ತುಂಬಾ ದುಃಖ ಆಗುತ್ತೆ; 'ಹೆರಾ ಫೇರಿ-3'ಯಿಂದ ಔಟ್ ಆದ ಅಕ್ಷಯ್ ಕುಮಾರ್ ಭಾವುಕ

Published : Nov 13, 2022, 05:28 PM IST
ತುಂಬಾ ದುಃಖ ಆಗುತ್ತೆ; 'ಹೆರಾ ಫೇರಿ-3'ಯಿಂದ ಔಟ್ ಆದ ಅಕ್ಷಯ್ ಕುಮಾರ್ ಭಾವುಕ

ಸಾರಾಂಶ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಹೆರಾ ಫೇರಿ 3 ಸಿನಿಮಾದ ಹೊರಬಂದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. 

ಬಾಲಿವುಡ್‌ನಲ್ಲಿ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲ. ಅದರಲ್ಲೂ ಸ್ಟಾರ್ ನಟರ ಸಿನಿಮಾಗಳು ನೆಲಕಚ್ಚಿತ್ತಿವೆ. ಗೆಲುವಿನ ಹಾದಿಯಲ್ಲಿದ್ದ ಅಕ್ಷಯ್ ಕುಮಾರ್ ಸಿನಿಮಾಗಳು ಸಹ ಮುಗ್ಗರಿಸಿವೆ. 2022 ಅಕ್ಷಯ್ ಕುಮಾರ್ ಪಾಲಿಗೆ ತುಂಬಾ ನಿರಾಶಾದಾಯಕ ವರ್ಷವಾಗಿದೆ. ಈ ಬಗ್ಗೆ ರಿಲೀಸ್ ಆದ ಅಕ್ಷಯ್ ಕುಮರ್ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಈ ನಡುವೆ ಅಕ್ಷಯ್ ಕುಮಾರ್ ಬಹುನಿರೀಕ್ಷೆಯ ಹೆರಾ ಫೇರಿ-3 ಸಿನಿಮಾದಿಂದ ಔಟ್ ಆಗಿದ್ದಾರೆ. ಹೆರಾ ಫೇರಿ-3 ಸರಣಿಯಿಂದ ಅಕ್ಷಯ್ ಕುಮಾರ್ ಹೊರಬಂದಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸ್ವತಃ ಅಕ್ಷಯ್ ಕುಮಾರ್ ಅವರಿಗೂ ದುಃಖವಾಗಿದೆ. ಈ ಬಗ್ಗೆ ಬಾಲಿವುಡ್ ಕಿಲಾಡಿ ಬಹಿರಂಗ ಪಡಿಸಿದ್ದಾರೆ. 

ಹೆರಾ ಫೇರಿ ಮೊದಲು ಮತ್ತು ಎರಡನೇ ಸರಣಿಯಲ್ಲಿ ಸುನಿಲ್ ಶೆಟ್ಟಿ, ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದರು. 2000ರಲ್ಲಿ ಪ್ರಾರಂಭವಾದ ಈ ಪ್ರಾಂಚೈಸಿ ಸಿನಿ ಸಿನಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇವತ್ತಿಗೂ ಈ ಸಿನಿಮಾಗಳ ಮೀಮ್ ಮತ್ತು ಡೈಲಾಗ್ ಗಳು ವೈರಲ್ ಆಗುತ್ತಲೇ ಇರುತ್ತೆ. ಸಕ್ಸಸ್ ಸರಣಿಯಿಂದ ಅಕ್ಷಯ್ ಕುಮಾರ್ ಹೊರ ಬಂದಿದ್ದಾರೆ. ಕಿಲಾಡಿ ಜಾಗಕ್ಕೆ ಬಾಲಿವುಡ್‌ನ ಮತ್ತೋರ್ವ ನಟ ಕಾರ್ತಿಕ್ ಆರ್ಯನ್ ಎಂಟ್ರಿ ಕೊಟ್ಟಿದ್ದಾರೆ.    

ಈ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಕಿಲಾಡಿ, ಹೆರಾ ಫೇರಿ-3 ಸಿನಿಮಾದಿಂದ ಹೊರ ಹೋಗಿರುವುದು ನನಗೂ ತುಂಬಾ ದುಃಖವಿದೆ ಎಂದು ಹೇಳಿದ್ದಾರೆ. ನಾವು ವಿಭಿನ್ನ ವೇನಲ್ಲಿ ಯೋಚಿಸಬೇಕೆಂದು ಹೇಳಿದ್ದಾರೆ. 

ಸತತ ಸೋಲು 'ಮರಾಠಿ'ಗೆ ಅಕ್ಷಯ್ ಕುಮಾರ್ ಜಂಪ್: ಛತ್ರಪತಿ ಶಿವಾಜಿಯಾಗಿ ಮಿಂಚಲು ಸಜ್ಜು

'ನನಗೆ ಈ ಚಿತ್ರದ ಆಫರ್ ಮಾಡಲಾಯಿತು ಮತ್ತು ಈ ಸಿನಿಮಾದ ಬಗ್ಗೆ ತಿಳಿಸಲಾಯಿತು. ಆದರೆ ಚಿತ್ರಕಥೆ, ಸ್ಕ್ರೀನ್ ಪ್ಲೇ,  ನನಗೆ ತೃಪ್ತಿಯಾಗಲಿಲ್ಲ, ಸಂತೋಷವಾಗಲಿಲ್ಲ. ಜನರು ಏನನ್ನು ನೋಡಲು ಬಯಸುತ್ತಾರೋ ಅದನ್ನು ನಾನು ಮಾಡಬೇಕು ಮತ್ತು ಅದಕ್ಕಾಗಿಯೇ ನಾನು ಹಿಂದೆ ಸರಿದಿದ್ದೇನೆ. ನನಗೆ, ಇದು ನನ್ನ ಒಂದು ಭಾಗವಾಗಿದೆ, ನನ್ನ ಜೀವನ, ನನ್ನ ಪ್ರಯಾಣ. ನನಗೂ ತುಂಬಾ ಬೇಸರವಾಗಿದೆ' ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಅಕ್ಷಯ್ ಹರಿದಾಡುತ್ತಿದ್ದ ಉಹಾಪೋಹಗಳಿಗೆ ಬ್ರೇಕ್ ಹಾಕಿದರು. 

ಅಭಿಮಾನಿಗಳು ಮಾತ್ರವಲ್ಲದೇ ಅಕ್ಷಯ್ ಕುಮಾರ್ ಸಹ ಬೇಸರವಾಗಿದ್ದಾರೆ. ಹೆರಾ ಫೇರಿ-3ಗೆ ತನ್ನನ್ನು ಪಾವಾಸ್ ಬರುವಂತೆ ಒತ್ತಾಯ ಮಾಡಿದ ಅಭಿಮಾನಿಗಳಿಗೆ ಅಕ್ಷಯ್ ಕುಮಾರ್ ಕೃತಜ್ಞತೆ ಸಲ್ಲಸಿ ಭಾವುಕರಾದರು.

ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಳ; ಅಕ್ಷಯ್ ಕುಮಾರ್, ಅನುಪಮ್ ಖೇರ್‌ಗೆ X ಶ್ರೇಣಿ ಸೆಕ್ಯೂರಿಟಿ

ಅಕ್ಷಯ್ ಕುಮಾರ್ ಸದ್ಯ ಬಾಲಿವುಡ್ ನಿಂದ ಮರಾಠಿಗೆ ಹಾರಿದ್ದಾರೆ. ಇತ್ತೀಚಿಗಷ್ಟೆ ಮರಾಠಿಯಲ್ಲಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಛತ್ರವತಿ ಶಿವಾಜಿಯಾಗಿ ಅಕ್ಷಯ್ ಕುಮಾರ್ ಮರಾಠಿಗೆ ಎಂಟ್ರಿ ಕೊಟ್ಟಿದ್ದಾರೆ.  ಈ ಬಗ್ಗೆ ಅಕ್ಷಯ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದರು.  'ಕನಸು ನನಸಾದ ಪಾತ್ರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರನ್ನು ದೊಡ್ಡ ಪರದೆ ಮೇಲೆ ಚಿತ್ರಿಸುವುದು ದೊಡ್ಡ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಈ ಪಾತ್ರ ಮಾಡುವಂತೆ ಕೇಳಿದಾಗ ನಾನು ದಿಗ್ಭ್ರಮೆಗೊಂಡೆ. ಈ ಪಾತ್ರ ನಿರ್ವಹಿಸುತ್ತಿರುವುದು ತುಂಬಾ ಸಂತೋಷವಾಗಿದೆ. ನಾನು ಮೊದಲ ಬಾರಿಗೆ ಮಹೇಶ್ ಮಂಜ್ರೇಕರ್ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಒಂದ ಅನುಭವವಾಗಲಿದೆ' ಎಂದಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

AR Rahman ಕೋಮುವಾದಿ ವಿವಾದ: ಜನರು ಬೊಗಳೋಕೆ ಶುರು ಮಾಡಿದ್ದಾರೆ: ಟೀಕಿಸಿದ PraKash Raj!
ತೆಲುಗು ನೆಲದಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ; ಭಾರೀ ಮೊತ್ತಕ್ಕೆ ಮಾರಾಟ!