ಉರ್ಫಿಯನ್ನು ಮದ್ವೆಯಾಗ್ತಾರಂತೆ ಬಿಗ್​ಬಾಸ್​ನಿಂದ ಹೊರಹಾಕಲ್ಪಟ್ಟ ಯುಟ್ಯೂಬರ್​! ಉಸ್ಸಪ್ಪಾ ಅಂದ ಫ್ಯಾನ್ಸ್​

By Suvarna News  |  First Published Dec 14, 2023, 6:01 PM IST

ನಟಿ ಉರ್ಫಿ ಜಾವೇದ್​ರನ್ನು ಮದ್ವೆಯಾಗಲು ಉತ್ಸಾಹ ತೋರಿದ್ದಾರೆ ಬಿಗ್​ಬಾಸ್​ನಿಂದ ಹೊರಹಾಕಲ್ಪಟ್ಟ ಯುಟ್ಯೂಬರ್​ ಪುನೀತ್​ ಪವರ್​ಸ್ಟಾರ್​. ಇವರು ಹೇಳಿದ್ದೇನು ಕೇಳಿ. 
 


ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಬಿಕಿನಿ, ಬಟ್ಟೆ ಕ್ಲಿಪ್, ಚ್ಯುಯಿಂಗ್ ಗಮ್, ಮಕ್ಕಳಾಟಿಕೆ, ನ್ಯೂಸ್ ಪೇಪರ್, ಚಿಪ್ಸ ಪ್ಯಾಕೇಟ್, ಮಲ್ಲಿಗೆ ಹೂವು, ಪರದೆ ರೀತಿಯ ದಿರಿಸು, ಕಿವಿ ಹಣ್ಣಿನ ರೀತಿ, ಪ್ಲ್ಯಾಸ್ಟರ್ ಹೀಗೆ ವಿಭಿನ್ನ ವಿಶೇಷ ರೀತಿಯ ಬಟ್ಟೆಗಳನ್ನು ತೊಟ್ಟು ಟ್ರೋಲ್‌ಗೆ ಒಳಗಾಗುತ್ತಿದ್ದರೂ ಅದಕ್ಕೆ ಅವರು ತಲೆನೇ ಕೆಡಿಸಿಕೊಳ್ಳುವುದಿಲ್ಲ. ಬಟ್ಟೆ ಧರಿಸಿದರೆ ತಮಗೆ ಚರ್ಮಕ್ಕೆ ಅಲರ್ಜಿ ಆಗುತ್ತದೆ ಎಂದು ಕಾರಣವನ್ನೂ ಈ ಹಿಂದೆ ನೀಡಿದ್ದರು. ಅವರ ಬಟ್ಟೆ ಎಷ್ಟು ಫೇಮಸ್‌ ಎಂದರೆ, ಒಂದು ವೇಳೆ ಫುಲ್‌ ಡ್ರೆಸ್‌ ಧರಿಸಿದರೂ ಉರ್ಫಿ ಟ್ರೋಲ್‌ ಆಗುವುದುಂಟು.

ತಮ್ಮ ಫ್ಯಾನ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿ ಬಟ್ಟೆ ಹಾಕಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿರುವ ಕಾರಣದಿಂದಾಗಿ  ಇನ್​ಸ್ಟಾಗ್ರಾಮ್ ಅಕೌಂಟ್ ಸಸ್ಪೆಂಡ್ ಆಗಿದೆಯೆಂದು ಈಚೆಗಷ್ಟೇ ಉರ್ಫಿ ಹೇಳಿದ್ದರು. ಈ ಕುರಿತು ಇನ್​ಸ್ಟಾಗ್ರಾಮ್ ನಟಿಗೆ ಸಂದೇಶ ಕಳಹಿಸಿದೆಯಂತೆ.  ನಾವು ನಿಮ್ಮ ಖಾತೆ ಸಸ್ಪೆಂಡ್ ಮಾಡುತ್ತೇವೆ. ನಿಮ್ಮ ಖಾತೆ ಜನರಿಗೆ ಕಾಣುವುದಿಲ್ಲ. ಈ ಕ್ಷಣ ನೀವು ಖಾತೆ ಬಳಸಲು ಸಾಧ್ಯವಿಲ್ಲ ಎಂದು ಇನ್​ಸ್ಟಾಗ್ರಾಮ್​ ನಟಿಗೆ ತಿಳಿಸಿದೆ.   ಇನ್​ಸ್ಟಾಗ್ರಾಮ್​ನ ಈ ನಿರ್ಧಾರವನ್ನು 180 ದಿನದಲ್ಲಿ ನೀವು ಪ್ರಶ್ನೆ ಮಾಡಬಹುದು. ಇಲ್ಲವಾದರೆ ನಿಮ್ಮ ಖಾತೆ ಶಾಶ್ವತವಾಗಿ ಬ್ಲಾಕ್ ಆಗುತ್ತದೆ ಎಂದು ಸೂಚಿಸಲಾಗಿದೆ.  ಈ ಕುರಿತು ಹೇಳಿಕೊಂಡಿದ್ದ ನಟಿ, ಆರು ತಿಂಗಳಿನಲ್ಲಿ ಈ ಬಗ್ಗೆ ನಾನು ಪ್ರಶ್ನೆ ಮಾಡದೇ ಹೋದರೆ ನನ್ನ ಇನ್​ಸ್ಟಾ ಖಾತೆ ಶಾಶ್ವತ ಬ್ಲಾಕ್​ ಆಗುತ್ತದೆ. ನಿಮಗೆ ಇದರಿಂದ ತುಂಬಾ ಖುಷಿಯಾಗಿರಬೇಕಲ್ಲವೆ ಎಂದು ಪ್ರಶ್ನಿಸಿದ್ದರು. 

Tap to resize

Latest Videos

ದೀಪಿಕಾ-ರಣಬೀರ್​ ಜೋಡಿ ವಿಷ್ಯದಲ್ಲಿ ಮಧ್ಯ ಬೆರಳು ತೋರಿ ಅಸಭ್ಯವಾಗಿ ವರ್ತಿಸಿದ ಕರಣ್​ ಜೋಹರ್​!

ಅಂದಹಾಗೆ ಉರ್ಫಿ ಅವರು, ತಮ್ಮ ಬಟ್ಟೆಯಿಂದಲೇ ಸೆನ್​ಸೇಷನ್​ ಕ್ರಿಯೇಟ್​ ಮಾಡುತ್ತಿದ್ದು, ಈ ಮೂಲಕವೇ,  4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​ ಗಳಿಸಿದ್ದಾರೆ. ಇವರು ಏನೇ ಡ್ರೆಸ್​ ಹಾಕಿದರೂ ಟ್ರೋಲ್​ ಮಾಡುತ್ತಲೇ ಈಕೆಯ ಫ್ಯಾನ್ಸ್​ ನಟಿಯ ಫಾಲೋವರ್ಸ್​ ಸಂಖ್ಯೆ ಹೆಚ್ಚು ಮಾಡಿದ್ದದಾರೆ. ಇದೀಗ ನಟಿ ಮಾತ್ರವಲ್ಲದೇ ಆಕೆಯ ಫ್ಯಾನ್ಸ್​ಗೂ ಸಕತ್​ ನಿರಾಸೆಯಾಗಿದೆ. ನಿಮ್ಮನ್ನು ಇನ್​ಸ್ಟಾಗ್ರಾಮ್​ನಲ್ಲಿ ನೋಡಿ ಕಣ್ಣು ತುಂಬಿಸಿಕೊಳ್ತಿದ್ದೆವು. ಇನ್ನೆಲ್ಲಿ ಈಗ ನಿಮ್ಮನ್ನು ನೋಡುವುದು ಎಂದು ಫ್ಯಾನ್ಸ್​ ಪ್ರಶ್ನೆ ಕೇಳಿರುತ್ತವ ನಡುವೆಯೇ, ನಟಿಯನ್ನು ಮದುವೆಯಾಗಲು ಖ್ಯಾತ ಯುಟ್ಯೂಬರ್​ ಒಬ್ಬರು ಮುಂದೆ ಬಂದಿದ್ದಾರೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ಯುಟ್ಯೂಬರ್​ ಪುನೀತ್ ಕುಮಾರ್ ಅಕಾ ಪುನೀತ್ ಸೂಪರ್‌ಸ್ಟಾರ್, ಅರೆ ಉರ್ಫಿ ನಾನು ನಿನ್ನನ್ನು ಪ್ರೀತಿಸುತ್ತೇನೆ. ಮದುವೆಯಾಗುತ್ತೇನೆ ಎಂದಿದ್ದು, ಅದು ಸಕತ್​ ವೈರಲ್​ ಆಗುತ್ತಿದೆ.

ಅಷ್ಟಕ್ಕೂ ಪುನೀತ್ ಕುಮಾರ್ ಅಕಾ ಪುನೀತ್ ಸೂಪರ್‌ಸ್ಟಾರ್ ಹಿಂದಿ ಬಿಗ್​ಬಾಸ್​ ವೀಕ್ಷಕರಿಗೆ ಚಿರಪರಿಚಿತ. ಸದಾ ವಿವಾದಗಳಿಂದಲೇ ಇವರು ಫೇಮಸ್​ ಆದವರು. ಇದೇ ಕಾರಣಕ್ಕೆ ಬಿಗ್​ಬಾಸ್​ನ ಓಟಿಟಿ-2 ನಲ್ಲಿ ಇವರಿಗೆ ಪ್ರವೇಶ ಸಿಕ್ಕಿತ್ತು. ಆದರೆ ಪ್ರವೇಶ ಆಗುತ್ತಿದ್ದಂತೆಯೇ ಇವರ ಕಾಟವನ್ನು ಇತರ ಸ್ಪರ್ಧಿಗಳು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ, ಬಿಗ್​ಬಾಸ್​​ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೇವಲ 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಓರ್ವ ಸ್ಪರ್ಧಿಯನ್ನು ಹೊರಕ್ಕೆ ಕಳುಹಿಸಲಾಗಿತ್ತು. ಅವರೇ ಈ ಪುನೀತ್​.  ಇತರ ಹೌಸ್‌ಮೇಟ್‌ಗಳು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ದೂರು ಕೊಟ್ಟಿದ್ದರಿಂದ ಅವರು ವಾಪಸ್​ ಹೋಗಿದ್ದರು. ಈಗ ಉರ್ಫಿಯನ್ನು ಮದ್ವೆಯಾಗುವುದಾಗಿ ಹೇಳುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ತಿದ್ದಾರೆ ಪುನೀತ್​. ಇದಕ್ಕೆ ಫ್ಯಾನ್ಸ್​ ನಿನ್​ ಕಥೆ ಅಷ್ಟೇ ಎಂದಿದ್ದರೆ, ಇನ್ನು ಕೆಲವರು ಬಟ್ಟೆ ಕೊಡಿಸಲು ದುಡ್ಡೇ ಬೇಡ ಬಿಡು ಅಂತಿದ್ದಾರೆ. ಇನ್ನು ಉರ್ಫಿ ಫ್ಯಾನ್ಸ್​, ನಿನ್ನ ಮೂತಿ ನೋಡಿಕೊ ಒಮ್ಮೆ, ಅವಳ ಅಪ್ಪನ ರೀತಿ ಇದ್ದಿ ಎಂದೂ ಹೇಳುತ್ತಿದ್ದಾರೆ. 

ಹೆಣ್ಣೆಂದರೆ 'ಅನಿಮಲ್'​ ನಿರ್ದೇಶಕನ ದೃಷ್ಟಿಯಲ್ಲಿ ಹೀಗಂತೆ! ಯಾವುದ್ರಿಂದ ಹೊಡಿಬೇಕು ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು

 

click me!