ಮುದ್ದಾದ ಮಗಳಿಗೆ ಸುಂದರ ಹೆಸರಿಟ್ಟ ಬಿಪಾಶಾ ಬಸು-ಕರಣ್ ದಂಪತಿ

By Shruthi KrishnaFirst Published Nov 13, 2022, 3:49 PM IST
Highlights

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ನವೆಂಬರ್ 12 ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗಳನ್ನು ಸ್ವಾಗತಿಸಿದ ಬೆನ್ನಲ್ಲೇ ಮಗಳ ಸುಂದರವಾದ ಹೆಸರನ್ನು ಸಹ ರಿವೀಲ್ ಮಾಡಿದ್ದಾರೆ. 

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ನವೆಂಬರ್ 12 ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇತ್ತೀಚಿಗಷ್ಟೆ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಇದೀಗ ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದರು. ಬಿಪಾಶಾ ಮತ್ತು ಕರಣ್ ಸಿಂಗ್ ಇಬ್ಬರೂ 2016ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. 6 ವರ್ಷಗಳ ಬಳಿಕ ಬಿಪಾಶಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಬಿಪಾಶಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.  ಅವಳು ಡಿವೈನ್ ಎಂದು ಬಿಪಾಶಾ ಬರೆದುಕೊಂಡಿದ್ದಾರೆ. ಜೊತೆಗೆ ಮಗಳ ಹೆಸರನ್ನು ಸಹ ರಿವೀಲ್ ಮಾಡಿದ್ದಾರೆ. 

ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಬಿಪಾಶಾ ದಂಪತಿ ಮಗಳಿಗೆ ಸುಂದರ ಹೆಸರಿಟ್ಟಿದ್ದಾರೆ. ಮಗಳಿಗೆ ದೇವಿ ಬಸು ಸಿಂಗ್ ಗ್ರೋವರ್ ಎಂದು ನಾಮಕರಣ ಮಾಡಿದ್ದಾರೆ. ಬಿಪಾಶಾ ದಂಪತಿಗೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ನಟಿ ಶಿಲ್ಪಾ ಶೆಟ್ಟಿ, ಸೂನಂ ಕಪೂರ್ ಶ್ರೇಯಾ ಗೋಷಲ್ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ. 

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಬಿಪಾಶಾ ಬಸು

ಅಂದಹಾಗೆ ಆಗಸ್ಟ್ ತಿಂಗಳಲ್ಲಿ ಬಿಪಾಶಾ  ಮತ್ತು ಕರಣ್ ಸಿಂಗ್ ತಂದೆ-ತಾಯಿ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದರು. ಬಳಿಕ ಗರ್ಭಿಣಿ ಬಿಪಾಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತರಹೇವಾರಿ ಫೋಟೋಶೂಟ್ ಮಾಡಿಸಿ ಹರಿಬಿಟ್ಟಿದ್ದರು. ಬಿಪಾಶಾ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವೊಮ್ಮೆ ಬಿಪಾಶಾ ಫೋಟೋಗಳು ನೆಟ್ಟಿಗರ ಕೋಪಕ್ಕೂ ಕಾರಣವಾಗಿತ್ತು. ಗರ್ಭಿಣಿಯಾದಾಗ ಹಾಟ್ ಆಗಿ ಕಾಣಿಸಿಕೊಳ್ಳಬೇಕಾ ಎಂದು ನೆಟ್ಟಿಗರು ಕಿಡಿಕಾರಿದ್ದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಿಪಾಶಾ ದಂಪತಿ ಸಿಕ್ಕಾಪಟ್ಟೆ ಫೋಟೋ ಶೂಟ್ ಮಾಡಿದ್ದರು.

 
 
 
 
 
 
 
 
 
 
 
 
 
 
 

A post shared by Bipasha Basu (@bipashabasu)

ಬಿಪಾಶಾ ಸಿಕ್ಕಾಪಟ್ಟೆ ಬೋಲ್ಡ್‌ ಫೋಟೋ; ಗರ್ಭಿಣಿಯಾಗಿದ್ದಾಗ ನಗ್ನವಾಗಿರುವುದು ಕಡ್ಡಾಯವೇ? ನೆಟ್ಟಿಗ್ಗರು ಕಿಡಿ

ಇನ್ನು ಸಿನಿಮಾಗಳ ಬಗ್ಗೆ ಹೇಳುವುದಾದರೆ ಕಳೆದ ಏಳು ವರ್ಷಗಳಿಂದ ಬಿಪಾಶಾ ಬಸು ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಕೊನೆಯದಾಗಿ 2015 ರ ಅಲೋನ್ ಚಿತ್ರದಲ್ಲಿ ಕಾಣಿಸಿಕೊಂಡರು. ಬಿಪಾಶಾ 2001 ರಲ್ಲಿ ಅಜ್ಞಾತವಾಸ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲ ಸಿನಿಮಾನೆ ಹಿಟ್ ಆಗಿತ್ತು. ನಂತರ ಅವರು  ರಾಝ್‌ನಲ್ಲಿ ಕಾಣಿಸಿಕೊಂಡರು ಈ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಬಿಪಾಶಾ ರಾತ್ರೋರಾತ್ರಿ ಸ್ಟಾರ್ ಆದರು. ನಂತರ ಅವರು ಗುಣಾ, ಜಿಸ್ಮ್, ಜಮೀನ್, ಇತ್ಬಾರ್, ಮಧೋಶಿ, ಫಿರ್ ಹೇರಾ ಫೆರಿ, ಓಂಕಾರ, ಧೂಮ್ 2, ರೇಸ್, ಆಕ್ರೋಷ್, ದಮ್ ಮಾರೋ ದಮ್, ಪ್ಲೇಯರ್ಸ್, ಆತ್ಮ, ರೇಸ್ 2, ಹಮ್ಶಕಲ್ಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

click me!