ನಮ್ಮ ಎಣಿಕೆಯಂತೆ ನಡೆಯದಿರುವ ಎಲ್ಲಾ ಸಂಗತಿಗಳು ಕೂಡ ಯಾವುದೋ ಅಲೌಕಿಕ ಶಕ್ತಿಯ ಪ್ರೇರಣೆಯಂತೆ ನಡೆಯುತ್ತವೆ. ಅದು ನಮ್ಮ ಪ್ಲಾನ್‌ಗಿಂತಲೂ ಬಹಳಷ್ಟು ಪಟ್ಟು ಹೆಚ್ಚು ಚೆನ್ನಾಗಿರುತ್ತದೆ. ಹೀಗಾಗಿ, ಒಮ್ಮೆ ನಾವು ಅಂದುಕೊಂಡಂತೆ ನಡೆಯದಿದ್ದರೆ, ಅದು ಇನ್ನೂ ಹೆಚ್ಚು ಒಳಿತನ್ನು ಉಂಟುಮಾಡುತ್ತದೆ ಎಂದು ಅಂದುಕೊಳ್ಳಬೇಕು.
ಬಾಲಿವುಡ್ ಮೇರು ನಟ ಅಮಿತಾಭ್ ಬಚ್ಚನ್ ಹಲವರ 'ಕಣ್ಣು ತೆರೆಸುವ' ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಮಾತು ಕೇಳಿದರೆ ಎಂಥವರಿಗಾದರೂ ,ಹೌದು, ಅವರು ಹೇಳಿರುವುದು ತುಂಬಾ ಅರ್ಥಗರ್ಭಿತವಾಗಿದೆ' ಎನ್ನಿಸದೇ ಇರದು. ಅಮಿತಾಭ್ 'ನನ್ನ ತಂದೆ ಹಲವು ಮಾತುಗಳನ್ನು ನನಗೆ ಉಪದೇಶ ಕೊಟ್ಟಂತೆ ಹೇಳಿದ್ದಾರೆ. ನಾನು ಅವುಗಳನ್ನು ಸಾವಿರಾರು ಕಡೆ ಹೇಳಿದ್ದೇನೆ. ನಾವು ಅಂದುಕೊಂಡಂತೆ ಆದರೆ ಅದು ಒಳ್ಳೆಯದು. ಒಮ್ಮೆ ಆಗದಿದ್ದರೆ ಅದು ಇನ್ನೂ ಒಳ್ಳೆಯದು. ನಮ್ಮ ಎಣಿಕೆಯಂತೆ ಆಗದಿದ್ದರೆ ಅದು ಇನ್ಯಾವುದೋ ದೈವಿಕ ಶಕ್ತಿಯ ಇಚ್ಛೆಯ ಪ್ರಕಾರ ನಡೆಯುತ್ತಿದೆ ಎಂದು ತಿಳಿಯಬೇಕು.
ನಮ್ಮ ಎಣಿಕೆಯಂತೆ ನಡೆಯದಿರುವ ಎಲ್ಲಾ ಸಂಗತಿಗಳು ಕೂಡ ಯಾವುದೋ ಅಲೌಕಿಕ ಶಕ್ತಿಯ ಪ್ರೇರಣೆಯಂತೆ ನಡೆಯುತ್ತವೆ. ಅದು ನಮ್ಮ ಪ್ಲಾನ್‌ಗಿಂತಲೂ ಬಹಳಷ್ಟು ಪಟ್ಟು ಹೆಚ್ಚು ಚೆನ್ನಾಗಿರುತ್ತದೆ. ಹೀಗಾಗಿ, ಒಮ್ಮೆ ನಾವು ಅಂದುಕೊಂಡಂತೆ ನಡೆಯದಿದ್ದರೆ, ಅದು ಇನ್ನೂ ಹೆಚ್ಚು ಒಳಿತನ್ನು ಉಂಟುಮಾಡುತ್ತದೆ ಎಂದು ಅಂದುಕೊಳ್ಳಬೇಕು. ನಾವೇನೋ ಕೆಲಸ ಮಾಡಲು ಹೊರಟರೆ ಅದು ಆಗುತ್ತಿಲ್ಲ ಎಂದರೆ, ಅದನ್ನು ಅಲ್ಲಿಗೇ ಕೈ ಬಿಟ್ಟು ಇನ್ನೊಂದು ಅವಕಾಶಕ್ಕೆ ಕಾಯಬೇಕು. ಏಕೆಂದರೆ ಅದು ನಮ್ಮ ಪ್ರಯತ್ನ ಮೀರಿದ, ದೇವರ ಆಯ್ಕೆಯ ಮೇರೆಗೆ ನಡೆಯಲಿರುವ ಸಂಗತಿ ಆಗಿರುತ್ತದೆ.
undefined
ನನ್ನ ತಂದೆಗೆ ನಾನು 'ನನ್ನ ಜೀವನ ಸಂಘರ್ಷದಲ್ಲಿದೆ ಎಂದಿದ್ದೆ. ಅದಕ್ಕೆ ನನ್ನ ತಂದೆ 'ಎಲ್ಲಿಯವರೆಗೆ ಜೀವನ ಇರುತ್ತೋ ಅಲ್ಲಿಯವರೆಗೂ ಸಂಘರ್ಷ ಇದ್ದೇ ಇರುತ್ತದೆ. ಜೀವನ ಎಂದ ಮೇಲೆ ಸಂಘರ್ಷ ಇದ್ದೇ ಇರುತ್ತದೆ. ಜೀವನ ಸುಲಭವಾಗಿ ನಡೆಯುತ್ತಿಲ್ಲ ಎಂದರೆ, ಏನೋ ಒಂದು ಹೊಸದು ನಡೆಯಲಿದೆ ಎಂದುಕೊಳ್ಳಬೇಕು. ಅದು ನಾಳೆಗೆ ಲಾಭವನ್ನು ತರಬಹುದು ಅಥವಾ ನಷ್ಟವನ್ನು ತರಬಹುದು. ಆದರೆ, ಹೊಸ ಚಾಲೆಂಜ್ ಅಂತೂ ಖಂಡಿತವಾಗಿ ಇರುತ್ತದೆ. ನನ್ನ ಜೀವನದಲ್ಲಿ ಸಾಕಷ್ಟು ಕೆಟ್ಟ ಕ್ಷಣಗಳನ್ನು ನಾನು ಅನುಭವಿಸಿದ್ದೇನೆ.
ನನ್ನ ಜೀವನದಲ್ಲಿ ನಡೆದ ಅನೇಕ ಕೆಟ್ಟ ಘಟನೆಗಳನ್ನು ನಾನು ಹಾಗೇ ಅಂದುಕೊಂಡು ಸ್ವೀಕರಿಸಿದ್ದೇನೆ. ಇಂದು ಏನೋ ಕೆಟ್ಟದಾಗಿದೆ ಎಂದರೆ ನಾಳೆ ಏನೋ ಒಳ್ಳೆಯದಾಗಲು ಇರಬೇಕು ಎಂಬ ಆಶಾಭಾವನೆ ತಂದುಕೊಳ್ಳುತ್ತೇನೆ. ನಾಳೆಯೂ ಕೂಡ ಏನೂ ಒಳ್ಳೆಯದು ಘಟಿಸದಿದ್ದರೆ ಸ್ವಲ್ಪ ಮುಂದೆ ಏನೋ ನಡೆಯಲು ಇದು ಸಿದ್ಧತೆ ಎಂದುಕೊಳ್ಳುತ್ತೇನೆ. ಒಟ್ಟಿನಲ್ಲಿ, ನಾನು ಯಾವತ್ತೂ ಜೀವನದಲ್ಲಿ ಆಶಾಭಾವ ಕಳೆದುಕೊಳ್ಳುವುದಿಲ್ಲ. ಎನೇ ಆದರೂ ಅದು ನನ್ನಿಂದ ಅಥವಾ ಯಾವುದೋ ಅಲೌಕಿಕ ಶಕ್ತಿಯಿಂದ ಆಗಿದೆ ಎಂದುಕೊಂಡು ಜೀವನದಲ್ಲಿ ಮುಂದೆ ಹೋಗುತ್ತಾ ಇರುತ್ತೇನೆ' ಎಂದಿದ್ದಾರೆ ಬಿಗ್ ಬಿ ಖ್ಯಾತಿಯ ನಟ ಅಮಿತಾಭ್ ಬಚ್ಚನ್.