ಆರಾಧ್ಯ ನನ್ನ ಮಗಳು ಆಕೆ ಯಾವತ್ತಿದ್ದರೂ ಬೆಸ್ಟ್‌; ಕನ್ನಡ ನಟಿಯ ಟೀಕೆಗೆ ಟಾಂಗ್ ಕೊಟ್ಟ ಐಶ್ವರ್ಯ ರೈ

By Vaishnavi Chandrashekar  |  First Published Sep 30, 2024, 2:57 PM IST

ಹ್ಯಾಂಡ್‌ಬ್ಯಾಕ್‌ ಹಾಗೆ ಹೀಗೆ ಎಂದು ಕೊಂಕು ಕಾಮೆಂಟ್ ಮಾಡಿದ ಜನರಿಗೆ ಟಾಂಗ್ ಕೊಟ್ಟ ಐಶ್ವರ್ಯ ರೈ. 


ಮಾಜಿ ವಿಶ್ವ ಸುಂದರಿ ಐಶ್ವರ್ಯಾ ಎವರ್ಗ್ರೀನ್ ಬ್ಯೂಟಿ ಇಂದಿಗೂ ಫ್ಯಾಶನ್ ವೀಕ್, ಅವಾರ್ಡ್ ಫಂಕ್ಷನ್ ಅಂತ ಬ್ಯುಸಿಯಾಗಿರೋ ಸ್ಟಾರ್ ನಟಿ ನಮ್ಮ ಮಂಗಳೂರು ಸುಂದರಿ. ಆದರೆ ಅಭಿಮಾನಿಗಳಿಗೆ ಬೇಸರ ಆಗುತ್ತಿರುವುದು ಎಲ್ಲೇ ಹೋದರೂ ಮಗಳು ಆರಾಧ್ಯ ಜೊತೆಗಿರ್ತಾರೆ,ಎಲ್ಲಾ ಕಡೆ ಮಗಳನ್ನು ಕರ್ಕೊಂಡ್ ಹೋಗೋಕೆ ಅವಳೇನು ಹ್ಯಾಂಡ್ ಬ್ಯಾಗಾ ಅಂತ ಐಶ್ವರ್ಯಾ ರೈ ಅವರನ್ನು ಪ್ರಶ್ನಿಸಿದ್ದಾರ ಮಾಳವಿಕಾ ಅವಿನಾಶ್. ಕೆಣಕಿದ್ದ ಮಾಳವಿಕಾಗೆ ಇದೀಗ ಐಶ್ ಟಕ್ಕರ್ ಕೊಟ್ಟಿದ್ದಾರೆ. ಹಾಗಾದ್ರೆ ಐಶು ಏನಂದ್ರು? 

ಐಶ್ವರ್ಯಾ ರೈ.. ಕರ್ನಾಟಕದ ಮನೆ ಮಗಳು, ಮುಂಬೈನ ಸೊಸೆ ಈಕೆಯ ಬ್ಯೂಟಿಗೆ ಮೈ ಮಾಟಕ್ಕೆ ಬೀಳದವರೇ ಇಲ್ಲ. ಭುಜದೆತ್ತರಕ್ಕೆ ಬೆಳೆದು ನಿಂತ ಮಗಳಿದ್ದರೂ ಐಶ್ವರ್ಯಾ ಇಂದಿಗೂ ಎವರ್ಗ್ರೀನ್ ಬ್ಯೂಟಿ ಆದರೆ ಈ ಅಭಿಸಾರಿಕೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳಿಂದ ಮಗಳ ವಿಚಾರಕ್ಕೆ ಸಾಕಷ್ಟು ಚರ್ಚೆಗಳು ಆಗುತ್ತಿದೆ. ಈ ಬಗ್ಗೆ ನಿಮಗೂ ಗೊತ್ತಿದೆ, ಮಗಳನ್ನ ಎಲ್ಲಾ ಕಡೆ ಹ್ಯಾಂಡ್ ಬ್ಯಾಗ್ ರೀತಿ ಕರ್ಕೊಂಡ್ ಹೋಗೋದು ಎಷ್ಟು ಸರಿ ಅನ್ನೋ ಟಾಕ್ ಗುಲ್ಲೆಬ್ಬಿದೆ.ಈ ಬಗ್ಗೆ ನಟಿ ಮಾಳವಿಕಾ ಅವಿನಾಶ್ ಕೂಡ ಕಿಡಿಕಾರಿದ್ದರು.  ಮಕ್ಕಳನ್ನು ಹ್ಯಾಂಡ್ ಬ್ಯಾಗಿನಂತೆ ಜತೆಯಲ್ಲಿ ಎಲ್ಲಾ ಕಡೆ ಕರ್ಕೊಂಡು ಹೋಗೋದೆಂತ ಸಂಸ್ಕೃತಿ? ಅಂತ ಸೋಷಿಯಲ್ ಮೀಡಿಯಾದಲ್ಲಿ ನಟಿ ಮಾಳವಿಕಾ ಅವಿನಾಶ್ ಪೋಸ್ಟ್ ಮಾಡಿದ್ದರು. ಇದಕ್ಕೆ ಕಾರಣ, ಐಶ್ವರ್ಯ ರೈ ಮಗಳು ಆರಾಧ್ಯಳನ್ನು ಪ್ಯಾರೀಸ್‌ಗೆ ಕರೆದುಕೊಂಡು ಹೋಗಿ ವಾಪಸಾಗಿದ್ದು. ಹಾಗೆ ನೋಡುವುದಾದರೆ ಐಶ್ವರ್ಯಾ ಎಲ್ಲೇ ಹೋದರೂ ಮಗಳು ಆರಾಧ್ಯಾಳನ್ನು ಜೊತೆಗೆ ಕರ್ಕೊಂಡ್ ಹೋಗ್ತಾರೆ. ಹೀಗಾಗಿ ಆರಾಧ್ಯ ಬಾಲ್ಯ ದಿನಗಳನ್ನು ಐಶ್ವರ್ಯಾ ಹಾಳು ಮಾಡುತ್ತಿದ್ದಾರೆ ಅನ್ನೋ ಟಾಕ್ ಶುರುವಾಗಿದೆ. 

Tap to resize

Latest Videos

ಯೋಚನೆ ಮಾಡಿ ಮಾಡಿ ಅದೆಷ್ಟೋ ದಿನ ನಿದ್ರೆ ಮಾಡಿಲ್ಲ; ಅವಕಾಶ ಗಿಟ್ಟಿಸಿಕೊಂಡ ಸತ್ಯ ಬಿಚ್ಚಿಟ್ಟ ದುನಿಯಾ ವಿಜಯ್ ಪುತ್ರಿ ಮೋನಿಷಾ!

ಆರಾಧ್ಯ ‘ನನ್ನ ಮಗಳು’ ಎಂದ ಐಶ್..!

ಇನ್ನು ಇಷ್ಟೆಲ್ಲಾ ಚರ್ಚೆ ಮದ್ಯೆ ಐಶ್ವರ್ಯಾ ಮೌನ ಮುರಿದಿದ್ದು, ಆರಾಧ್ಯ ನನ್ನ ಮಗಳು ಎನ್ನುವ ಮೂಲಕ ಹೇಟರ್ಸ್‌ಗೆ ಟಕ್ಕರ್ ಕೊಟ್ಟಿದ್ದಾರೆ. ಅಬುದಾಬಿಯಲ್ಲಿ ನಡೆಯುತ್ತಿರುವ ಐಫಾ ಸಮಾರಂಭದಲ್ಲಿ ಪ್ಯಾಪರಾಜಿಗಳು ಕೇಳಿದ ಪ್ರಶ್ನೆಗೆ ರಿಯಾಕ್ಟ್ ಮಾಡಿದ ಐಶ್, ಆರಾಧ್ಯ ನನ್ನ ಮಗಳು ಅಂತ ನಗುತ್ತಲೇ ಸಭ್ಯವಾಗಿ ಉತ್ತರಿಸಿದ್ದಾರೆ. ಹಾಗೆ ನೋಡಿದರೆ ಐಶ್ವರ್ಯಾ ಎಲ್ಲೇ ಹೋದ್ರೂ ಅಲ್ಲಿ ಮಗಳು ಆರಾಧ್ಯ ಜೊತೆಗಿರುತ್ತಾಳೆ. ಹೀಗಾಗಿ ಆರಾಧ್ಯ ಯಾವಾಗಲೂ ಹೀಗೆ ಊರು ಸುತ್ತುತ್ತಾ ಇದ್ರೆ ಸ್ಕೂಲ್‌ಗೆ ಹೋಗೋದು ಯಾವಾಗ ಅನ್ನೋ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಷ್ಟು ಮಂದಿ ಕೇಳಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರೋ ಐಶ್ವರ್ಯಾ ರೈ, ನನ್ನ ಮಗಳ ಉಸಾಬರಿ ನಿಮಗೇಕೆ ಅಂತ ಪ್ರಶ್ನಿಸಿದ್ದಾರೆ.

ಹೊಸ ಲುಕ್‌ನಲ್ಲಿ ತರುಣ್- ಸೋನಲ್; ಮತ್ತೆ ಎಲ್ಲಿಗೆ ಎಂದು ಕಾಲೆಳೆದ ನೆಟ್ಟಿಗರು!

click me!