ಸೊಸೆ ಐಶ್ ಜೊತೆಗಿನ ರೊಮ್ಯಾಂಟಿಕ್ ಹಾಡಿನ ಬಗ್ಗೆ 20 ವರ್ಷಗಳ ನಂತ್ರ ಮೌನ ಮುರಿದ ಅಮಿತಾಭ್ ಬಚ್ಚನ್!

ಅಮಿತಾಭ್ ಬಚ್ಚನ್ 20 ವರ್ಷಗಳ ನಂತರ ಐಶ್ವರ್ಯಾ ರೈ ಜೊತೆಗಿನ ರೊಮ್ಯಾಂಟಿಕ್ ಹಾಡಿನ ಬಗ್ಗೆ ಮಾತನಾಡಿದ್ದಾರೆ. 2005ರಲ್ಲಿ 'ಬಂಟಿ ಔರ್ ಬಬ್ಲಿ' ಸಿನಿಮಾದಲ್ಲಿನ ಹಾಡಿನಲ್ಲಿ ಐಶ್ವರ್ಯಾ ರೈ ಜೊತೆ ಹೆಜ್ಜೆ ಹಾಕಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.


ಮುಂಬೈ: 82 ವರ್ಷದ ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್ ಸುಮಾರು 20  ವರ್ಷಗಳ ಬಳಿಕ ಸೊಸೆ  ಐಶ್ವರ್ಯಾ ರೈ ಜೊತೆಗಿನ ರೊಮ್ಯಾಂಟಿಕ ಹಾಡಿನ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. 2005ರಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ಐಶ್ವರ್ಯಾ ರೈ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೇ ಹಾಡಿನಲ್ಲಿ ಐಶ್ ಜೊತೆ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಜೊತೆಯಾಗಿ ಡ್ಯಾನ್ಸ್ ಮಾಡಿದ್ದರು. ಸಂದರ್ಶನವೊಂದರಲ್ಲಿ ಈ ಹಾಡಿನ ಕುರಿತು ಅಮಿತಾಭ್ ಬಚ್ಚನ್ ಮಾತನಾಡಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ಡಿವೋರ್ಸ್ ವದಂತಿಗಳ ನಡುವೆ ಅಮಿತಾಭ್ ಬಚ್ಚನ್ ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ. ಈ ವದಂತಿಗಳ ನಡುವೆ  ಇಸ್ಕಾನ್ ದೇವಸ್ಥಾನಕ್ಕೆ  ಐಶ್ವರ್ಯಾ ಮತ್ತು ಅಭಿಷೇಕ್ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. 

ಬಂಟಿ ಔರ್ ಬಬ್ಲಿ
2005ರಲ್ಲಿ ಬಿಡುಗಡೆಯಾದ ಬಂಟಿ ಔರ್ ಬಬ್ಲಿ ಸಿನಿಮಾದಲ್ಲಿ ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್ ಮತ್ತು ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬಂಟಿ (ಅಭಿಷೇಕ್ ಬಚ್ಚನ್) ಮತ್ತು ಬಬ್ಲಿ (ರಾಣಿ ಮುಖರ್ಜಿ) ಜೋಡಿ ಜೊತೆಯಾಗಿ ಸರಣಿ ಕಳ್ಳತನ ಮಾಡುತ್ತಿರುತ್ತಾರೆ. ಈ ಜೋಡಿಯನ್ನ ಬಂಧಿಸುವ ಪೊಲೀಸ್ ಅಧಿಕಾರಿ ಡಿಸಿಪಿ ದಶರಥ್ ಸಿಂಗ್ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಈ ಚಿತ್ರದ ಕಜರಾರೇ ಹಾಡಿನಲ್ಲಿ ಐಶ್ವರ್ಯಾ ರೈ ಅತಿಥಿಯಾಗಿ ಬಂದು ಹುಡುಗರ ಹೃದಯಕ್ಕೆ ಕಾಮನಬಿಲ್ಲು ಬಿಟ್ಟಿದ್ದರು. ಹಾಡಿನಲ್ಲಿ ಬಾರ್ ನೃತ್ಯಕಿಯಾಗಿದ್ದ ಐಶ್ ಜೊತೆ ಬಿಂದಾಸ್ ಆಗಿ ತಂದೆ ಮತ್ತು ಮಗ ಡ್ಯಾನ್ಸ್ ಮಾಡಿದ್ದರು. ಇದೀಗ ಈ ಹಾಡಿನ ಕುರಿತು ಅಮಿತಾಭ್ ಬಚ್ಚನ್ ಮಾತನಾಡಿದ್ದರು.

Latest Videos

ಅಮಿತಾಭ್ ಬಚ್ಚನ್ ಹೇಳಿದ್ದೇನು?
2007ರಲ್ಲಿ ಅಭಿಷೇಕ್ ಬಚ್ಚನ್ ಮತ್ತು  ಐಶ್ವರ್ಯಾ ರೈ ಮದುವೆಯಾಗಿತ್ತು. 2005ರಲ್ಲಿ ಬಂಟಿ ಔರ್ ಬಬ್ಲಿ ಸಿನಿಮಾದ ಕಜರಾರೇ ಹಾಡಿನಲ್ಲಿ  ಸೊಸೆ ಜೊತೆ ಅಮಿತಾಭ್ ಬಚ್ಚನ್ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದರು. ಈ ಹಾಡಿನ ಬಗ್ಗೆ ಪ್ರತಿಕ್ರಿಯಿಸಿರುವ ಬಿಗ್‌ ಬಿ, ಅಂದು ಡ್ಯಾನ್ಸ್ ಮಾಡುವಾಗ ಐಶ್ವರ್ಯಾ ನಮ್ಮ ಸೊಸೆಯಾಗಿರಲಿಲ್ಲ. ನಾನು ಮತ್ತು ಐಶ್ವರ್ಯಾ ಜಸ್ಟ್ ಕಲಾವಿದೆ  ಎಂಬ ಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್ ಕಪಾಳಕ್ಕೆ ಹೊಡೆದಿದ್ದ ನಟಿ, ಸೇಡು ತೀರಿಸಿಕೊಳ್ಳೋ ಪ್ರತಿಜ್ಞೆ ಮಾಡಿದ್ರು ಬಿಗ್‌ ಬಿ

82ನೇ ವಯಸ್ಸಿನಲ್ಲಿಯೂ ಸಖತ್ ಆಕ್ಟಿವ್ ಬಿಗ್ ಬಿ!
ಅಮಿತಾಭ್ ಬಚ್ಚನ್ ತಮ್ಮ 82ನೇ ವಯಸ್ಸಿನಲ್ಲಿಯೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟ. ಮಗ ಅಭಿಷೇಕ್ ಬಚ್ಚನ್ ಸಿನಿಮಾ ಅವಕಾಶಗಳನ್ನು ಕಳೆದುಕೊಳ್ಳುತ್ತಿರೋದು, ಒಂದೆಡೆಯಾದ್ರೆ ಅಮಿತಾಭ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಹೊಂದಿದ್ದಾರೆ. ಒಂದು ಸಿನಿಮಾಗೆ 6 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಅಮಿತಾಭ್, ಜಾಹೀರಾತುಗಳಿಗೂ ಅತ್ಯಧಿಕ ಸಂಭಾವನೆ ಪಡೆಯುತ್ತಾರೆ. ವರದಿಗಳ ಪ್ರಕಾರ,  ನಿವ್ವಳ ಮೌಲ್ಯ 3,190 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮೊದಲ ಕಿಸ್, ತಮಗಿಂತ 36 ವರ್ಷ ಕಿರಿಯ ನಟಿ ಮೇಲೆ ಲವ್

ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಸಿನಿಲೋಕ ಬಿಗ್ ಬಿ ಎಂದು ಕರೆಯುವ ಮೂಲಕ ಗೌರವಿಸುತ್ತದೆ. ಇಂದಿಗೂ ಚಿತ್ರರಂಗದಲ್ಲಿ ಅದೇ ಕ್ರೇಜ್ ಉಳಿಸಿಕೊಂಡಿರುವ ನಟ ಅಮಿತಾಭ್ ಬಚ್ಚನ್, ಹಿಂದಿ ಸೇರಿದಂತೆ ಸೌಥ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅಮಿತಾಭ್ ಬಚ್ಚನ್ ನೀಡಿದ್ದಾರೆ. 

click me!