ಜೆಂಡರ್ ರೂಲ್ಸ್ ಬ್ರೇಕ್ ಮಾಡಿ ನೆಕ್ಲೆಸ್ ಧರಿಸಿ ಹಾಡಿದ ಸಿಂಗರ್ ಸಂಚಿತ್ ಹೆಗ್ಡೆ: ಡಿಫರೆಂಟ್ ಲುಕ್ ವೈರಲ್

By Shruthi KrishnaFirst Published Jun 21, 2023, 10:59 AM IST
Highlights

ಜೆಂಡರ್ ರೂಲ್ಸ್ ಬ್ರೇಕ್ ಮಾಡಿ ನೆಕ್ಲೆಸ್ ಧರಿಸಿ ಸಿಂಗರ್ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಸಂಚಿತ್ ಹೊಸ ಲುಕ್ ವೈರಲ್ ಆಗಿದೆ. 

ಸ್ಯಾಂಡಲ್‌ವುಡ್‌ನ ಖ್ಯಾತ ಗಾಯಕ ಸಂಚಿತ್ ಹೆಗ್ಡೆ ಸಿಕ್ಕಾಪಟ್ಟೆ ಬೇಡಿಕೆಯ ಸಿಂಗರ್‌ಗಳಲ್ಲಿ ಒಬ್ಬರಾಗಿದ್ದಾರೆ. ವಿಭಿನ್ನ ಧ್ವನಿಯ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಸಂಚಿತ್ ಹೆಗ್ಡೆ. ಕನ್ನಡ ಪಾತ್ರವಲ್ಲದೇ ಪರಭಾಷೆಯಲ್ಲೂ ಸಂಚಿತ್ ಸಿಕ್ಕಾಪಟ್ಟೆ ಫೇಮಸ್ ಗಾಯಕ. ಸಂಚಿತ್ ಹಾಡಿರುವ ಬಹುತೇಕ ಹಾಡುಗಳು ಸೂಪರ್ ಹಿಟ್. ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳು. ಬೇರೆ ಬೇರೆ ಭಾಷೆಯಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿರುವ ಸಂಚಿತ್ ಧ್ವನಿಯ ಜೊತೆಗೆ ಫ್ಯಾಷನ್ ವಿಚಾರದಲ್ಲೂ ಗಮನ ಸೆಳೆಯುತ್ತಿದ್ದಾರೆ. ವಿಭಿನ್ನ ಶೈಲಿಯ ಫ್ಯಾಷನ್ ಮೂಲಕ ಸಂಚಿತ್ ಗಮನ ಸೆಳೆಯುತ್ತಿದ್ದಾರೆ. 

ಜೆಂಡರ್ ರೂಲ್ಸ್ ಬ್ರೇಕ್ ಮಾಡಿರುವ ಸಂಚಿತ್ ಹೆಗ್ಡೆ ಕುತ್ತಿಗೆಗೆ ನೆಕ್ಲೆಸ್ ಧರಿಸಿ ಹಾಡಿದ್ದಾರೆ. ಸಂಚಿತ್ ಹೆಗ್ಡೆ ಧರಿಸಿರುವ ಫ್ಯಾಷನ್ ಲುಕ್ ಈಗ ವೈರಲ್ ಆಗಿದ್ದು ವೆರಿ ವೆರಿ ಡಿಫ್ರೆಂಟ್ ಎನ್ನುತ್ತಿದ್ದಾರೆ. ಸಂಚಿತ್ ಹೆಗ್ಡೆ ಹಾಡಿರುವ ಗೀಜಗ ಹಕ್ಕಿ ಹಾಡು ಹಿಟ್ ಆಗಿದ್ದು ಟ್ರೆಂಡಿಂಗ್‌ನಲ್ಲಿದೆ. ಹಾಡಿನ ಜೊತೆಗೆ ಔಟ್ ಫಿಟ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಗೋಲ್ಡನ್ ನೆಕ್ಲೆಸ್‌ನಲ್ಲಿ ಸಂಚಿತ್ ಕಾಣಿಸಿಕೊಂಡಿದ್ದಾರೆ. ಸಂಚಿತ್ ನ್ಯೂ ಲುಕ್ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.

Latest Videos

ಕಲಾವಿದನಾಗಿ ಹೀಗೆ ಇರಬೇಕು ಅಂತ ಅಪ್ಪು ಸರ್‌ನ ನೋಡಿ ಕಲ್ತಿದ್ದೀನಿ: ಸಂಚಿತ್ ಹೆಗ್ಡೆ

2017ರಲ್ಲಿ ಹಿನ್ನಲೆ ಗಾಯಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸಂಚಿತ್ ಹೆಗ್ಡೆ ಅನೇಕ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಕಾಲೇಜ್ ಕುಮಾರ ಹಾಡಿಗೆ ಧ್ವನಿಯಾಗಿದ್ದ ಸಂಚಿತ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಮಕ್ ಚಿತ್ರದ ಹಾಡು ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತು. ಬಳಿಕ ತಮಿಳು ಹಾಗು ತೆಲುಗು ಸಿನಿಮಾಗಳ ಗೀತೆಗಳಿಗೆ ಧ್ವನಿಯಾದರು. ಕನ್ನಡದಲ್ಲಿ ಖ್ಯಾತಿಗಳಿಸುವ ಜೊತೆಗೆ ಸಂಚಿತ್ ಪರಭಾಷೆಯಲ್ಲೂ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡರು. ಇದೀಗ ಹಿಂದಿ ಹಾಡಿಗೂ ಧ್ವನಿಯಾಗುತ್ತಿದ್ದಾರೆ. ಗಾಯನದ ಜೊತೆಗೆ ಸಂಚಿತ್ ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ.

ಲಿಪ್‌ಲಾಕ್ ಸಹ ಆ್ಯಕ್ಟಿಂಗ್‌ನ ಭಾಗವೇ: ಸಂಜಿತ್ ಹೆಗ್ಡೆ

ಸಂಚಿತ್ ಪಿಟ್ಟ ಕಾತಲು ಎನ್ನುವ ತೆಲುಗು ವೆಬ್ ಸೀರಿಸ್ ನಲ್ಲಿ ನಟಿಸಿದ್ದರು. ಈ ಸೀರಿಸ್ ನಲ್ಲಿ ಶ್ರುತಿ ಹಾಸನ್ ಜೊತೆ ತೆರೆಹಂಚಿಕೊಂಡಿದ್ದರು. ಈ ಸೀರಿಸ್‌ನಲ್ಲಿ ಸಂಚಿತ್ ನಟಿ ಶ್ರುತಿ ಹಾಸನ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. 

click me!