ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!

ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!

Published : Apr 29, 2026, 12:15 PM IST

ನಟ ಅಲ್ಲು ಅರ್ಜುನ್ ಟಾಲಿವುಡ್​​ನಲ್ಲಿ ಪುಷ್ಪ ಸಿನಿಮಾಗಿಯೇ ಸುಮಾರು 5 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾ ಶೂಟಿಂಗ್ ಆಗಿ ತೆರೆಗೆ ಬರೋಕೆ ಕನಿಷ್ಠ 5 ವರ್ಷಗಳು ಹಿಡಿದಿವೆ. ಇದೀಗ ಐಕಾನ್ ಸ್ಟಾರ್ ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ, ಏನದು ನೋಡಿ..

ಟಾಲಿವುಡ್​​ನ ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಈಗ ನಟ ದರ್ಶನ್​​ರ ಆ ದೊಡ್ಡ ನಿರ್ಧಾವನ್ನ ಫಾಲೋ ಮಾಡುತ್ತಿದ್ದಾರೆ. ಈ ನಿರ್ಧಾರದಿಂದ ಅಲ್ಲು ಮೇಲೆ ಬಂಡವಾಳ ಹೂಡೋಕೆ ಕಾಯುತ್ತಿದ್ದರಿಗೆ ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ಖುಷಿ ತಂದಿದೆ. ಹಾಗಾದ್ರೆ ಅಲ್ಲು ಅರ್ಜುನ್​ ಡಿಸೈಡ್​ ಮಾಡಿರೋ ಆ ವಿಷ್ಯಾ ಏನು..? ನೋಡೋಣ ಬನ್ನಿ..

ಅಲ್ಲು ಸಿನಿ ಜೀವನಕ್ಕೂ ಬಂತು ದಾಸ ಮಾಡಿದ್ದ ಆ ನಿರ್ಧಾರ; ಸಿನಿ ರಂಗದಲ್ಲಿ ಅಲ್ಲು ಹೊಸ ಕ್ರಾಂತಿ!
ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಟಾಲಿವುಡ್​​ನಲ್ಲಿ ಪುಷ್ಪ ಸಿನಿಮಾಗಿಯೇ ಸುಮಾರು 5 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ. ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾ ಶೂಟಿಂಗ್ ಆಗಿ ತೆರೆಗೆ ಬರೋಕೆ ಕನಿಷ್ಠ 5 ವರ್ಷಗಳು ಹಿಡಿದಿದ್ವು.

ಅಂದ್ರೆ 1800 ದಿನಗಳಿಗೂ ಹೆಚ್ಚು ಸಮಯ ಪುಷ್ಪ ಪಾರ್ಟ್-1 ಹಾಗೂ ಪಾರ್ಟ್-2 ಚಿತ್ರಕ್ಕೆ ಸಮಯ ನಿಗಧಿ ಆಗಿತ್ತು. ಆದ್ರೆ ಇನ್ಮುಂದೆ ಹಾಗಾಗಲ್ಲ. ಯಾಕಂದ್ರೆ ಕನ್ನಡದ ನಟ ದರ್ಶನ್ ಮಾಡಿದ್ದ ಆ ಗಟ್ಟಿ ನಿರ್ಧಾರವೊಂದನ್ನ ಅಲ್ಲು ಅರ್ಜುನ್​ ತನ್ನ ಸಿನಿ ಜೀವನಕ್ಕೆ ಅಡಾಪ್ಟ್ ಮಾಡಿಕೊಳ್ಳುತ್ತಿದ್ದಾರೆ.

ನಟ ದರ್ಶನ್ ಈಗ ಜೈಲಲ್ಲಿ ಇರಬಹುದು. ಆದ್ರೆ ದಾಸ ಜೈಲಿಗೆ ಹೋಗೋ ಮೊದಲೇ  ಸಿನಿಮಾ ಖರಿಯರ್​​​ನ ದೊಡ್ಡ ನಿರ್ಧಾರವೊಂದನ್ನ ಮಾಡಿದ್ರು. ಯಾವ್ದೇ ಸಿನಿಮಾ ಮಾಡಿದ್ರು ಆ ಚಿತ್ರದ ಕೆಲಸಕಕ್ಕೆ 150 ದಿನ ಮಾತ್ರ ಮೀಸಲಿಡುತ್ತೇನೆ ಅಂದಿದ್ರು. ಈಗ ದೇ ಮಾಧರಿಯನ್ನ ನಟ ಅಲ್ಲು ಅರ್ಜುನ್​ ಫಾಲೋ ಮಾಡೋ ನಿರ್ಧಾರ ಮಾಡಿದ್ದಾರೆ.

ಒಂದು ಚಿತ್ರಕ್ಕೆ 200 ದಿನ ಮಾತ್ರ ಮೀಸಲು.. ಗಟ್ಟಿ ನಿರ್ಧಾರ ಮಾಡಿದ ಅಲ್ಲು
ಅಲ್ಲು ಅರ್ಜುನ್ ಒಂದು ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ ಎಂದರೆ ಆ ಸಿನಿಮಾ ಮುಗಿಯುವವರೆಗೂ ಮತ್ತೊಂದು ಸಿನಿಮಾವನ್ನ ಒಪ್ಪಿಕೊಳ್ಳುತ್ತಿರಲಿಲ್ಲ. ಅದರಲ್ಲೂ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಸಿನಿಮಾಗಳ ಹಾವಳಿ ಹೆಚ್ಚಾದಂತೆ ಎರಡ್ಮೂರು ವರ್ಷಗಳಿಗೆ ಒಂದೇ ಒಂದು ಸಿನಿಮಾ ಮಾಡೋಕೆ ಮಾತ್ರ ಸಾಧ್ಯವಾಗ್ತಿದೆ. ಈ ಕಾರಣದಿಂದ ಚಿತ್ರರಂಗದಲ್ಲಿ ಸಿನಿಮಾಗಳ ಅಭಾವ ಸೃಷ್ಟಿ ಆಗಿದೆ. ಇದಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಅಲ್ಲು ಅರ್ಜುನ್ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂದ್ರೆ ಒಂದು ಸಿನಿಮಾಗೆ ಕೇವಲ 200 ದಿನಗಳನ್ನ ಮಾತ್ರ ನೀಡಲು ನಿರ್ಧರಿಸಿದ್ದಾರಂತೆ.

ಇದರ ಜೊತೆಗೆ ಅಲ್ಲು ಅರ್ಜುನ್ ಆ 200 ದಿನಗಳಲ್ಲಿ ಬರೀ ಒಂದೇ ಸಿನಿಮಾ ಮಾಡಲ್ವಂತೆ. ಮತ್ತೊಂದು ಸಿನಿಮಾ ಕಾಲ್​ ಶೀಟ್​ ಇದ್ರೂ ಟೈಮ್ ಅಡ್ಜೆಸ್ಟ್​ ಮಾಡಿಕೊಂಡು ಕೆಲಸ ಮಾಡುತ್ತಾರಂತೆ. ಅಂದ್ರೆ ರಾತ್ರಿ ಹಗಲು ದುಡಿಯೋ ನಿರ್ಧಾರ ಅಲ್ಲು ಅರ್ಜುನ್ ರದ್ದು. ಈ ನಿರ್ಧಾರದಿಂದ ಹಲವಾರು ಥಿಯೇಟರ್​ಗಳು ಬಾಗಿಲು ಹಾಕುವುದನ್ನ ನಿಲ್ಲಿಸಬಹುದು. ಈ ರೀತಿಯಾದ ನಿರ್ಧಾರವನ್ನ ದೊಡ್ಡ ದೊಡ್ಡ ಕಲಾವಿದರು ತೆಗೆದುಕೊಂಡಿದ್ದೇ ಆಗಿದ್ದಲ್ಲಿ ಸಿನಿಮಾಗಳ ಕೊರತೆ ನಿಗುತ್ತೆ.

ಅಂದಹಾಗೆ ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಿದ್ರೆ ಚಿತ್ರರಂಗದ ಹಲವಾರು ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದು. ಇದರಿಂದ ಸಿಂಗಲ್ ಸ್ಟ್ರೀನ್ ಥಿಯೇಟರ್ ಗಳು ಎದುರಿಸುವ ಹಲವಾರು ಸಮಸ್ಯೆಗಳು ಸಹ ದೂರವಾಗಲಿದೆ. ಅಲ್ಲು ಅರ್ಜುನ್ ಅವರಂತೆ ಇನ್ನುಳಿದ ನಟರು ಇಂತಹ ನಿರ್ಧಾರ ಮಾಡಬೇಕು ಅನ್ನೋದು ಸಿನು ಮಂದಿಯ ಒತ್ತಾಯವೂ ಹೌದು.

ಸದ್ಯ ಅಲ್ಲು ಅರ್ಜುನ್ ಆಟ್ಲಿ ಜೊತೆ ರಾಕಾ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಳಿಕವಷ್ಟೇ 200ದಿನದ ಈ ಸೂತ್ರ ಹಿಡಿಯುವ ಸಾಧ್ಯತೆ ಇದೆ. ಈ ನಿರ್ಧಾರವನ್ನ ಐಕಾನ್ ಸ್ಟಾರ್ ಅನುಸರಿಸಿದ್ದೇ ನಿಜವಾದ್ರೆ ಚಿತ್ರರಂಗದಲ್ಲಿ ಹೊಸ ಕ್ರಾಂತಿಯೇ ಶುರುವಾಗಲಿದೆ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more