ಅಳಿಯನ ಮುಂದೆ ಇದೆಂಥ ಮಾತನಾಡಿದ್ರು ಸೋನಾಕ್ಷಿ ತಾಯಿ? ಪೂನಂ ಸಿನ್ಹಾ ವಿಡಿಯೋ ವೈರಲ್

Published : Nov 29, 2024, 06:07 PM IST
ಅಳಿಯನ ಮುಂದೆ ಇದೆಂಥ ಮಾತನಾಡಿದ್ರು ಸೋನಾಕ್ಷಿ ತಾಯಿ? ಪೂನಂ ಸಿನ್ಹಾ ವಿಡಿಯೋ ವೈರಲ್

ಸಾರಾಂಶ

ಸೋನಾಕ್ಷಿ ಸಿನ್ಹಾ ಕುಟುಂಬ, ಜಹೀರ್ ಇಕ್ಬಾಲ್ ಅವರನ್ನು ಈಗ್ಲೂ ಒಪ್ಪಿಕೊಂಡಂತಿಲ್ಲ. ಎಲ್ಲರ ಮುಂದೆ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಪೂನಂ ಸಿನ್ಹಾ. ಈ ವಿಡಿಯೋ ಈಗ ವೈರಲ್ ಆಗಿದೆ.  

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ (Bollywood actress Sonakshi Sinha and Zaheer Iqbal) ಮದುವೆ (wedding) ಯಾಗಿ ಆರು ತಿಂಗಳಾಗ್ತಾ ಬಂತು. ಆದ್ರೆ ಅವರ ಸುದ್ದಿ ಮಾತ್ರ ಕಡಿಮೆ ಆಗಿಲ್ಲ. ನವಜೋಡಿ ಹೋದಲ್ಲೆಲ್ಲ ಪಾಪರಾಜಿಗಳು ಕ್ಯಾಮರಾ ಹಿಡಿತಾರೆ. ಸೋನಾಕ್ಷಿ, ಇಕ್ಬಾಲ್ ಮದುವೆ ಆಗೋದು ಆಕೆ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ ಎಂಬ ಸುದ್ದಿಯೊಂದು ಮದುವೆ ಟೈಂನಲ್ಲಿ ಹರಡಿತ್ತು. ನಂತ್ರ ಮದುವೆಯಲ್ಲಿ ಪಾಲ್ಗೊಂಡಿದ್ದ ಸೋನಾಕ್ಷಿ  ತಂದೆ, ಹಿರಿಯ ನಟ ಶತ್ರುಘ್ನ ಸಿನ್ಹಾ (Shatrughan Sinha) ಮತ್ತು ತಾಯಿ ಪೂನಂ ಸಿನ್ಹಾ (Poonam Sinha) ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಆದ್ರೀಗ ಮತ್ತೆ ಸಿನ್ಹಾ ಕುಟುಂಬಕ್ಕೆ ಜಹೀರ್ ಇಷ್ಟವಿರಲಿಲ್ಲವಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಪೂನಂ ಸಿನ್ಹಾ ನೀಡಿದ ಹೇಳಿಕೆ. ಅಳಿಯ ಜಹೀರ್ ಮೇಲೆ ಪೂನಂ ಸಿನ್ಹಾಗೆ ಭರವಸೆ ಇಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಿದೆ. ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಕೆದಾರರು ನಾನಾ ಕಮೆಂಟ್ ಶುರು ಮಾಡಿದ್ದಾರೆ.

ಸೋನಾಕ್ಷಿ ಸಿನ್ಹಾ, ಜಹೀರ್ ಖಾನ್, ಪೂನಂ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ, ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಪಿಲ್ ಜೊತೆ ತಮಾಷೆ ಮಾಡ್ತಾ ಅನೇಕ ವಿಷ್ಯಗಳನ್ನು ಇವರು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪೂನಂ ಸಿನ್ಹಾ, ತಮ್ಮ ತಾಯಿ, ಪ್ರೀತಿ, ಮದುವೆ ಬಗ್ಗೆ ಮಾತನಾಡ್ತಾ, ಜಹೀರ್ ಮೇಲೆ ಪರೋಕ್ಷವಾಗಿ ದಾಳಿ ಮಾಡಿದ್ದಾರೆ. 

ಬ್ರೇಕ್ ಅಪ್ ನಂತ್ರ ಗಳಿಕೆಗೆ ಹೊಸ ದಾರಿ ಹುಡುಕಿದ ಮಲೈಕಾ ಅರೋರಾ!

ಏನ್ ಹೇಳಿದ್ರು ಪೂನಂ ಸಿನ್ಹಾ? : ನನ್ನ ಅಮ್ಮ, ನಿನಗಿಂತ ಹೆಚ್ಚು ನಿನ್ನನ್ನು ಪ್ರೀತಿ ಮಾಡುವ ವ್ಯಕ್ತಿಯನ್ನು ಮದುವೆಯಾಗು ಎಂದಿದ್ದರು. ನಾನು ಅದನ್ನು ಕೇಳಿದೆ. ಪಾಲಿಸಿದ್ದೇನೆ ಕೂಡ. ಆದ್ರೆ ನನ್ನ ಮಗಳು ಏನು ಮಾಡಿದ್ದಾಳೆ? ಪೂನಂ ಸಿನ್ಹಾ ಹೀಗೆ ಹೇಳ್ತಿದ್ದಂತೆ ಜಹೀರ್ ಹಾಗೂ ಸೋನಾಕ್ಷಿ ಖುಷಿಯಾಗ್ತಾರೆ. ಆದ್ರೆ ಮಾತು ಮುಂದುವರೆಸಿದ ಪೂನಂ ಸಿನ್ಹಾ,  ಸೋನಾಕ್ಷಿ, ತಾನು ಹೆಚ್ಚು ಪ್ರೀತಿ ಮಾಡುವ ವ್ಯಕ್ತಿಯನ್ನು ಮದುವೆ ಆಗಿದ್ದಾಳೆ ಎನ್ನುತ್ತಾರೆ. ಇದನ್ನು ಕೇಳ್ತಿದ್ದಂತೆ ಸೋನಾಕ್ಷಿ ಹಾಗೂ ಜಹೀರ್ ಸ್ವಲ್ಪ ಬೇಸರಗೊಳ್ತಾರೆ. ಆದ್ರೆ ಮಧ್ಯ ಪ್ರವೇಶ ಮಾಡಿದ ಸೋನಾಕ್ಷಿ, ಇದರ ಬಗ್ಗೆ ಚರ್ಚೆ ಆಗ್ಬೇಕು. ಯಾಕೆಂದ್ರೆ, ನಾನು ಹೆಚ್ಚು ಪ್ರೀತಿ ಮಾಡ್ತೇನೆ ಎಂದು ನಾನು ನಂಬುತ್ತೇನೆ. ಜಹೀರ್, ತಾನು ಹೆಚ್ಚು ಪ್ರೀತಿ ಮಾಡ್ತೇನೆ ಎನ್ನುತ್ತಾರೆ. ಯಾರು ಹೆಚ್ಚು ಎಂಬುದನ್ನು ಪರೀಕ್ಷೆ ಮಾಡುವವರು ಯಾರು ಎಂದು ಸೋನಾಕ್ಷಿ ಕೇಳ್ತಾರೆ. 

ಐಶ್ವರ್ಯ ರೈ ಮುಂದಿದ್ದ ಬಚ್ಚನ್ ಸರ್ನೇಮ್ ಎಲ್ಲಿ? ಡಿವೋರ್ಸ್ ಕನ್ಫರ್ಮ್?

ಪೂನಂ ಸಿನ್ಹಾ ಈ ವಿಡಿಯೋ ವೈರಲ್ ಆಗಿದೆ. ಬಳಕೆದಾರರು ಸೋನಾಕ್ಷಿ, ಪತಿ ಪರ ಮಾತನಾಡಿದ್ದನ್ನು ಮೆಚ್ಚಿಕೊಂಡಿದ್ದಾರೆ. ಪೂನಂ ನಿಲುವನ್ನು ಅನೇಕರು ಖಂಡಿಸಿದ್ದಾರೆ. ಇಡೀ ಎಪಿಸೋಡ್ ತುಂಬಾ ನೋವಿನಿಂದ ಕೂಡಿತ್ತು, ಸಿನ್ಹಾ ಅವರದ್ದು ಎಂತಹ ವಿಷಕಾರಿ ಕುಟುಂಬ ಎಂಬುದು ತಿಳಿಯಿತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಕಪಿಲ್ ಶೋನಲ್ಲಿ ಜಹೀರ್ ಒಂದೇ ಒಂದು ಮಾತನಾಡಿಲ್ಲ. ಸಿನ್ಹಾ ಕುಟುಂಬ ಇದಕ್ಕೆ ಅವಕಾಶವನ್ನೂ ನೀಡಿಲ್ಲ. ಮಗಳ ಮದುವೆಯಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರೂ ಜಹೀರ್ ಅವರನ್ನು ಕುಟುಂಬ ಮನಸ್ಸಿನಿಂದ ಒಪ್ಪಿಕೊಂಡಿಲ್ಲ. ಎರಡು ಕುಟುಂಬದ ಮಧ್ಯೆ ಭಿನ್ನಾಭಿಪ್ರಾಯ ಹಾಗೆಯೇ ಇದೆ ಎಂದು ಕೆಲವರು ಅನುಮಾನಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಜೂನ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜಹೀರ್ ಹಾಗೂ ಸೋನಾಕ್ಷಿ ಕಳೆದ 7 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಈ ವರ್ಷ ಇಬ್ಬರು ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ನಂತ್ರ ಪಾರ್ಟಿ ಏರ್ಪಡಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It
ಬಾಲಿವುಡ್‌ಗೆ ಕಾಲಿಡಲಿರೋ 'ಬೀರ್‌ಬಲ್' ಚತುರೆ.. 'ಕಾಂತಾರ 'ಕನಕವತಿ' ಹಿಂದಿ ಸಿನಿಮಾ ಯಾವುದು?