ಕಿಡಿ ಕಾರೋದ್ರಲ್ಲಿ ಅತ್ತೆ ಜಯಾಗೆ ತಕ್ಕ ಸೊಸೆಯಾದ ಐಶ್​! ಅಷ್ಟಕ್ಕೂ ಇಬ್ಬರ ಸಿಟ್ಟು ಯಾರ ವಿರುದ್ಧ?

By Suvarna News  |  First Published Apr 11, 2024, 4:16 PM IST

ಮಾಧ್ಯಮಗಳ ವಿರುದ್ಧ ಕಿಡಿ ಕಾರೋದ್ರಲ್ಲಿ ಅತ್ತೆ ಜಯಾ ಬಚ್ಚನ್​ರನ್ನೇ ಮೀರಿಸಿದ್ರಾ ಐಶ್ವರ್ಯ ರೈ? ಅತ್ತೆಗೆ ತಕ್ಕ ಸೊಸೆ ಅಂತಿದ್ದಾರೆ ನೆಟ್ಟಿಗರು
 


ಕೆಲ ತಿಂಗಳಿನಿಂದ ಅಮಿತಾಭ್​ ಬಚ್ಚನ್​ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಸುದ್ದಿ ಸದ್ದು ಮಾಡುತ್ತಲೇ ಇದೆ. ಅದರಲ್ಲಿಯೂ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ಡಿವೋರ್ಸ್​ ವಿಷಯ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು, ಇದೊಂದು ರೀತಿಯಲ್ಲಿ ಹೈಡ್ರಾಮಾನೂ ಆಗಿತ್ತು. ಅತ್ತೆ ಜಯಾ ಮತ್ತು ಸೊಸೆ ಐಶ್ವರ್ಯ ಅವರಿಗೆ ಆಗಿ ಬರುತ್ತಿಲ್ಲ ಎಂದೂ ಹೇಳಲಾಗಿತ್ತು. ಅದೇನೇ ಇದ್ದರೂ ಇದೀಗ ಮೀಡಿಯಾಗಳ ವಿರುದ್ಧ ಗರಂ ಆಗೋ ವಿಷಯದಲ್ಲಿ ಜಯಾ ಮತ್ತು ಐಶ್ವರ್ಯ ಅತ್ತೆಗೆ ತಕ್ಕ ಸೊಸೆ ಎನಿಸಿಕೊಂಡಿದ್ದಾರೆ.

ಹೌದು. . ಜಯಾ ಬಚ್ಚನ್‌ ಅವರು ಮಾಧ್ಯಮಗಳಿಗೆ ಹರಿಹಾಯುವುದರಲ್ಲಿ ಜನಪ್ರಿಯತೆ ಪಡೆದಿದ್ದರು. ಈಗಲೂ ಅವರು ಆಗಾಗ್ಗೆ ಅವರ ಮೇಲೆ ಹರಿಹಾಯುವುದು ಉಂಟು. ಇದೀಗ ಐಶ್ವರ್ಯ ರೈ ಕೂಡ ಹೀಗೆಯೇ ಮಾಡಿದ್ದು, ಥೇಟ್​ ಅತ್ತೆಯಂತೆಯೇ ಕಂಡರು ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಇದು ಹಳೆಯ ವಿಡಿಯೋ ಆಗಿದ್ದು, ಮತ್ತೆ ವೈರಲ್​ ಆಗಿದೆ. ಈ ರೀತಿ ಐಶ್ವರ್ಯ ಏನೂ ಸುಮ್​ ಸುಮ್ಮನೆ ಗರಂ ಆಗಿದ್ದಲ್ಲ. ಅವರಿಗೆ ಕೇಳಿದ ಪ್ರಶ್ನೆಯೊಂದು ಅವರಿಗೆ ಸಿಟ್ಟು ತರಿಸಿದೆ. ಆ ಪ್ರಶ್ನೆ ಏನೂ ಅವರ ಪರ್ಸನಲ್​ ಲೈಫ್​ ಬಗ್ಗೆಯಲ್ಲ, ಬದಲಿಗೆ ಪತ್ರಕರ್ತನೊಬ್ಬ ನೀವು ಹಾಲಿವುಡ್​ಗೆ ಶಿಫ್ಟ್​ ಆಗ್ತಿದ್ದೀರಂತೆ, ಹೌದಾ ಎಂದು ಕೇಳಿದ್ದಾರೆ. ಇದು ನಟಿಯನ್ನು ಕೆರಳಿಸಿದೆ.

Tap to resize

Latest Videos

ಬಿಗ್​ಬಾಸ್​ ಓಟಿಟಿ ಷೋ ಡೇಟ್​ ಫಿಕ್ಸ್​? ಖಾಸಗಿ ವಿಡಿಯೋ ಲೀಕ್​ ಬೆಡಗಿಗೆ ಸಿಕ್ಕೇಬಿಡ್ತು ಆಫರ್

ಅಷ್ಟಕ್ಕೂ ಐಶ್ವರ್ಯ ಇಂಗ್ಲಿಷ್​ ಚಿತ್ರದಲ್ಲಿಯೂ ನಟಿಸಿದ್ದಾರೆ.  ಬಾಲಿವುಡ್​ನಿಂದ ಹಾಲಿವುಡ್​ಗೆ ಹೋದ  ಮೊದಲ ಲೀಡ್‌ ರೋಲ್‌ ನಟಿ ಎಂದೂ ಎನಿಸಿಕೊಂಡಿದ್ದಾರೆ.  2000ನೇ ಇಸವಿಯಲ್ಲಿ ಇವರು ಕೆಲವು ಹಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲಿಂದ ಮತ್ತೆ ಬಾಲಿವುಡ್​ಗೆ ಮರಳಿದ್ದರು. ಇದೇ ಕಾರಣಕ್ಕೆ ಪತ್ರಕರ್ತರು  "ನೀವು ಹಾಲಿವುಡ್‌ಗೆ ಶಿಫ್ಟ್‌ ಆಗುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದು ನಟಿಯ ಕೆಂಗಣ್ಣಿಗೆ ಗುರಿಯಾಗಿದೆ.
 
ಮೀಡಿಯಾ ವಿರುದ್ಧ ಕಿಡಿ ಕಾರಿರುವ ನಟಿ, "ಈ ವಿಷಯ ಹೇಗೆ ಸುದ್ದಿಯಾಯಿತು? ನಾನು ಹಾಲಿವುಡ್‌ಗೆ ಶಿಫ್ಟ್‌ ಆಗುತ್ತಿದ್ದೇನೆ ಎಂದು ಹೇಳಿದ್ದು ಯಾರು?  ನಾನು ಯಾವಾಗ ಹಾಗೆ ಹೇಳಿದೆ? ಯಾವ ಸಂದರ್ಶನದಲ್ಲಿ ಹೇಳಿದೆ? ತೋರಿಸಿ ನನಗೆ ಆ ಸಂದರ್ಶನವನ್ನು ಬಳಿಕ ಮಾತನಾಡೋಣ ಎಂದು ಗರಂ ಆಗಿದ್ದಾರೆ. ಇಷ್ಟೇ ಅಲ್ಲದೇ, ನೋಡಿ ನೀವು  ಪ್ರಶ್ನೆ ಕೇಳುವುದಿದ್ದರೆ ನನ್ನ ಬಳಿ ಕೇಳಬಹುದುದ. ಅದಕ್ಕೆ ನಾನು ಉತ್ತರಿಸುತ್ತೇನೆ. ಆದರೆ ಸುಮ್​ ಸುಮ್ನೆ ನಾನು ಹೇಳದೇ ಇರುವ ವಿಷಯಗಳನ್ನೆಲ್ಲಾ ಹೇಳಬೇಡಿ.  ನಾನು ಮೊದಲು ತಮಿಳು ಸಿನಿಮಾಗಳಲ್ಲಿ ನಟಿಸಿದೆ. ನಂತರ ಹಿಂದಿ ಮತ್ತು ಬಂಗಾಳಿ ಸಿನಿಮಾಗಳಲ್ಲಿ ನಟಿಸಿದೆ. ಈಗ ನಾನು ಕೆಲವು ಇಂಗ್ಲಿಷ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಆದರೆ, ಇಂಗ್ಲಿಷ್‌ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದರೆ ನಾನು ನಾನು ಬೇರೆ ಕಡೆಗೆ ಶಿಫ್ಟ್‌ ಆಗುತ್ತಿದ್ದೇನೆ ಎಂದಲ್ಲವಲ್ಲ, ಇದು  ನಟರೊಬ್ಬರ  ಅನುಭವವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಪ್ರಕ್ರಿಯೆ ಅಷ್ಟೇ. ಸುಮ್ಮನೇ ಸುದ್ದಿ ಮಾಡಬೇಡಿ ಎಂದಿದ್ದಾರೆ.

ಇದಕ್ಕೆ ಥಹರೇವಾರಿ ಕಮೆಂಟ್ಸ್​ ಬಂದಿವೆ. ಇಷ್ಟು ಕ್ಷುಲ್ಲಕ ವಿಷಯಕ್ಕೆ ನಟಿ ಇಷ್ಟೆಲ್ಲಾ ಗರಂ ಆಗೋ ಅಗತ್ಯವಿರಲಿಲ್ಲ ಎಂದು ಕೆಲವರು ಹೇಳಿದರೆ,  ನೇರವಾಗಿ ಹೇಳಿರುವ ಐಶ್ವರ್ಯಾ ರೈ ಮಾತಿಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ಥೇಟ್​ ಈಕೆ ಅತ್ತೆಯಂತೆ  ಎಂದಿದ್ದಾರೆ.  ಒಂದು ಕ್ಷಣ ನನಗೆ ಜಯಾ ಬಚ್ಚನ್‌ ಧ್ವನಿ ಕೇಳಿದಂತೆ ಆಯ್ತು ಎಂದು ಇನ್ನು ಕೆಲವರು ಕಮೆಂಟ್​ ಮಾಡಿದ್ದಾರೆ.

ಹೇಳಿ ಕೇಳಿ ಇವಳು ಭೂಮಿಕಾ, ಸುಮ್ನೆ ಬಿಡ್ತಾಳಾ? ಅತ್ಯಮ್ಮಾ ನಿನ್​ ಟೈಂ ಶುರುವಾಯ್ತಮ್ಮೋ ಹುಷಾರ್​ ಅಂದ ಫ್ಯಾನ್ಸ್​
 

click me!