ಅಕ್ಷಯ್​ ಕುಮಾರ್​ ವಿದ್ಯಾರ್ಥಿಗಳೀಗ ಆದಾಯ ತೆರಿಗೆ ಇಲಾಖೆ ಸಿಬ್ಬಂದಿ! ನೇಮಕಾತಿ ಪತ್ರದೊಂದಿಗೆ ಸಂತಸ...

By Suchethana D  |  First Published Jun 27, 2024, 5:49 PM IST

ಅಕ್ಷಯ್​ ಕುಮಾರ್​ ವಿದ್ಯಾರ್ಥಿಗಳೀಗ ಆದಾಯ ತೆರಿಗೆ ಇಲಾಖೆ ಸಿಬ್ಬಂದಿ: ನೇಮಕಾತಿ ಪತ್ರದೊಂದಿಗೆ ಗುರುಗಳ ಜೊತೆ ಸಂತೋಷ ಹಂಚಿಕೊಂಡ ವಿದ್ಯಾರ್ಥಿಗಳು.  
 


56 ವರ್ಷದ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಕೇವಲ ನಟನೆ ಮಾತ್ರವಲ್ಲದೇ ಮಾರ್ಷಲ್ ಆರ್ಟ್ಸ್ ಪ್ರಕಾರಗಳಲ್ಲಿ ತರಬೇತಿ ಪಡೆದವರು. ಈ ಮೂಲಕವೇ,  ಮೂರು ದಶಕಗಳಿಂದ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದು,  ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಎನಿಸಿದ್ದಾರೆ. ಅವರು ನಟನೆಯ ಜೊತೆಗೆ ಮಾರ್ಷಲ್​ ಆರ್ಟ್​ ಅಕಾಡೆಮಿಯನ್ನೂ  ನಡೆಸುತ್ತಿದ್ದಾರೆ. ಇದೀಗ ಅವರು ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಇವರ ಕೆಲವು ವಿದ್ಯಾರ್ಥಿಗಳು ಕ್ರೀಡಾ ಕೋಟಾದ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಕ್ರೀಡಾ ಪಟುಗಳಿಗೆ ಸ್ಪೋರ್ಟ್ಸ್​ ಕೋಟಾದಡಿ ಅವರ ಇತರ ಅರ್ಹತೆಗೆ ಸಂಬಂಧಿಸಿದಂತೆ ಮೀಸಲಾತಿ ಇರುತ್ತದೆ. ಕುಡೋ ಆರ್ಟ್​ನಲ್ಲಿ ನುರಿತ ಈ ವಿದ್ಯಾರ್ಥಿಗಳಿಗೆ ಕ್ರೀಡಾ ಕೋಟಾದ ಅಡಿಯಲ್ಲಿ  ಕೆಲಸ ಸಿಕ್ಕಿದೆ. ವಿದ್ಯಾರ್ಥಿಗಳು ತಮ್ಮ ನೇಮಕಾತಿ ಪತ್ರವನ್ನು ಹಿಡಿದುಕೊಂಡು ಗುರುಗಳ ಜೊತೆ ಹರ್ಷದಿಂದ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ಅಕ್ಷಯ್​ ಕುಮಾರ್​ ಶೇರ್  ಮಾಡಿದ್ದಾರೆ. ಇದು ನನಗೆ ಹೆಮ್ಮೆಯ ಕ್ಷಣ ಎಂದಿದ್ದಾರೆ.  

  KUDO, ಜಪಾನಿನ ಮಿಶ್ರ ಯುದ್ಧ ಕ್ರೀಡೆ, ಇದು ಸಾಂಪ್ರದಾಯಿಕ ಮತ್ತು ಕ್ರೀಡೆಗಳಾದ ಕರಾಟೆ, ಜೂಡೋ, ಜುಜುಟ್ಸು, ಮೌಯಿ ಥಾಯ್ ಮತ್ತು ಕಿಕ್-ಬಾಕ್ಸಿಂಗ್‌ಗಳ ಸಂಯೋಜನೆಯಾಗಿದೆ. ಇನ್ನು ಅಕ್ಷಯ್​ ಕುಮಾರ್​  ಕುರಿತು ಹೇಳುವುದಾದರೆ,  ಅಕ್ಷಯ್ 1991 ರಲ್ಲಿ "ಸೌಗಂಧ್" ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು "ಖಿಲಾಡಿ" ಸರಣಿಯೊಂದಿಗೆ ಖ್ಯಾತಿಯನ್ನು ಗಳಿಸಿದರು. ನಂತರ ಅವರು ಹಲವಾರು ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ಜೂನ್ 24 ರಂದು, ಅಕ್ಷಯ್ ತಮ್ಮ ಮೃತ ಪೋಷಕರನ್ನು ಗೌರವಿಸಲು ಮುಂಬೈನಲ್ಲಿ ಮರ ನೆಡುವ ಅಭಿಯಾನದಲ್ಲಿ ಭಾಗವಹಿಸಿದ್ದರು. 

Tap to resize

Latest Videos

undefined

ಶಾರುಖ್​ ಖಾನ್​- ಅಕ್ಷಯ್​ ಕುಮಾರ್​ರನ್ನು ಒಂದು ಮಾಡಿದ ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮ!

ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರಗಳೆಂದರೆ,  "ಸರ್ಫಿರಾ". ಇದು ಭಾರತೀಯ ಕಡಿಮೆ-ವೆಚ್ಚದ ವಿಮಾನಯಾನ ಸಿಂಪ್ಲಿಫ್ಲೈ ಡೆಕ್ಕನ್‌ನ ಸಂಸ್ಥಾಪಕ ಜಿಆರ್ ಗೋಪಿನಾಥ್ ಅವರಿಂದ ಪ್ರೇರಿತವಾಗಿದೆ. "ಸರ್ಫಿರಾ" ಎಂಬುದು ಸೂರ್ಯ ಅವರ ತಮಿಳಿನ ಹಿಟ್ ಚಿತ್ರ "ಸೂರರೈ ಪೊಟ್ರು" ನ ರಿಮೇಕ್ ಆಗಿದ್ದು, ಕಡಿಮೆ ವೆಚ್ಚದ ವಿಮಾನಯಾನ ವಾಹಕಗಳನ್ನು ಪರಿಚಯಿಸುವ ಗುರಿ ಹೊಂದಿರುವ ವೀರ್ ಮ್ಹಾತ್ರೆ ಅವರ ಪ್ರಯಾಣವನ್ನು ಪ್ರದರ್ಶಿಸುತ್ತದೆ. ಇನ್ನು,  ಅಕ್ಷಯ್ ಕುಮಾರ್ ಅವರ ಹಾಸ್ಯ ಚಿತ್ರ "ಖೇಲ್ ಖೇಲ್ ಮೇ"  ಆಗಸ್ಟ್ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.  

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ  ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಅಕ್ಷಯ್​ ಕುಮಾರ್​ ಸದ್ದು ಮಾಡಿದ್ದರು. ಇದಕ್ಕೆ ಕಾರಣ, ಅವರು ಬಾಲಿವುಡ್​ ನಟ ಶಾರುಖ್​ ಖಾನ್​ ಅವರನ್ನು ತಬ್ಬಿಕೊಂಡಿದ್ದಕ್ಕೆ. ಏಕೆಂದರೆ ಈ ಇಬ್ಬರೂ ನಟರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿಯೇ ಇಲ್ಲ. ಏನೋ ವೈಮನಸ್ಸು ಎನ್ನುವ ಮಾತಿದೆ. ಅಕ್ಷಯ್ ಅಭಿನಯದ ಹೇ ಬೇಬಿ ಚಿತ್ರದ ಒಂದು ಹಾಡಿನಲ್ಲಿ ಶಾರುಖ್ ಕಾಣಿಸಿಕೊಂಡರು ಮತ್ತು ಅಕ್ಷಯ್ ಶಾರುಖ್ ನೇತೃತ್ವದ ಓಂ ಶಾಂತಿ ಓಂ ಚಿತ್ರದಲ್ಲಿ ಕಾಣಿಸಿಕೊಂಡರು. ಅಷ್ಟೇ ಬಿಟ್ಟರೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ. ಈ ಬಗ್ಗೆ ಒಮ್ಮೆ ಪತ್ರಕರ್ತರು ಶಾರುಖ್​ ಖಾನ್​ ಅವರಿಗೆ ಪ್ರಶ್ನೆ ಕೇಳಿದ್ದಾಗ,   ಶಾರುಖ್​ ಹಾರಿಕೆ ಉತ್ತರ ಕೊಟ್ಟಿದ್ದರು.  “ಇದಕ್ಕೆ ನಾನೇನು ಹೇಳಲಿ? ನಾನು ಅವರಷ್ಟು ಬೇಗ ಏಳುವುದಿಲ್ಲ. ಅಕ್ಷಯ್ ಎಚ್ಚರವಾದಾಗ ನಾನು ಮಲಗುತ್ತೇನೆ. ಅವರ ದಿನ ಬೇಗನೆ ಪ್ರಾರಂಭವಾಗುತ್ತದೆ. ನಾನು ಕೆಲಸ ಮಾಡಲು ಪ್ರಾರಂಭಿಸುವ ಹೊತ್ತಿಗೆ, ಅವರು ಮನೆಗೆ ಹೋಗುತ್ತಾರೆ. ಆದ್ದರಿಂದ, ಅವರು ಹೆಚ್ಚು ಗಂಟೆಗಳ ಕೆಲಸವನ್ನು ಹಾಕಬಹುದು. ನಾನು ರಾತ್ರಿಯ ವ್ಯಕ್ತಿ. ನನ್ನಂತೆ ರಾತ್ರಿಯಲ್ಲಿ ಶೂಟಿಂಗ್ ಮಾಡಲು ಹೆಚ್ಚು ಜನರು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ಆದರೆ ಇಬ್ಬರೂ ಅಪ್ಪಿಕೊಂಡಿದ್ದು ಸದ್ದು ಮಾಡಿತ್ತು. 

ಸೆಕೆಂಡ್​ಹ್ಯಾಂಡ್​ ಬಟ್ಟೆ ಹಾಕೋ ಅಕ್ಷಯ್​ ಪುತ್ರ: ಆರವ್​ ಜೀವನದ ಇಂಟರೆಸ್ಟಿಂಗ್​ ವಿಷ್ಯ ಬಿಚ್ಚಿಟ್ಟ ನಟ

 
 
 
 
 
 
 
 
 
 
 
 
 
 
 

A post shared by Akshay Kumar (@akshaykumar)

click me!