ಕೊನೆಗೂ ಬಯಲಾಯ್ತು ಸಿಲ್ಕ್ ಸ್ಮಿತಾ ಸಾವಿನ ರಹಸ್ಯ; ಯಾವ ಅನೈತಿಕ ಸಂಬಂಧಕ್ಕೆ ತೆತ್ತ ಬೆಲೆ?

By Shriram Bhat  |  First Published Nov 13, 2024, 6:49 PM IST

ನಟಿ ಸಿಲ್ಕ್ ಸ್ಮಿತಾ ಕೇವಲ 35ನೇ ವಯಸ್ಸಿಗೇ ಅಸು ನೀಗಿದ್ದಾರೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ ಅವರು ಮಿತಿಮೀರಿ... ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆ ಬಗ್ಗೆ ಹಲವು ಜನರಿಗೆ ಅನುಮಾನವಿದೆ. ಅವರೇ ಅದನ್ನು ಮಾಡಿರಲಿಕ್ಕಿಲ್ಲ, ಬೇರೆ ಯಾರೋ ಒತ್ತಾಯಪೂರ್ವಕವಾಗಿ ಅವರಿಗೆ ಹಾಗೆ ಮಾಡಿಸಿ.. 


ತಮಿಳು ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ (Bayilvan Ranganathan) ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹಲವಾರು ಪ್ರಸಿದ್ಧ ನಟನಟಿಯರನ್ನು ಗುರುಯಾಗಿಸಿಕೊಂಡು ಸುದ್ದಿ ಮಾಡುತ್ತಿದ್ದಾರೆ. ಅದಕ್ಕೆ ಹಲವಾರು ನಟಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ರಂಗನಾಥ್ನ್ ಅವರು ತಮ್ಮ ಕೆಲಸವನ್ನೇನೂ ನಿಲ್ಲಿಸಿಲ್ಲ. ಬದಲಿಗೆ ಈಗ ಲೇಟೇಸ್ಟ್ ಎನ್ನುವಂತೆ ಒಂದು ಕಾಲದ ದಂತದ ಬೊಂಬೆ ನಟಿ ಸಿಲ್ಕ್‌ ಸ್ಮಿತಾ (Silk Smitha) ಸಾವಿನ ಬಗ್ಗೆ ಹೇಳಿದ್ದಾರೆ. 

ಹಾಗಿದ್ದರೆ ಈ ಬೈಲ್ವಾನ್ ರಂಗನಾಥನ್ ಅವರು ನಟಿ ಸಿಲ್ಕ್‌ ಸ್ಮಿತಾ ಬಗ್ಗೆ ಅದೇನು ಹೇಳಿದ್ದಾರೆ ಗೊತ್ತಾ? ಇತ್ತೀಚೆಗೆ 'King 24 X 7' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಇಂಟರ್‌ವ್ಯೂದಲ್ಲಿ ಬೈಲ್ವಾನ್ ರಂಗನಾಥ್ ಅವರು ಸಿಲ್ಕ್‌ ಸ್ಮಿತಾ ಜೀವನದ  ಕೊನೆಯ ಘಟ್ಟದ ಬಗ್ಗೆ ಅತಿ ಮುಖ್ಯ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. 'ಆಕೆಯ ಒಂದು ಸ್ನೇಹವೇ ಆಕೆಯ ಸಾವಿಗೆ ಕಾರಣವಾಯ್ತು' ಎಂದಿದ್ದಾರೆ ಬೈಲ್ವಾನ್ ರಂಗನಾಥ್. 

Latest Videos

undefined

ಡಾ ರಾಜ್‌ ವಿರುದ್ಧ ಪಾತ್ರ ಮಾಡಿದ್ದಕ್ಕೆ ನನ್ನ ಕೆರಿಯರ್‌ಗೇ ಏಟು ಬಿತ್ತು; ವಿಷ್ಣುಗೂ ಇದೇ ಗತಿಯಾಗಿತ್ತಾ?!

ಹಾಗಿದ್ದರೆ ಅದೇನು? ಬಹುತೇಕ ಎಲ್ಲರಿಗೂ ಆ ಬಗ್ಗೆ ಕುತೂಹಲ ಮೂಡುವುದು ಸಹಜ. ಏಕೆಂದರೆ ನಟಿ ಸಿಲ್ಕ್ ಸ್ಮಿತಾ ಕೇವಲ 35ನೇ ವಯಸ್ಸಿಗೇ ಅಸು ನೀಗಿದ್ದಾರೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ ಅವರು ಮಿತಿಮೀರಿ ಆಲ್ಕೋಹಾಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಆ ಬಗ್ಗೆ ಹಲವು ಜನರಿಗೆ ಅನುಮಾನವಿದೆ. ಅವರೇ ಡ್ರಿಂಕ್ಸ್ ಮಾಡಿರಲಿಕ್ಕಿಲ್ಲ, ಬೇರೆ ಯಾರೋ ಒತ್ತಾಯಪೂರ್ವಕವಾಗಿ ಅವರಿಗೆ ಕುಡಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎನ್ನುತ್ತಿದ್ದಾರೆ. ಇದೀಗ ಬೈಲ್ವಾನ್ ರಂಗನಾಥ್ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ. 

ಬೈಲ್ವಾನ್ ರಂಗನಾಥ್ ಅವರು ಈ ಬಗ್ಗೆ 'ನಟಿ ಸಿಲ್ಕ್‌ ಸ್ಮಿತಾ ಅವರು ತಮ್ಮ ಕೊನೆಯ ದಿನಗಳಲ್ಲಿ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದ ಡಾಕ್ಟರ್‌ ಒಬ್ಬರೊಂದಿಗೆ ಸಂಬಂಧ ಹೊಂದಿದ್ದರು. ವೈದ್ಯರ ಮಗನಿಗಾಗಿ ಸಿನಿಮಾ ನಿರ್ಮಿಸುವ ವಿಷಯಕ್ಕೆ ಸಮಸ್ಯೆ ಉಂಟಾಗಿತ್ತು. ಅದೇ ಒತ್ತಡ ಆಕೆಯ ಆತ್ಮಹತ್ಯೆಗೆ ಕಾರಣವಾಯಿತು' ಎಂದಿದ್ದಾರೆ. ಆದರೆ, 'ಆ ಎಡಬಿಡಂಗಿ ಮಾತುಗಳನ್ನು ಹಾಗೇ ನಂಬಬೇಡಿ, ಆ ಬಗ್ಗೆ ಸಿಲ್ಕ್‌ ಸ್ಮಿತಾ ಆಪ್ತರನ್ನೇ ಕೇಳಿ ಸತ್ಯ ತಿಳಿದುಕೊಳ್ಳುವುದು ಒಳ್ಳೆಯದು' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 

ಹಲವರಿಗೆ ಗೊತ್ತಿಲ್ಲ, ಡಾ ರಾಜ್‌ ಒಂದು ಸಿನಿಮಾ ನಿರ್ಮಾಣ ಮಾಡಿದ್ರು; ಯಾವುದು ಆ ಸಿನಿಮಾ?

ಒಟ್ಟಿನಲ್ಲಿ, ನಟಿ ಸಿಲ್ಕ್‌ ಸ್ಮಿತಾ ಸಾವಿಗೆ ಕಾರಣ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಆದರೆ ಆಕೆಯ ಆಪ್ತರು ಹೇಳುವ ಪ್ರಕಾರ, 'ನಟಿ ಸಿಲ್ಕ್‌ ಸ್ಮಿತಾ ಕೊನೆಯ ದಿನಗಳವರೆಗೂ ತಾವೇ ಜೀವ ತೆಗೆದುಕೊಳ್ಳವಷ್ಟು ಡಿಪ್ರೆಶನ್‌ಗೆ ಹೋಗಿರಲಿಲ್ಲ. ಅಥವಾ, ಅಂಥ ಹೇಳಿಕೊಳ್ಳಲಾಗದ ಸಮಸ್ಯೆಯನ್ನೂ ಎದುರಿಸುತ್ತಿರಲಿಲ್ಲ. ಸಡನ್ನಾಗಿ ಆಕೆ ಜೀವಕ್ಕೆ ಅಂತ್ಯ ಹಾಡಿದ್ದಾರೆ ಎಂಬುದನ್ನು ನಮಗೆ ನಂಬಲಿಕ್ಕೆ ಹಾಗೂ ಅರಗಿಸಿಕೊಳ್ಳಲಿಕ್ಕೆ ಅಸಾಧ್ಯ' ಎಂದಿದ್ದು ಬಿಟ್ಟರೆ ಬೇರೆ ಮಾತು ಅವರ ಬಾಯಿಂದ ಹೊರಬಂದಿಲ್ಲ! 

click me!