ಅಲಿಯಾ ಭಟ್ ಬಾಯ್ಕಟ್ ಟ್ರೆಂಡ್ ಬಗ್ಗೆ ರಿಯಾಕ್ಷನ್ ನೀಡಿ ಟ್ರೋಲಿಗೆ ಗುರಿಯಾಗಿದೆ. ಇತ್ತೀಚಿಗಷ್ಟೆ ಅಲಿಯಾ ಸಿನಿಮಾ ಪ್ರಚಾರವೇಳೆ ಹೇಳಿರುವ ಮಾತಿನಿಂದ ಈಗ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಮತ್ತೆ ಟ್ರೋಲಿಗೆ ಗುರಿಯಾಗಿದ್ದಾರೆ. ಆಲಿಯಾ ಸದ್ಯ ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಬಾಯ್ಕಟ್ ಟ್ರೆಂಡ್ ಕೂಡ ಜೋರಾಗಿದೆ. ಬಾಲಿವುಡ್ ಸಿನಿಮಾಗಳನ್ನು ಬಾಯ್ಕಟ್ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಬಾಯ್ಕಟ್ ಬಿಸಿ ಅನೇಕ ಸ್ಟಾರ್ ನಟರ ಸಿನಿಮಾಗಳಿಗೆ ತಟ್ಟಿದೆ. ಇದೀಗ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾಗೂ ಬಾಯ್ಕಟ್ ಸಂಕಷ್ಟ ಎದುರಾಗಿದೆ. ಬಾಯ್ಕಟ್ ಬಗ್ಗೆ ಅನೇಕ ಬಾಲಿವುಡ್ ಸ್ಟಾರ್ಸ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಅಲಿಯಾ ಭಟ್ ರಿಯಾಕ್ಷನ್ ಟ್ರೋಲಿಗೆ ಗುರಿಯಾಗಿದೆ. ಇತ್ತೀಚಿಗಷ್ಟೆ ಅಲಿಯಾ ಸಿನಿಮಾ ಪ್ರಚಾರವೇಳೆ ಹೇಳಿರುವ ಮಾತಿನಿಂದ ಈಗ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಅಲಿಯಾ, 'ನೀವು ನನ್ನನ್ನು ಇಷ್ಟಪಡದಿದ್ದರೆ, ನನ್ನನ್ನು ನೋಡಲೇ ಬೇಡಿ' ಎಂದು ಹೇಳಿದ್ದಾರೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಆಲಿಯಾ ಭಟ್ ಈ ಹೇಳಿಕೆ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಆಲಿಯಾ ಭಟ್ ಬ್ರಹ್ಮಾಸ್ತ್ರ ಸಿನಿಮಾ ಮೇಲು ಎಫೆಕ್ಟ್ ಆಗಿದೆ. ಈಗಾಗಲೇ ಬಾಯ್ಕಟ್ ಟ್ರೆಂಡ್ ಜೋರಾಗಿದೆ. ಈ ಸಮಯದಲ್ಲಿ ಇಂಥ ಹೇಳಿಕೆ ನೀಡಿ ಅನಾವಶ್ಯಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
‘ನಾನು ಏನು ಎಂಬುದನ್ನು ಮಾತಿನಲ್ಲಿ ಹೇಳಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗೆ ನಾನು ಇಷ್ಟ ಇಲ್ಲ ಎಂದಾದರೆ ನನ್ನನ್ನು ನೋಡಬೇಡಿ. ನಾನೇನು ಮಾಡಲು ಸಾಧ್ಯವಿಲ್ಲ. ಜನರಿಗೆ ಹೇಳಲು ಏನಾದರೂ ಇರುತ್ತೆ. ನಾನೀಗ ಇರುವ ಜಾಗಕ್ಕೆ ನಾನು ಯೋಗ್ಯನಾಗಿದ್ದೇನೆ ಎಂದು ನನ್ನ ಸಿನಿಮಾಗಳ ಮೂಲಕ ನಾನು ಸಾಬೀತುಪಡಿಸುತ್ತೇನೆ' ಎಂದು ಹೇಳಿದರು. ಅಲಿಯಾ ಈ ಹೇಳಿಕೆ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದೆ. ತರಹೇವಾರಿ ಕಾಮೆಂಟ್ ಮಾಡಿ ಅಲಿಯಾ ಸಿನಿಮಾ ಬಹಿಷ್ಕರಿಸುವಂತೆ ಹೇಳುತ್ತಿದ್ದಾರೆ.
#BoycottDobaaraa; ಬಾಯ್ಕಟ್ ಮಾಡಿ ಎಂದಿದ್ದ ತಾಪ್ಸಿ ಈಗ ಸಿನಿಮಾ ನೋಡುವಂತೆ ಮನವಿ
‘ಆಲಿಯಾ ಎಷ್ಟು ದರ್ಪದಿಂದ ಈ ರೀತಿ ಹೇಳಿದ್ದಾರೆ, ಅವರು ಹೇಳಿದನ್ನು ನಾವು ಸವಾಲು ಅಂತ ಸ್ವೀಕರಿಸೋಣ. ಬ್ರಹ್ಮಾಸ್ತ್ರ ಸಿನಿಮಾವನ್ನು ಬಹಿಷ್ಕರಿಸೋಣ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಬಹಿಷ್ಕಾರದ ಟ್ರೆಂಡ್ನಿಂದಾಗಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ತಲೆ ಹಾಳಾಗಿದೆ ಎನಿಸುತ್ತದೆ. ನಿಮ್ಮ ಆಯ್ಕೆಯಂತೆಯೇ ಆಗಲಿ ಆಲಿಯಾ’ ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾನೆ. ಇದೀಗ ಅಲಿಯಾ ಈ ಹೇಳಿಕೆ ಬ್ರಹ್ಮಾಸ್ತ್ರ ಸಿನಿಮಾ ಮೇಲಾಗುವ ಸಾಧ್ಯತೆ ಇದೆ.
#Boycott ವಿಚಾರದಲ್ಲಿ ಅರ್ಜುನ್ ಕಪೂರ್ ಬೆದರಿಕೆ ಹಾಕ್ತಿದ್ದಾರೆ; BJP ಸಚಿವ ಗಂಭೀರ ಆರೋಪ
ಇದೇ ಸಮಯದಲ್ಲಿ ಆಲಿಯಾ ಸ್ಟಾರ್ ಕಿಡ್ ಎಂದು ಟ್ರೋಲ್ ಮಾಡಿದಾಗ ತನಗೆ ಬೇಸರವಾಗುತ್ತದೆ ಎಂದು ಹೇಳಿದರು. 'ನಾನು ಗಂಗೂಬಾಯಿಯಂತಹ ಚಲನಚಿತ್ರವನ್ನು ನೀಡಿದ್ದೇನೆ. ಹಾಗಾದರೆ, ಕೊನೆಯ ನಗು ಯಾರು ಹೊಂದಿದ್ದಾರೆ? ಕನಿಷ್ಠ ನನ್ನ ಮುಂದಿನ ಫ್ಲಾಪ್ ಅನ್ನು ನೀಡುವವರೆಗೂ? ಸದ್ಯಕ್ಕೆ ನಾನು ನಗುತ್ತಿದ್ದೇನೆ' ಎಂದು ನಟಿ ಆಲಿಯಾ ಭಟ್ ಹೇಳಿದರು.