ಶ್ರೀದೇವಿಯ ನೆಕ್ಲೇಸ್‌ ಆಕೆ ಸತ್ತ ಕೆಲವೇ ದಿನಗಳಲ್ಲಿ ಐಶ್ವರ್ಯ ಕೊರಳಿಗೆ ಹೇಗೆ ಬಂತು?

ಸಬ್ಯಸಾಚಿ ಅವರು ಡಿಸೈನ್‌ ಮಾಡಿದ್ದ ಆ ದುಬಾರಿ ನೆಕ್ಲೇಸ್‌ ಶ್ರೀದೇವಿಯ ಒಡೆತನದ್ದಾಗಿತ್ತು. ಆದರೆ ಆಕೆ ತೀರಿಕೊಂಡು ಕೆಲವೇ ಸಮಯದ ಬಳಿಕ ಆ ನೆಕ್ಲೇಸನ್ನು  ಐಶ್ವರ್ಯಾ ರೈ ಸಮಾರಂಭವೊಂದರಲ್ಲಿ ಧರಿಸಿದ್ದರು. ಏನಿದರ ಕಥೆ? 

Aishwarya rai bachchan wear the necklace gifted by sridevi after her death bni

ಬಾಲಿವುಡ್ ನಟಿಯರು ಮತ್ತು ಅವರ ಜಗಳಗಳು ಯಾವಾಗಲೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತವೆ. ಜೀನತ್ ಅಮಾನ್- ಮುಮ್ತಾಜ್ ಮತ್ತು ರವೀನಾ ಟಂಡನ್-ಕರಿಷ್ಮಾ ಕಪೂರ್ ಜಗಳದಿಂದ ಕರೀನಾ ಕಪೂರ್ ಖಾನ್-ಬಿಪಾಶಾ ಬಸು ಪೈಪೋಟಿಯವರೆಗೆ, ಇಂತಹ ಗಾಸಿಪ್‌ಗಳು ಯಾವಾಗಲೂ ಬಾಲಿವುಡ್ ರಸಿಕರಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯ. ಶ್ರೀದೇವಿ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವೆಯೂ ಇಂಥ ಮುಸುಕಿನ ಗುದ್ದಾಟಗಳ ಕತೆಗಳಿವೆ. ಆದರೆ ಇವರಿಬ್ಬರ ಪರಸ್ಪರ ಪ್ರೀತಿ, ಆತ್ಮೀಯತೆಯ ಬಗ್ಗೆ ಕೂಡ ಕತೆಗಳಿವೆ. 

ಐಶ್ವರ್ಯಾ ಶ್ರೀದೇವಿಯನ್ನು ಪ್ರೀತಿಯಿಂದ 'ಅಕ್ಕ' ಎಂದು ಕರೆದರು. ಶ್ರೀದೇವಿ ಒಮ್ಮೆ ಐಶ್ವರ್ಯಾಗೆ ಅಮೂಲ್ಯವಾದ ಪೋಲ್ಕಿ ನೆಕ್ಲೇಸ್‌ ಹಾರವನ್ನು ಉಡುಗೊರೆಯಾಗಿ ನೀಡಿದ್ದರು ಎಂದು ನಿಮಗೆ ತಿಳಿದಿದೆಯಾ? ಅದೊಂದು ಬೆರಗುಗೊಳಿಸುವಂಥ ಆಭರಣವಾಗಿತ್ತು. ಡಿಸೈನರ್‌ ಸಬ್ಯಸಾಚಿ ಅದನ್ನು ಡಿಸೈನ್‌ ಮಾಡಿದ್ದರು. ಅದು ಮೂಲತಃ ಶ್ರೀದೇವಿಯದ್ದಾಗಿತ್ತು. ಅದನ್ನು ಅವರು ಮುಂಬೈನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ವಿವಾಹ ಆರತಕ್ಷತೆಯಲ್ಲಿ ಧರಿಸಿದ್ದರು. ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಡಿಸೈನ್‌ ಮಾಡಿದ ಕಪ್ಪು ಮತ್ತು ನೀಲಿ ಬಣ್ಣದ ಸೀರೆಯೊಂದಿಗೆ ಮ್ಯಾಚಿಂಗ್‌ ಮಾಡಿ ಅದನ್ನು ಧರಿಸಿದ್ದರು. 

Latest Videos

ದಕ್ಷಿಣ ಭಾರತದಲ್ಲಿ ಹಿರಿಯ ನಟಿಯರು ಹೊಸಬರು ಅಥವಾ ಕಿರಿಯ ನಟಿಯರಿಗೆ ಆಭರಣ ಮತ್ತು ಸೀರೆಗಳಂತಹ ವೈಯಕ್ತಿಕ ಉಡುಗೊರೆ ನೀಡುವುದು ಒಂದು ಸಂಪ್ರದಾಯ. ಅದಕ್ಕಾಗಿಯೇ ಶ್ರೀದೇವಿ ಅದನ್ನು ಐಶ್‌ಗೆ ಉಡುಗೊರೆಯಾಗಿ ನೀಡಿದ್ದರು. 

ವಿಶೇಷ ಅಂದರೆ ಶ್ರೀದೇವಿ ನಿಧನದ ನಂತರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹದ ಸಂದರ್ಭದಲ್ಲಿ ಐಶ್ವರ್ಯಾ ರೈ ಅದೇ ಹಾರವನ್ನು ಧರಿಸಿದ್ದರು. ಐಶ್ವರ್ಯಾ ಅಭಿಷೇಕ್ ಮತ್ತು ಆರಾಧ್ಯ ಬಚ್ಚನ್ ಅವರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಸಾಂಪ್ರದಾಯಿಕ ಕೆಂಪು ರೇಷ್ಮೆ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದ ಅವರಲ್ಲಿ ಎಲ್ಲರ ಗಮನ ಸೆಳೆದದ್ದು ಅವರು ಧರಿಸಿದ್ದ ಸೊಗಸಾದ ಹಾರ. ಇದು ಅವರ ಒಟ್ಟಾರೆ ಲುಕ್‌ನ ಹೈಲೈಟ್ ಆಯಿತು.

ಇದು ಅವರದೇ ಎಂದು ಎಲ್ಲರೂ ಭಾವಿಸಿದ್ದರು. ಕೆಲವು ವರ್ಷಗಳ ನಂತರ, ಮನೀಶ್ ಮಲ್ಹೋತ್ರಾ ಅದರ ಹಿಂದಿನ ನಿಜವಾದ ಕಾರಣವನ್ನು ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದರು. ಆಗ ಜನ ಏನು ಭಾವಿಸಬೇಕು? ಆತ್ಮೀಯ ಗೆಳತಿ ಶ್ರೀದೇವಿ ಸತ್ತ ದುಃಖ ಸ್ವಲ್ಪವೂ ಇಲ್ಲದೆ ಈ ಹಾರವನ್ನು ಧರಿಸಿಕೊಂಡಿದ್ದಾಳೆಂದೋ? ಅಥವಾ ಶ್ರೀದೇವಿಯ ನೆನಪಿಗಾಗಿ ಇದನ್ನು ತೊಟ್ಟಿದ್ದಾಳೆಂದೋ? ಜನ ಆಡಿಕೊಂಡರು. ಆದರೆ ಐಶ್ ಕೇರ್‌ ಮಾಡಲಿಲ್ಲ. ಇದೀಗ ಶ್ರೀದೇವಿ ಹಾಗೂ ಐಶ್‌ ಸ್ವತ್ತಾಗಿದೆ. 

ಶ್ರೀದೇವಿ ಮತ್ತು ಐಶ್ವರ್ಯ ರೈ ಒಂದೇ ಕಾಲದ ನಟಿಯರಾದರೂ, ಜೊತೆಯಾಗಿ ನಟಿಸುವ ಅವಕಾಶ ಅವರಿಗೆ ಒದಗಿ ಬರಲೇ ಇಲ್ಲ. ಐಶುಗಿಂತ ಶ್ರೀದೇವಿ ಸ್ವಲ್ಪ ದೊಡ್ಡವರು. ಐಶುಗೆ ಹಮ್‌ ದಿಲ್‌ ದೇ ಚುಕೆ ಸನಂ ಫಿಲಂನ ನಟನೆಗಾಗಿ ದೊರೆತ ಮೊದಲ ಫಿಲಂಫೇರ್‌ ಅವಾರ್ಡನ್ನು ಶ್ರೀದೇವಿ ಕೈಯಿಂದ ಕೊಡಿಸಲಾಗಿತ್ತು.  

ನೋಡಲು ಚೆನ್ನಾಗಿಲ್ಲ ಅಂತ 17 ವರ್ಷ ಕಣ್ಣೀರಿಟ್ಟಿದ್ದೀನಿ, ಅಮ್ಮನಿಂದ ಬದಲಾದೆ: ನಟಿ ಶಿಲ್ಪಾ ಶೆಟ್ಟಿ

ದೇಶಾದ್ಯಂತ ಜನಪ್ರಿಯಳಾಗಿದ್ದ ಶ್ರೀದೇವಿಯ ವೈಯಕ್ತಿಕ ಜೀವನದ ಬಗ್ಗೆ ಗಾಢವಾದ ಸಂಶಯಾಸ್ಪದ ಮೌನ ಇದೆ. 24 ಫೆಬ್ರವರಿ 2018ರಂದು ಆಕೆಯ ಹಠಾತ್ ಸಾವಿನ ಸುದ್ದಿ ಕೋಟ್ಯಂತರ ಭಾರತೀಯರಿಗೆ ಶಾಕ್‌ ತಂದಿತು. ಆಕೆ ಇಂದು ಬದುಕಿದ್ದರೆ ಆಕೆಗೆ 60 ವರ್ಷ ವಯಸ್ಸಾಗುತ್ತಿತ್ತು. ಕುಟುಂಬದ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಆಕೆ ಕೊನೆಯದಾಗಿ ತನ್ನ ಹೋಟೆಲ್ ರೂಮಿನ ಬಾತ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಶ್ರೀದೇವಿ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು 'ಉಪವಾಸ'ವನ್ನು ರೂಢಿಯಾಗಿಸಿಕೊಂಡಿದ್ದಳು. ಬಾಡಿ ಶೇಪ್‌ ಆಕಾರದಲ್ಲಿ ಉಳಿಯಲು ಗಂಟೆಗಟ್ಟಲೆ ಹಸಿದುಕೊಂಡು ಇರುತ್ತಿದ್ದಳು. ಚಲನಚಿತ್ರ ಸೆಟ್‌ಗಳಲ್ಲಿ ಹಲವಾರು ಬಾರಿ ತಲೆ ತಿರುಗಿ ಬಿದ್ದಿದ್ದಳು. ಹಲವು ಬಾರಿ ವೈದ್ಯರು ಹೀಗೆ ಉಪವಾಸ ಮಾಡಬೇಡ ಅಂತ ಹೇಳಿದರೂ ನಿರ್ಲಕ್ಷಿಸಿದಳು. ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿದಳು.

ವಿಚ್ಛೇದನದ ಬಳಿಕ 200 ಕೋಟಿ ಪರಿಹಾರ ಕೊಡ್ತೀನಿ ಅಂದ್ರು ಬೇಡ ಎಂದ ಖ್ಯಾತ ನಟಿ
 

vuukle one pixel image
click me!