ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಶಾಂತ್ ನೀಲ್ ಜೋಡಿಯ 'ಸಲಾರ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯಕ್ಕೆ ತೆಲುಗು ಹಾಗೂ ಮಲಯಾಳಂ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಶಾಂತ್ ನೀಲ್ ಜೋಡಿಯ 'ಸಲಾರ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯಕ್ಕೆ ತೆಲುಗು ಹಾಗೂ ಮಲಯಾಳಂ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಉಳಿದಂತೆ, ಹಿಂದಿ ಆವೃತ್ತಿ ಸದ್ಯವೇ ಬಿಡುಗಡೆ ಕಾಣಲಿದೆ ಎನ್ನಲಾಗಿದೆ. ಇಂದು, 01 ಡಿಸೆಂಬರ್ 2023ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿರುವ 'ಸಲಾರ್' ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗತೊಡಗಿವೆ.
ಕನ್ನಡದ 'ಉಗ್ರಂ' ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಪ್ರಶಾಂತ್ ನೀಲ್, ಬಳಿಕ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದರು. ಇದೀಗ ತೆಲುಗು ನಟ, ಬಾಹುಬಲಿ ಖ್ಯಾತಿಯ ಪ್ರಭಾಸ್ ಹಾಗೂ ಪ್ರಥ್ವಿರಾಜ್ ಸುಕುಮಾರನ್ ನಟನೆಯ 'ಸಲಾರ್' ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಸದ್ಯ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಟ್ರೇಲರ್ ಲಾಂಚ್ ಮಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವಾದ್ದರಿಂದ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಮೂಡಿದೆ. ಸಲಾರ್ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಜಗತ್ತಿನಾದ್ಯಂತ ಭಾರೀ ಕುತೂಹಲ ಹಾಗೂ ನಿರೀಕ್ಷೆ ಸೃಷ್ಟಿಸಿದೆ.
ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಲಾರ್ ಚಿತ್ರ ಅಗ್ನಿಪರೀಕ್ಷೆಯೇನೂ ಅಲ್ಲ. ಏಕೆಂದರೆ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 & ಕೆಜಿಎಫ್ 2 ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದೀಗ ಸಲಾರ್ ಚಿತ್ರಕ್ಕೆ ಸಹಜವಾಗಿಯೇ ಹೆಚ್ಚು ನಿರೀಕ್ಷೆಯಿದೆ. ಆದರೆ, ಈ ಚಿತ್ರ ಅವರ ಭವಿಷ್ಯದ ಹಣೆಬರಹ ನಿರ್ಧರಿಸುವಲ್ಲಿ ಅಷ್ಟೇನೂ ಪರಿಣಾಮಕಾರಿಯಲ್ಲ. ಕಾರಣ, ಸತತ ಗೆಲುವಿನ ಬಳಿಕ ಬರುವ ಮತ್ತೊಂದೇ ಚಿತ್ರವಾದ ಸಲಾರ್ ಅವರನ್ನು ಮುಂದಕ್ಕೆ ಕೊಂಡಯ್ಯದೇ ಇದ್ದರೂ ಹಿಂದಕ್ಕಂತೂ ತರಲಾರದು. ಸಲಾರ್ ಗೆದ್ದರೆ ಅವರಿಗೆ ಪ್ರಮೋಶನ್, ಬೋನಸ್ ಇವೆಲ್ಲಾ ಪಕ್ಕಾ ಎನ್ನಬಹುದಷ್ಟೇ.
ಆದರೆ ನಟ ಪ್ರಭಾಸ್ ಪರಿಸ್ಥಿತಿ ಹೀಗಿಲ್ಲ. ಕಾರಣ, ಬಾಹುಬಲಿ ಬಳಿಕ ಪ್ರಭಾಸ್ ನಟನೆಯ ಸಾಹೋ, ರಾಧೆ ಶ್ಯಾಮ್ ಮತ್ತು ಆದಿ ಪುರುಷ್ ಚಿತ್ರಗಳು ಸೋತು ಹೋಗಿವೆ. ಸತತ ಮೂರು ಚಿತ್ರಗಳ ಸೋಲು ಪ್ರಭಾಸ್ ಅವರಿಗೆ ತೀವ್ರ ಹಿನ್ನಡೆ ಉಂಟುಮಾಡಿವೆ. ಹೀಗಾಗಿ ಮುಂಬರುವ ಸಲಾರ್ ಚಿತ್ರದ ಗೆಲುವು ಸ್ವತಃ ಪ್ರಭಾಸ್ ಅವರಿಗೆ ತುಂಬಾ ಮುಖ್ಯವಾಗಿದೆ. ಪ್ರಭಾಸ್ ಅಭಿಮಾನಿಗಳು ಕೂಡ ಮುಂಬರುವ ಸಲಾರ್ ಚಿತ್ರವು ಸಕ್ಸಸ್ ಆಗಲೆಂದು ಹರಕೆ ಹೊರುತ್ತಿದ್ದಾರೆ. ಅದರಲ್ಲೂ ಈ ಸಲಾರ್ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಕಾರಣಕ್ಕೆ ಸಕ್ಸಸ್ ಗ್ಯಾರಂಟಿ ಎನ್ನಲಾಗುತ್ತಿದೆ.