ಸನ್ನಿ ಪುತ್ರನ ಮದ್ವೆಗೆ ಅಮಿತಾಭ್​ ಫ್ಯಾಮಿಲಿ ಗೈರು! ಇದಕ್ಕೆ ಕಾರಣವಾಯ್ತಾ '36' ನಂಬರ್​?

Published : Jun 21, 2023, 11:30 AM IST
ಸನ್ನಿ ಪುತ್ರನ ಮದ್ವೆಗೆ ಅಮಿತಾಭ್​ ಫ್ಯಾಮಿಲಿ ಗೈರು! ಇದಕ್ಕೆ ಕಾರಣವಾಯ್ತಾ '36' ನಂಬರ್​?

ಸಾರಾಂಶ

ನಟ ಸನ್ನಿ ಡಿಯೋಲ್​ ಅವರ ಪುತ್ರ ಕರಣ್​  ಮದ್ವೆಗೆ ಬಹುತೇಕ ಎಲ್ಲಾ ನಟ-ನಟಿಯರು ಬಂದಿದ್ದರೂ ಅಮಿತಾಭ್​ ಬಚ್ಚನ್​ ಕುಟುಂಬ ಗೈರಾಗಿತ್ತು. ಇದಕ್ಕೆ ಕಾರಣ 36 ನಂಬರಾ?   

ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ (Sunny Deol) ಅವರ ಪುತ್ರ ಕರಣ್ ಡಿಯೋಲ್ ಇದೇ 18ರಂದು  ತಮ್ಮ ದೀರ್ಘಕಾಲದ ಗೆಳತಿ ದಿಶಾ ಆಚಾರ್ಯ ಅವರೊಂದಿಗೆ ಹಸೆಮಣೆ ಏರಿದರು. ಈ ಮದುವೆಯ ತಯಾರಿ 15 ದಿನಗಳ ಮೊದಲೇ ಭರ್ಜರಿಯಾಗಿ ನಡೆಯುತ್ತಿತ್ತು. ಕರಣ್ ಡಿಯೋಲ್ ಮತ್ತು ದಿಶಾ ಆಚಾರ್ಯ ಅವರ ವಿವಾಹದ ಪೂರ್ವ ವಿವಾಹ ಕಾರ್ಯಕ್ರಮಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದವು.  ಇದೇ 15ರಂದು  ಸನ್ನಿ ಡಿಯೋಲ್ ಅವರ ಪ್ರೀತಿಯ ಅರಿಶಿಣ  ಮತ್ತು ಮೆಹೆಂದಿ ಸಮಾರಂಭಗಳನ್ನು ಆಯೋಜಿಸಲಾಗಿತ್ತು, ಇದರಲ್ಲಿ ಅನೇಕ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಇದೀಗ ಕರಣ್ ಅವರ ಮೆಹಂದಿ ಮತ್ತು ಹಲ್ದಿ ಸಮಾರಂಭದ ತಂದೆ ಸನ್ನಿ ಡಿಯೋಲ್, ಅಜ್ಜ ಧರ್ಮೇಂದ್ರ ಅವರು ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್​ ಆಗಿದ್ದವು. ದಂಪತಿ ಜೂನ್ 18 ರಂದು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಸ್ಟಾರ್ -ಸ್ಟಡ್ ರಿಸೆಪ್ಶನ್ ಪಾರ್ಟಿಯನ್ನು ಆಯೋಜಿಸಿದ್ದರು.  

ಇವೆಲ್ಲ ಕಾರ್ಯಕ್ರಮಗಳ ನಡುವೆ ಈಗ ಶಾಕಿಂಗ್​ ರೀತಿಯ ಮಾಹಿತಿಯೊಂದು ಲಭ್ಯವಾಗಿದೆ. ಅದೇನೆಂದರೆ, ಈ ಮದುವೆಗೆ ಬಾಲಿವುಡ್​ ನಟ-ನಟಿಯರ ದಂಡೇ ಬಂದಿದ್ದರೂ, ಅಮಿತಾಭ್​ ಬಚ್ಚನ್​ ಕುಟುಂಬ ಮಾತ್ರ ಕರಣ್​ ಡಿಯೋಲ್​  ಅವರ ಮದುವೆಗೆ ಹಾಜರು ಆಗಿರಲಿಲ್ಲ.  ಇದು ಬಿ-ಟೌನ್​ನಲ್ಲಿ (B Town) ಭರ್ಜರಿ ಚರ್ಚೆಯನ್ನು ಹುಟ್ಟುಹಾಕಿದ್ದು ಮಾತ್ರವಲ್ಲದೇ, ಚಿತ್ರರಂಗದ ಬಹುತೇಕ ಎಲ್ಲಾ ಮದುವೆ ಸಮಾರಂಭಗಳಿಗೆ ಹೋಗುವ ಬಚ್ಚನ್​ ಕುಟುಂಬ ಸನ್ನಿ ಡಿಯೋಲ್ ಪುತ್ರನ ಮದುವೆಗೆ ಏಕೆ ಹೋಗಲಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. 

ಮಗನ ಮದ್ವೆ ಖುಷಿಯಲ್ಲಿ ಹೀಗೆ ಡ್ಯಾನ್ಸ್ ಮಾಡೋದಾ ಸನ್ನಿ ಡಿಯೋಲ್​? ಫ್ಯಾನ್ಸ್​ ಫಿದಾ

ಅಷ್ಟಕ್ಕೂ ಎಲ್ಲರಿಗೂ ತಿಳಿದೇ ಇರುವಂತೆ, ಸನ್ನಿ ಡಿಯೋಲ್​ ಅವರ ತಂದೆ ಸುಪ್ರಸಿದ್ಧ ನಟ ಧರ್ಮೇಂದ್ರ. ಇವರು ನಟ ಅಮಿತಾಭ್​ ಬಚ್ಚನ್​  ಕಾಲದ ಹಿರಿಯ ನಟ. ಧರ್ಮೇಂದ್ರ ಮತ್ತು ಅಮಿತಾಭ್​ ಬಚ್ಚನ್​ ಅವರು ಭಾರಿ ದೋಸ್ತ್​ಗಳು. 60ಮತ್ತು 70 ರ ದಶಕದಲ್ಲಿ ಈ ಇಬ್ಬರ ದೋಸ್ತಿಯ ಚರ್ಚೆಯೇ ನಡೆಯುತ್ತಿತ್ತು. ಅಷ್ಟರ ಮಟ್ಟಿಗೆ ಫ್ರೆಂಡ್ಸ್​ ಇವರು. ಇಂಥ ಸ ಸಂದರ್ಭದಲ್ಲಿ ಧರ್ಮೇಂದ್ರ ಅವರ ಮೊಮ್ಮಗ ಕರಣ್​ ಮದುವೆಗೆ ಅಮಿತಾಭ್​ ಹೋಗಲಿಲ್ಲ ಎಂದರೆ ಇದು ಫ್ಯಾನ್ಸ್​ಗೆ ನುಂಗಲಾಗದ ತುತ್ತಾಗಿದೆ.ಮದುವೆಗೆ ಮಾತ್ರವಲ್ಲದೇ ಕರಣ್​ ಡಿಯೋಲ್​  ಅವರ ಮದುವೆಯ ಯಾವ  ಶಾಸ್ತ್ರಕ್ಕೂ ಬಚ್ಚನ್​  ಕುಟುಂಬ ಹೋಗಲಿಲ್ಲ. ಇವರ ದೋಸ್ತಿ ಇಷ್ಟಕ್ಕೇ ನಿಲ್ಲುವುದಿಲ್ಲ. ಧಮೇಂದ್ರ ಮತ್ತು ಜಯಾ ಬಚ್ಚನ್​ ಅವರು ಗುಡ್ಡಿ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದು, ಅವರ ಸಂಬಂಧ ಕೂಡ ಒಳ್ಳೆಯದೇ ಇದೆ. ಇನ್ನೂ ಒಂದು ಹಂತಕ್ಕೆ ಹೋಗುವುದಾದರೆ  ಸನ್ನಿ ಡಿಯೋಲ್​  ಅವರ ಇನ್ನೋರ್ವ ಪುತ್ರ ಬಾಬಿ ಡಿಯೋಲ್​ (Boby Deol) ಮತ್ತು ಅಮಿತಾಭ್​ ಮಗ ಅಭಿಷೆಕ್​ ಬಚ್ಚನ್​ ಝೂಮ್​ ಬರಾಬರ್​ ಝೂಮ್​ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಹೀಗಿದ್ದರೂ ಮದುವೆಗೆ ಏಕೆ ಹೋಗಲಿಲ್ಲ ಎನ್ನುವ ಪ್ರಶ್ನೆ ಕಾಡುವುದು ಸಹಜ. ​ 

ಈಗ ಇದಕ್ಕೆ ಕಾರಣವನ್ನೂ ಹುಡುಕಲಾಗಿದೆ. ಧರ್ಮೇಂದ್ರ ಮತ್ತು ಅಮಿತಾಭ್​ ಬಚ್ಚನ್​ ಒಳ್ಳೆಯ ಸ್ನೇಹಿತರಾಗಿದ್ದರೂ, ಸನ್ನಿ ಡಿಯೋಲ್​ ಮತ್ತು ಅಮಿತಾಭ್​ ನಂ. 36 ಹಾಗೆ ಇದ್ದಾರಂತೆ. ಅಂದರೆ ಒಬ್ಬರಿಗೊಬ್ಬರು ತದ್ವಿರುದ್ಧ ಎಂದರ್ಥ. 3 ಇತ್ತ ಮುಖ ಮಾಡಿದ್ದರೆ, 6 ಇನ್ನೊಂದು ಕಡೆ ಮುಖ ಮಾಡುವಂತೆ ಇವರ ಸಂಬಂಧವಿದೆಯಂತೆ. ಇದಕ್ಕೆ ಕಾರಣ, ಸ್ಟಾರ್​ಡಮ್​ಅಮಿತಾಭ್​ ಮತ್ತು ಸನ್ನಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದರು.  ಸನ್ನಿ ನಿಧಾನವಾಗಿ ತನ್ನದೇ ಆದ ಸ್ಟಾರ್ಡಮ್ ಮಾಡಲು ಪ್ರಾರಂಭಿಸಿದಾಗ, ಅನೇಕ ಹಿರಿಯ ನಟರು ಅವರೊಂದಿಗೆ ಅಸುರಕ್ಷಿತ ಭಾವನೆಯನ್ನು ಅನುಭವಿಸಿದರು. ಅವರಲ್ಲಿ ಅಮಿತಾಭ್​ ಬಚ್ಚನ್ (Amitabh Bachchan) ಕೂಡ ಒಬ್ಬರು ಎನ್ನಲಾಗಿದೆ. ಇನ್ಸಾನಿಯತ್ ಆಜ್ ಚಲನಚಿತ್ರವು  1994 ರಲ್ಲಿ ಬಿಡುಗಡೆಯಾಯಿತು. ಇದು ಅಮಿತಾಭ್​ ಮತ್ತು ಸನ್ನಿ ಒಟ್ಟಿಗೆ ಕಾಣಿಸಿಕೊಂಡರು. ಇದು ಅವರ ಮೊದಲ ಮತ್ತು ಕೊನೆಯ  ಚಿತ್ರವಾಯಿತು.  ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಸನ್ನಿ ಡಿಯೋಲ್ ಅವರ ಅಭಿನಯವು ಎಲ್ಲರಿಗೂ ಇಷ್ಟವಾಯಿತು. ಇದಾದ ಬಳಿಕ ಇಬ್ಬರ ನಡುವೆ ದೊಡ್ಡ ಕಂದರವೇ ಆಯಿತು. ಇಂದಿಗೂ ಇಬ್ಬರನ್ನೂ ಕಂಡರೆ ಪರಸ್ಪರ ಆಗುತ್ತಿಲ್ಲ. ಇದೇಕಾರಣಕ್ಕೆ ಸನ್ನಿ, ಅಮಿತಾಭ್​ ಕುಟುಂಬಕ್ಕೆ ಮದುವೆಯ ಆಹ್ವಾನ ನೀಡಲಿಲ್ಲ ಎನ್ನಲಾಗಿದೆ. 

ಮ್ಯಾನೇಜರ್​ನಿಂದಲೇ ಮೋಸ ಹೋದ ರಶ್ಮಿಕಾ ಮಂದಣ್ಣ? ಫ್ಯಾನ್ಸ್​ ಶಾಕ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್