ಖ್ಯಾತ ನಿರ್ದೇಶಕ ಲಿಂಗುಸ್ವಾಮಿ‌ಗೆ 6 ತಿಂಗಳು ಜೈಲು ಶಿಕ್ಷೆ

By Shruiti G KrishnaFirst Published Aug 23, 2022, 10:35 AM IST
Highlights

ತಮಿಳಿನ ಖ್ಯಾತ ನಿರ್ದೇಶಕ ಲಿಂಗುಸ್ವಾಮಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ತಮಿಳು ನಿಮಾ ನಿರ್ದೇಶಕ ಲಿಂಗುಸ್ವಾಮಿಗೆ ಆರು ತಿಂಗಳ ಜೈಲು ಶಿಕ್ಷೆಯಾಗಿದೆ. 

ತಮಿಳಿನ ಖ್ಯಾತ ನಿರ್ದೇಶಕ ಲಿಂಗುಸ್ವಾಮಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ತಮಿಳು ನಿಮಾ ನಿರ್ದೇಶಕ ಲಿಂಗುಸ್ವಾಮಿಗೆ ಆರು ತಿಂಗಳ ಜೈಲು ಶಿಕ್ಷೆಯಾಗಿದೆ. ಲಿಂಗುಸ್ವಾಮಿ ಇತ್ತೀಚೆಗಷ್ಟೆ ರಾಮ್ ಅವರ ದಿ ವಾರಿಯರ್ ಚಿತ್ರವನ್ನು ತಮಿಳು ಮತ್ತು ತೆಲುಗಿನಲ್ಲಿ ನಿರ್ದೇಶಿಸಿದ್ದರು. ನಿರ್ದೇಶನದ ಜೊತೆಗೆ ಲಿಂಗಸ್ವಾಮಿ ಅವರು 'ತಿರುಪತಿ ಬ್ರದರ್ಸ್' ಎಂಬ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ. ಈ ಬ್ಯಾನರ್ ಮೂಲಕ ಅನೇಕ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದೆ.

ಆದರೀಗ ಕೋಟ್ಯಂತರ ರೂಪಾಯಿ ಸಾಲ ಪಡೆದು, ಹಣ ಹಿಂದಿರುಗಿಸದೇ ಲಿಂಗುಸ್ವಾಮಿ ಕಿರಿಕ್​ ಮಾಡಿಕೊಂಡಿದ್ದಾರೆ. ಚೆಕ್​ ಬೌನ್ಸ್​ ಪ್ರಕರಣದಲ್ಲಿ ಲಿಂಗಸ್ವಾಮಿ ಅಪರಾಧ ಮಾಡಿರುವುದು ಸಾಬೀತಾಗಿದ್ದು, 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಅವರ ಜೊತೆಗೆ ಸಹೋದರ ಸುಭಾಷ್​ ಚಂದ್ರ ಬೋಸ್​ ಅವರಿಗೂ 6 ತಿಂಗಳು ಶಿಕ್ಷೆ ಪ್ರಕಟಿಸಲಾಗಿದೆ. ಆದರೀಗ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ನೀಡಿರುವ ಈ ತೀರ್ಪನ್ನು ಪ್ರಶ್ನಿಸಿ ನಿರ್ದೇಶಕ ಲಿಂಗುಸ್ವಾಮಿ ಮೇಲ್ಮನವಿ ಸಲ್ಲಿಸಲಿದ್ದಾರೆ.

ರಾಜಕೀಯ ಕಡೆ ತ್ರಿಷಾ ಒಲವು; 'ಪವರ್' ನಟಿಗೆ ದಳಪತಿ ವಿಜಯ್ ಬೆಂಬಲ?

ಎನ್ನಿ ಏಳು ನಾಲ್ ಸಿನಿಮಾ ಸಲುವಾಗಿ ಲಿಂಗುಸ್ವಾಮಿ ಮತ್ತು ಸುಭಾಷ್​ ಚಂದ್ರ ಬೋಸ್​ ಅವರು ಪಿವಿಪಿ ಎಂಬ ಕಂಪನಿಯಿಂದ 1.03 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಲ ವಾಪಸ್​ ನೀಡುವಾಗ 35 ಲಕ್ಷ ರೂಪಾಯಿ ಚೆಕ್​ ನೀಡಿದ್ದರು. ಆದರೆ ಅವರ ಬ್ಯಾಂಕ್​ ಖಾತೆಯಲ್ಲಿ ಹಣ ಇಲ್ಲದ ಕಾರಣ ಚೆಕ್​ ಬೌನ್ಸ್​ ಆಗಿದೆ. ಈ ಸಂಬಂಧ ಪಿವಿಪಿ ಕಂಪನಿಯವರು ಕೋರ್ಟ್​ ಮೆಟ್ಟಲು ಏರಿದರು. ಈ ಪ್ರಕರಣದ ತೀರ್ಪು ಈಗ ಬಂದಿದ್ದು, ಲಿಂಗುಸ್ವಾಮಿ ಮತ್ತು ಅವರ ಸಹೋದರನಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ಚಿತ್ರೀಕರಣ ವೇಳೆ ಗಾಯಕೊಂಡ 'ಬಾಹುಬಲಿ' ನಟ ನಾಸರ್; ಆಸ್ಪತ್ರೆಯಲ್ಲಿ ಚಿಕಿತ್ಸೆ

ಹಲವು ವರ್ಷಗಳಿಂದ ಲಿಂಗುಸ್ವಾಮಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಸಹೋದರನ ಜೊತೆ ಸೇರಿ ಲಿಂಗುಸ್ವಾಮಿ ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಆನಂದಂ, ರನ್, ಸಂಡಕೋಳಿ, ಭೀಮ, ಪೈಯಾ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಅವರು ನಿರ್ದೇಶನ ಮಾಡಿದ ದಿ ವಾರಿಯರ್ ಚಿತ್ರ ಕೂಡ ಗಮನ ಸೆಳೆದಿತ್ತು. ಇದೀಗ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುವಂತಾಗಿದೆ. 

click me!