ಶಾರುಖ್ ಜೊತೆಗಿರುವ ಐಶ್ ವಿಡಿಯೋ ವೈರಲ್; ಈ ಪಂಚರಂಗಿ ಆಟ ಸಾಕು ಅಂತಿರೋ ನೆಟ್ಟಿಗರು!

By Shriram Bhat  |  First Published Nov 14, 2024, 9:33 PM IST

ಐಶ್ವರ್ಯಾ ರೈ ಈ ವಯಸ್ಸಲ್ಲಿ ಅದ್ಯಾಕೆ ಇಷ್ಟೊಂದು ಸುದ್ದಿಗೆ ಬಿದ್ದಿದ್ದಾರೋ ಎಂಬುದೇ ಚರ್ಚೆ. ಏಕೆಂದರೆ, ಈಗ ಐಶೂ ಮಗಳು ಆರಾಧ್ಯ ಬಚ್ಚನ್ ವಯಸ್ಸಿಗೆ ಬಂದಿದ್ದಾರೆ. ಈಗ ಆರಾಧ್ಯ ಸುದ್ದಿಯಾಗುವ ಬದಲು ಅವರಮ್ಮ ಐಶ್ವರ್ಯಾ ರೈ ಸುದ್ದಿ ಆಗುತ್ತಿರುವುದು ಹಲವರಿಗೆ.. 


ಇತ್ತೀಚೆಗೆ ನಟಿ ಐಶ್ವರ್ಯಾ ರೈ ಬಚ್ಚನ್ (Aishwrya Rai Bachchan) ಭಾರೀ ಸುದ್ದಿಯಲ್ಲಿದ್ದಾರೆ. ಕಾರಣ, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ವಿಚ್ಛೇಧನ ತೆಗೆದುಕೊಳ್ಳಿದ್ದಾರೆ ಎಂಬ ನ್ಯೂಸ್. ಈ ನ್ಯೂಸ್ ಅದೆಲ್ಲಿಗೆ ತಲುಪಿದೆ ಎಂದರೆ, ನಟಿ ಐಶ್ವರ್ಯಾ ರೈಗೆ ಡಾಕ್ಟರ್ ಒಬ್ಬರ ಜೊತೆ ಸಂಬಂಧವಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ನಟ ಹಾಗೂ ಐಶೂ ಪತಿ ಅಭಿಷೇಕ್‌ ಬಚ್ಚನ್‌ಗೆ ಯಂಗ್ ನಟಿಯಬ್ಬರ ಜೊತೆ ಸಂಬಂಧ ಏರ್ಪಟ್ಟಿದೆ ಎನ್ನುವ ಸುದ್ದಿ ಹಬ್ಬಿದೆ. ನಿಜವೋ ಸುಳ್ಳೋ ಗೊತ್ತಿಲ್ಲ, ಸುದ್ದಿಯಂತೂ ಇದೆ!. 

ಇದೇ ವೇಳೆ, ನಟ ಶಾರುಖ್ ಖಾನ್ (Shah Rukh Khan) ಜೊತೆ ನಟಿ ಐಶ್ವರ್ಯಾ ರೈ ನಟಿಸಿರುವ ವೀಡಿಯೋ ಒಂದು ಸಖತ್ ವೈರಲ್ಆಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಈ ವಿಡಿಯೋ ಈಗ್ಯಾಕೆ ಇಷ್ಟೊಂದು ವೈರಲ್ಆಗ್ತಿದೆ. ಏನೋ ಇದ್ದಿರಬಹುದಾ ಅಂತಿದಾರೆ! ಆದ್ರೆ ಅದು 2002ರಲ್ಲಿ ನಟಿ ಐಶ್ವರ್ಯಾ ರೈ ನಟಿಸಿದ್ದ 'ದೇವದಾಸ್' ಚಿತ್ರದ ಹಾಡು. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ ಅಷ್ಟೇ. ಯಾರೋ ಹಳೆಯ ಹಾಡು ಇಷ್ಟಪಟ್ಟು ಶೇರ್ ಮಾಡಿದ್ದಾರೆ. ಐಶೂ ನೋಡಲು ನೆಟ್ಟಿಗರು ಮುಗಿಬಿದ್ದಿದ್ದಾರೆ ಅಷ್ಟೇ!

Tap to resize

Latest Videos

undefined

ದರ್ಶನ್-ಉಪೇಂದ್ರ ಜೋಡಿ 'ಕಪಾಲಿ' ಚಿತ್ರ ಸದ್ಯದಲ್ಲೇ ಶುರು; ಈ ಶುಭ ಸುದ್ದಿಗೆ ಬೆಚ್ಚಿಬಿದ್ದ ಕರುನಾಡು!

ಸದ್ಯ ಐಶ್ವರ್ಯಾ ರೈ ಈ ವಯಸ್ಸಲ್ಲಿ ಅದ್ಯಾಕೆ ಇಷ್ಟೊಂದು ಸುದ್ದಿಗೆ ಬಿದ್ದಿದ್ದಾರೋ ಎಂಬುದೇ ಚರ್ಚೆ. ಏಕೆಂದರೆ, ಈಗ ಐಶೂ ಮಗಳು ಆರಾಧ್ಯ ಬಚ್ಚನ್ ವಯಸ್ಸಿಗೆ ಬಂದಿದ್ದಾರೆ. ಈಗ ಆರಾಧ್ಯ ಸುದ್ದಿಯಾಗುವ ಬದಲು ಅವರಮ್ಮ ಐಶ್ವರ್ಯಾ ರೈ ಸುದ್ದಿ ಆಗುತ್ತಿರುವುದು ಹಲವರಿಗೆ ಬೇಸರ ಮೂಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಯಾರೋ ಅವರ ನಟನೆಯ ಹಳೆಯ ಸಿನಿಮಾಗಳ ವಿಡಿಯೋ ಶೇರ್ ಮಾಡಿದರೆ ಅವರೇನು ಮಾಡುವುದು? ಆದರೆ, ಚರ್ಚೆ ಮಾಡೋರಿಗೆ ಅವೆಲ್ಲಾ ಮ್ಯಾಟರ್ ಗೊತ್ತಿಲ್ಲ. ಸುಮ್ನೆ ಈ 50-51ರ ವಯಸ್ಸಲ್ಲಿ ಬೇಕಿತ್ತಾ ಇದೆಲ್ಲಾ ಅಂತಿದಾರೆ. 

ಒಂದು ಕಾಲದಲ್ಲಿ ವಿಶ್ವ ಸುಂದರಿ, ಬಳಿಕ ಬಾಲಿವುಡ್ ಸ್ಟಾರ್ ನಟಿ. ಆನಂತರ ಮದುವೆ, ಮಗಳು. ಸುಖ ಸಂಸಾರ ಸಾಗುತ್ತಿರುವ ಕಾಲದಲ್ಲಿ ಈ ಡಿವೋರ್ಸ್, ಅನೈತಿಕ ಸಂಬಂಧ, ಇಂತಹ ಸುದ್ದಿಗಳ ಅಗತ್ಯವೇ ಇರಲಿಲ್ಲ ಎಂಬುದು ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಅಭಿಮಾನಿಗಳ ಮನದಾಳದ ಮಾತು! ಈ ನಟಿಯರೆಲ್ಲಾ ಪಂಚರಂಗಿಗಳು ಎಂಬಮಾತು ಐಶೂಗೆ ಬೇಕಿರಲಿಲ್ಲ ಅಂತಿದಾರೆ ಅವ್ರ ಫ್ಯಾನ್ಸ್‌!. ಶಾರುಖ್‌ಗೂ ಐಶೂಗೂ ಯಾವುದೇ ಸ್ನೇಹ ಇಲ್ಲ ಎಂಬುದು ಎಲ್ಲರಿಗೂ ಗೊತ್ತು! ಇದು ಸುಮ್ಮನೆ ಟೈಂಪಾಸ್ ಚರ್ಚೆ ಅಷ್ಟೇ!

ತಮಾಷೆ, ಆಟಗಳು ಮುಗಿದಿವೆ, ಈಗ ಬಿಸಿನೆಸ್ ಶುರು ಮಾಡೋಣ: ಕ್ಯಾ ಬಾತ್ ಹೈ ರಶ್ಮಿಕಾ ಅಂದ್ರಾ?

ಅದೇನೇ ಇರಲಿ, ಒಂದು ಸುದ್ದಿ ಬಂದ್ರೆ ಸಾಕು, ಅದಕ್ಕೆ ಫಾಲೋ ಅಪ್ ಎಂಬಂತೆ ಹಲವಾರು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗುತ್ತವೆ. ಅದು ಐಶ್ವರ್ಯಾ ರೈ ಅಂತಲ್ಲ, ಎಲ್ಲರ ಜೀವನದಲ್ಲೂ ಇದ್ದಿದ್ದೇ. ಆದರೆ, ಆಗ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿದ್ದ ನಟಿ ಈಗ ಹೀಗೆಲ್ಲ ಸುದ್ದಿ ಆಗುತ್ತಿರುವುದು ಅವರ ಫ್ಯಾನ್ಸ್‌ಗಳ ಬೇಸರಕ್ಕೆ ಕಾರಣವಾಗಿದೆ. ಆದರೆ ಮಾಡುವುದೇನು? ಸೋಷಿಯಲ್ ಮೀಡಿಯಾ ಎಂದರೇನೇ ಅದು ಸಾರ್ವಜನಿಕರ ಆಸ್ತಿ. ಈ ಪಬ್ಲಿಕ್ ಪ್ರಾಪರ್ಟಿಗೆ ಬ್ರೇಕ್ ಹಾಕೋದು ಹೇಗೆ? 

click me!