
ಮಾಜಿ ವಿಶ್ವಸುಂದರಿ, ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ (Aishwarya Rai) ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ಐಶ್ವರ್ಯಾ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಅಭಿಮಾನಿಗಳ ಗಮನ ಸೆಳೆದಿದ್ದರು. ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಬ್ಯುಸಿಯಾಗಿರುವ ಐಶ್ವರ್ಯಾ ರೈ ಅನೇಕ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಮಗಳ ಜೊತೆ ಸದಾ ಕಾಣಿಸಿಕೊಳ್ಳುವ ನಟಿ ಐಶ್ವರ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಐಶ್ವರ್ಯಾ ಅವರ ಹಳೆಯ ಪಾಸ್‌ಪೋರ್ಟ್ (Passport) ವೈರಲ್ ಆಗಿದೆ.
ಪಾಸ್‌ಪೋರ್ಟ್‌ನಲ್ಲಿರುವ ಐಶ್ವರ್ಯಾ ರೈ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಪಾಸ್‌ಪೋರ್ಟ್, ಆಧಾರ ಕಾರ್ಡ್ ಹಾಗೂ ಸರ್ಕಾರಿ ದಾಖಲೆಯಲ್ಲಿರುವ ಪೋಟೋಗಳು ವಿಚಿತ್ರವಾಗಿರುತ್ತವೆ. ಇದು ನಿಜಕ್ಕೂ ನಾವೇನಾ ಎಂದು ಅಚ್ಚರಿ ಪಡುವ ಹಾಗೆ ಇರುತ್ತದೆ. ಆದರೆ ಐಶ್ವರ್ಯಾ ರೈ ಪಾಸ್‌ಪೋರ್ಟ್ ನಲ್ಲಿರುವ ಫೋಟೋ ಸುಂದರವಾಗಿದೆ. ಅಭಿಮಾನಿಗಳು ಐಶ್ವರ್ಯಾ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬ್ಯೂಟಿ ಜೊತೆಗೆ ಐಶ್ವರ್ಯಾ ಪಾಸ್‌ಪೋರ್ಟ್ ಕರ್ನಾಟಕಕ್ಕೂ ನಂಟಿದೆ. ಐಶ್ವರ್ಯಾ ರೈ ಮುಂಬೈನಲ್ಲೇ ಹುಟ್ಟಿ ಬೆಳೆದವರು. ತಂದೆ-ತಾಯಿ ಕರ್ನಾಟಕದ ಕರಾವಳಿಯವರು. ಆದರೆ ಪಾಸ್‌ಪೋರ್ಟ್‌ನಲ್ಲಿ ತನ್ನ ವಿಳಾಸವನ್ನು ಕರ್ನಾಟಕ, ಮಂಗಳೂರು ಎಂದಿದೆ. ಇದು ಕರ್ನಾಟಕದ ಅಭಿಮಾನಿಗಳಿಗೆ ಖುಷಿ ತಂದಿದೆ. ಹುಟ್ಟಿದ ವಿಳಾಸ ಕರ್ನಾಟಕ ಎಂದಿದೆ. ವಾಸವಿರುವ ವಿಳಾಸ ಮುಂಬೈ ಅಂತ ಇದೆ.
ಐಶ್ವರ್ಯಾ ತುಳುನಾಡಿನವರು, ಅವರ ಮಾತೃಭಾಷೆ ತುಳು. ಕರ್ನಾಟಕಕ್ಕೆ ಬಂದರೆ ಐಶ್ವರ್ಯಾ ತುಳುವಿನಲ್ಲೇ ಮಾತನಾಡುವುದು. ಐಶ್ವರ್ಯಾ ಅಪರೂಪಕ್ಕೊಮ್ಮೆ ಮಂಗಳೂರಿಗೆ ಎಂಟ್ರಿ ಕೊಡುತ್ತಾರೆ. ಕುಟುಂಬದವರ ಕಾರ್ಯಕ್ರಮದಲ್ಲಿ ಐಶ್ವರ್ಯಾ ಭಾಗಿಯಾಗುತ್ತಾರೆ. ಇತ್ತೀಚಿಗಷ್ಟೆ ಐಶ್ವರ್ಯಾ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಪತಿ ಅಭಿಷೇಕ್ ಮತ್ತು ಮಗಳ ಜೊತೆ ತನ್ನ ಕುಟುಂಬದ ಸಮಾರಂಭದಲ್ಲಿ ಮಿಂಚಿದ್ದರು.
34 ವರ್ಷಗಳ ಹಿಂದೆ ಐಶ್ವರ್ಯ ರೈ ಹೇಗಿದ್ರು ? ವಿಶ್ವ ಸುಂದರಿಯ ಹಳೇ ಫೋಟೋಗಳು ವೈರಲ್!
ಐಶ್ವರ್ಯಾ ರೈ ಸಿನಿ ಪಯಣ
ಐಶ್ವರ್ಯಾ ರೈ ಸಿನಿಮಾ ವಿಚಾರಕ್ಕೆ ಬರುವುದಾದರೆ ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 1997ರಲ್ಲಿ ಬಂದ ಈ ಸಿನಿಮಾಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಐಶ್ವರ್ಯಾ ಹಿಂದಿ ಸಿನಿಮಾರಂಗಕ್ಕೆ ಕಾಲಿಟ್ಟರು. ಬಾಬಿ ಡಿಯೋಲ್ ಜೊತೆ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಮಿಂಚಿದರು. ನಂತರ ಅನೇಕ ಸಿನಿಮಾಗಳಲ್ಲಿ ಐಸ್ವರ್ಯಾ ರೈ ಮಿಂಚಿದರು. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಐಶ್ವರ್ಯಾ ಮದುವೆ ಬಳಿಕ ಸಿನಿಮಾಗಳ ಸಂಖ್ಯೆ ಕೊಂಚ ಕಡಿಮೆ ಆಯಿತು. ಮಗಳು ಆರಾಧ್ಯಗೆ ಜನ್ಮ ನೀಡಿದ ಬಳಿಕ ಐಶ್ವರ್ಯಾ 4 ಸಿನಿಮಾಗಳಲ್ಲಿ ನಟಿಸಿದರು. ಜಸ್ಬಾ, ಸರ್ಬ್ಜಿತ್, ಏ ದಿಲ್ ಹೇ ಮುಷ್ಕಿಲ್ ಹಾಗೂ ಫನ್ನೆ ಖಾನ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಟ್ಟೆ ಸ್ಟೈಲ್ ಬದಲಾಯಿಸಮ್ಮ: ಅನಾರ್ಕಲಿ ಧರಿಸಿದ ಐಶ್ವರ್ಯ ರೈ ಟ್ರೋಲ್
ಫನ್ನೆ ಖಾನ್ ಸಿನಿಮಾ ರಿಲೀಸ್ ಆಗಿ 4 ವರ್ಷಗಲಾಗಿದೆ. 2018ರಲ್ಲಿಈ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಳಿಕ ಐಶ್ವರ್ಯಾ ಮತ್ತೆ ತೆರೆಮೇಲೆ ಬಂದಿಲ್ಲ. ಇದೀಗ ಮತ್ತೆ ತಮಿಳು ಸಿನಿಮಾ ಪೊನ್ನಿಯನ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ನಂದಿನಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಐಶ್ವರ್ಯಾ ಲುಕ್ ಲೀಕ್ ಆಗಿದ್ದು ರಾಯಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಸದ್ಯದಲ್ಲೇ ಐಶ್ವರ್ಯಾ ಪೊನ್ನಿಯನ್ ಸೆಲ್ವನ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.