1976 ರಿಂದ 1996ರೊಳಗೆ ತಮ್ಮ ಜೀವಿತದ 35 ವರ್ಷಗಳಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಈ ನಟಿ ಕಾಣಿಸಿಕೊಂಡಿದ್ದರು ಎಂದರೆ ಅವರ ಜನಪ್ರಿಯತೆಯ ಅಗಾಧತೆಯನ್ನು ಅರಿಯಬಹುದು. ಅವರಿಗಾಗಿಯೇ ಐಟಂ ಸಾಂಗ್ ಅನ್ನು ಸೃಷ್ಟಿ ಮಾಡಲಾಗುತ್ತಿತ್ತು..
ಸೌತ್ ಮೂಲದ, ಅಂದರೆ ಕೇರಳದ ಈ ನಟಿ ಬಲವಂತದ ಮದುವೆಯನ್ನು ಮುರಿದುಕೊಂಡು ನಾಯಕಿಯಾಗಿ ಎಂಟ್ರಿ ಕೊಟ್ಟು, ಬಳಿಕ ಐಟಂ ಸಾಂಗ್ ಡಾನ್ಸರ್ ಆಗಿ ಇಡೀ ದೇಶದ ತುಂಬಾ ಸಖತ್ ಫೇಮಸ್ ಆದವರು. ತಮ್ಮ 35ನೇ ವಯಸ್ಸಿನಲ್ಲೆ ಸತ್ತರೂ ಕೂಡ ಅಷ್ಟರಲ್ಲೇ ಆಗಿನ ಕಾಲದ ಹೀರೋಯಿನ್ಸ್‌ಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಅಂದಿನ ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದಿಂದ ನಾಯಕಿ ನಟಿಯರು ಬಾಲಿವುಡ್‌ಗೆ ಹೋಗಿ ಖ್ಯಾತಿ ಹೊಂದಿದ್ದಾರೆ. ರೇಖಾ, ಜಯಲಲಿತಾ, ಶ್ರೀದೇವಿ ಹಾಗು ಜಯಪ್ರದಾ ಅವರನ್ನು ಹಾಗೆ ಹೆಸರಿಸಬಹುದು.
ಆದರೆ ಈ ನಟಿ ಐಟಂ ಸಾಂಗ್ ಡಾನ್ಸರ್ ಆಗಿ ಸೌತ್ ಹಾಗು ನಾರ್ತ್ ಎರಡೂ ಕಡೆ ಬಹಳಷ್ಟು ಪ್ರಸಿದ್ಧಿ ಪಡೆದವರು. ಅವರ ಮೂಲ ಹೆಸರು ವಿಜಯಲಕ್ಷ್ಮಿ ವಡ್ಲಪತಿ (Vijaylakshmi Vadlapati).80 ಹಾಗು 90ರ ದಶಕದಲ್ಲಿ ಸಖತ್ ಮಿಂಚಿರುವ ಈ ನಟಿಯ ಸ್ಕ್ರೀನ್ ನೇಮ್ ಸಿಲ್ಕ್ ಸ್ಮಿತಾ (Silk Smitha).ಅವರನ್ನು 'ಸೆಕ್ಸ್ ಬಾಂಬ್' ಎಂದೂ ಸಹ ಕರೆಯಲಾಗುತ್ತಿತ್ತು. ಸಿನಿರಂಗಕ್ಕೆ ಈಗಲೂ ಸಹ ಅವರನ್ನು ಮೀರಿಸುವ ಗ್ಲಾಮರ್ ಗೊಂಬೆ ಮತ್ತೊಬ್ಬರು ಬಂದಿಲ್ಲ ಎನ್ನಲಾಗುತ್ತಿದೆ.
ಕೇರಳದ ಜನರ ಬಗ್ಗೆ ಮತ್ತೆ ಮತ್ತೆ ಯಾಕೆ ಹೀಗೇ ಹೇಳ್ತಿದಾರೆ ಅಲ್ಲು ಅರ್ಜುನ್; ಅದರಲ್ಲೇನಿದೆ ಮರ್ಮ?
1976 ರಿಂದ 1996ರೊಳಗೆ ತಮ್ಮ ಜೀವಿತದ 35 ವರ್ಷಗಳಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ ಸಿಲ್ಕ್ ಸ್ಮಿತಾ ಕಾಣಿಸಿಕೊಂಡಿದ್ದರು ಎಂದರೆ ಅವರ ಜನಪ್ರಿಯತೆಯ ಅಗಾಧತೆಯನ್ನು ಅರಿಯಬಹುದು. ಅವರಿಗಾಗಿಯೇ ಐಟಂ ಸಾಂಗ್ ಅನ್ನು ಸೃಷ್ಟಿ ಮಾಡಲಾಗುತ್ತಿತ್ತು ಎಂದರೆ, ಸಿನಿಮಾ ಪ್ರೇಕ್ಷಕರು ಅವರನ್ನು ನೋಡಲು ಅದೆಷ್ಟು ಇಷ್ಟಪಡುತ್ತಿದ್ದರು ಎಂಬುದನ್ನು ಊಹಿಸಬಹುದು. ಒಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಕೇರಳದಿಂದ ಓಡಿಬಂದು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿ ಮೆರೆದವರು ಸಿಲ್ಕ್ ಸ್ಮಿತಾ.
ಪುರುಷ ಪ್ರಧಾನ ಸಿನಿಮಾಗಳಷ್ಟೇ ಬರುತ್ತಿದ್ದವು ಎಂದಿದ್ದಕ್ಕೆ ಥಟ್ಟನೆ ಸ್ಪೆಷಲ್ ಕೌಂಟರ್ ಕೊಟ್ಟ ಸಾಯಿ ಪಲ್ಲವಿ!
ಮೊದಲಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಟಚ್‌ಅಪ್ ಆರ್ಟಿಸ್ಟ್ ಆಗಿ ಕೆರಿಯರ್ ಶುರುಮಾಡಿದ ನಟಿ ಸಿಲ್ಕ್ ಸ್ಮಿತಾ, ಬಳಿಕ ಚಿಕ್ಕಪುಟ್ಟ ಪಾತ್ರಗಳ ಮೂಲಕ ನಟನೆ ಆರಂಭಿಸಿ ನಟಿಯಾಗಿ ಬೆಳೆದರು. ಗ್ಲಾಮರ್ ಗೊಂಬೆಯಂತಿದ್ದ ಆಕೆ ಐಟಂ ಡಾನ್ಸರ್ ಆಗಿ ಬೆಳೆಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಕಾರಣ, ಪ್ರೇಕ್ಷಕರು ಒಬ್ಬ ನಟಿಯಲ್ಲಿ ಏನನ್ನು ಬಯಸುತ್ತಾರೋ ಅದೆಲ್ಲವೂ ಸಿಲ್ಕ್ ಸ್ಮಿತಾರಲ್ಲಿ ಇತ್ತು. ಹೀಗಾಗಿ ಅವರು ನಾಯಕಿ ನಟಿಯರಿಗಿಂತಲೂ ಹೆಚ್ಚು ಫೇಮಸ್ ಆಗಿ ಅವರನ್ನೂ ಮೀರಿಸುವ ಸಂಭಾವನೆ ಪಡೆಯಲು ಸಾಧ್ಯವಾಯಿತು.
ಬಿಗ್ ಬಾಸ್ ಕಪ್ ಗೆಲ್ಲದ ನಟಿ ಸಂಗೀತಾ ಶೃಂಗೇರಿ ಅಳೆದೂ ತೂಗಿ ಅದೆಂಥಾ ಮಾತು ಹೇಳ್ಬಿಟ್ರು ನೋಡಿ!