ನನ್ನ ಗಂಡ ನಟಿಯರ ಜೊತೆ ಕೆಲ್ಸ ಮಾಡ್ತಾರೆ, ನಾನ್ಯಾಕೆ ನಿರ್ಮಾಪಕರ ಜೊತೆ ಮಾಡ್ಬಾರ್ದು: ರಾಣಿ ಮುಖರ್ಜಿ

By Vaishnavi ChandrashekarFirst Published Mar 11, 2023, 1:02 PM IST
Highlights

ಶ್ರೀಮತಿ ಚಟರ್ಜಿ Vs ನಾರ್ವೆ ಪ್ರಚಾರದಲ್ಲಿ ಬ್ಯುಸಿಯಾಗಿರು ರಾಣಿ ಮುಖರ್ಜಿ. ಪತಿ ಆದಿತ್ಯ ಚೋಪ್ರಾ ಬಗ್ಗೆ ಮೊದಲ ಸಲ ಮಾತನಾಡಿ ನಾನು ಇನ್ನಿತರ ನಿರ್ಮಾಪಕ ಜೊತೆ ಕೆಲಸ ಮಾಡುವೆ ಎಂದಿದ್ದಾರೆ. 

ಮಿಸೆಸ್ ಚಟರ್ಜಿ Vs ನಾರ್ವೆ ಸಿನಿಮಾದಲ್ಲಿ ಪಕ್ಕಾ ಇಂಡಿಯನ್ ಮಾಮ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಣಿ ಮುಖರ್ಜಿ ನೈಜ ಘಟನೆಯನ್ನು ಜನರ ಎದುರು ತೆರೆದಿಡಲು ಮುಂದಾಗಿದ್ದಾರೆ. ನಾರ್ವೆಯಲ್ಲಿ ಪತಿ ಕೆಲಸ ಮಾಡುತ್ತಿದ್ದರು ಎನ್ನುವ ಕಾರಣ ಮಿಸಸ್ ಚಟರ್ಜಿ ಕೂಡ ಅಲ್ಲಿಗೆ ಶಿಫ್ಟ್‌ ಆಗುತ್ತಾರೆ. ಪಕ್ಕಾ ಬೆಂಗಾಲಿ ಕುಟುಂಬಕ್ಕೆ ಸೇರಿವ ಈ ಫ್ಯಾಮಿಲಿ ದೇವರ ಪೂಜೆ ಮಾಡುವುದು, ಮಕ್ಕಳಿಗೆ ಕೈಯಲ್ಲಿ ಊಟ ತಿನಿಸುವುದು, ಹಣೆಗೆ ತಿಲಕ ಇಡುವುದು ಮಾಡುತ್ತಿದ್ದರು. ಆದರೆ ಇದನ್ನು ಗಮನಿಸಿದ ನಾರ್ವೆ ಅಧಿಕಾರಿಗಳು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅವರ ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಆಗ ಕುಟುಂಬದ ಸಹಾಯವೂ ಇಲ್ಲದೆ ನಾರ್ವೆ ಸರ್ಕಾರದ ವಿರುದ್ಧ ಹೋರಾಡುತ್ತಾರೆ ಮಿಸಸ್ ಚಟರ್ಜಿ. ಈ ಕಥೆಯನ್ನು ರಾಣಿ ಮುಖರ್ಜಿ ತೆರೆ ಮೇಲೆ ಅದ್ಭುತವಾಗಿ ತಂದಿದ್ದಾರೆ. ಟೀಸರ್ ಮತ್ತು ಟ್ರೈಲರ್‌ ಸಿನಿ ವೀಕ್ಷಕರ ನಿರೀಕ್ಷೆ ಹೆಚ್ಚಿಸಿದೆ.

ಮಾರ್ಚ್‌ 17ರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರವನ್ನು ರಾಣಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಖಾಸಗಿ ಪ್ರಚಾರದಲ್ಲಿ ರಿಯಲ್ ಸಾಗರಿಕಾ ಚಟರ್ಜಿ ಅವರನ್ನು ರಾಣಿ ಭೇಟಿ ಮಾಡಿ ಭಾವುಕರಾಗಿದ್ದಾರೆ. ನಿಮ್ಮ ಬಗ್ಗೆ ಹೆಚ್ಚಿಗೆ ತಿಳಿದುಕೊಂಡ ಮೇಲೆ ನಾನು ಪಾತ್ರಕ್ಕೆ ನೆಕ್ಟ್‌ ಆಗಿದ್ದು ತೆರೆ ಮೇಲೆ ನ್ಯಾಯ ಒದಗಿಸಲು ಸಾಧ್ಯವಾಗಿದ್ದು ಎಂದಿದ್ದಾರೆ. ರಾಣಿ ರಿಯಲ್ ಲೈಫ್‌ ಪ್ರೆಗ್ನೆನ್ಸಿ ಜರ್ನಿ ಬಗ್ಗೆ ಮಾತನಾಡುತ್ತಾ ತಮ್ಮ ಪತಿ ಆದಿತ್ಯ ಚೋಪ್ರಾ ಕೆಲಸದ ಬಗ್ಗೆಯೂ ಚರ್ಚಿಸಿದ್ದಾರೆ.

Latest Videos

'ನನ್ನ ಪತಿ ಆದಿತ್ಯ ಚೋಪ್ರಾ ಅನೇಕ ನಾಯಕಿಯರ ಜೊತೆ ಕೆಲಸ ಮಾಡುತ್ತಾರೆ ಅಂದ್ಮೇಲೆ ನಾನು ಯಾಕೆ ಹಲವಾರು ನಿರ್ಮಾಪಕರ ಜೊತೆ ಕೆಲಸ ಮಾಡಬಾರದು? ಒಳ್ಳೆ ಕಥೆ ಅಷ್ಟೇ ನನಗೆ ಮುಖ್ಯವಾಗುತ್ತದೆ ಅದು ಯಶ್‌ ರಾಜ್‌ ಫಿಲ್ಮ್‌ ಅಗಿರಲಿ ಅಥವಾ ಮತ್ತೊಂದೇ ಇರಲಿ. ಈ ಸಿನಿಮಾವನ್ನು ಆದಿ ನೋಡಿ ಶಾಕ್ ಆಗಿದ್ದಾರೆ. ಪಾತ್ರಕ್ಕೆ ಕೆನಕ್ಟ್‌ ಆಗಿ ಕೊನೆಯಲ್ಲಿ ಭಾವುಕರಾಗಿರುವುದನ್ನು ನೋಡಬಹುದು. ಇಷ್ಟು ವರ್ಷಗಳಲ್ಲಿ ನನ್ನ ಯಾವ ಪಾತ್ರಕ್ಕೂ ಕನೆಕ್ಟ್‌ ಆಗಿರಲಿಲ್ಲ ಹಾಗೂ ಇಷ್ಟೊಂದು ಮೆಚ್ಚಿಕೊಂಡಿರಲಿಲ್ಲ' ಎಂದು ರಾಣಿ ಹೇಳಿದ್ದಾರೆ. 

ನನ್ನ ಧ್ವನಿಯಿಂದ ತುಂಬಾ ಟೀಕೆ ಎದುರಿಸಿದೆ; ಟ್ರೋಲ್‌ಗಳನ್ನು ನೆನೆದು ರಾಣಿ ಮುಖರ್ಜಿ ಭಾವುಕ

'ಯಶ್ ಅಂಕಲ್‌ನ ಕಳೆದುಕೊಂಡಾಗ ಆದಿ ತುಂಬಾ ನೊಂದಿದ್ದರು . ಇಂದು ಆದಿ ಮುದ್ದಾದ ಮಕ್ಕಳಿಗೆ ಪೋಷಕರಾಗಿದ್ದಾರೆ. ಪುಟ್ಟ ಮಗುವಿನ ರೀತಿ ನನಗೆ ಸ್ವೀಟ್‌ ತಿನ್ನಿಸಿ ಸೈಡ್‌ಯಿಂದ ತಬ್ಬಿಕೊಂಡರು. ಅದ್ಭುತವಾಗಿ ನಟಿಸಿರುವೆ ಒಳ್ಳೆಯದಾಗಲಿ ಎಂದರು ನಾನು ಖುಷಿ ಪಟ್ಟೆ. ಇಷ್ಟು ವರ್ಷದಲ್ಲಿ ಆದಿ ಎಂದೂ ನನ್ನ ಎದುರು ಮೆಚ್ಚುಗೆ ವ್ಯಕ್ತ ಪಡಿಸಿಲ್ಲ ನನ್ನ ಹಿಂದೆ ಮಾತ್ರ ಹೊಗಳುತ್ತಾರೆ. ಸಿನಿಮಾ ನೋಡಿ ಕಂಟ್ರೋಲ್ ಮಾಡಿಕೊಳ್ಳಲಾಗದೆ ಹೀಗೆ ಮಾಡಿದ್ದರು' ಎಂದಿದ್ದಾರೆ ರಾಣಿ. 

ನೈಜ ಘಟನೆ:

 ಅನುರೂಪ್ ಭಟ್ಟಾಚಾರ್ಯ (Anup Bhattacharya) ಮತ್ತು ಸಾಗರಿಕಾ ಭಟ್ಟಾಚಾರ್ಯ (Sagarika Bhattacharya) ಎಂಬ ದಂಪತಿಯ ನೈಜ ಜೀವನವನ್ನು ಇದು ಆಧರಿಸಿದೆ ಎಂದು ಚಿತ್ರದ ಟ್ರೇಲರ್ ಉಲ್ಲೇಖಿಸಿದೆ. 2007 ರಲ್ಲಿ, ಈ ದಂಪತಿ ಮದುವೆಯಾಗುತ್ತಾರೆ.  ತಮ್ಮ ಹೊಸ ವೈವಾಹಿಕ ಜೀವನವನ್ನು ಪ್ರಾರಂಭಿಸಲು ನಾರ್ವೆಗೆ ತೆರಳುತ್ತಾರೆ.  ದಂಪತಿಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಒಂದು  ಸಂಜೆ, ತಾಯಿ ತನ್ನ ಮಗನಿಗೆ  ಹೀಗೆ ಮಾತನಾಡುತ್ತಾ ತಮಾಷೆಗಾಗಿ ಕೆನ್ನೆಗೆ ಹೊಡೆಯುತ್ತಾಳೆ.  ನಾರ್ವೇಜಿಯನ್ ಮಕ್ಕಳ ಕಲ್ಯಾಣ ಸೇವೆಗಳಿಗೆ (NCW) ಈ ಮಾಹಿತಿಯನ್ನು ಯಾರೋ ನೀಡುತ್ತಾರೆ. ಮಗನ ಕೆನ್ನೆಗೆ ಅಮ್ಮ ಹೊಡೆದಿರುವುದಾಗಿ ದೂರು ದಾಖಲಾಗುತ್ತದೆ

ವಾದಕ್ಕೆ ಕಾರಣವಾದ Amitabh Bachchan ಜೊತೆಯ Rani Mukerji ಕಿಸ್ಸಿಂಗ್‌ ಸೀನ್‌!.

ಇದರ ನಂತರ, ಅಧಿಕಾರಿಗಳು ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿರುತ್ತಾರೆ.   ಮಕ್ಕಳೊಂದಿಗೆ ತಾಯಿಯ ನಡವಳಿಕೆಯನ್ನು ಗಮನಿಸುತ್ತಿರುತ್ತಾರೆ. ಮಕ್ಕಳು ತಮ್ಮ ಹೆತ್ತವರೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗುತ್ತಿರುತ್ತಾರೆ.  ಬರಿ ಕೈಗಳಿಂದ ಆಹಾರವನ್ನು ತಿನ್ನುತ್ತಿರುತ್ತಾರೆ. ಅವರಿಗೆ ಯಾವುದೇ ಕೊರತೆ ಇರುವುದಿಲ್ಲ.  ಅನುಕೂಲಕರ ಬಟ್ಟೆ ಮತ್ತು ಆಟಿಕೆಗಳೂ ಇರುತ್ತವೆ. ಇವೆಲ್ಲವನ್ನೂ  ಅಧಿಕಾರಿಗಳು ಶೀಘ್ರದಲ್ಲೇ ಗಮನಿಸುತ್ತಾರೆ.  2011 ರಲ್ಲಿ, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡುತ್ತಾರೆ. ಮೂರು ವರ್ಷದ ಮಗ  ಅಭಿಜ್ಞಾನ್ (Abhijnana) ಮತ್ತು ಒಂದು ವರ್ಷದ ಮಗಳು ಐಶ್ವರ್ಯಳನ್ನು  ಕರೆದುಕೊಂಡು ಹೋಗುತ್ತಾರೆ.  ಮಕ್ಕಳಿಗೆ 18 ವರ್ಷ ತುಂಬುವವರೆಗೂ ಅಪ್ಪ-ಅಮ್ಮಂದಿರನ್ನು ಭೇಟಿ ಮಾಡಲು ಮಕ್ಕಳಿಗೆ ಅನುಮತಿ ನೀಡುವುದಿಲ್ಲ.

ರಾಣಿ ಮುಖರ್ಜಿಯ ಸೀ ಫೇಸಿಂಗ್‌ ಹೊಸ ಮನೆ ಹೇಗಿದೆ ನೋಡಿ!

ಪೋಷಕರು ಮತ್ತು ಅಧಿಕಾರಿಗಳ ನಡುವಿನ ರಾಜತಾಂತ್ರಿಕ ಹೋರಾಟ ಮತ್ತು ಗಲಾಟೆಯ ನಂತರ, ಪಾಲನೆಯನ್ನು ಅನುರೂಪ್ ಭಟ್ಟಾಚಾರ್ಯ ಅವರ ಸಹೋದರನಿಗೆ ವರ್ಗಾಯಿಸಲಾಗುತ್ತದೆ.  ನಂತರ ಅವರನ್ನು ಮನೆಗೆ ಮರಳಲು ಅನುಮತಿಸಲಾಗುತ್ತದೆ. ಈ ನಡುವೆ ದಂಪತಿ ವಿಚ್ಛೇದನವಾಗುತ್ತದೆ. 2013 ರಲ್ಲಿ, ಕೋಲ್ಕತಾ ಹೈಕೋರ್ಟ್ ಸಾಗರಿಕಾಗೆ ತನ್ನ ಮಕ್ಕಳ ಪಾಲನೆಯನ್ನು ಕೋರ್ಟ್​ (Court) ನೀಡುತ್ತದೆ.  ಮಕ್ಕಳ ರಕ್ಷಣೆಗಾಗಿ ಜಗತ್ತಿನಾದ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ನಾರ್ವೆ ಒಂದಾಗಿದೆ. ಇಲ್ಲಿ  ಮಕ್ಕಳನ್ನು ಹೊಡೆಯುವುದು ಮತ್ತು ಹೊಡೆಯುವುದು ಕಾನೂನುಬಾಹಿರ. ಹೀಗೆ ತಮಾಷೆಗಾಗಿ ಮಗುವಿಗೆ ಹೊಡೆದದ್ದೇ ಹೇಗೆ ಆಕೆಯ ಪಾಲಿಗೆ ದುಃಸ್ವಪ್ನವಾಗುತ್ತದೆ ಎನ್ನುವುದು ಕಥಾಹಂದರ. ಇದು ನೈಜ ಕಥೆಯಾಗಿದೆ.   

click me!