ಕನ್ನಡತಿಯರ ಜಡೆ ಜಗಳ, ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಔಟ್?

Published : Jun 20, 2023, 11:43 PM ISTUpdated : Jun 21, 2023, 10:00 AM IST
ಕನ್ನಡತಿಯರ ಜಡೆ ಜಗಳ, ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಔಟ್?

ಸಾರಾಂಶ

ಪೂಜಾ ಹೆಗ್ಡೆ ಮಹೇಶ್‌ ಬಾಬು ಹೊಸ ಸಿನಿಮಾ 'ಗುಂಟೂರು ಖಾರಂ' ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಚಿತ್ರದಲ್ಲಿ ಎರಡನೇ ನಾಯಕಿಯಾದ ಶ್ರೀಲೀಲಾಗೆ ಹೆಚ್ಚು ಸ್ಪೇಸ್ ನೀಡಲಾಗುತ್ತಿದೆ ಎಂಬ ಕಾರಣದಿಂದ ಪೂಜಾ ಈ ನಿರ್ಧಾರ ತೆಗೆದುಕೊಂಡ್ರಾ?  

ಮಂಗಳೂರಿನ ಸುಂದರಿ, ಬಾಲಿವುಡ್‌ ನಟಿ ಪೂಜಾ ಹೆಗ್ಡೆ ಮಹೇಶ್‌ ಬಾಬು ಸಿನಿಮಾದಿಂದ ಹೊರಬಿದ್ದಿದ್ದಾರೆ. ಇದಕ್ಕೆ ನಿಜಕ್ಕೂ ಮತ್ತೊಬ್ಬ ಕನ್ನಡತಿ ಶ್ರೀಲೀಲಾ ಕಾರಣವಾ? ಅಷ್ಟಕ್ಕೂ ಅಲ್ಲಿ ನಡೆದದ್ದೇನು? ಅಷ್ಟಕ್ಕೂ ಇಬ್ಬರು ಕನ್ನಡತಿಯರ ನಡುವೆ ಈ ಪಾಟಿ ಜಗಳ ಯಾಕೆ?

ಇದನ್ನು ಇಬ್ಬರು ಕನ್ನಡತಿಯರ ನಡುವಿನ ಜಗಳ ಅನ್ನಬಹುದಾ! 
ಅಷ್ಟಕ್ಕೂ ವಿಷಯ ಏನು ಅಂದರೆ ಪೂಜಾ ಹೆಗ್ಡೆ ಮಹೇಶ್‌ ಬಾಬು ಹೊಸ ಸಿನಿಮಾ 'ಗುಂಟೂರು ಖಾರಂ' ಸಿನಿಮಾದಿಂದ ಹೊರ ನಡೆದಿದ್ದಾರೆ. ಕಾರಣ ಏನು ಅಂದರೆ ಡೇಟ್ಸ್‌ ಸರಿ ಹೊಂದುತ್ತಿಲ್ಲ ಅನ್ನುವ ತೇಲಿಕೆಯ ಉತ್ತರ ಸಿಕ್ಕಿದೆ. ಆದರೆ ನಿಜಕ್ಕೂ ಅಷ್ಟೇನಾ, ಮತ್ತೇನಾದ್ರೂ ಇದೆಯಾ ಅಂತ ಕೆದಕಿದಾಗ ಮತ್ತೊಬ್ಬ ಕನ್ನಡತಿ ಹೆಸರು ಹೊರಬಿದ್ದಿದೆ. ಆಕೆ ಬೇರೆ ಯಾರೂ ಅಲ್ಲ ಶ್ರೀಲೀಲಾ. ಅಷ್ಟಕ್ಕೂ ಈ ಇಬ್ಬರು ಕನ್ನಡತಿಯರ ನಡುವೆ ನಡೆದದ್ದಾದರೂ ಏನು? ಅದರದ್ದೇ ಒಂದು ದೊಡ್ಡ ಕಥೆ. 

ರಶ್ಮಿಕಾ, ಪೂಜಾ ಹೆಗ್ಡೆ, ಸಮಂಥಾರನ್ನ ಹಿಂದಿಕ್ಕಿದ ಶ್ರೀಲೀಲಾ: ನಟಿ ಹಿಂದೆಬಿದ್ದ 9 ಹೀರೋಗಳು!

ಪೂಜಾ ಹೆಗ್ಡೆ ಅಂದರೆ ಸೌತ್‌ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ದೊಡ್ಡ ಹೆಸರು. ಈ ನಟಿಯ ಸಾಲು ಸಾಲು ಸಿನಿಮಾಗಳು ತೋಪೆದ್ದು ಹೋಗಿದ್ದರೂ ಈಕೆಯ ದರ್ಪ, ಆಟಿಟ್ಯೂಡ್‌ ಬಗ್ಗೆ ಅನೇಕರು ಉಗಿದು ಉಪ್ಪಿನಕಾಯಿ ಹಾಕಿದ್ದರೂ, ಫೇಮಸ್‌  ಹೀರೋಗಳೇ ಇನ್ಯಾವತ್ತೂ ಈ ಹುಡುಗಿ ಜೊತೆ ಸಿನಿಮಾ ಮಾಡಲ್ಲ ಅಂದರೂ ಈಕೆಯ ಬೇಡಿಕೆ ತಗ್ಗಿಲ್ಲ. ಡಿಮ್ಯಾಂಡ್‌ ಮಾತ್ರ ಅಲ್ಲ, ಸಂಭಾವನೆಯೂ ಏರುತ್ತಲೇ ಹೋಗುತ್ತಿದೆ. ಕೆಲವರು ಈಕೆ ನಮ್ಮ ಸಿನಿಮಾಕ್ಕೆ ಲಕ್ಕಿ ಫೇಸ್ ಅಂತಾರೆ, ಇನ್ನೂ ಕೆಲವರು ಆಕೆಗಿರೋ ಫ್ಯಾನ್ ಫಾಲೋವಿಂಗ್ ದೊಡ್ಡದು ಅಂತಿದ್ದಾರೆ. ಸದ್ಯಕ್ಕೀಗ ಈ ನಟಿ ಮತ್ತೊಂದು ಕಿರಿಕ್ ಮೂಲಕ ಸುದ್ದಿಯಲ್ಲಿದ್ದಾರೆ. 

ಪೂಜಾ ಹೆಗ್ಡೆ ಮಂಗಳೂರು ಮೂಲದವರಾದರೂ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲಿ. ಮನೆ ಭಾಷೆ ತುಳು. ಹಾಗಾಗಿ ಸೊಗಸಾಗಿ ತುಳು ಮಾತಾಡ್ತಾರೆ. ಕನ್ನಡ ಹೇಗೆ ಮಾತಾಡ್ತಾರೆ, ಕನ್ನಡ ಬರುತ್ತಾ ಅನ್ನೋದು ಗೊತ್ತಿಲ್ಲ. ಏಕೆಂದರೆ ಬಾಲಿವುಡ್‌ನ ಟಾಪ್‌ ನಟಿ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಮೊದಲಾದವರೆಲ್ಲ ಮಂಗಳೂರಿನ ಪೊರ್ಲು ಸುಂದರಿಯರೇ. ಆದರೆ ಅವರಿಗೆ ಕನ್ನಡ ಬರಲ್ಲ, ತುಳು ಸರಾಗ. ಹೀಗಾಗಿ ಮಂಗಳೂರು ಮೂಲದ ಪೂಜಾ ಹೆಗ್ಡೆಯನ್ನು ಸದ್ಯದ ಮಟ್ಟಿಗೆ ಪ್ರದೇಶದ ಕಾರಣಕ್ಕೆ ಕನ್ನಡತಿ ಅನ್ನಬಹುದೇನೋ. ಸದ್ಯಕ್ಕೀಗ ಈಕೆ ನಟಿಸುತ್ತಿರುವ 'ಗುಂಟೂರು ಖಾರಂ' ಸಿನಿಮಾದಲ್ಲಿ ಶ್ರೀಲೀಲಾ ಕೂಡ ನಟಿಸುತ್ತಿದ್ದಾರೆ. ಈ ಶ್ರೀಲೀಲಾ ಚಿಟಪಟ ಕನ್ನಡ ಮಾತಾಡೋ ಹುಡುಗಿ. ದಕ್ಷಿಣ ಭಾರತೀಯ ಸಿನಿಮಾದಲ್ಲಿ ದಿನೇ ದಿನೇ ಈಕೆಗೆ ಬೇಡಿಕೆ ಹೆಚ್ಚುತ್ತಲೇ ಇದೆ. 'ಗುಂಟೂರು ಖಾರಂ' ಸಿನಿಮಾದಲ್ಲಿ ಈಕೆ ಎರಡನೇ ನಾಯಕಿ. ಆದರೆ ಈಕೆಯ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಸಿಕ್ತಿದೆ ಅನ್ನೋದು ಪ್ರಧಾನ ನಾಯಕಿ ಪೂಜಾ ಹೆಗ್ಡೆ ಆರೋಪವಂತೆ.

ಸಾಲು ಸಾಲು ಸೋಲು: ಐಟಂ ಹಾಡುಗಳಿಗೆ ಕಣ್ಣಿಟ್ಟ ಕರಾವಳಿ ಸುಂದರಿ ಪೂಜಾ ಹೆಗ್ಡೆ

ತನ್ನ ಪಾತ್ರಕ್ಕೆ ಇನ್ನಷ್ಟು ಹೆಚ್ಚು ಸ್ಕ್ರೀನ್‌ ಸ್ಪೇಸ್‌ ಕೊಡಬೇಕು, ಶ್ರೀಲೀಲಾ ಪಾತ್ರದ ಸ್ಕ್ರೀನ್‌ ಸ್ಪೇಸ್‌ ಕಡಿಮೆ ಮಾಡಬೇಕು ಅನ್ನೋದು ಪೂಜಾ ಹೆಗ್ಡೆ ಬೇಡಿಕೆ ಅನ್ನೋದು ಸದ್ಯ ಚಾಲ್ತಿಯಲ್ಲಿರೋ ಸುದ್ದಿ. ಇದಕ್ಕೆ ಸಿನಿಮಾ ಟೀಮ್‌ ನಿರಾಕರಿಸಿದ್ದೇ ಪೂಜಾ ಹೆಗ್ಡೆ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಸಿನಿಮಾದಿಂದ ಹೊರ ನಡೆದಿದ್ದಾರೆ. ಸಿನಿಮಾ ಟೀಮ್‌ ಇದಕ್ಕೆಲ್ಲ ಕ್ಯಾರೇ ಮಾಡಿದ ಹಾಗಿಲ್ಲ. ಮತ್ತೊಬ್ಬ ನಾಯಕಿಯನ್ನು ಆರಿಸಿ ಈ ಪಾತ್ರದ ಚಿತ್ರೀಕರಣವನ್ನು ಮತ್ತೆ ಮಾಡಲು ಮುಂದಾಗಿದೆ. ಅಂದಹಾಗೆ ಪೂಜಾ ಹೆಗ್ಡೆ ಪಾತ್ರಕ್ಕೆ ಬರ್ತಿರೋ ಚೆಲುವೆ ಯಾರು ಅನ್ನೋದರ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. 

ಅಂದಹಾಗೆ ಅಲ್ಲು ಅರ್ಜುನ್‌ ನಟನೆಯ 'ಅಲ ವೈಕುಂಠಪುರಂಲೊ' ನಂಥಾ ಸಿನಿಮಾ ಕೊಟ್ಟ ತ್ರಿವಿಕ್ರಮ್‌ ಶ್ರೀನಿವಾಸ್ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ. ಅವರ ಬ್ಲಾಕ್‌ ಬಸ್ಟರ್‌ ಚಿತ್ರ 'ಅಲ ವೈಕುಂಠಪುರಂಲೊ' ಸಿನಿಮಾದಲ್ಲೂ ಪೂಜಾ ಹೆಗ್ಡೆಯೇ ನಾಯಕಿ ಆಗಿದ್ದರು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯನೇ. ಪೂಜಾ ಹೆಗ್ಡೆ ವಿಜಯ ದೇವರಕೊಂಡ ಕಾಂಬಿನೇಶನ್‌ನ ಹೊಸ ಸಿನಿಮಾ ಆಗಸ್ಟ್‌ನಲ್ಲಿ ತೆರೆ ಕಾಣಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!