
ಖ್ಯಾತ ಗಾಯಕ ಬಿ ಪ್ರಾಕ್ (B Praak) ಮತ್ತು ಮೀರಾ ಬಚ್ಚನ್ (Meera Bachan) ದಂಪತಿ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಬಿ ಪ್ರಾಕ್ ಪತ್ನಿ ಮೀರಾ ಬಚ್ಚನ್ ಡಿಲಿವರಿ ವೇಳೆ ಮಗು ಸಾವನ್ನಪ್ಪಿದೆ. ದುಃಖದ ವಿಚಾರವನ್ನು ಬಿ ಪ್ರಾಕ್ ಮತ್ತು ಪತ್ನಿ ಮೀರಾ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಮ್ಮ ಮಗು ಹುಟ್ಟುವಾಗ ನಿಧನಹೊಂದಿದೆ ಎಂದು ಹೇಳಲು ತುಂಬಾ ನೋವಾಗುತ್ತಿದೆ ಎಂದಿದ್ದಾರೆ. ಪೋಷಕರಾಗಿ ನಮಗೆ ಇದು ತುಂಬಾ ದುಃಖದ ಹಂತವಾಗಿದೆ. ನಮಗೆ ಬೆಂಬಲ ನೀಡಿದ ನಮ್ಮ ಮಗುಗಾಗಿ ಕೊನೆಯವರೆಗೂ ಹೋರಾಡಿದ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಿಂದಿಗೆ ಧನ್ಯವಾದಗಳು. ನಾವು ಮಗುವನ್ನು ಕಳೆದುಕೊಂಡು ಕುಗ್ಗಿಹೋಗಿದ್ದೀವಿ. ನಮ್ಮ ಖಾಸಗಿತನಕ್ಕೆ ಗೌರವಕೊಡಿ ಎಂದು ಕೇಳಿಕೊಂಡಿದ್ದಾರೆ.
ಬಿ ಪ್ರಾಕ್ ದಂಪತಿಗೆ ಅನೇಕರು ಕಾಮೆಂಟ್ ಮಾಡಿ ಹೆಚ್ಚು ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ನಿರ್ಮಾಪಪಕ ಕರಣ ಜೋಹರ್ ಕಾಮೆಂಟ್ ಮಾಡಿ, ನಿಮ್ಮಬ್ಬರಿಗೂ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ನೀತಿ ಮೋಹನ್ ಕೂಡ ಪ್ರತಿಕ್ರಿಯೆ ನೀಡಿ ಪ್ರಾರ್ಥಿಸಿದ್ದಾರೆ. ನೀವಿಬ್ಬರು ಈ ಸಮಯವನ್ನು ಹೇಗೆ ಎದುರಿಸುತ್ತೀರಿ ಎಂದು ನನಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಬಿ ಪ್ರಾಕ್ ದಂಪತಿ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗ ಪಡಿಸಿದ್ದರು. ಬಿ ಪ್ರಾಕ್ ದಂಪತಿ ಸುಂದರ ಫೋಟೋ ಶೇರ್ ಮಾಡಿ ಗರ್ಭಿಣಿ ಆಗಿರುವ ಸಂತಸದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅಂದಹಾಗೆ ಬಿ ಪ್ರಾಕ್ 2019ರಲ್ಲಿ ಮೀರಾ ಬಚ್ಚನ್ ಜೊತೆ ಹಸೆಮಣೆ ಏರಿದರು. 2020ರಲ್ಲಿ ಮೀರಾ ಬಚ್ಚನ್ ಮೊದಲ ಮಗುವಿಗೆ ಜನ್ಮ ನೀಡಿದರು. ಇದೀಗ 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ಬಿ ಪ್ರಾಕ್ ದಂಪತಿ ಮಗುವನ್ನು ಕಳೆದುಕೊಂಡು ದೊಡ್ಡ ಆಘಾತದಲ್ಲಿದ್ದಾರೆ.
ಕೆಲಸದ ವಿಚಾರಕ್ಕೆ ಬರುವುದಾದರೆ ಬಿ ಪ್ರಾಕ್ ಬಾಲಿವುಡ್‌ನ ಅನೇಕ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಇತ್ತೀಚಿಗೆ ಬಿ ಪ್ರಾಕ್ ಹಾಡಿರುವ ಹಾಡುಗಳು ಸೂಪರ್ ಹಿಟ್ ಆಗಿವೆ. ಅಕ್ಷಯ್ ಕುಮಾರ್ ನಟನೆಯ ಕೇಸರಿ, ಗುಡ್ ನ್ಯೂಸ್, ಶೇರ್‌ಶಾ ಬಚ್ಚನ್ ಪಾಂಡೆ ಸೇರಿದ್ದಂತೆ ಅನೇಕ ಹಾಡುಗಳಿಗೆ ಧ್ವನಿನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.