ಆಲಿಯಾ  in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!

ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!

Published : Apr 16, 2026, 06:04 PM IST

ಬಾಲಿವುಡ್ ಬ್ಯೂಟಿ , ಭಟ್ ಫ್ಯಾಮಿಲಿ ಕುವರಿ, ಕಪೂರ್ ಖಾಂಧಾನ್ ಸೊಸೆ ಆಲಿಯಾ ಭಟ್ ಮತ್ತೆ ಸೌತ್ ಸಿನಿಇಂಡಸ್ಟ್ರಿಗೆ ಕಡೆಗೆ ಬರ್ತಾ ಇದ್ದಾರೆ. ಅಸಲಿಗೆ ಅತಿಲೋಕ ಸುಂದರಿ ಆಲಿಯಾನ ಮೊದಲು ಸೌತ್​ಗೆ ಕರೆತಂದಿದ್ದು ಎಸ್.ಎಸ್ ರಾಜಮೌಳಿ.

ಬಾಲಿವುಡ್ ಬ್ಯೂಟಿ, ಕಪೂರ್ ಖಾಂಧಾನ್ ಸೊಸೆ ಆಲಿಯಾ ಭಟ್ (Alia Bhatt) ಮತ್ತೆ ಸೌತ್ ಸಿನಿಇಂಡಸ್ಟ್ರಿಗೆ ಬರ್ತಾ ಇದ್ದಾರೆ. ಈ ಹಿಂದೆ RRR ಮೂವಿಯಲ್ಲಿ ಸೀತೆಯಾಗಿ ಮುಂಚಿದ್ದ ಆಲಿಯಾ ಒನ್ಸ್ ಅಗೈನ್ ತೆಲುಗುನಲ್ಲಿ ಚಿತ್ರಿತವಾಗ್ತಾ ಇರೋ ಪ್ಯಾನ್ ಇಂಡಿಯಾ ಮೂವಿಯಲ್ಲಿ ನಟಿಸೋದು ಫಿಕ್ಸ್ ಆಗಿದೆ.

ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ..!
ಯೆಸ್ ಬಾಲಿವುಡ್ ಬ್ಯೂಟಿ , ಭಟ್ ಫ್ಯಾಮಿಲಿ ಕುವರಿ, ಕಪೂರ್ ಖಾಂಧಾನ್ ಸೊಸೆ ಆಲಿಯಾ ಭಟ್ ಮತ್ತೆ ಸೌತ್ ಸಿನಿಇಂಡಸ್ಟ್ರಿಗೆ ಕಡೆಗೆ ಬರ್ತಾ ಇದ್ದಾರೆ. ಅಸಲಿಗೆ ಅತಿಲೋಕ ಸುಂದರಿ ಆಲಿಯಾನ ಮೊದಲು ಸೌತ್​ಗೆ ಕರೆತಂದಿದ್ದು ಎಸ್.ಎಸ್ ರಾಜಮೌಳಿ.

ರಾಜಮೌಳಿ ನಿರ್ದೇಶನದ RRR ಮೂವಿನಲ್ಲಿ ಆಲಿಯಾ ಸೀತೆ ಪಾತ್ರ ಮಾಡಿದ್ರು. ರಾಮ್​ಚರಣ್ ಜೋಡಿಯಾಗಿ ಮಿಂಚಿದ್ರು. ರಾಮ್ ಚರಣ್, ಜೂ ಎನ್​​ಟಿಆರ್ ಮತ್ತು ಆಲಿಯಾ ಅವರ ಹಾಡು ಸಹ RRR  ಸಿನಿಮಾದ ಕೊನೆಯಲ್ಲಿ ಇತ್ತು.

ಆದರೆ ಜೂ ಎನ್​​ಟಿಆರ್ ಮತ್ತು ಆಲಿಯಾ ನಡುವೆ ಕೇವಲ ಒಂದು ದೃಶ್ಯವಷ್ಟೆ ಇತ್ತು. ಇದೀಗ ಜೂ ಎನ್‌ಟಿಆರ್ ಗೆ ನಾಯಕಿಯಾಗಿ ಆಲಿಯಾ ಭಟ್ ನಟಿಸಲಿದ್ದಾರೆ. ಅದು ಕೂಡ ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್ ಸಿನಿಮಾದಲ್ಲಿ.

ಪ್ರಶಾಂತ್​ ನೀಲ್ ಚಿತ್ರದಲ್ಲಿ  NTR ಡಬಲ್ ರೋಲ್..? ತಾರಕ್​ ಜೋಡಿಯಾಗಲಿದ್ದಾರೆ ರುಕ್ಮಿಣಿ & ಆಲಿಯಾ..!
ಹೌದು ಸಲಾರ್ ನಂತರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರ್ತಾ ಇರೋ ಡ್ರ್ಯಾಗನ್ ಮೂವಿಯಲ್ಲಿ NTR  ದ್ವಿಪಾತ್ರದಲ್ಲಿ ಮಿಂಚಿದ್ದಾರಂತೆ. ಈಗಾಗ್ಲೇ ರುಕ್ಮಿಣಿ ವಸಂತ್ ಈ ಟೀಂಗೆ ಸೇರಿಯಾಗಿದೆ,.

ಇನ್ನೂ ಚಿತ್ರಕ್ಕೆ ಮತ್ತೊಬ್ಬ ನಾಯಕಿಯಾಗಿ ಆಲಿಯಾ ಎಂಟ್ರಿ ಕೊಟ್ಟಿದ್ದಾರೆ. ಆಲಿಯಾ ನಟಿಸ್ತಾ ಇರುವ ಪಾತ್ರ ಸಹ ಸಖತ್ ಪವರ್​​ಫುಲ್ ಆಗಿ ಇರಲಿದೆಯಂತೆ. ಆಲಿಯಾದು ಪರಿಪೂರ್ಣ ನಾಯಕಿ ಪಾತ್ರ ಅಲ್ಲದೆ, ಎಕ್ಸ್​​ಟೆಂಡೆಂಡ್ ಕ್ಯಾಮಿಯೋ ರೀತಿ ಇರಲಿದೆಯಂತೆ.

‘ಡ್ರ್ಯಾಗನ್’ ಸಿನಿಮಾಕ್ಕಾಗಿ ಜೂ ಎನ್​​ಟಿಆರ್ ಸಾಕಷ್ಟು ಶ್ರಮಪಡ್ತಾ ಇದ್ದಾರೆ. ದೇಹವನ್ನ ಹುರಿಗೊಳಿಸಿಕೊಂಡಿದ್ದು, ಸಿನಿಮಾಕ್ಕಾಗಿ ಸಿಕ್ಸ್ ಪ್ಯಾಕ್ ಸಹ ಮಾಡಿಕೊಂಡಿದ್ದಾರೆ. ಇನ್ನು ಈ ಸಿನಿಮಾನಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರು ನಟಿಸ್ತಾ ಇದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯ್, ಈ ಸಿನಿಮಾದ ವಿಲನ್ ಪಾತ್ರದಲ್ಲಿದ್ದಾರೆ. ಇದೀಗ ಆಲಿಯಾ ಕೂಡ ಡ್ರ್ಯಾಗನ್ ಬಳಗಕ್ಕೆ ಎಂಟ್ರಿ ಕೊಟ್ಟಿರೋದು ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..

04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
Read more