ಖಾನ್​ ತಮ್ಮ ಬಾಯ್​ಫ್ರೆಂಡ್​ ಜೊತೆ ಜಾಲಿಯಾಗಿದ್ದಾರೆ. ಅಷ್ಟಕ್ಕೂ ಈ ಜೋಡಿ  ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮದ್ವೆಯಾಗಿರುವಾಗಲೇ ಕಂಗನಾ ರಣಾವತ್​ ಜೊತೆ ಅಫೇರ್​ ಇಟ್ಟುಕೊಂಡಿದ್ದ ಹೃತಿಕ್​ ಆಕೆಗೂ ಕೈಕೊಟ್ಟು, ಸುಸ್ಸಾನೇ ಖಾನ್​ಗೂ ಡಿವೋರ್ಸ್​ ಕೊಟ್ಟು, ಸದ್ಯ  ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದಾರೆ. ಇವರ ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು. ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅಂದಿರಲಿಲ್ಲ.  ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಅದೇ ಇನ್ನೊಂದೆಡೆ ಫ್ಯಾಷನ್​ ಡಿಸೈನರ್​ ಆಗಿರೋ ಸುಸ್ಸಾನೇ ಖಾನ್, ಮಾಡೆಲ್​ ಕೂಡ ಆಗಿದ್ದಾರೆ. ತಮಗಿಂತ ಸುಮಾರು ಹತ್ತು ವರ್ಷ ಚಿಕ್ಕವರಾಗಿರುವ  ನಟ ಆರ್ಸ್ಲಾನ್ ಗೋನಿಯ ಜೊತೆ ಡೇಟಿಂಗ್​ನಲ್ಲಿದ್ದಾರೆ.  

ಇದೀಗ, ಸುಸೈನ್​  ಖಾನ್​ ಅವರು ಕ್ಯಾಮೆರಾ ಎದುರೇ ಪೇಚಿಗೆ ಸಿಲುಕಿರುವ ಘಟನೆಯೊಂದು ನಡೆದಿದೆ. ಹಳೆಯ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಈಗೀಗ ನಟಿಯರಂತೂ ಪೈಪೋಟಿಗೆ ಬಿದ್ದವರಂತೆ ಚೋಟುದ್ದದ ಡ್ರೆಸ್​ ಹಾಕುತ್ತಾರೆ. ಅಲ್ಲಲ್ಲಿ ಮುಚ್ಚಿದ್ದು ಬಿಟ್ಟರೆ ಬಹುತೇಕ  ಅಂಗಾಂಗಳು ಕಾಣುತ್ತಲೇ ಇರುವುದು ಮಾಮೂಲಾಗಿದೆ. ಇನ್ನು ಕೆಲವರು ದೊಡ್ಡ ದೊಡ್ಡ ಪಾರ್ಟಿಗಳಿಗೆ ಬರುವಾಗ ಮೂರ್ನಾಲ್ಕು ಮಂದಿ ಹಿಡಿದುಯುವಷ್ಟು ತೂಕದ ಡ್ರೆಸ್​ ಹಾಕಿಕೊಂಡು ನಡೆದಾಡಲು ಪರದಾಡುತ್ತಾರೆ. ಅವರ ಡ್ರೆಸ್​ ಹಿಡಿದುಕೊಳ್ಳುವುದಕ್ಕಾಗಿಯೇ ನಾಲ್ಕೈದು ಸಹಾಯಕರನ್ನೂ ನೇಮಿಸಿಕೊಂಡಿರುತ್ತಾರೆ. ಹೈ ಹೀಲ್ಸ್​ ಚಪ್ಪಲಿ ಧರಿಸಿ, ನಡೆಯಲು ಆಗದೇ ಒದ್ದಾಡುತ್ತಾರೆ. ಭಾರಿ ಡ್ರೆಸ್​ ಕಾಲಿಗೆ ಎಟುಕಿ ಬೀಳಿರುವ ಉದಾಹರಣೆಗಳೂ ಇವೆ. ಇನ್ನು ಕೆಲವು ನಟಿಯರು ಇಡೀ ದೇಹ ಪ್ರದರ್ಶನ ಮಾಡುವಂಥ ಇಲ್ಲವೇ ಸಾಧ್ಯವಾದಷ್ಟು ಮೇಲೆ ಇರುವ ಮಿನಿ ಸ್ಕರ್ಟ್​ ಧರಿಸಿ ಬಂದು ಅದನ್ನು ಸರಿಪಡಿಸಿಕೊಳ್ಳುವುದರಲ್ಲಿಯೇ ದಿನ ಕಳೆಯುತ್ತಾರೆ. ಇವೆಲ್ಲಾ ನೋಡಿದಾಗ ಭಾರಿ ವಿಚಿತ್ರ ಎನಿಸಿದರೂ ಸಿನಿ ತಾರೆಯರ ಫ್ಯಾಷನ್​ ಲೋಕವೇ ಬಲು ವಿಚಿತ್ರ ಎನಿಸುವುದು ಉಂಟು. 

ಮದ್ವೆಯಾಗೋದಾಗಿ ನಂಬಿಸಿ ಮೋಸ ಮಾಡಿದ ಹೃತಿಕ್​ ರೋಷನ್​ ಬಗ್ಗೆ ಕಂಗನಾ ರಣಾವತ್​ ಓಪನ್​ ಮಾತು!

ಇದೀಗ   ಸುಸೈನ್​  ಖಾನ್​ಗೂ ಅದೇ ರೀತಿಯಾಗಿದೆ.  ಸುಸೈನ್​  ಖಾನ್​ ಚೋಟುದ್ದ ಡ್ರೆಸ್ ಹಾಕಿಕೊಂಡು ಬಂದು . ಬಾಯ್​ಫ್ರೆಂಡ್​​ ಜೊತೆಗೆ ಫೋಟೋಶೂಟ್​ ಮಾಡಿಸಿಕೊಳ್ತಿರುವಾಗಲೇ ಗಾಳಿ ಬೀಸಿದೆ. ಅಲ್ಲಿರುವ ಫ್ಯಾನ್​ನಿಂದ ಗಾಳಿ ಬಂತೋ ಅಥ್ವಾ ಬೇರೆಕಡೆಯಿಂದ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ಗಾಳಿ ಬೀಸಿದಾಗ ಈ ಚೋಟುದ್ದ ಡ್ರೆಸ್​ ಮೇಲೆ ಮೇಲೆ ಹೋಗಿದೆ. ಏನೇ ಮಾಡಿದರೂ ಡ್ರೆಸ್​ ಅನ್ನು  ಹಿಡಿದುಕೊಳ್ಳಲು ನಟಿಗೆ  ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು ಫೋಟೋಶೂಟ್​ ಮಾಡಿಕೊಳ್ಳದೇ ಮುಜುಗರಕ್ಕೆ  ಒಳಗಾಗಿ ಅಲ್ಲಿಂದ ಹೋದರು. ಇದನ್ನು ನೋಡಿ ಅವರ ಬಾಯ್​ಫ್ರೆಂಡ್​ ಸುಸ್ತು ಬಿದ್ದು ಹೋದರು. ಈ ವಿಡಿಯೋ ಸಕತ್​ ಟ್ರೋಲ್​ ಆಗುತ್ತಿದೆ. 

ಹೃತಿಕ್​ ರೋಷನ್​ ಬಿಟ್ಟ ಮೇಲೆ 49 ವರ್ಷದ ಸುಸೈನ್​  ಖಾನ್​ ಬಾಯ್​ಫ್ರೆಂಡ್​ ಜೊತೆ ಡೇಟಿಂಗ್​ನಲ್ಲಿದ್ದಾರೆ. ಈ ಸಮಯದಲ್ಲಿ ಇಂಥ ಡ್ರೆಸ್​ ಹಾಕಿ ಬಂದು ಈಗ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಅದೇ ಇನ್ನೊಂದೆಡೆ, ಹೃತಿಕ್​ ರೋಷನ್​  ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್​ ತೆಗೆದುಕೊಂಡಿರೋ ನಟ,  ವಿದೇಶಗಳಲ್ಲಿ ಆಗಾಗ್ಗೆ ಗರ್ಲ್​ಫ್ರೆಂಡ್​ ಜೊತೆ ಮೋಜು ಮಸ್ತಿಯಲ್ಲಿ ತೊಡಗಿ, ಅದರ ಫೋಟೋಗಳನ್ನು  ಶೇರ್ ಮಾಡಿಕೊಳ್ಳುತ್ತಿರುತ್ತಾರೆ.  ಮದುವೆಯ ಬಗ್ಗೆ ಏನೂ ಹೇಳದ ಈ ಜೋಡಿ ಮಾತ್ರ ಟೂರ್​ ಎಂಜಾಯ್​ ಮಾಡುತ್ತಿದ್ದು, ಅವರ ಫೋಟೋ ವೈರಲ್​ ಆಗುತ್ತಿವೆ.  

ಮಾಜಿ ಪತ್ನಿ ಹುಟ್ಟುಹಬ್ಬಕ್ಕೆ ಗರ್ಲ್​ಫ್ರೆಂಡ್​ ಜೊತೆ ಹೃತಿಕ್​ ಪ್ರತ್ಯಕ್ಷ! ಹೊಟ್ಟೆ ಉರಿಸಿಕೊಂಡದ್ದು ಅವಳಾ, ಇವಳಾ ಕೇಳಿದ ಫ್ಯಾನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?