ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇರಳದಲ್ಲಿ ಹಾಗೂ ಬೇರೆ ಕಡೆಗಳಲ್ಲಿ ಕೇಳಿದರೂ ನಟ ಅಲ್ಲು ಅರ್ಜುನ್ ಅವರು ಬೇಸರ ಮಾಡಿಕೊಳ್ಳದೇ ಅದೇ ಉತ್ತರವನ್ನು ಸ್ವಲ್ಪ ವಿಭಿನ್ನವಾಗಿ ಮತ್ತೆ ಮತ್ತೆ ಹೇಳುತ್ತಾರೆ. ಕೇರಳದ ಪ್ರಕೃತಿ ಸೌಂದರ್ಯವನ್ನು...
ಪುಷ್ಪಾ ಖ್ಯಾತಿಯ ತೆಲುಗು ಮೂಲದ ನಟ ಅಲ್ಲು ಅರ್ಜುನ್ (Allu Arjun) ಅವರು ಸಂದರ್ಶನವೊಂದರಲ್ಲಿ ಕೇರಳದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ನಟ ಅಲ್ಲು ಅರ್ಜುನ್ 'ಮೊದಲನೆಯದಾಗಿ ನನಗೆ ಕೇರಳದ (Kerala) ಜನರು ತುಂಬಾ ಇಷ್ಟ. ಎರಡನೆಯದಾಗಿ ನನಗೆ ಕೇರಳದ ಪ್ರಕೃತಿ ಸೌಂದರ್ಯ ತುಂಬಾ ಇಷ್ಟ. ಮೂರನೆಯದಾಗಿ ನನಗೆ ಇಲ್ಲಿಯ ಫುಡ್ ಇಷ್ಟ' ಎಂದಿದ್ದಾರೆ. ಮತ್ತೆ ನಿರೂಪಕಿ 'ಫುಡ್‌ನಲ್ಲಿ ಮುಖ್ಯವಾಗಿ ಯಾವುದು ಇಷ್ಟ' ಎಂದು ಕೇಳಲು 'ಫಿಶ್' ಎಂದಿದ್ದಾರೆ ನಟ ಅಲ್ಲು ಅರ್ಜುನ್.
ಕೇರಳ ತಮಗೆ ತುಂಬಾ ಇಷ್ಟವಾದ ಜಾಗ ಎಂದು ನಟ ಅಲ್ಲು ಅರ್ಜುನ್ ಅನೇಕ ಬಾರಇ ಹೇಳಿದ್ದಾರೆ. ಅಲ್ಲು ಅರ್ಜುನ್‌ಗೆ ಕೇರಳ ಇಷ್ಟವಾದ ಜಾಗ ಎನ್ನುವುದು ಒಂದು ಕಡೆಯಾದರೆ, ಅಲ್ಲು ಅರ್ಜುನ್ ಎಂದರೆ ಕೇರಳದ ಜನರಿಗೆ ಕೂಡ ತುಂಬಾ ಇಷ್ಟ ಎಂಬುದು ಇನ್ನೊಂದು ಕಡೆ. ಏಕೆಂದರೆ, ತೆಲುಗು ನಟರಾದ ಅಲ್ಲು ಅರ್ಜುನ್ ಅವರಿಗೆ ಕೇರಳದಲ್ಲಿ ತುಂಬಾ ಜನರ ಫ್ಯಾನ್ಸ್ ಇದ್ದಾರೆ. ಅಲ್ಲು ಅರ್ಜುನ್ ಬಂದರೆ ಸಾಕು, ಕೇರಳದ ಜನರು ಅವರನ್ನು ಮುತ್ತಿಕೊಂಡು ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ.
ಪುರುಷ ಪ್ರಧಾನ ಸಿನಿಮಾಗಳಷ್ಟೇ ಬರುತ್ತಿದ್ದವು ಎಂದಿದ್ದಕ್ಕೆ ಥಟ್ಟನೆ ಸ್ಪೆಷಲ್ ಕೌಂಟರ್ ಕೊಟ್ಟ ಸಾಯಿ ಪಲ್ಲವಿ!
ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇರಳದಲ್ಲಿ ಹಾಗೂ ಬೇರೆ ಕಡೆಗಳಲ್ಲಿ ಕೇಳಿದರೂ ನಟ ಅಲ್ಲು ಅರ್ಜುನ್ ಅವರು ಬೇಸರ ಮಾಡಿಕೊಳ್ಳದೇ ಅದೇ ಉತ್ತರವನ್ನು ಸ್ವಲ್ಪ ವಿಭಿನ್ನವಾಗಿ ಮತ್ತೆ ಮತ್ತೆ ಹೇಳುತ್ತಾರೆ. ಕೇರಳದ ಪ್ರಕೃತಿ ಸೌಂದರ್ಯವನ್ನು ಬಹಳಷ್ಟು ಸೆಲೆಬ್ರೆಟಿಗಳೂ ಸೇರಿದಂತೆ ತುಂಬಾ ಜನರು ಇಷ್ಟ ಪಡುತ್ತಾರೆ. ಆದರೆ, ಕೇರಳದ ಜನರು ನಟ ಅಲ್ಲು ಅರ್ಜುನ್ ಅವರನ್ನು ತುಂಬಾ ಇಷ್ಟಪಡುತ್ತಾರೆ, ಆರಾಧಿಸುತ್ತಾರೆ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ.
ಬಿಗ್ ಬಾಸ್ ಕಪ್ ಗೆಲ್ಲದ ನಟಿ ಸಂಗೀತಾ ಶೃಂಗೇರಿ ಅಳೆದೂ ತೂಗಿ ಅದೆಂಥಾ ಮಾತು ಹೇಳ್ಬಿಟ್ರು ನೋಡಿ!
ಒಟ್ಟಿನಲ್ಲಿ, ಪುಷ್ಪಾ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ನಟ ಅಲ್ಲು ಅರ್ಜುನ್ ಅವರು ಕೇರಳದಲ್ಲಿ ಭಾರೀ ಖ್ಯಾತಿ ಹೊಂದಿದ್ದರು. ಈಗ ಪುಷ್ಪಾ ಸಿನಿಮಾ ಬಳಿಕವಂತೂ ನಟ ಅಲ್ಲು ಅರ್ಜುನ್ ಇಡೀ ಭಾರತ ಸೇರಿದಂತೆ, ಜಗತ್ತಿನಾದ್ಯಂತ ಕೂಡ ಸಖತ್ ಫೇಮಸ್ ಆಗಿದ್ದಾರೆ. ಸದ್ಯ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪಾ 2' ಸಿನಿಮಾ ಶೂಟಿಮಗ್ ಹಂತದಲ್ಲಿದೆ. ಈ ಸಿನಿಮಾ ಸಹಜವಾಗಿಯೇ ಪುಷ್ಪಾ ಚಿತ್ರಕ್ಕಿಂತಲೂ ಹೆಚ್ಚು ಕುತೂಹಲ ಕೆರಳಿಸಿದೆ.