'ಮಂಗಳವಾರ'ಕ್ಕಾಗಿ ಬೆತ್ತಲಾದ ಹೆಡ್ ಬುಷ್ ನಟಿ ಪಾಯಲ್; ಫೋಟೋ ವೈರಲ್

Published : Apr 25, 2023, 03:15 PM IST
'ಮಂಗಳವಾರ'ಕ್ಕಾಗಿ ಬೆತ್ತಲಾದ ಹೆಡ್ ಬುಷ್ ನಟಿ ಪಾಯಲ್; ಫೋಟೋ ವೈರಲ್

ಸಾರಾಂಶ

ನಟಿ ಪಾಯಲ್ ರಜಪೂತ್ ಮಂಗಳವಾರಂ ಸಿನಿಮಾಗಾಗಿ ಬೆತ್ತಲಾಗಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಉತ್ತರ ಭಾರತ ಮೂಲದ ನಟಿ ಪಾಯಲ್ ರಜಪೂತ್ ಒಂದಲ್ಲೊಂದು ಕಾರಣಕ್ಕೆ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ತಮಿಳು ಮತ್ತು ತೆಲುಗು ಸಿನಿಮಾಗಳ ಮೂಲಕವೇ ಖ್ಯಾತಿಗಳಿಸಿರುವ ನಟಿ ಪಾಯಲ್ ಹೆಡ್ ಬುಷ್ ಸಿನಿಮಾ ಮೂಲಕ ಕನ್ನಡಕ್ಕೂ ಎಂಟ್ರಿ ಕೊಟ್ಟಿದ್ದರು. ಡಾಲಿ ಧನಂಜಯ್ ಜೊತೆ ನಟಿಸುವ ಮೂಲಕ ಪಾಯಲ್ ಕನ್ನಡಿಗರೂ ಪರಿಚಿತರಾಗಿದ್ದಾರೆ. ಸದ್ಯ ಪಾಯಲ್ ಬೆತ್ತಲಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಟಾಪ್ ಲೆಸ್ ಆಗಿ ಕ್ಯಾಮರಾಗೆ ಪೋಸ್ ನೀಡಿರುವ ಪಾಯಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಪಾಯಲ್ ಹೀಗೆ ಬಟ್ಟೆ ಬಿಚ್ಚೆಸೆದು ಬೆತ್ತಲಾಗಿರುವುದು ಸಿನಿಮಾಗಾಗಿ. 

ಪಾಯಲ್  'RX100' ಸಿನಿಮಾ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದರು. ಆ ಸಿನಿಮಾಗೆ ಅಜಯ್ ಭೂಪತಿ ಆಕ್ಷನ್ ಕಟ್ ಹೇಳಿದ್ದರು. ಇದೀಗ ಮತ್ತದೇ ಕಾಂಬಿನೇಷನ್ ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಜಯ್ ಭೂಪತಿ ಸಾರಥ್ಯದಲ್ಲಿ 'ಮಂಗಳವಾರಂ' ಎಂಬ  ಸಿನಿಮಾ ಸೆಟ್ಟೇರಿದ್ದು ಪಾಯಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ  ಫಸ್ಟ್ ಲುಕ್ ರಿಲೀಸ್ ಆಗಿದ್ದು ಪಾಯಲ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.  

ಪೋಸ್ಟರ್‌ನಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿರುವ ಪಾಯಲ್ ಬೆನ್ನು ತೋರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಪಾಯಲ್ ಶೈಲಜಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ನಿರ್ದೇಶಕ ಪೋಸ್ಟರ್ ಶೇರ್ ಮಾಡಿ, 'ಶೈಲೂ ನಿಮ್ಮ ಹೃದಯದಲ್ಲಿ ದೀರ್ಘಕಾಲ ಉಳಿಯುವ ಪಾತ್ರ.  ನಮ್ಮ ಹೊಸ ಚಿತ್ರ ಮಂಗಳವಾರಂ, ಹಿಂದೆಂದೂ ನೋಡಿರದ ಪಾತ್ರದಲ್ಲಿ ಪಾಯಲ್ ರಜಪೂರ್ ಅವರನ್ನು ಪ್ರಸ್ತುತಪಡಿಸುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ. 

Head Bush 2018ರಲ್ಲಿ ದಪ್ಪಗಿದ್ದೆ ಈಗ ಸಣ್ಣಗಾಗಿರುವೆ, ನಾನು ಇಷ್ಟ ಆದ್ನಾ: ಪಾಯಲ್ ರಜ್‌ಪುತ್

ಇನ್ನು ನಟಿ ಪಾಯಲ್ ಕೂಡ ತನ್ನ ಹಾಟೆಸ್ಟ್ ಲುಕ್ ಶೇರ್ ಮಾಡಿದ್ದಾರೆ. ಪೋಸ್ಟರ್ ಹಂಚಿಕೊಂಡು, 'ಈ ಲುಕ್ ಸಾಕಷ್ಟು ಹೇಳುತ್ತದೆ. ಮಂಗಳವಾರಂನಿಂದ ಶೈಲಜಾ' ಎಂದು ಬರೆದುಕೊಂಡಿದ್ದಾರೆ.  ಅಂದಹಾಗೆ ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಮಂಗಳವಾರಂ ಸಿನಿಮಾಗೆ ಕಾಂತಾರ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Risks Major Wardrobe Malfunction : ಕಾಣಬಾರದ್ದನ್ನು ಕಾಣಿಸಿ ಟ್ರೋಲಿಗರ ಕೈಗೆ ಸಿಕ್ಕಿದ್ದ ಪಾಯಲ್ ಗೆ ಮುಗಿಯದ ಕಾಟ!

ಮಂಗಳವಾರಂ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ 1990 ರ ದಶಕದ ಹಳ್ಳಿಯೊಂದರಲ್ಲಿ ನಡೆಯುವ ಹಾರರ್ ಥ್ರಿಲ್ಲರ್ ಎಂದು ಹೇಳಲಾಗಿದೆ. ಪಾಯಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ದಯಾನಂದ ರೆಡ್ಡಿ ಮತ್ತು ಕಮಲ ಕೃಷ್ಣ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!