ಅಮಿತಾಭ್-ಅಭಿಷೇಕ್​ ಒಟ್ಟಿಗೇ ಇಲ್ವಾ? ಇನ್​ಸ್ಟಾದಲ್ಲಿನ ಚಾಟ್​ ನೋಡಿ ಇದೆಲ್ಲಾ ಯಾಕೆ ಬೇಕು ಕೇಳ್ತಿದ್ದಾರೆ ಫ್ಯಾನ್ಸ್​!

By Suvarna News  |  First Published Mar 10, 2024, 5:45 PM IST

ಅಮಿತಾಭ್​ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಪರಸ್ಪರ ಪ್ರಶ್ನೆ ಮಾಡಿಕೊಂಡಿರುವ ಚಾಟ್​ ಒಂದು ವೈರಲ್​ ಆಗಿದ್ದು, ಫ್ಯಾನ್ಸ್​ ಸ್ವಲ್ಪ ಗರಂ ಆಗಿ ಉತ್ತರಿಸುತ್ತಿದ್ದಾರೆ.
 


ಈಗ ಸೋಷಿಯಲ್​  ಮೀಡಿಯಾ ಜಮಾನಾ ಎನ್ನುವುದು ಏನೂ ಹೊಸತಲ್ಲ. ದೊಡ್ಡ ಮನೆಗಳ ಮಾತು ಬಿಡಿ. ಚಿಕ್ಕ ಪುಟ್ಟ ಮನೆಯಲ್ಲಿಯೂ ಮಕ್ಕಳನ್ನು ಫೋನ್​ ಮಾಡಿಯೇ ಊಟಕ್ಕೆ, ತಿಂಡಿಗೆ ಕರೆಯುವ ಕಾಲ ಇದಾಗಿದೆ. ಇನ್ನು ದೊಡ್ಡವರ ಕಥೆ ಬಿಡಿ. ಒಂದೇ ಮನೆಯಲ್ಲಿ ಇರುವವರೇ ವಾಟ್ಸ್​ಆ್ಯಪ್​ ಗ್ರೂಪ್​ ಮಾಡಿಕೊಂಡು ಅದರಲ್ಲಿ ಮಾತನಾಡುವವರು ಇದ್ದಾರೆ. 10-12 ವರ್ಷಗಳ ಹಿಂದೆ ಇಂಥದ್ದೇನಾದರೂ ಹೇಳಿದ್ದರೆ ಬಹುಶಃ ಆಗ ಎಲ್ಲರೂ ನಗುತ್ತಿದ್ದರೋ ಏನೋ. ಕಾಲ್ಪನಿಕ ಸಿನಿಮಾ  ಮಾಡಲು ಈ ವಿಷಯ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದರು. ಆದರೆ ಕಳೆದೊಂದು ದಶಕದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎನ್ನುವುದು ಬೇರೆ ಹೇಳಬೇಕಾಗಿಲ್ಲ.

ಆದರೆ ದೊಡ್ಡವರ ವಿಷಯ ಮಾತ್ರ ವೈರಲ್​ ಆಗುತ್ತದೆ. ಈಗ ಆಗಿರುವುದೂ ಅದೇ. ಅಭಿಷೇಕ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಅಪ್ಪ ಅಂದ್ರೆ ಅಮಿತಾಭ್​ ಬಚ್ಚನ್​ ಅವರ ಫೋಟೋ ಹಾಕಿದ್ದಾರೆ. ಅದರಲ್ಲಿ ಅಮಿತಾಭ್​ ಬಚ್ಚನ್​ ಕ್ಯಾಪ್​ ಧರಿಸಿದ್ದಾರೆ. ಈ ಕ್ಯಾಪ್​ ತುಂಬಾ ಚೆನ್ನಾಗಿದೆ. ಇದನ್ನು ಎಲ್ಲಿ ಕೊಂಡಿದ್ದೀರಿ ಎಂದು ಅಭಿಷೇಕ್​ ಕೇಳಿದ್ದಾರೆ. ಅದಕ್ಕೆ ಅಮಿತಾಭ್​ ಅಲ್ಲಿಯೇ ರಿಪ್ಲೈ ಮಾಡಿ ನಿನ್ನಿಂದ ಎಂದು ಹೇಳಿದ್ದಾರೆ. ಇದರ ಫೋಟೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಸುಸ್ತಾಗಿ ಹೋಗಿದ್ದಾರೆ. ಅಷ್ಟಕ್ಕೂ ಅಮಿತಾಭ್​ ಮತ್ತು ಅಭಿಷೇಕ್​ ಅವರು ಒಂದೇ ಮನೆಯಲ್ಲಿಯೇ ಇದ್ದಾರೆ. ಅದಕ್ಕಾಗಿ ಕೆಲವರು ಬೇರೆ ಬೇರೆಯಾದ್ರಾ ಎಂದು ಪ್ರಶ್ನಿಸುತ್ತಿದ್ದರೆ, ಇನ್ನು ಕೆಲವರು ಎಲ್ಲವೂ ಪಬ್ಲಿಸಿಟಿಗಾಗಿ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈ ತಮಾಷೆಗೆ ಚಾಟ್​ ನೋಡಿ ನಗುತ್ತಿದ್ದಾರೆ. ಇಂಥ ಸ್ಟಂಟ್​ಗಳೆಲ್ಲಾ ಸ್ಟಾಪ್​ ಮಾಡಿ ಎಂದು ಹಲವರು ಸ್ವಲ್ಪ ಗರಂ ಆಗಿಯೇ ಹೇಳುತ್ತಿದ್ದಾರೆ. 

Tap to resize

Latest Videos

ಡಿವೋರ್ಸ್‌ ಸುದ್ದಿ ಬೆನ್ನಲ್ಲೇ ಅಭಿಷೇಕ್‌ ಬಚ್ಚನ್‌ ರಹಸ್ಯ ಪೋಸ್ಟ್‌: ಪ್ರಚಾರದ ಹುಚ್ಚು ಅತಿಯಾಯ್ತು ಎಂದ ನೆಟ್ಟಿಗರು!

ಅಷ್ಟಕ್ಕೂ ಒಂದೆರಡು ತಿಂಗಳುಗಳಿಂದ ಕೆಲ ತಿಂಗಳಿನಿಂದ  ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿತ್ತು. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದರು. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡಿತ್ತು.  ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು. 

ಡಿವೋರ್ಸ್​ ಕೊಡುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದ್ದಂತೆಯೇ ಒಟ್ಟಿಗೇ ಕಾಣಿಸಿಕೊಳ್ಳುವುದು, ಇಬ್ಬರೂ ಒಂದೇ ಆದರು ಎಂದು ಸುದ್ದಿಯಾಗುತ್ತಿದ್ದಂತೆಯೇ ಇನ್ನು ಏನೇನೋ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುವುದು ಇಂದಿಗೂ ನಡೆದೇ ಇದೆ. ಕೆಲ ದಿನಗಳಿಂದ ಡಿವೋರ್ಸ್​ ಸುದ್ದಿ  ಸುದ್ದಿ ತಣ್ಣಗಾಗುತ್ತಿದೆ ಮತ್ತೆ ಅಭಿಷೇಕ್‌ ಬಚ್ಚನ್‌ ಇನ್ನೊಂದು ಪೊಸ್ಟ್‌ ಶೇರ್‌ ಮಾಡಿಕೊಂಡಿದ್ದರು.  ಅದರಲ್ಲಿ ಅವರು,  ನಿಮಗೆ ಬೇಕಾದುದನ್ನು ನೀವು ತ್ಯಾಗ ಮಾಡದಿದ್ದರೆ - ನಿಮಗೆ ಬೇಕಾದದ್ದು ತ್ಯಾಗವಾಗುತ್ತದೆ ಎಂದಿದ್ದರು.   ಇಷ್ಟು ದಿನಗಳವರೆಗೆ ಈ ದಂಪತಿಯ ಡಿವೋರ್ಸ್‌ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದ ನೆಟ್ಟಿಗರು ಇದೀಗ ಗರಂ ಆಗಿದ್ದರು. ಇವರಿಗೆ ಪ್ರಚಾರದ ಹುಚ್ಚು ಅತಿಯಾಗಿದೆ. ಡಿವೋರ್ಸ್ ಸುದ್ದಿ ತಣ್ಣಗಾಗುತ್ತಿದ್ದಂತೆಯೇ ಮತ್ತೆ ಪ್ರಚಾರದಲ್ಲಿ ಇರುವ ಉದ್ದೇಶದಿಂದ ತಮ್ಮ ಸಂಬಂಧದ ಕುರಿತು ಈ ರೀತಿ ಮಾತನಾಡುವುದು ನಾಚಿಕೆಗೇಡು ಎಂದು ಕಮೆಂಟ್​ ಮಾಡುತ್ತಿದ್ದಾರೆ.  ಮದುವೆಯೆಂಬ ಪವಿತ್ರ ಬಂಧವನ್ನು ಈ ರೀತಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎನ್ನುತ್ತಿದ್ದಾರೆ. ಇದೀಗ ಅಪ್ಪ-ಮಗನ ಈ ಚಾಟ್​ ನೋಡಿ ಮತ್ತೆ ಅಸಮಾಧಾನ ಹೊರಹಾಕುತ್ತಿದ್ದಾರೆ. 

ಬೆಳ್ಳುಳ್ಳಿ ಕಬಾಬ್​ ಮಾಲೀಕಂಗೂ ವಿಕ್ಕಿಪಿಡಿಯಾಗೂ 'ಸಂಧಾನ'! ಗಿಫ್ಟ್ ನೋಡಿ ಚಂದ್ರು ಏನಂದ್ರು?
 

click me!