ಸೈಫ್ - ಕರೀನಾ ಮದುವೆಯಲ್ಲಿ ಪಾತ್ರೆ ತೊಳೆದಿದ್ದ ವ್ಯಕ್ತಿ ಇಂದು ಸೂಪರ್ ಹೀರೋ

By Mahmad Rafik  |  First Published Jun 27, 2024, 3:12 PM IST

ಪಂಚಾಯತ್ ವೆಬ್‌ ಸಿರೀಸ್ ನಟ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು. ಇಂದು ಆ ನಟ ತಮ್ಮ ನಟನೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 


ಮುಂಬೈ: ಇಂದಿನ ಸೂಪರ್ ಸ್ಟಾರ್‌ಗಳು (Cinema Actors) ವೃತ್ತಿ ಜೀವನದ ಆರಂಭದಲ್ಲಿ ಸಹ ನಟರಾಗಿ, ಬ್ಯಾಕ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್, ಶಾಹಿದ್ ಕಪೂರ್, ದೀಪಿಕಾ ಪಡುಕೋಣೆ ಆರಂಭದಲ್ಲಿ ಸಿನಿಮಾ ಹಾಡುಗಳಲ್ಲಿ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು. ನಂತರ ಮುಂದೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸ್ಟಾರ್ ಕಲಾವಿದರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುಗರ ಸಂಖ್ಯೆ ಇಳಿಕೆಯಾಗುತ್ತಿದೆ. ಇದಕ್ಕೆ ಕಾರಣ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೆಚ್ಚಿನ ಸಿನಿಮಾ ಓಟಿಟಿ ಪ್ಲಾಟ್‌ಫಾರಂಗಳಿಗೆ ಲಗ್ಗೆ ಇಡುತ್ತೆ. ಇನ್ನು ಜನರು ವೆಬ್‌ ಸಿರೀಸ್ ನೋಡಲು ಇಷ್ಟಪಡುತ್ತಾರೆ. ಸದ್ಯ ಪಂಚಾಯತ್ ವೆಬ್ ಸಿರೀಸ್ (Panchayat Wed Series) ಸಾಕಷ್ಟು ಸದ್ದು ಮಾಡುತ್ತಿದ್ದು, ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. 

ಪಂಚಾಯತ್ ವೆಬ್ ಸಿರೀಸ್‌ ನಲ್ಲಿ ನಟಿಸಿರುವ ಸಿನಿಮಾ ಅಂಗಳಕ್ಕೆ ಬರುವ ಮೊದಲು ಬಾಲಿವುಡ್ ಸ್ಟಾರ್‌ಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮದುವೆಯಲ್ಲಿ (Sai ali Khan - Kareena Kapoor Wedding) ಪಾತ್ರೆ ತೊಳೆದಿದ್ದರು. 2012ರಲ್ಲಿ ಸೈಫ್ ಮತ್ತು ಕರೀನಾ ಮದುವೆ ಖಾಸಗಿ ಹೋಟೆಲ್‌ನಲ್ಲಿ ನಡೆದಿತ್ತು. ಇದೇ ಹೋಟೆಲ್‌ನಲ್ಲಿ ಪಂಚಾಯತ್ ವೆಬ್‌ ಸಿರೀಸ್ ನಟ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು. ಇಂದು ಆ ನಟ ತಮ್ಮ ನಟನೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 

Tap to resize

Latest Videos

ಪ್ಲೀಸ್.. ಪೂನಂ ಪಾಂಡೆಗೆ ಯಾರಾದ್ರೂ ಹೆಲ್ಪ್ ಮಾಡ್ತೀರಾ? ಬಟ್ಟೆ ಧರಿಸದೇ ಹಾಗೆ ನಿಂತ ಚೆಲುವೆ 

ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡ ಆಸಿಫ್ ಖಾನ್

ಪಂಚಾಯತ್ ವೆಬ್ ಸಿರೀಸ್ ಫುಲೇರಾ ಎಂಬ ಗ್ರಾಮದಲ್ಲಿ ನಡೆಯುವ ಕಥೆ. ಈ ವೆಬ್ ಸಿರೀಸ್‌ನಲ್ಲಿ ಫುಲೇರಾ ಗ್ರಾಮದ ವರನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸಿಫ್ ಖಾನ್, ಸೈಫ್-ಕರೀನಾ ಮದುವೆಯಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿದ್ದರು. ಈ ವಿಷಯವನ್ನು ಆಸಿಫ್ ಖಾನ್ ಸಂದರ್ಶನವೊಂದರಲ್ಲಿ ಯಾವುದೇ ಮುಜುಗರವಿಲ್ಲದೇ ಹೇಳಿಕೊಂಡಿದ್ದು, ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಈ ಸ್ಥಾನ ತಲುಪಿರೋದಾಗಿ ಹೇಳಿಕೊಂಡಿದ್ದಾರೆ.

ಫೋಟೋ ಸಿಗದ್ದಕ್ಕೆ ಕಣ್ಣೀರಿಟ್ಟಿದ್ದೆ

ಸೈಫ್ ಮತ್ತು ಕರೀನಾ ಮದುವೆಗೆ ಆಗಮಿಸಿದ ಕಲಾವಿದರ ಜೊತೆ ಫೋಟೋ ತೆಗೆಸಿಕೊಳ್ಳಲು ಹೋದ್ರೆ ನನಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಲಾವಿದರ ಜೊತೆ ಫೋಟೋ ಸಿಗದಕ್ಕೆ ನಾನು ಅತ್ತಿದ್ದೆ ಎಂದು ಆಸಿಫ್ ಖಾನ್ ಸಂದರ್ಶನದಲ್ಲಿ ತಮ್ಮ ಆರಂಭಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಇಂದು ಇದೇ ಆಸಿಪ್ ಖಾನ್ ಜೊತೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ.

ಸೀರೆಯಲ್ಲಿ ಗರ್ಭಿಣಿ ನೇಹಾ ಫೋಟೋಶೂಟ್; ಬೇಬಿ ಬಂಪ್ ನೋಡಿ ತಾಯಿ ಕಳೆ ಕಾಣಿಸ್ತಿದೆ ಎಂದ ಫ್ಯಾನ್ಸ್

ಕೆಲ ದಿನಗಳ ಹಿಂದೆಯಷ್ಟೇ ಶಾಹಿದ್ ಕಪೂರ್, ದಿಲ್ ತೋ ಪಾಗಲ್ ಹೈ ಸಿನಿಮಾದ ಪ್ರಮುಖ ಹಾಡಿನಲ್ಲಿ ಕರೀಷ್ಮಾ ಕಪೂರ್ ಹಿಂದೆ ಡ್ಯಾನ್ಸ್ ಮಾಡಿದ್ದೆ ಎಂದು ಹೇಳಿಕೊಂಡಿದ್ದರು. ನನ್ನನ್ನು ಕೊನೆಯ ಸಾಲಿನಲ್ಲಿ ನಿಲ್ಲಿಸಲಾಗಿತ್ತು. ಅಂದು ನನ್ನ ತಲೆಕೂದಲು ಉದ್ದವಾಗಿತ್ತು. ಇದರಿಂದ ನಾನು ಬೈಸಿಕೊಂಡಿದ್ದೆ ಎಂದು ತಿಳಿಸಿದ್ದರು. ಅದೇ ರೀತಿ ಸುಶಾಂತ್ ಸಿಂಗ್ ರಜಪೂತ್ ಕಾಲೇಜು ದಿನಗಳಲ್ಲಿ ಐಶ್ವರ್ಯಾ ರೈ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದರು.

click me!