ಬಚ್ಚನ್ ಫ್ಯಾಮಿಲಿಯಲ್ಲಿ ಜಯಾ ಬಚ್ಚನ್ ಹಾಗೂ ಐಶ್ವರ್ಯಾ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಆಗಾಗ ಸುದ್ದಿಯಲ್ಲಿರುತ್ತದೆ. ಆದ್ರೆ ಈ ವಿಚಾರವಲ್ಲದೆ ಅಚ್ಚರಿಯೆಂಬಂತೆ ಅಭಿಷೇಕ್ ಹಾಗೂ ಐಶ್ವರ್ಯಾ ಬೇರೆಯಾಗುತ್ತಿದ್ದಾರೆ ಎಂಬ ವರದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಬಾರಿ ಇದು ಜಸ್ಟ್ ವದಂತಿಯಲ್ಲ ನಿಜ ಎಂದೇ ಟ್ವೀಟ್ ಮಾಡಲಾಗಿದೆ.
ಬಾಲಿವುಡ್ ಸೆಲೆಬ್ರಿಟಿಗಳಿಗೆ ಮದುವೆ ಹಾಗೂ ಡಿವೋರ್ಸ್ ಹೊಸ ವಿಚಾರವಲ್ಲ. ಕೋಟಿಗಟ್ಟಲೆ ಖರ್ಚು ಮಾಡಿ ಅದ್ದೂರಿಯಾಗಿ ಮದುವೆಯಾಗುವುದು, ನಂತರ ಸಣ್ಣಪುಟ್ಟ ಕಾರಣಕ್ಕೆ ಜಗಳವಾಡಿ ಡಿವೋರ್ಸ್ ಪಡೆದುಕೊಳ್ಳೋದು ಆಗ್ತಾನೆ ಇರುತ್ತೆ. ಅಮೀರ್ ಖಾನ್, ಮಲೈಕಾ ಅರೋರಾ, ಕರಿಷ್ಮಾ ಕಪೂರ್, ಫರ್ಹಾನ್ ಅಖ್ತರ್ ಹೀಗೆ ಹಲವರು ವಿಚ್ಛೇದನ ಪಡೆದ ಲಿಸ್ಟ್‌ನಲ್ಲಿದ್ದಾರೆ. ಕೆಲವೇ ಕೆಲವರ ವೈವಾಹಿಕ ಜೀವನ ಮಾತ್ರ ಚೆನ್ನಾಗಿರುತ್ತದೆ. ಕೆಲವೊಬ್ಬರು ಸೆಲೆಬ್ರಿಟಿಗಳು ವೈವಾಹಿಕ ಜೀವನ ಕೆಟ್ಟದಾಗಿದ್ದರೂ ಡಿವೋರ್ಸ್ ಮಾಡಿಕೊಂಡು ಹೆಸರು ಹಾಳು ಮಾಡಿಕೊಳ್ಳಲು ಇಷ್ಟಪಡದೆ ಹೊಂದಾಣಿಕೆಯಿಂದ ಜೀವನ ನಡೆಸುತ್ತಾರೆ.
ಬಾಲಿವುಡ್‌ನ ಹೆಸರಾಂತ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ. ಪ್ರೀತಿಸಿ ಮದುವೆ (Marriage)ಯಾದ ಈ ಜೋಡಿ ಎಲ್ಲರಿಗೂ ಮಾದರಿ ಎಂಬಂತೆ ಜೀವನ (Life) ನಡೆಸುತ್ತಿದ್ದಾರೆ. ನ್ಯೂಯಾರ್ಕ್‌ನಲ್ಲಿ ಗುರು ಚಿತ್ರದ ಪ್ರಥಮ ಪ್ರದರ್ಶನದ ವೇಳೆ, ಅಭಿಷೇಕ್ ಬಚ್ಚನ್ ಹೋಟೆಲ್‌ನ ಬಾಲ್ಕನಿಯಲ್ಲಿ ಐಶ್ವರ್ಯಾ ರೈ ಅವರಿಗೆ ಪ್ರಪೋಸ್ ಮಾಡಿದರು. ಅದೇ ವರ್ಷದ ಏಪ್ರಿಲ್‌ನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಲ್ಲಿ ಐಶ್ವರ್ಯಾ ರೈ ಚಿನ್ನದ ಬಣ್ಣದ ಕಂಜೀವರಂ ಸೀರೆಯನ್ನು ಧರಿಸಿದ್ದರು. ಸುದ್ದಿ ಪ್ರಕಾರ ಈ ಸೀರೆಯ ಬೆಲೆ ಆಗ 75 ಲಕ್ಷ ರೂಪಾಯಿ. ಮದುವೆಯ ನಂತರ ದಂಪತಿಗಳು (Couple) ಒಂದು ತಿಂಗಳ ಹನಿಮೂನ್‌ಗಾಗಿ ಯುರೋಪ್‌ಗೆ ತೆರಳಿದರು.
20 ವರ್ಷ ಹಿರಿಯ ನಟಿ ಜತೆ ಮದ್ವೆಯಾಗ ಹೊರಟಿದ್ದ ಅಭಿಷೇಕ್ ಬಚ್ಚನ್: ನಿಮ್ಮ ಜೊತೆ ಮಲಗಲೇ ಎಂದು ಕೇಳಿದ್ರಂತೆ!
ಅಭಿಷೇಕ್ ಹಾಗೂ ಐಶ್ವರ್ಯಾ ಬೇರೆಯಾಗ್ತಿರೋದು ನಿಜಾನ?
2007ರಲ್ಲಿ ಅಮಿತಾಭ್ ಬಚ್ಚನ್ ಅವರ ಬಂಗಲೆ ಜಲ್ಸಾದಲ್ಲಿ ಈ ಜೋಡಿಯ ವಿವಾಹ ನಡೆದಿತ್ತು. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಉತ್ತಮ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಪರಸ್ಪರ ಬರ್ತ್‌ಡೇಗೆ ಹಾರ್ದಿಕವಾಗಿ ವಿಶ್ ಮಾಡುತ್ತಾರೆ. ಇಬ್ಬರಿಗೆ ಆರಾಧ್ಯ ಎಂಬ ಮಗಳೂ ಇದ್ದಾಳೆ. ಆದ್ರೆ ಜಯಾ ಬಚ್ಚನ್ ಹಾಗೂ ಐಶ್ವರ್ಯಾ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಆಗಾಗ ಸುದ್ದಿಯಲ್ಲಿರುತ್ತದೆ. ಆದ್ರೆ ಈ ವಿಚಾರವಲ್ಲದೆ ಅಚ್ಚರಿಯೆಂಬಂತೆ ಅಭಿಷೇಕ್ ಹಾಗೂ ಐಶ್ವರ್ಯಾ ಬೇರೆಯಾಗುತ್ತಿದ್ದಾರೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಸುದ್ದಿಯಿಂದ ಅಭಿಮಾನಿಗಳು ಕಂಗಾಲಾಗಿದ್ದಾರೆ.
ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ಮದುವೆಯ ಉಂಗುರ ಧರಿಸದ ಅಭಿಷೇಕ್ ಬಚ್ಚನ್
ಅಭಿಷೇಕ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದಕ್ಕೆ ನಾನಾ ಈತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅವರಲ್ಲಿ ಒಬ್ಬರು, 'ಉಂಗುರ ಹಾಕಿಲ್ಲ ಎಂದ ಮಾತ್ರಕ್ಕೆ ಅವರು ಬೇರೆಯಾಗುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ' ಎಂದಿದ್ದಾರೆ. ಮತ್ತೊಬ್ಬರು, 'ಬಚ್ಚನ್ ಫ್ಯಾಮಿಲಿಯಲ್ಲಿ ವಿಚ್ಛೇದನ ಅಸಾಧ್ಯ ಎಂದು ನಾನು ಯಾವಾಗಲೂ ಭಾವಿಸುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಅಮಿತಾಭ್ ಬದುಕಿರುವವರೆಗೆ ಅವರು ಹೀಗಾಗಲು ಬಿಡುವುದಿಲ್ಲ' ಎಂದು ಹೇಳಿದರು.
ಇನ್ನೊಬ್ಬರು ಕಾಮೆಂಟ್‌ನಲ್ಲಿ, 'ಬಹುಶಃ ಅಭಿಷೇಕ್ ಮತ್ತು ಐಶ್ಚರ್ಯಾ ಕ್ಯಾಮರಾಗಳ ಮುಂದೆ ಮಾತ್ರ ಖುಷಿಯಾಗಿರುವಂತೆ ನಟಿಸುತ್ತಾರೆ. ಶ್ವೇತಾ ಮಾಡಿದ್ದು ಅದನ್ನೇ. ಅವಳು ಒಂದು ದಶಕದಿಂದ ತನ್ನ ಗಂಡನೊಂದಿಗೆ ಇರಲಿಲ್ಲ. ಈಗ ಅವಳು ತಂದೆ-ತಾಯಿಯ ಜೊತೆ ವಾಸಿಸುತ್ತಾಳೆ, ಆದರೂ ಇನ್ನೂ ತನ್ನ ಗಂಡನ ಸರ್‌ನೇಮ್ ಬಳಸುತ್ತಾಳೆ. ಮತ್ತು ಎಲ್ಲವೂ ಚೆನ್ನಾಗಿದೆ ಎಂಬಂತೆ ತೋರಿಸಿಕೊಳ್ಳುತ್ತಾಳೆ' ಎಂದಿದ್ದಾರೆ. ಮತ್ತೆ ಕೆಲವರು, 'ಐಶ್ವರ್ಯಾ ಮತ್ತು ಅಭಿಷೇಕ್ ದೂರವಾಗುತ್ತಾರೆ ಎಂಬುದು ಸುಳ್ಳು ಸುದ್ದಿ ಹೀಗಾಗಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.