ರಣಬೀರ್ ಕಪೂರ್ ಅಪ್ಪ ರಿಷಿ ಕಪೂರ್ ಫ್ಲರ್ಟಿಂಗ್ ಕುರಿತು ಅಮ್ಮ ನೀತು ಕಪೂರ್ ಅವರ ಹಳೆಯ ಸಂದರ್ಶನ ವೈರಲ್ ಆಗಿದೆ. ಅವರು ಹೇಳಿದ್ದೇನು?
ರಿಷಿ ಕಪೂರ್ ಹಿಂದಿ ಚಿತ್ರರಂಗದ ಚಾಕೊಲೇಟ್ ಬಾಯ್ ಎಂದು ಎನಿಸಿಕೊಂಡವರು. ಈಗ ಚಾಕಲೇಟ್ ಬಾಯ್ ಎನಿಸಿಕೊಂಡಿರುವ ನಟ ರಣಬೀರ್ ಕಪೂರ್ ಅಪ್ಪ ಇವರು. ರಿಷಿ ಕಪೂರ್ ಅವರು, ಬಾಬಿ ಚಿತ್ರದ ಮೂಲಕ ಪದಾರ್ಪಣೆ ಮಾಡಿದಾಗ, ನಟ ರಾತ್ರೋರಾತ್ರಿ ಸ್ಟಾರ್ ಆದರು. ಸ್ಟಾರ್ಡಮ್ ಜೊತೆಗೆ ದೊಡ್ಡ ಮಹಿಳಾ ಅಭಿಮಾನಿಗಳು ಬಂದರು. ಆದರೆ, ನೀತು ಸಿಂಗ್ (ನೀತು ಕಪೂರ್) ಅವರ ಮೋಡಿಗೆ ರಿಷಿ ಕಪೂರ್ ಒಳಗಾಗಿದ್ದರು. ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿ ಆಗಿರಲಿಲ್ಲ, ಆದರೆ ಕ್ರಮೇಣ ಅವರ ಸ್ನೇಹ ಪ್ರೀತಿಯಾಗಿ ಅರಳಿತು. ಒಬ್ಬರನ್ನೊಬ್ಬರು ಪ್ರೀತಿಸಿದ ನಂತರ, ರಿಷಿ ಮತ್ತು ನೀತು ಜನವರಿ 22, 1980 ರಂದು ಮದುವೆಯಾದರು. ರಿಧಿಮಾ ಕಪೂರ್ ಮತ್ತು ರಣಬೀರ್ ಕಪೂರ್‌ಗೆ ಪೋಷಕರೂ ಆದರು. ಅವರ ಮದುವೆಯ ನಂತರ, ನೀತು ನಟನೆಯನ್ನು ತೊರೆದು ಕುಟುಂಬ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಪ್ರಾರಂಭಿಸಿದರು. ಮತ್ತೊಂದೆಡೆ, ರಿಷಿ ಕಪೂರ್ ಇನ್ನೂ ಲಕ್ಷಾಂತರ ಜನರ ಹೃದಯಸ್ಪರ್ಶಿಯಾಗಿದ್ದರು.
ಇದೀಗ ನೀತು ಕಪೂರ್ ಅವರ ಸಂದರ್ಶನವೊಂದು ವೈರಲ್ ಆಗಿದೆ. ಅದರಲ್ಲಿ ಅವರು ತಾವು ಜೀವನದಲ್ಲಿ ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಮಾತನಾಡಿದ್ದಾರೆ. ರಿಷಿ ಕಪೂರ್ ಅವರ ಫ್ಲರ್ಟಿಂಗ್ ಗುಣದ ಬಗ್ಗೆ ಮಾತನಾಡಿದ ನೀತು ಕಪೂರ್, ಹಲವಾರು ಬಾರಿ ರಿಷಿ ಅವರ ಕಳ್ಳತನವನ್ನು ಹಿಡಿದಿರುವುದಾಗಿ ಹೇಳಿದ್ದಾರೆ. ಅವರು ಸಿನಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದರು. ಅದೇ ಸಮಯದಲ್ಲಿ ಅವರೊಬ್ಬ ಫ್ಲರ್ಟ್ ಕೂಡ ಆಗಿದ್ದರು. ಅವರು ಹೊರಾಂಗಣ ಸ್ಥಳಗಳಲ್ಲಿ ಅವರ ವ್ಯವಹಾರಗಳ ಬಗ್ಗೆ ನನಗೆ ಚೆನ್ನಾಗಿ ಅರಿವಿತ್ತು. ಅವೆಲ್ಲವೂ ಒಂದು ರಾತ್ರಿಯ ಸುಖ ಪಯಣ ಎನ್ನುವುದು ನನಗೆ ತಿಳಿದಿತ್ತು. ಆರಂಭದಲ್ಲಿ ಅವರೊಂದಿಗೆ ಜಗಳವಾಡುತ್ತಿದ್ದೆ. ಆದರೆ ಪ್ರಯೋಜನ ಏನೂ ಆಗಲಿಲ್ಲ. ಆದ್ದರಿಂದ ನನ್ನನ್ನೇ ನಾನು ಸಮರ್ಥಿಸಿಕೊಂಡು ಹೋಗಲಿ ಬಿಡು ಎನ್ನುವ ಮನೋಭಾವ ಬೆಳೆಸಿಕೊಂಡಿದ್ದೆ ಎಂದಿದ್ದಾರೆ.
ಹಸಿಬಿಸಿ ದೃಶ್ಯ ಮುಗಿಸಿದ ಮೇಲಾದ್ರೂ ಮಗಳು ನೆನಪಾದ್ಲಾ ಎಂದು ರಣಬೀರ್ ಕಪೂರ್ ಕಾಲೆಳೆದ ನೆಟ್ಟಿಗರು
ತಮ್ಮ ವ್ಯವಹಾರದ ಬಗ್ಗೆ ನನಗೆ ಹೇಗೆ ಗೊತ್ತಾಗುತ್ತದೆ ಎಂದು ರಿಷಿಗೆ ಸದಾ ಅಚ್ಚರಿಯಾಗುತ್ತಿತ್ತು. ಆದರೆ ನಾನೂ ಒಬ್ಬಳು ನಟಿ ಎನ್ನುವುದನ್ನು ಅವರು ಮರೆತಿದ್ದರು. ಸಿನಿ ಕ್ಷೇತ್ರದಲ್ಲಿ ನನಗೆ ಬಹಳಷ್ಟು ಸ್ನೇಹಿತರಿದ್ದರು. ಅವರೆಲ್ಲರೂ ನನಗೆ ರಿಷಿ ಕಪೂರ್ ಅವರ ಈ ಒಂದು ರಾತ್ರಿಯ ಸುಖದ ಬಗ್ಗೆ ತಿಳಿಸುತ್ತಲೇ ಇದ್ದರು. ಆರಂಭದಲ್ಲಿ ಜಗಳವಾಡಿದರೂ ಪ್ರಯೋಜನ ಆಗದೇ, ನಿರ್ಲಕ್ಷಿಸಲು ಶುರು ಮಾಡಿದೆ ಎಂದು ನೀತು ಕಪೂರ್ ಹೇಳಿದ್ದಾರೆ.
ಇದರ ಹೊರತಾಗಿಯೂ ನಾವು ಪರಸ್ಪರರ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದೇವೆ. ಆದ್ದರಿಂದ ನಾನು ಅವರ ಈ ನಡವಳಿಕೆಗೆ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಅವರು ನನ್ನ ಮೇಲೆ ತುಂಬಾ ಅವಲಂಬಿತನಾಗಿದ್ದರು. ನನ್ನನ್ನು ಎಂದಿಗೂ ಬಿಡುವುದಿಲ್ಲ ಎಂದಿದ್ದರು. ಅದಕ್ಕಾಗಿ ನಾನು ಸುಮ್ಮನಾದೆ ಎಂದಿರುವ ನಟಿ ನೀತು, ಪುರುಷರಿಗೆ ಒಂದು ನಿರ್ದಿಷ್ಟ ಪ್ರಮಾಣದ ಸ್ವಾತಂತ್ರ್ಯವನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ ಯಾರೂ ಪುರುಷರನ್ನು ಬಂಧಿಸಿ ಇಡಲು ಸಾಧ್ಯವಿಲ್ಲ. ಇದನ್ನೇ ನಾನು ಅರಿತಿದ್ದರಿಂದ ಸುಮ್ಮನಾಗುತ್ತಿದೆ ಎಂದಿದ್ದಾರೆ. ಏಪ್ರಿಲ್ 30, 2020 ರಂದು, ರಿಷಿ ಕಪೂರ್ ವಿಧಿವಶರಾದರು.
ರಶ್ಮಿಕಾ ಹಗ್ ಮಾಡ ಬಂದಾಗ ಆಲಿಯಾ ಭಟ್ ಹೀಗ್ ಮಾಡೋದಾ? ಅವಳೇನು ಸವತಿನಾ ಕೇಳಿದ ನೆಟ್ಟಿಗರು!