
ಮುಂಬೈ (ಡಿಸೆಂಬರ್ 15, 2023): ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಹರದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನ ಅಂಧೇರಿ ಪ್ರದೇಶದ ಬೆಲ್ಲೆವ್ಯೂ ಆಸ್ಪತ್ರೆಗೆ ಗುರುವಾರ ನಟ ಶ್ರೇಯಸ್ ತಲ್ಪಾಡೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ನಟ ಶ್ರೇಯಸ್ ತಲ್ಪಾಡೆ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದೂ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಆಂಜಿಯೋಪ್ಲ್ಯಾಸ್ಟಿ ನಡೆಸಲಾಗಿದೆ ಎಂದು ಆಸ್ಪತ್ರೆ ದೃಢಪಡಿಸಿದೆ. ಅಲ್ಲದೆ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ನಟ ಇದೀಗ ಆರೋಗ್ಯವಾಗಿದ್ದಾರೆ ಎಂದೂ ಆಸ್ಪತ್ರೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಲಾಗಿನ್ ಐಡಿ ಕೊಟ್ಟಿದ್ದಕ್ಕೆ ಮಹುವಾ ಉಚ್ಛಾಟನೆಯಾದ್ರೆ, ದೇಶದ ಆಸ್ತಿ ಸ್ನೇಹಿತನಿಗೆ ಕೊಟ್ಟವನನ್ನು ಏನು ಮಾಡಬೇಕು?
ಗುರುವಾರ ಸಂಜೆ ತಡವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಸುಮಾರು ರಾತ್ರಿ 10 ಗಂಟೆಗೆ ಈ ಕಾರ್ಯವಿಧಾನ ಸಂಭವಿಸಿದೆ. ಅವರು ಈಗ ಉತ್ತಮವಾಗಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದೂ ಆಸ್ಪತ್ರೆ ತಿಳಿಸಿದೆ.
ಮುಂಬೈನಲ್ಲಿ ಚಿತ್ರೀಕರಣದ ನಂತರ ಶ್ರೇಯಸ್ ತಲ್ಪಾಡೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ಸಂಜೆ 'ವೆಲ್‌ಕಮ್ ಟು ಜಂಗಲ್' ಚಿತ್ರೀಕರಣದ ನಂತರ ಅಸ್ವಸ್ಥತೆಯ ದೂರುಗಳ ಮೇಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ತಿಳಿದುಬಂದಿದೆ.
Throwback 2023: ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಜೋಡಿಗಳಿವು!
47 ವರ್ಷದ ನಟ ಶ್ರೇಯಸ್ ತಲ್ಪಾಡೆ ಅವರು ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಮೆಚ್ಚುಗೆ ಪಡೆದ ನಟ. 2005 ರ ಚಲನಚಿತ್ರ 'ಇಕ್ಬಾಲ್' ನಲ್ಲಿ ನಾಸಿರುದ್ದೀನ್ ಶಾ ಸಹ ನಟಿಸಿದ ವಿಶೇಷ ಸಾಮರ್ಥ್ಯವುಳ್ಳ ಕ್ರೀಡಾಪಟುವಿನ ಪಾತ್ರಕ್ಕಾಗಿ ಅವರು ಜನಪ್ರಿಯತೆ ಗಳಿಸಿದರು. ಇದಕ್ಕೂ ಮುನ್ನ ಶ್ರೇಯಸ್ ತಲ್ಪಾಡೆ ಮರಾಠಿ ಟಿವಿ ಕಾರ್ಯಕ್ರಮಗಳು, ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿಯನ್ನು ಪಡೆದರು. ಓಂ ಶಾಂತಿ ಓಂ, ಗೋಲ್ಮಾಲ್ ರಿಟರ್ನ್ಸ್ ಮತ್ತು ಹೌಸ್‌ಫುಲ್ 2 ಸೇರಿದಂತೆ ಹಲವಾರು ಗಲ್ಲಾಪೆಟ್ಟಿಗೆಯ ಹಿಟ್ ಚಲನಚಿತ್ರಗಳ ಭಾಗವಾಗಿದ್ದಾರೆ ಮತ್ತು ಡೋರ್‌ನಂತಹ ವಿಮರ್ಶಾತ್ಮಕವಾಗಿ ಹೊಗಳಿದ ಚಲನಚಿತ್ರದಲ್ಲೂ ನಟಿಸಿದ್ದಾರೆ.
ಈ ಮಧ್ಯೆ,ಶ್ರೇಯಸ್ ತಲ್ಪಡೆ ಮುಂದಿನ ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅರೆನಗ್ನಳಾಗಿ ಕಾಣಿಸಿಕೊಂಡು ಟಾಪ್ ಸ್ಥಾನಕ್ಕೆ ಏರಿದಳಾ 'ಅನಿಮಲ್' ತೃಪ್ತಿ ಧಿಮ್ರಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.