ಸಿನಿಮಾವು ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು, ಭೂತದ ಬಂಗಲೆಯಲ್ಲಿ ನಡೆಯುವ ಭಯಾನಕ ಸನ್ನಿವೇಶಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿಯನ್ನು ಬಂಗಲೆಗೆ ಸ್ಥಳಾಂತರಿಸಿದ ಬಳಿಕ ನಡೆಯುವ ಸಸ್ಪೆನ್ಸ್ ಕಥೆಯೇ ಚಿತ್ರದ ಸಾರಾಂಶ.
2018ರಲ್ಲಿ ಬಿಡುಗಡೆಯಾದ ಮಹಿಳಾ ಪ್ರಧಾನ ಕಥೆಯುಳ್ಳ ಸಿನಿಮಾವೊಂದು ಸಿನಿಅಂಗಳದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ತೆಲಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾ, ನೋಡುಗರನ್ನು ಪ್ರತಿಕ್ಷಣವೂ ಅಚ್ಚರಿಗೊಳಿಸುತ್ತದೆ. ಸುಮಾರು 25 ಕೋಟಿ ಬಜೆಟ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಸುಮಾರ 65 ರಿಂದ 67 ಕೋಟಿ ರೂ ಕಲೆಕ್ಷನ್ ಮಾಡಿತ್ತು. ಭೂತದ ಬಂಗಲೆ ಎಂದೇ ಖ್ಯಾತಿಯಾಗಿರುವ ಕಟ್ಟಡದಲ್ಲಿ ಮಹಿಳಾ ಜಿಲ್ಲಾಧಿಕಾರಿಯನ್ನು ಬಂಧಿಯನ್ನಾಗಿ ಮಾಡಲಾಗುತ್ತದೆ. ರಾಜಕೀಯ ಮುಖಂಡನ ಕುತಂತ್ರದಿಂದ ಜಿಲ್ಲಾಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುತ್ತದೆ. ಜಿ .ಅಶೋಕ್ ಅವರೇ ಚಿತ್ರದ ಕಥೆಯನ್ನು ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
135 ನಿಮಿಷದ ಈ ಸಿನಿಮಾ ಸಾಲು ಸಾಲು ಸಾವುಗಳಿಂದ ಆರಂಭವಾಗುತ್ತದೆ. ಸಿನಿಮಾ ಆರಂಭವಾದ 20 ನಿಮಿಷದ ಬಳಿಕ ನೋಡುಗರಿಗೆ ಕಥೆಯ ಮೇಲಿನ ಹಿಡಿತ ಸಿಗುತ್ತದೆ. ನಂತರ ನಾಯಕ ನಟಿಯನ್ನು ಭೂತದ ಬಂಗ್ಲೆಗೆ ಸೇರಿಸಲಾಗುತ್ತದೆ. ಅಲ್ಲಿಂದ ಈ ಸಿನಿಮಾದ ಸಸ್ಪೆನ್ಸ್ ತೆರೆದುಕೊಳ್ಳಲು ಆರಂಭಿಸುತ್ತದೆ. ಈ ಭಯಾನಕ ಸಸ್ಪೆನ್ಸ್ ನಿಮ್ಮನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ.
ಟಾಲಿವುಡ್ ಅಂಗಳದ ಸ್ವೀಟಿ ಅನುಷ್ಕಾ ಶೆಟ್ಟಿ ಅಭಿನಯದ ಭಾಗಮತಿ ಸಿನಿಮಾ ಹಾರರ್ ವೀಕ್ಷಕರ ನೆಚ್ಚಿನ ಚಿತ್ರಗಳ ಪಟ್ಟಿಯಲ್ಲಿ ಒಂದಾಗಿದೆ. ಅನುಷ್ಕಾ ಶೆಟ್ಟಿ, ಉನ್ನಿ ಮುಕುಂದನ್, ಜಯರಾಮ್, ಆಶಾ ಶರತ್, ಮುರಳಿ ಶರ್ಮಾ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 26ನೇ ಜನವರಿ 2018ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಸದ್ಯ ಈ ಸಿನಿಮಾ ನಿಮಗೆ ಒಟಿಟಿಯಲ್ಲಿ ಲಭ್ಯವಿದ್ದು, ಎಲ್ಲಾ ಭಾಷೆಗಳಿಗೂ ಡಬ್ ಮಾಡಲಾಗಿದೆ.
ಇದನ್ನೂ ಓದಿ: ಇಂಗ್ಲಿಷ್ ಸಿನಿಮಾ ಮೀರಿಸುವಂತಹ 9 ಬ್ರಿಲಿಯಂಟ್ ಥ್ರಿಲ್ಲರ್ ಮಲಯಾಳಂ ಚಿತ್ರಗಳು
ಚಿತ್ರದ ಕಥೆ ಏನು?
ಪತಿಯ ಕೊಲೆ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ಜಿಲ್ಲಾಧಿಕಾರಿಯನ್ನು ಬಂಧಿಸಲಾಗುತ್ತದೆ. ಜಿಲ್ಲಾಧಿಕಾರಿ ಪಾತ್ರದಲ್ಲಿ ಅನಷ್ಕಾ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಜಿಲ್ಲಾಧಿಕಾರಿಯನ್ನು ಭೂತದ ಬಂಗಲೆಗೆ ಶಿಫ್ಟ್ ಮಾಡಲಾಗುತ್ತದೆ. ಈ ಬಂಗಲೆ ರಾಣಿ ಭಾಗಮತಿ ವಾಸಿಸುತ್ತಿದ್ದ ಕಟ್ಟಡ ಎಂಬ ಕಥೆ ಇರುತ್ತದೆ. ಬೃಹತ್ ಬಂಗಲೆಯಲ್ಲಿ ಜಿಲ್ಲಾಧಿಕಾರಿಯನ್ನು ಒಂಟಿಯಾಗಿ ಇರಿಸಲಾಗುತ್ತದೆ. ಆ ಒಂದು ರಾತ್ರಿಯಲ್ಲಿ ನಡೆಯುವ ಘಟನೆಗಳೇ ಚಿತ್ರದ ಒನ್ ಲೈನ್ ಕಥೆ. ಅನುಷ್ಕಾ ಶೆಟ್ಟಿ ತನ್ನ ಮೇಲಿನ ಆರೋಪಗಳಿಂದ ಹೇಗೆ ಮುಕ್ತವಾಗುತ್ತಾಳೆ ಅನ್ನೋದು ಕ್ಲೈಮ್ಯಾಕ್ಸ್‌ನಲ್ಲಿ ತೋರಿಸಲಾಗಿದೆ.
ಕಟ್ಟಡದಲ್ಲಿರುವ ರಾಣಿ ಭಾಗಮತಿ ಆತ್ಮ, ಜಿಲ್ಲಾಧಿಕಾರಿ ಮೇಲೆ ಬರುತ್ತದೆ. ಕಟ್ಟಡದಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶಗಳು ನೋಡುಗರನ್ನು ಬೆಚ್ಚಿಬೀಳಿಸುತ್ತವೆ. ಕೊನೆಗೆ ಇದೆಲ್ಲಾ ಕೆಲವು ಟೆಕ್ನಿಕ್‌ಗಳಿಂದ ಹೇಗೆ ಮಾಡಲಾಯ್ತು ಎಂಬುದನ್ನು ತೋರಿಸಲಾಗುತ್ತದೆ. ಅಂತಿಮ ಕ್ಷಣದಲ್ಲಿಯೂ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡುತ್ತದೆ. 6.9 ರೇಟಿಂಗ್ ಹೊಂದಿರುವ ಭಾಗಮತಿ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: 50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!