ಡಂಕಿ ಚಿತ್ರದ ಯಶಸ್ಸಿಗೆ ಕೋರಿ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಜೊತೆ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಹ್ಯಾಟ್ರಿಕ್ ಹೀರೋ ಆಗುವ ಕನಸು ಕಾಣುತ್ತಿದ್ದಾರೆ. ಪಠಾಣ್ ಮತ್ತು ಜವಾನ್ ಚಿತ್ರಗಳ ಭರ್ಜರಿ ಯಶಸ್ಸಿನ ಬಳಿಕ ಅವರ ಬಹು ನಿರೀಕ್ಷಿತ ಡಂಕಿ ಚಿತ್ರ ತೆರೆ ಮೇಲೆ ಬರಲು ಸಜ್ಜಾಗಿದೆ. ಎರಡು ಚಿತ್ರಗಳನ್ನು ಬ್ಲಾಕ್ಬಸ್ಟರ್ ಮಾಡಿಸಿರುವ ಬೆನ್ನಲ್ಲೇ ಮೂರನೆಯ ಚಿತ್ರವನ್ನೂ ಅದೇ ರೀತಿ ಮಾಡಿಸುವಂತೆ ಕೋರಿ, ಪುತ್ರಿ ಸುಹಾನಾ ಖಾನ್ ಜೊತೆ ಶಾರುಖ್ ಶಿರಡಿ ಸಾಯಿಬಾಬಾ ದರ್ಶನ ಮಾಡಿ, ಪೂಜೆ ನೆರವೇರಿಸಿದ್ದಾರೆ. ಡಿಸೆಂಬರ್ 12ರಂದು ಜಮ್ಮುವಿನಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿ ಶಾರುಖ್ ವಿಶೇಷ ಪೂಜೆ ಸಲ್ಲಿಸಿದ್ದರು. ಜವಾನ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅವರು ತಿರುಪತಿಗೆ ಭೇಟಿ ನೀಡಿದ್ದರು. ಇದೇ 21ರಂದು ಡಂಕಿ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ನಟ ಟೆಂಪಲ್ ರನ್ ಮಾಡುತ್ತಿದ್ದಾರೆ.
ಈ ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಈ ಹಿಂದೆ ಚಿತ್ರದ ಕುರಿತು ಮಾತನಾಡಿದ್ದ ಶಾರುಖ್, ಶಾರುಖ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದರು. ತಮ್ಮ ಕನಸುಗಳು ಮತ್ತು ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸರಳ ಮತ್ತು ನೈಜ ಜನರ ಕಥೆ ಇದು. ಸ್ನೇಹ, ಪ್ರೀತಿ ಮತ್ತು ಒಟ್ಟಿಗೆ ಇರುವುದು ಮನೆ ಎಂಬ ಸಂಬಂಧದಲ್ಲಿ! ಹೃದಯಸ್ಪರ್ಶಿ ಕಥೆಗಾರನ ಹೃದಯಸ್ಪರ್ಶಿ ಕಥೆ ಇದಾಗಿದೆ. ಈ ಪ್ರಯಾಣದಲ್ಲಿ ನೀವೆಲ್ಲರೂ ನಮ್ಮೊಂದಿಗೆ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ. ಈ ಕ್ರಿಸ್‌ಮಸ್‌ನಲ್ಲಿ ಡಂಕಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದಿದ್ದರು. ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Raj Kumar Hirani) ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದೆ.
ಡಂಕಿಯಲ್ಲಿ ಸೆಕ್ಸ್-ಗಿಕ್ಸ್ ಇಲ್ಲಾ ತಾನೆ- ಅಪ್ಪನೊಟ್ಟಿಗೆ ನೋಡ್ಬೋದಾ? ನೆಟ್ಟಿಗನ ಪ್ರಶ್ನೆಗೆ ಶಾರುಖ್ ಹೇಳಿದ್ದೇನು?
ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ನಿರ್ಮಾಪಕರು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದಾರೆ. ಈ ಟೀಸರ್ನಲ್ಲಿ ಶಾರುಖ್ ಪಾತ್ರದ ಪರಿಚಯ ಇದೆ. ಹಾರ್ಡಿ ಅನ್ನೊದು ಶಾರುಖ್ ಪಾತ್ರದ ಹೆಸರಾಗಿದೆ. ಹಾರ್ಡಿ ತನ್ನ ಗೆಳೆಯರ ಬಗ್ಗೆ ಇರೋ ಪ್ರೀತಿಯನ್ನ ಇಲ್ಲಿ ವ್ಯಕ್ತಪಡಿಸುತ್ತಾನೆ. ಜೊತೆಗೆ ತಮ್ಮ ಗುಂಪಿನಲ್ಲಿರೋ ಮನು ಹೆಸರಿನ ಪಾತ್ರಧಾರಿ ತಾಪ್ಸಿ ಪನ್ನು ಬಗ್ಗೆನೂ ಹೇಳ್ತಾನೆ. ಇದು ಪಂಜಾಬ್ನ ಕಥೆಯಾಗಿದೆ. ಹಾರ್ಡಿ (ಶಾರುಖ್ ಖಾನ್) ಮತ್ತು ಅವನ ಸ್ನೇಹಿತರಾದ ಮನು, ಸುಖಿ, ಬುಗ್ಗು ಮತ್ತು ಬಲ್ಲಿ ಅವರ ಪ್ರಪಂಚವನ್ನು ಇದು ತಿಳಿಸುತ್ತದೆ. ಮನು ಮತ್ತು ಸುಖಿ ಪಾತ್ರಗಳನ್ನು ಕ್ರಮವಾಗಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ನಿರ್ವಹಿಸಿದ್ದಾರೆ. ಚಿತ್ರದ ತಾರಾಬಳಗದ ಬಗ್ಗೆ ಮಾತನಾಡುವುದಾದರೆ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಅನೇಕ ನಟರು ‘ಡಂಕಿ’ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅಷ್ಟಕ್ಕೂ ಇದಕ್ಕೆ ಡಂಕಿ ಎಂದು ಹೆಸರು ಕಾರಣ, ಪಂಜಾಬ್‌ನಲ್ಲಿ Donkey ಅಂದ್ರೆ ಕತ್ತೆಗೆ ಡಂಕಿ ಅಂತ ಹೇಳುತ್ತಾರೆ. ಇದು ಪಂಜಾಬ್ ಸುತ್ತ ಸುತ್ತುವ ಚಿತ್ರವಾದ್ದರಿಂದ ಡಂಕಿ ಎಂದು ಹೆಸರು ಇಡಲಾಗಿದೆ. ಶಾರುಖ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾರುಕ್ ಖಾನ್ ಅವರ ಭೇಟಿ ವೇಳೆ ದೇಗುಲದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾರುಖ್ ಜತೆಗೆ ಅವರ ವ್ಯವಸ್ಥಾಪಕಿ ಪೂಜಾ ದದ್ಲಾನಿ ಕೂಡ ಜೊತೆಗಿದ್ದಾರೆ.
ಡಂಕಿ ಟ್ರೇಲರ್ ರಿಲೀಸ್: ಇಂಗ್ಲಿಷ್ ಬರದವರ ಕಥೆ-ವ್ಯಥೆಯ ಜೊತೆಗೆ ಬಗೆ ಬಗೆ ರೂಪದಲ್ಲಿ ಶಾರುಖ್!