ಪ್ರಸಿದ್ಧ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ಶವವಾಗಿ ಪತ್ತೆ, 26ನೇ ವಯಸ್ಸಿಗೆ ಸಾವು ಅಭಿಮಾನಿಗಳಿಗೆ ಆಘಾತ

By Suvarna News  |  First Published Mar 10, 2024, 1:13 PM IST

ವಯಸ್ಕ ಚಲನಚಿತ್ರ ತಾರೆ ಸೋಫಿಯಾ ಲಿಯೋನ್ ತನ್ನ 26ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾಳೆ. ಮಾರ್ಚ್ 1 ರಂದು ತನ್ನ ಅಪಾರ್ಟ್‌ಮೆಂಟ್‌ನಲ್ಲಿ  ಶವವಾಗಿ ಪತ್ತೆಯಾಗಿದ್ದಾಳೆ.


ಬೆಂಗಳೂರು (ಮಾ.10): ವಯಸ್ಕ ಚಲನಚಿತ್ರ ಮತ್ತು ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ತನ್ನ 26ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾಳೆ. ಮಾರ್ಚ್ 1 ರಂದು ತನ್ನ ಅಪಾರ್ಟ್‌ಮೆಂಟ್‌ನಲ್ಲಿ  ಶವವಾಗಿ ಪತ್ತೆಯಾಗಿದ್ದಾಳೆ ಎಂದು ಆಕೆಯ ಮಲತಂದೆ ಮೈಕ್ ರೊಮೆರೊ ಶನಿವಾರ ತಿಳಿಸಿದ್ದಾರೆ.

ಕಾಗ್ನಿ ಲಿನ್ ಕಾರ್ಟರ್, ಜೆಸ್ಸಿ ಜೇನ್ ಮತ್ತು ಥೈನಾ ಫೀಲ್ಡ್ಸ್  ಸಾವಿನ ನಂತರ ಈ ವರ್ಷ ವಯಸ್ಕ ಉದ್ಯಮದಲ್ಲಿ ಮಿಸ್ ಸೋಫಿಯಾ ಅವರ ಮರಣವು ನಾಲ್ಕನೇ ಅಕಾಲಿಕ ಮರಣವಾಗಿದೆ. ಸೋಫಿಯಾ ಲಿಯೋನ್  ಸಾವು ಆತ್ಮಹತ್ಯೆಯೋ? ಕೊಲೆಯೋ ಎಂಬ ಬಗ್ಗೆ ಅನುಮಾನವಿದೆ.

Tap to resize

Latest Videos

ಬೆಂಗಳೂರಿನಲ್ಲಿ ಆರ್‌ಟಿಐ ಕಾರ್ಯಕರ್ತನ ಹತ್ಯೆಗೆ ಬಿಜೆಪಿ ಮುಖಂಡ ಸ್ಕೆಚ್, ರೌಡಿ ಶೀಟರ್‌ ಸಹಿತ ಗ್ಯಾಂಗ್ ಅರೆಸ್ಟ್!

ಸೋಫಿಯಾ ಲಿಯೋನ್ ಯಾರು?

  • ಸೋಫಿಯಾ ಲಿಯೋನ್ ಜೂನ್ 10, 1997 ರಂದು ಅಮೇರಿಕಾದ ಮಿಯಾಮಿಯಲ್ಲಿ ಜನಿಸಿದರು.
  • ಸೋಫಿಯಾ ಲಿಯೋನ್ 18 ನೇ ವಯಸ್ಸಿನಲ್ಲಿ ವಯಸ್ಕರ ಚಿತ್ರಗಳನ್ನು ಮಾಡುವ ಮನರಂಜನಾ ಉದ್ಯಮವನ್ನು ಪ್ರವೇಶಿಸಿದರು .
  • ಸೋಫಿಯಾ  1 ಮಿಲಿಯನ್  ಡಾಲರ್  ನಿವ್ವಳ ಮೌಲ್ಯವನ್ನು ಹೊಂದಿದ್ದಾರೆಂದು ಹೇಳಲಾಗಿದೆ.

ಫ್ಲೆಕ್ಸ್ ವಿಚಾರಕ್ಕೆ ಗಲಾಟೆ, ಮೈಸೂರಿನಲ್ಲಿ ಮುಸ್ಲಿಂ ಧರ್ಮಗುರು ಬರ್ಬರ ಹತ್ಯೆ!

ಅವರು 101 ಮಾಡೆಲಿಂಗ್ ಎಂಬ ಮಾಡೆಲಿಂಗ್ ಏಜೆನ್ಸಿಯೊಂದಿಗೆ ಸಂಬಂಧ ಹೊಂದಿದ್ದರು. ಸೋಫಿಯಾ ಅವರ ಅಕಾಲಿಕ ಮರಣದ ಸುದ್ದಿಯನ್ನು ಮಾಡೆಲಿಂಗ್ ಏಜೆನ್ಸಿ ದೃಢಪಡಿಸಿದೆ. ಅವಳು ಪ್ರಾಣಿ ಪ್ರಿಯೆ ಪ್ರಾಣಿಗಳ ಮೇಲೆ ಆಳವಾದ ಪ್ರೀತಿಯನ್ನು ಹೊಂದಿದ್ದಳು. 3 ಸಾಕು ಪ್ರಾಣಿಗಳಿತ್ತು ಎಂದು ಮಲ ತಂದೆ ತಿಳಿಸಿದ್ದಾರೆ.

ಸೋಫಿಯಾ ಸಾವಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮಾಡೆಲಿಂಗ್ ಏಜೆನ್ಸಿ ಸೋಫಿಯಾ  ಆತ್ಮಹತ್ಯೆಯಿಂದ ಸಾವನ್ನಪ್ಪಿಲ್ಲ. ಇದು ಒಂದು ಕೊಲೆ ಎಂಬ ಅನುಮಾನವಿದೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದೆ. 

click me!