
ನಟಿ ಆಲಿಯಾ ಭಟ್ ಪತಿ ರಣಬೀರ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಅನಿಮಲ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್‌ಪಾನ್ಸ್ ಸಿಗುತ್ತಿದೆ. ಅನಿಮಲ್ ಚಿತ್ರಕ್ಕೆ ಇದಾಗಲೇ ಅಡಲ್ಟ್ ಸರ್ಟಿಫಿಕೇಟ್ ಸಿಕ್ಕಿದೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಹಲವಾರು ಇಂಟಿಮೇಟ್ ಸೀನ್‌ಗಳನ್ನು ನೋಡಿ ಈ ಸರ್ಟಿಫಿಕೇಟ್ ನೀಡಲಾಗಿದೆ. ಮಾತ್ರವಲ್ಲದೇ ಹಲವು ದೃಶ್ಯಗಳನ್ನು ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಕೂಡ ಮಾಡಿದೆ. ಅದು ಕತ್ತರಿ ಹಾಕುವ ಮುಂಚೆಯೇ ಕೆಲವೊಂದು ದೃಶ್ಯಗಳನ್ನು ಟೀಸರ್ ಮತ್ತು ಟ್ರೇಲರ್‌ಗಳಲ್ಲಿ ತೋರಿಸಲಾಗಿತ್ತು. ಮೊದಲ ಹಾಡನ್ನು ರಿಲೀಸ್ ಮಾಡಿದಾಗ ಅದರಲ್ಲಿ ವಿಮಾನದಲ್ಲಿ ಈ ಜೋಡಿಯ ಲಿಪ್‌ಲಾಕ್ ದೃಶ್ಯಗಳು ಹಲ್‌ಚಲ್ ಸೃಷ್ಟಿಸಿತ್ತು.
ಇದೀಗ, ಅನಿಮಲ್ ಚಿತ್ರ ಭರ್ಜರಿ ಓಡುತ್ತಿರುವ ನಡುವೆಯೇ, ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ಆಲಿಯಾ ಭಟ್ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ತಬ್ಬಿಕೊಂಡಿದ್ದಾರೆ. ಆದರೆ ರಶ್ಮಿಕಾ ಆಲಿಯಾ ಅವರನ್ನು ಸರಿಯಾಗಿ ಹಗ್ ಮಾಡದೇ ಇರುವುದು ಗಮನ ಸೆಳೆದರೆ, ಅದೇ ಇನ್ನೊಂದೆಡೆ ಆಲಿಯಾ ಭಟ್ ರಶ್ಮಿಕಾರನ್ನು ನೋಡಿ ಅಸಡ್ಡೆಯಿಂದ ಹಗ್ ಮಾಡಿರುವುದನ್ನು ನೋಡಬಹುದು. ಮಾತ್ರವಲ್ಲದೇ ನಗಬೇಕಲ್ಲಾ ಎಂದು ಸೊಟ್ಟಮೂತಿ ಮಾಡಿಕೊಂಡು ಆಲಿಯಾ ನಕ್ಕು, ಹಗ್ ಮಾಡಿಕೊಂಡಂತೆ ನಾಟಕ ಮಾಡಿ ಅತ್ತ ಹೋಗಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಹಸಿಬಿಸಿ ದೃಶ್ಯ ಮುಗಿಸಿದ ಮೇಲಾದ್ರೂ ಮಗಳು ನೆನಪಾದ್ಲಾ ಎಂದು ರಣಬೀರ್ ಕಪೂರ್ ಕಾಲೆಳೆದ ನೆಟ್ಟಿಗರು
ಈ ವಿಡಿಯೋ ಸಕತ್ ಟ್ರೋಲ್ ಆಗುತ್ತಿದೆ. ನಟಿಯೇ ಆಗಿರಲಿ, ಯಾರೇ ಆಗಿರಲಿ ತಮ್ಮ ಪತಿ ಹೀಗೆ ಬೇರೊಬ್ಬಳ ಜೊತೆ ಅಂಥ ಇಂಟಿಮೇಟ್ ಸೀನ್‌ನಲ್ಲಿ ಕಾಣಿಸಿಕೊಂಡರೆ ಯಾವ ಹೆಣ್ಣು ತಾನೆ ಸುಮ್ಮನೆ ಇರಲು ಸಾಧ್ಯ ಎಂದು ಕೆಲವರು ಆಲಿಯಾರನ್ನು ಟೀಕಿಸುತ್ತಿದ್ದರೆ, ಆಲಿಯಾ ಕೂಡ ಬೇರೆ ನಟನ ಜೊತೆ ಹೀಗೇ ಮಾಡಿಲ್ವಾ ಎಂದು ಇನ್ನು ಕೆಲವರು ಕೇಳುತ್ತಿದ್ದಾರೆ. ಎಷ್ಟೆಂದೆರೂ ಆಲಿಯಾ ಒಬ್ಬಳು ಪತ್ನಿ ತಾನೆ? ರಶ್ಮಿಕಾರನ್ನು ನೋಡಿ ಸವತಿಯ ಹಾಗೆ ಮೂತಿ ಮಾಡಿದ್ದಾಳೆ ನೋಡಿ ಅಂತ ಕೆಲವರು ಕಾಲೆಳೆದಿದ್ದಾರೆ.
ತಮ್ಮ ಪತಿ ತಮಗಿಂತ ಚೆನ್ನಾಗಿ ರಶ್ಮಿಕಾ ಜೊತೆ ಮಿಂಗಲ್ ಆಗಿದ್ದನ್ನು ನೋಡಿ ಆಲಿಯಾಗೆ ಹೊಟ್ಟೆಕಿಚ್ಚು ಬಂದ ಹಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ರಶ್ಮಿಕಾ ಕೂಡ ಆಲಿಯಾಳನ್ನು ನಾಮ್‌ಕೇವಾಸ್ತೆ ಹಗ್ ಮಾಡಿದ್ದನ್ನು ನೋಡಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಆಲಿಯಾ ಭಟ್ ಹಗ್ ಸುದ್ದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ.
ಒಬ್ಬರಿಗಾದ್ರೂ ನಾನು ಹೇಳಿದ್ದೇನೆಂದು ಅರ್ಥವಾಯ್ತಲ್ಲ, ಅಷ್ಟೇ ಸಾಕು: ರಿಷಬ್ ಶೆಟ್ಟಿ ಹೀಗೆ ಅಂದಿದ್ದೇಕೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.