'RRR'ಸೀಕ್ವೆಲ್ ಕನ್ಫರ್ಮ್; ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಬಿಚ್ಚಿಟ್ಟ ರಾಜಮೌಳಿ

Published : Nov 13, 2022, 04:26 PM IST
'RRR'ಸೀಕ್ವೆಲ್ ಕನ್ಫರ್ಮ್; ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಬಿಚ್ಚಿಟ್ಟ ರಾಜಮೌಳಿ

ಸಾರಾಂಶ

ಟಾಲಿವುಡ್ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸೂಪರ್ ಹಿಟ್ ಆರ್ ಆರ್ ಆರ್ ಸಿನಿಮಾದ ಪಾರ್ಟ್-2 ಬಗ್ಗೆ ರಿವೀಲ್ ಮಾಡಿದ್ದಾರೆ. 

ಟಾಲಿವುಡ್ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ ಆರ್ ಆರ್ ಆರ್ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಆರ್ ಆರ್ ಆರ್ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿರುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಇತ್ತೀಚಿಗಷ್ಟೆ ಆರ್ ಆರ್ ಆರ್ ಸಿನಿಮಾವನ್ನು ಜಪಾನ್ ನಲ್ಲೂ ರಿಲೀಸ್ ಮಾಡಲಾಯಿತು. ಜಪಾನ್ ನಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರ್ ಆರ್ ಆರ್ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಸಿನಿಮಾದ ಸೀಕ್ವಲ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಈ ಬಗ್ಗೆ ರೌಜಮೌಳಿ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಆದರೀಗ ಮೊದಲ ಬಾರಿಗೆ ಆರ್ ಆರ್ ಆರ್ -2 ಬಗ್ಗೆ ರಿವೀಲ್ ಮಾಡಿದ್ದಾರೆ. 

ಖ್ಯಾತ ನಿರ್ದೇಶಕ ರೌಜಮೌಳಿ. ಆರ್ ಆರ್ ಆರ್ -2 ಬರುವುದು ಕನ್ಫರ್ಮ್ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೆ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಮೌಳಿ ಆರ್ ಆರ್ ಆರ್ 2 ಬಗ್ಗೆ ವಿವರಿಸಿದ್ದಾರೆ. ಆರ್ ಆರ್ ಆರ್-2 ಬರ್ತಿದೆ ಬರುತ್ತಾ ಇಲ್ವೋ ಎನ್ನುವ ಅಭಿಮಾನಿಗಳ ಗೊಂದಲಕ್ಕೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಆರ್ ಆರ್ ಆರ್ ನಿರ್ದೇಶಕ, 'ನನ್ನ ಎಲ್ಲಾ ಸಿನಿಮಾಗಳಿಗೆ ನನ್ನ ತಂದೆಯೇ ಕಥೆ ಬರೆಯುವುದು.  ನಾವು ಆರ್ ಆರ್ ಆರ್ 2 ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅವರೇ ಕಥೆಯ ಮೇಲೆ ಕೆಲಸ ಮಾಡಲಿದ್ದಾರೆ' ಎಂದು ಹೇಳಿದ್ದಾರೆ. 

ಹೆಚ್ಚು ಶುಲ್ಕ ಪಡೆಯುವುದು ಬಾಲಿವುಡ್‌ ನಿರ್ದೇಶಕರಲ್ಲ; ಹಾಗಾದರೆ ಯಾರು ಈ ಪಟ್ಟಿಯಲ್ಲಿ ಟಾಪ್‌?

ಆರ್ ಆರ್ ಆರ್ ಸಕ್ಸಸ್ ಹಾಗೂ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಬಗ್ಗೆ ಮಾತನಾಡಿದ ರಾಜಮೌಳಿ ಅವರಿನ್ನೂ ಸಿನಿಮಾ ಸೃಷ್ಟಿಸಿದ ಹವಾದಲ್ಲೇ ಇದ್ದಾರೆ. ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಬಾಹುಬಲಿ ಸಿರೀಸ್ ಬಳಿಕ ರೌಜಮೌಳಿ  ಆರ್ ಆರ್ ಆರ್ ಸಿನಿಮಾ ಮೂಲಕ ಮತ್ತೆ ಸದ್ದು ಮಾಡಿದರು. ಇಡೀ ವಿಶ್ವೆ ಟಾಲಿವುಡ್ ಕಡೆ ತಿರುಗಿ ನೋಡುವಂತೆ ಮಾಡಿದರು. ದಕ್ಷಿಣದ ಸಿನಿಮಾಗಳ ಬಗ್ಗೆ ಮತ್ತೆ ದೇಶ ವಿದೇಶಗಳಲ್ಲಿ ಚರ್ಚೆಯಾಗುವಂತೆ ಮಾಡಿದರು. ಇದೀಗ ಆರ್ ಆರ್ ಆರ್ ಸೀಕ್ವೆಲ್ ಬಗ್ಗೆ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. 

ರಾಜಮೌಳಿ ಸಿನಿಮಾದಲ್ಲಿ ಕರಾವಳಿ ಸುಂದರಿ; ಪ್ರಭಾಸ್ ಬಳಿಕ ಮಹೇಶ್ ಬಾಬು ಜೊತೆ ದೀಪಿಕಾ ರೊಮ್ಯಾನ್ಸ್

ಆರ್ ಆರ್ ಆರ್ ಸಿನಿಮಾದಲ್ಲಿ ಜೂ.ಎನ್ ಟಿ ಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ನಟಿಸಿದ್ದರು. ರಾಮ್ ಚರಣ್ ಅಲ್ಲೂರಿ ಸೀತರಾಮ್ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಈ ಮೂಲಕ ಅಲಿಯಾ ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಕಾಲಿಟ್ಟರು. ಇನ್ನು ಉಳಿದಂತೆ ಅಜಯ್ ದೇವಗನ್, ಅಲಿವಿಯಾ ಮೋರಿಸ್, ಶ್ರೀಯಾ ಶರಣ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದರು. ಇನ್ನು ಪಾರ್ಟ್-2 ಬಂದರೆ ಯಾರೆಲ್ಲ ಇರಲಿದ್ದಾರೆ, ಯಾವಾಗ ಬರಲಿದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.   

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಆಗದೇ ಆ ಸ್ಟಾರ್ ನಟನಿಂದ ಮಗುವನ್ನು ಪಡೆಯಲು ಬಯಸಿದ್ದ ಆ ನಟಿಗೆ ಕೊನೆಗೆ ಆಗಿದ್ದೇನು?
ಈಗ್ಲೂ ಬ್ಯಾಚ್ಯುಲರ್ Salman Khan ಡಿಸೆಂಬರ್ 27ಕ್ಕೆ ಹುಟ್ಟಿದ್ದೇ ಒಂಟಿತನಕ್ಕೆ ಕಾರಣವಾಯ್ತಾ?