ಪತಿ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ ಆರತಿ. ಡಿವೋರ್ಸ್ ಗಾಳಿ ಮಾತುಗಳಿಗೆ ಸುಳಿವು ಕೊಟ್ಟ ಜೋಡಿ....
ಪೇರಣ್ಮೈ, ಎಂಗೆಯುಂ ಕಾದಲ್, ತನಿ ಒರುವನ್, ಕೋಮಲಿ, ಪೊನ್ನಿಯನ್ ಸೆಲ್ವನ್ ಸೇರಿದಂತೆ ಸೂಪರ್ ಹಿಟ್ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಜಯಂ ರವಿ ಮತ್ತು ಪತ್ನಿ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುಮಾರು 15 ವರ್ಷಗಳ ನಂತರ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಶಾಕ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಆರತಿ ಪತಿ ಜೊತೆ ಆಗಾಗ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು.
ಖ್ಯಾತ ತಮಿಳು ಸಂಕಲನಕಾರ ಮೋಹನ್ ಪುತ್ರ ರವಿ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. 2003ರಲ್ಲಿ ಜಯಂ ಸಿನಿಮಾ ಮೂಲಕ ಲಾಂಚ್ ಆದ ಕಾರಣ ಜಯಂ ಎನ್ನುವುದು ರವಿ ಹೆಸರಿನ ಜೊತೆ ಸೇರಿಕೊಂಡಿತ್ತು. ರವಿ ಮದುವೆಯಾಗಿರುವುದು ಕಿರುತೆರೆ ನಿರ್ಮಾಪಕ ಸುಜಾತಾ ವಿಜಯ್‌ಕುಮಾರ್ ಅವರ ಮಗಳನ್ನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಖಾಸಗಿ ಕಾರ್ಯಕ್ರಮಗಳಿಗೆ ರವಿ ತಮ್ಮ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದ ಕಾರಣ ಆರತಿ ಕೂಡ ಸಖತ್ ಫೇಮಸ್ ಆಗಿಬಿಟ್ಟರು.
ಮಧ್ಯರಾತ್ರಿ 2 ಗಂಟೆ ಆದ್ರೂ ಬಾಗಿಲು ಬಡಿಯುತ್ತಿದ್ದರು, ಏಡ್ಸ್ ಭಯ ಬಂದ್ಮೇಲೆ ಕಡಿಮೆ ಆಯ್ತು: ನಟಿ ಅನ್ನಪೂರ್ಣಮ್ಮ
ಡಿವೋರ್ಸ್ ವಿಚಾರ ದೊಡ್ಡದಾಗುತ್ತಿದ್ದರು ರವಿ ಆಗಲಿ ಆರತಿ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇನ್‌ಸ್ಟಾಗ್ರಾಂನಲ್ಲಿ ಪತಿ ಜೊತೆಗಿರುವ ಸಾಕಷ್ಟು ಫೋಟೋಗಳನ್ನು ಆರತಿ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ನೋಡಿಯೇ ಡಿವೋರ್ಸ್ ಸುಳಿವು ಎನ್ನುತ್ತಿದ್ದಾರೆ ನೆಟ್ಟಿಗರು.
ರಸ್ತೆ ಅಪಘಾತದಲ್ಲಿ ರೀಲ್ಸ್ ತೇಜಸ್ ಸಾವು; ಸಮಾಧಿ ಮುಂದೆ ವರುಣ್ ಆರಾಧ್ಯ ಭಾವುಕ
ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋದು ಸೆಲೆಬ್ರಿಟಿಗಳ ನಡುವೆ ಸಖತ್ ಕಾಮನ್ ಆಗಿಬಿಟ್ಟಿದೆ. ಚಂದನ್ ಶೆಟ್ಟಿ- ನಿವೇದಿತಾ ಗೌಡ, ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ, ದುನಿಯಾ ವಿಜಯ್- ನಾಗರತ್ನ, ಕಿರಿಕ್ ಕೀರ್ತಿ- ಅರ್ಪಿತಾ, ಸಮಂತಾ- ನಾಗಚೈತನ್ಯ, ಚೈತ್ರಾ ವಾಸುದೇವನ್ ಮತ್ತು ಸತ್ಯ...ಹೀಗೆ ಸಾಕಷ್ಟು ಸೆಲೆಬ್ರಿಟಿಗಳು ಹೆಸರು ಕೇಳಿ ಬಂದಿದೆ.