ತೆಲುಗಿನಲ್ಲಿ ರಿಲೀಸ್ ಆಯ್ತು 'ಉಗ್ರಂ' ಫಸ್ಟ್ ಲುಕ್; ಹೀರೋ, ನಿರ್ದೇಶಕ ಯಾರು?

By Shruiti G Krishna  |  First Published Aug 22, 2022, 5:32 PM IST

 ಟಾಲಿವುಡ್‌ನಲ್ಲಿ ಉಗ್ರಂ ಸಿನಿಮಾದೆ ಸದ್ದು. ಹಾಗಂತ ಇದು ಪ್ರಶಾಂತ್ ಮತ್ತು ಶ್ರೀಮುರಳಿ ಉಗ್ರಂ ಅಂತ ಅಂದ್ಕೋಬೇಡಿ. ಇದು ಬೆರೆಯದ್ದೆ ಉಗ್ರಂ. ಟೈಟಲ್ ಮಾತ್ರ ಕನ್ನಡದ್ದು. ತೆಲುಗಿನಲ್ಲಿ ಉಗ್ರಂ ಹೆಸರಿನ ಸಿನಿಮಾ ಸೆಟ್ಟೇರಿದ್ದು ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. 


ಉಗ್ರಂ, ಕನ್ನಡದ ಸೂಪರ್ ಹಿಟ್ ಸಿನಿಮಾ. ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದ ಚಿತ್ರ. ಶ್ರೀಮುರಳಿ ಸಿನಿ ಜೀವನಕ್ಕೆ ಮೈಲೇಜ್ ತಂದುಕೊಟ್ಟ ಸಿನಿಮಾವಿದು. ಈ ಸಿನಿಮಾ ಮೂಲಕ ಪ್ರಶಾಂತ್ ನೀಲ್ ನಿರ್ದೇಶಕರಾಗಿ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟರು. ಕನ್ನಡ ಸಿನಿಮಾರಂಗದಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಮತ್ತೆ ಉಗ್ರಂ ಸಿನಿಮಾ ಸದ್ದು ಮಾಡುತ್ತಿದೆ, ಆದರೆ ಸ್ಯಾಂಡಲ್ ವುಡ್ ಅಲ್ಲ, ಪಕ್ಕದ ತೆಲುಗಿನಲ್ಲಿ. ಹೌದು, ಟಾಲಿವುಡ್‌ನಲ್ಲಿ ಉಗ್ರಂ ಸಿನಿಮಾದೆ ಸದ್ದು. ಹಾಗಂತ ಇದು ಪ್ರಶಾಂತ್ ಮತ್ತು ಶ್ರೀಮುರಳಿ ಉಗ್ರಂ ಅಂತ ಅಂದ್ಕೋಬೇಡಿ. ಇದು ಬೆರೆಯದ್ದೆ ಉಗ್ರಂ. ಟೈಟಲ್ ಮಾತ್ರ ಕನ್ನಡದ್ದು. ತೆಲುಗಿನಲ್ಲಿ ಉಗ್ರಂ ಹೆಸರಿನ ಸಿನಿಮಾ ಸೆಟ್ಟೇರಿದ್ದು ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಪರಭಾಷೆಯ ಸೂಪರ್ ಹಿಟ್ ಸಿನಿಮಾಗಳು ಮಾತ್ರವಲ್ಲದೇ ಟೈಟಲ್ ಗಳು ಸಹ ರಿಮೇಕ್ ಆಗುತ್ತೆ ಎನ್ನುವುದಕ್ಕೆ ಉಗ್ರಂ ಸಿನಿಮಾನೆ ಎಕ್ಸಾಂಪಲ್.    

ತೆಲುಗಿನ ಉಗ್ರಂ ಸಿನಿಮಾದಲ್ಲಿ ಖ್ಯಾತ ನಟ ಅಲ್ಲರಿ ನರೇಶ್​ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲರಿ ನರೇಶ್​ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿರಲಿಲ್ಲ. 2021ರ ಫೆಬ್ರವರಿಯಲ್ಲಿ ತೆರೆಕಂಡ ‘ನಾಂದಿ’ ಸಿನಿಮಾ ಗೆಲುವಿನ ಮೂಲಕ ಮತ್ತೆ ಟ್ರ್ಯಾಕ್‌ಗೆ ಮರಳಿದ್ದರು. ಆ ಚಿತ್ರಕ್ಕೆ ವಿಜಯ್​ ನಿರ್ದೇಶನ ಮಾಡಿದ್ದರು. ಇದೀಗ ಮತ್ತದೆ ನಿರ್ದೇಶಕರ ಜೊತೆ ಉಗ್ರಂ ಮೂಲಕ ಮಿಂಚಲು ಸಜ್ಜಾಗಿದ್ದಾರೆ.  ಸದ್ಯ ಟೈಟಲ್ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾ ಕಥೆಗೂ ಕನ್ನಡದ ಉಗ್ರಂ ಸಿನಿಮಗೂ ಏನಾದರೂ ಲಿಂಕ್ ಇದಿಯಾ ಎನ್ನುವುದು ಗೊತ್ತಾಗಬೇಕಿದೆ. 

ಇದನ್ನೂ ಓದಿ: Happy Birthday Chiranjeevi; ಅಭಿಮಾನಿಗಳಿಗೆ 'ಗಾಡ್‌ಫಾದರ್ ಗಿಫ್ಟ್', ಸಲ್ಮಾನ್ ಜೊತೆ ಮೆಗಾಸ್ಟಾರ್ ಎಂಟ್ರಿ

Tap to resize

Latest Videos

undefined

ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಸಿಕ್ಕಾಪಟ್ಟೆ ಮಾಸ್ ಆಗಿದೆ. ಪೋಸ್ಟರ್‌ನಲ್ಲಿ ಅಲ್ಲರಿ ನರೇಶ್ ರಕ್ತ ಸಿಕ್ತವಾಗಿದ್ದು ಆಕ್ರೋಶ ಹೊರಹಾಕುತ್ತಿದ್ದಾರೆ.  ಫಸ್ಟ್ ಲುಕ್ ನೋಡಿದ್ರೆ ಇದು ಉಗ್ರಂ ಸಿನಿಮಾ ಮಾದರಿಯಲ್ಲೇ ಇದೆ. ಹಾಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕನ್ನಡದ ಉಗ್ರಂ ಚಿತ್ರ 2014ರಲ್ಲಿ ತೆರೆಕಂಡಿತು. ಮೊದಲ ನಿರ್ದೇಶನದಲ್ಲೇ ಪ್ರಶಾಂತ್​ ನೀಲ್​ ಸಿನಿ ಪ್ರಿಯರ ಹೃದಯ ಗೆದ್ದಿದ್ದರು. 

ಇದನ್ನೂ ಓದಿ: ಕೊನೆಗೂ ಆರಂಭವಾಯ್ತು ಪುಷ್ಪ-2 ಶೂಟಿಂಗ್; ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಇನ್ನು ಕನ್ನಡದ ಉಗ್ರಂ ಸಿನಿಮಾನೆ ಪ್ರಭಾಸ್ ಅವರ ಸಲಾರ್ ಸಿನಿಮಾ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸಲಾರ್ ತಂಡ ಒಪ್ಪಿಕೊಂಡಿಲ್ಲ. ಇದೀಗ ತೆಲುಗಿನಲ್ಲಿ ಉಗ್ರಂ ಪೋಸ್ಟರ್ ರಿಲೀಸ್ ಆಗಿದೆ. ಒಟ್ನಲ್ಲಿ ಕನ್ನಡದ ಸಿನಿಮಾಗಳು ಪರಭಾಷೆಯಲ್ಲೂ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆಯ ಹೆಮ್ಮೆಯ ವಿಚಾರ. ಅಲ್ಲರಿ ನರೇಶ್ ಉಗ್ರಂ ಸಿನಿಮಾ ಕಥೆ ಏನು ಅಂತ ನೋಡಲು ಇನ್ನು ಸ್ವಲ್ಪ ಸಮಯ ಕಾಯಬೇಕಿದೆ. 

click me!