'ಮುಂಗಾರು ಮಳೆ' ಗಾಯಕ ಅರ್ಮಾನ್​ ಮಲಿಕ್​ ನಿಶ್ಚಿತಾರ್ಥ: ಲಲನೆಯರ ಕನಸಾಯ್ತು ನುಚ್ಚುನೂರು

Published : Aug 28, 2023, 04:32 PM IST
'ಮುಂಗಾರು ಮಳೆ' ಗಾಯಕ ಅರ್ಮಾನ್​ ಮಲಿಕ್​ ನಿಶ್ಚಿತಾರ್ಥ: ಲಲನೆಯರ ಕನಸಾಯ್ತು ನುಚ್ಚುನೂರು

ಸಾರಾಂಶ

 'ಮುಂಗಾರು ಮಳೆ' ಗಾಯಕ ಅರ್ಮಾನ್​ ಮಲಿಕ್​ ತಮಗಿಂತ ಹಿರಿಯಳಾಗಿರುವ ಯೂಟ್ಯೂಬರ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರಿಂದ ಸಾವಿರಾರು ಲಲನೆಯ ಕನಸಾಯ್ತು ನುಚ್ಚುನೂರಾಗಿದೆ.  

ಮುಂಗಾರುಮಳೆ-2, ಚಕ್ರವರ್ತಿ, ಹೆಬ್ಬುಲಿ, ದಿ ವಿಲನ್​, ಸೀತಾರಾಮ ಕಲ್ಯಾಣ, ಯುವರತ್ನ ಸೇರಿದಂತೆ ಅಸಂಖ್ಯ ಕನ್ನಡ ಚಿತ್ರಗಳಲ್ಲಿ ಹಾಡು ಹಾಡಿ ಜನಮನ ಗೆದ್ದಿರೋ ಹಿನ್ನೆಲೆ ಗಾಯಕ ಅರ್ಮಾನ್‌ ಮಲಿಕ್‌ ಅವರು ತಮ್ಮ ಬಹುಕಾಲದ ಗೆಳತಿಯ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಈ ಮೂಲಕ ಸ್ಫುರದ್ರೂಪಿ ಗಾಯಕ ಅರ್ಮಾನ್​ ಮಲಿಕ್​ (Armaan Malik)ಅಸಂಖ್ಯ ಹುಡುಗಿಯರ ಹಾರ್ಟ್​ ಬ್ರೇಕ್​ ಮಾಡಿದ್ದಾರೆ! ಹೌದು. ಗಾಯಕ ಅರ್ಮಾನ ಅವರ ಸೌಂದರ್ಯ ಹಾಗೂ ಅವರ ದನಿಗೆ ಮನಸೋಲದವರೇ ಇಲ್ಲವೇನೋ. ಇದೇ ಕಾರಣಕ್ಕೆ ಎಷ್ಟೋ ಹುಡುಗಿಯರು ಸಾರ್ವಜನಿಕವಾಗಿ ಅವರಿಗೆ  ಪ್ರಪೋಸ್‌ ಮಾಡಿದ್ದೂ ಇದೆ. ಮುಂಗಾರು ಮಳೆ-2 ಚಿತ್ರದ  'ಸರಿಯಾಗಿದೆ ನೆನಪಿದೆ', 'ನೀನು ಇರದೆ' ಹಾಡುಗಳು ಸಕತ್​ ಹಿಟ್​ ಆಗಿದ್ದರು. ಹೆಬ್ಬುಲಿ ಚಿತ್ರದ 'ದೇವರೆ' ಹಾಡು, ಚಕ್ರವರ್ತಿ ಚಿತ್ರದ  'ಒಂದು ಮಳೆಬಿಲ್ಲು' ಸೇರಿದಂತೆ ಕನ್ನಡ ಮತ್ತು ಹಲವು ಚಿತ್ರಗಳಲ್ಲಿ ಗಾಯಕರಾಗಿ ಗುರುತಿಸಿಕೊಂಡವರು ಅರ್ಮಾನ್​.  ಹಿಂದಿ, ತಮಿಳು, ತೆಲುಗು, ಕನ್ನಡ, ಬೆಂಗಾಳಿ, ಮಲಯಾಳಂ, ಮರಾಠಿ, ಗುಜರಾತಿ, ಪಾಕಿಸ್ತಾನಿ ಭಾಷೆಗಳ ಸಿನಿಮಾಗಳಲ್ಲಿ ಅನೇಕ ಹಾಡುಗಳನ್ನು ಹಾಡಿ ಜನಮನ ಗೆದ್ದಿದ್ದಾರೆ.

ಸಾಕಷ್ಟು ಸಮಯದಿಂದ ಆಶ್ನಾ- ಅರ್ಮಾನ್ ಡೇಟಿಂಗ್ ಮಾಡುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಎಂಗೇಜ್ ಆಗಿದ್ದಾರೆ.  ಗೆಳತಿ ಆಶ್ನಾ ಶ್ರಾಫ್‌ಗೆ (Aashna Shroff) ಮಂಡಿಯೂರಿ ಪ್ರಪೋಸ್‌ ಮಾಡಿದ್ದೂ ಅಲ್ಲದೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ.  ಎಂಗೇಜ್‌ಮೆಂಟ್‌ ಮಾಡಿಕೊಂಡ ಫೋಟೋಗಳನ್ನು ಹಂಚಿಕೊಂಡಿರುವ ಅರ್ಮಾನ್‌ ಮಲಿಕ್‌ 'ಹೊಸ ಜೀವನ ಆರಂಭ ನಮ್ಮ ಸಂಭ್ರಮ ಈಗ ಶುರುವಾಗಿದೆ'  ಎಂದು ಬರೆದುಕೊಂಡಿದ್ದಾರೆ. ಆಶ್ನಾ ಶ್ರಾಫ್‌ ಅವರು ಫ್ಯಾಷನ್‌ ಇನ್ಫ್ಲುಯೆನ್ಸರ್‌ ಆಗಿ ಗುರುತಿಸಿಕೊಂಡಿದ್ದಾರೆ.‌  ಅರ್ಮಾನ್ , ಆಶ್ನಾ 2019ರಿಂದ ಪ್ರೀತಿಯಲ್ಲಿದ್ದಾರೆ ಎನ್ನಲಾಗಿದೆ. ಪ್ರೀತಿ ವಿಚಾರವಾಗಿ ಅರ್ಮಾನ್ ಮಲಿಕ್, ಆಶ್ನಾ ಆಗಲೀ ಯಾವುದೇ ಪೋಸ್ಟ್ ಹಾಕುತ್ತಿರಲಿಲ್ಲ. ಇವರಿಬ್ಬರು ಎಂದೂ ಸಾರ್ವಜನಿಕವಾಗಿ ಪ್ರೀತಿ ಮಾಡುತ್ತಿದ್ದಾರೆ ಎಂದು ಸುಳಿವು ಕೊಟ್ಟಿರಲಿಲ್ಲ, ಇಬ್ಬರೂ ಒಟ್ಟಿಗೆ ತಿರುಗಾಡುತ್ತಿರಲಿಲ್ಲ. 2017ರಲ್ಲಿ ಈ ಜೋಡಿ ಒಮ್ಮೆ ಕಾಣಿಸಿಕೊಂಡು, ಆಮೇಲೆ ಬ್ರೇಕಪ್ ಮಾಡಿಕೊಂಡಿತ್ತು. ಮತ್ತೆ ಅವರು 2019ರಲ್ಲಿ ಒಟ್ಟಿಗೆ ಪ್ರೀತಿಯಲ್ಲಿ ಬಿದ್ದರು ಎನ್ನಲಾಗುತ್ತಿದೆ. 

ಸುಳ್ಳಿಗೆ ಹೈಪ್‌ ತರ್ಬೇಕು, ಸತ್ಯಕ್ಕೆ ತಾನಾಗೇ ಹೈಪ್‌ ಸಿಗುತ್ತೆ: ಉಪೇಂದ್ರ ವಿಡಿಯೋ ರಿಲೀಸ್​
 
4ನೇ ವಯಸ್ಸಿಗೆ ಹಾಡಲು ಆರಂಭಿಸಿದ್ದ ಅರ್ಮಾನ್ ಮಲಿಕ್ ಅವರು 'ಸರಿಗಮಪ ಲಿಟಲ್ ಚಾಂಪ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆಮೇಲೆ ಅವರು ಅನೇಕ ರಿಯಾಲಿಟಿ ಶೋಗಲ್ಲಿ ಅತಿಥಿಯಾಗಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಅಶ್ನಾ ಅವರ ಬಗ್ಗೆ ಹೇಳುವುದಾದರೆ,  ಅವರು ಯೂಟ್ಯೂಬರ್, ಬ್ಲಾಗರ್, ವೃತ್ತಿಯಲ್ಲಿ ಸಾಮಾಜಿಕ ಮಾಧ್ಯಮ ಸೆಲೆಬ್ರಿಟಿ ಎಂದು ಕರೆಯಲ್ಪಡುತ್ತಿದ್ದಾರೆ. ಅಶ್ನಾ ಅವರು ಫ್ಯಾಷನ್ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ವ್ಲಾಗ್‌ಗಳನ್ನು ಮಾಡುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಮಾನ್‌ಗಿಂತ ಆಶ್ನಾ ಎರಡು ವರ್ಷ ದೊಡ್ಡವಳು. ಆಶ್ನಾ ಅವರ ಜನ್ಮ ದಿನಾಂಕ ಆಗಸ್ಟ್ 4, 1993 ಮತ್ತು ಅರ್ಮಾನ್ ಅವರ ಜನ್ಮ ದಿನಾಂಕ ಜುಲೈ 22, 1995. ಆಶ್ನಾ ಲಂಡನ್‌ನಲ್ಲಿ ಫ್ಯಾಷನ್ ಅಧ್ಯಯನ ಮಾಡಿದ್ದಾರೆ.

 ಅಂದಹಾಗೆ, ಅರ್ಮಾನ್‌ ಮಲಿಕ್‌ ಹಾಗೂ ಆಶ್ನಾ ಶ್ರಾಫ್‌ಗೆ ಬಾಲಿವುಡ್‌ (Bollywood) ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಟೈಗರ್‌ ಶ್ರಾಫ್‌, ತಾರಾ ಸುತಾರಿಯಾ, ಸಾರಾ ತೆಂಡುಲ್ಕರ್‌, ಆಥಿಯಾ ಶೆಟ್ಟಿ, ರೆಹಾ ಚಕ್ರವರ್ತಿ, ಝರೀನ್‌ ಖಾನ್‌, ನೀತಿ ಮೋಹನ್‌ ಹಾಗೂ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ. 

ಮೇಘನಾ ರಾಜ್​ ತತ್ಸಮ-ತದ್ಭವ ಟ್ರೇಲರ್​ ಬಿಡುಗಡೆ: ಅತ್ತಿಗೆಯ ಡೈಲಾಗ್​ಗೆ ಧ್ರುವ ಸರ್ಜಾ ಕಣ್ಣೀರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!
400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?