
ಮಲಯಾಳಂ ಚಿತ್ರರಂಗದಲ್ಲಿ ಒಂದೊಂದೇ ಭಯಾನಕ ಘಟನೆಗಳು ಹೊರಕ್ಕೆ ಬರುತ್ತಿವೆ. ಇದಾಗಲೇ ಸಾಕಷ್ಟು ನಟಿಯರು ಸಿನಿ ಕ್ಷೇತ್ರದ ದಿಗ್ಗಜರ ವಿರುದ್ಧ ಕಾಸ್ಟಿಂಗ್ ಕೌಚ್, ಅತ್ಯಾಚಾರ, ಬಲಾತ್ಕಾರ, ಲೈಂಗಿಕ ಕಿರುಕುಳ ಸೇರಿದಂತೆ ಹಲವಾರು ರೀತಿಯ ಆರೋಪ ಮಾಡಿದ್ದು, ಹೇಮಾ ಆಯೋಗದ ವರದಿಯಲ್ಲಿ ಅವು ಬಹಿರಂಗಗೊಂಡಿದೆ. ಈ ಪೈಕಿ ಹಲವರು ತಮಗೆ ಕಿರುಕುಳ ನೀಡಿರುವವರ ಹೆಸರನ್ನು ನೇರವಾಗಿಯೇ ಹೇಳಿದ್ದಾರೆ. ಇದೀಗ ಮತ್ತೋರ್ವ ನಟಿ ಮೀನು ಮುನೀರ್ ಸರದಿ. ಇದಾಗಲೇ ನಟಿ ಎಡವೇಲು ಬಾಬು, ಜಯಸೂರ್ಯ, ಎಂ.ಮುಕೇಶ್, ಮಣಿಯನ್ ಪಿಲ್ಲ, ರಾಜು, ಸಿಪಿಐ (ಎಂ) ಶಾಸಕ ಮುಕೇಶ್ ಸೇರಿದಂತೆ ಕೆಲವರ ವಿರುದ್ಧ ದೌರ್ಜನ್ಯದ ಅರೋಪ ಮಾಡಿದ್ದು, ಇದೀಗ ಖ್ಯಾತ ನಿರ್ದೆಶಕ ಬಾಲಚಂದ್ರ ಮೆನನ್ ಕುರಿತ ಗುಂಪು ರತಿಕ್ರೀಡೆಯ ಕುರಿತು ಭಯಾನಕ ಘಟನೆಯನ್ನು ತೆರೆದಿಟ್ಟಿದ್ದಾರೆ.
2007ರಲ್ಲಿ ನಡೆದಿದೆ ಎನ್ನಲಾದ ಘಟನೆಯ ಕುರಿತು ಮೀನು ಮಾತನಾಡಿದ್ದಾರೆ. ಇಂಡಿಯಾ ಟುಡೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತೆರೆದಿಟ್ಟಿದ್ದಾರೆ. ಅಂದು ಬಾಲಚಂದ್ರ ಅವರು ಕೋಣೆಯಲ್ಲಿ ಮೂವರು ಹುಡುಗಿಯರ ಜೊತೆ ರತಿಕ್ರೀಡೆಯಲ್ಲಿ ತೊಡಗಿದ್ದರು. ನಾನು ಆಕಸ್ಮಿಕವಾಗಿ ಆ ಕೋಣೆಯಲ್ಲಿ ಇದ್ದೆ. ಇದನ್ನು ನನ್ನಿಂದ ನೋಡಲು ಆಗದೇ ಹೊರಕ್ಕೆ ನಡೆಯಲು ಮುಂದಾದೆ. ಆದರೆ ಬಾಲಚಂದ್ರ ಅವರು ನನ್ನನ್ನು ಹೊರಗೆ ಬಿಡಲಿಲ್ಲ. ಅಲ್ಲಿಯೇ ಕುಳಿತು ನೋಡಲೇಬೇಕು ಎಂದು ಒತ್ತಾಯಿಸಿದರು ಎಂದು ಮೀನು ಹೇಳಿದ್ದಾರೆ.
ರಣಬೀರ್ಗಿಂತಲೂ ಮಧ್ಯರಾತ್ರಿ ನನಗೆ ವಿಕ್ಕಿನೇ ಇಷ್ಟ ಎಂದ ತೃಪ್ತಿ ಡಿಮ್ರಿ: ನಟಿ ಕೊಟ್ಟ ಕಾರಣ ಹೀಗಿದೆ ನೋಡಿ!
2007ರಲ್ಲಿ ನನಗೆ ಅಶ್ಲೀಲ ವಿಡಿಯೋ ನೋಡುವಂತೆ ಅವರು ಒತ್ತಾಯ ಮಾಡಿದ್ದರು ಎಂದೂ ಹೇಳಿದ್ದಾರೆ. ಇದೇ ವೇಳೆ, ಇವರು ನೀಡಿರುವ ಆರೋಪದ ಮೇಲೆ ಎಡವೇಲು ಬಾಬು ಅವರು ಅರೆಸ್ಟ್ ಆಗಿದ್ದು, ಜಾಮೀನು ಪಡೆದು ಹೊರ ಬಂದಿದ್ದಾರೆ. ಆಡಳಿತಾರೂಢ ಸಿಪಿಎಂ[ಎಂ]ನ ಶಾಸಕ ಮತ್ತು ನಟ ಮುಕೇಶ್ ಅವರನ್ನು ಕೂಡ ಬಂಧಿಸಿದ್ದರು. ಈ ಕುರಿತು ಮಾತನಾಡಿರುವ ಮೀನು, ನಾನು ನೀಡಿರುವ ದೂರಿನ ಅನ್ವಯ ಇಲ್ಲಿಯವರೆಗೆ ನಡೆದ ತನಿಖೆಯಿಂದ ತೃಪ್ತಿ ಇದೆ ಎಂದಿದ್ದಾರೆ. ಮುಕೇಶ್ ತುಂಬಾ ಪ್ರಭಾವಿ ವ್ಯಕ್ತಿ. ಆತನನ್ನು ಬಂಧಿಸುವುದು ಸುಲಭ ಅಗಿರಲಿಲ್ಲ. ಆದರೂ ಆ ಪ್ರಯತ್ನ ನಡೆಸಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ.
ಇದೆ ವೇಳೆ, ಕಾಸ್ಟಿಂಗ್ ಕೌಚ್‌ನಿಂದ ತಮ್ಮ ಕನಸು ಹೇಗೆ ನುಚ್ಚುನೂರಾಯಿತು ಎಂಬ ಬಗ್ಗೆ ನಟಿ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ನಾನು ಹಲವಾರು ಕನಸುಗಳನ್ನು ಇಟ್ಟುಕೊಂಡು ಬಂದವಳು. ಆದರೆ ಇಲ್ಲಿ ನಡೆದದ್ದೆ ಬೇರೆ. ಹಲವರಿಂದ ನನ್ನ ಕನಸೆಲ್ಲವೂ ನುಚ್ಚು ನೂರಾದವು ಎಂದಿದ್ದಾರೆ. ಹೇಮಾ ಆಯೋಗದ ವರದಿಯಿಂದ ಚಿತ್ರರಂಗದಲ್ಲಿ ಶುದ್ಧೀಕರಣದ ಕೆಲಸ ಆರಂಭವಾಗಿದೆ ಎಂದು ಹೇಳಿದ್ದಾರೆ.ಹಣದ ಮೂಲಕ ರಾಜಿ ಮಾಡಿಕೊಳ್ಳಲು ಬಯಸುವ ವ್ಯಕ್ತಿಗಳಿಂದ ತನಗೆ ಅನೇಕ ಫೋನ್ ಕರೆಗಳು ಬಂದಿವೆ . ಆದರೆ ಯಾವುದಕ್ಕೂ ನಾನು ಜಗ್ಗಲ್ಲ ಎಂದಿದ್ದಾರೆ.
ಜಹೀರ್ ಇಕ್ಬಾಲ್ ಜೊತೆಗಿನ ರಹಸ್ಯ ಸಂಬಂಧದ ಕುರಿತು ಮೊದಲ ಬಾರಿಗೆ ನಟಿ ಸೋನಾಕ್ಷಿ ಸಿನ್ಹಾ ಓಪನ್ ಮಾತು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.