ಹಾರ್ಟ್ ಸರ್ಜರಿ ಬಳಿಕ ಮತ್ತೆ ವರ್ಕೌಟ್ ಆರಂಭಿಸಿದ ಮಾಜಿ ವಿಶ್ವ ಸುಂದರಿ; ಫೋಟೋ ಹಂಚಿಕೊಂಡ ಸುಶ್ಮಿತಾ ಸೇನ್

Published : Mar 11, 2023, 10:53 AM IST
ಹಾರ್ಟ್ ಸರ್ಜರಿ ಬಳಿಕ ಮತ್ತೆ ವರ್ಕೌಟ್ ಆರಂಭಿಸಿದ ಮಾಜಿ ವಿಶ್ವ ಸುಂದರಿ; ಫೋಟೋ ಹಂಚಿಕೊಂಡ ಸುಶ್ಮಿತಾ ಸೇನ್

ಸಾರಾಂಶ

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹಾರ್ಟ್ ಸರ್ಜರಿ ಬಳಿಕ ಮತ್ತೆ ವರ್ಕೌಟ್ ಪ್ರಾರಂಭಿಸಿದ್ದಾರೆ. 

ಬಾಲಿವುಡ್ ಸ್ಟಾರ್, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಅವರಿಗೆ ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಆ ವಿಚಾರವನ್ನು ಸುಶ್ಮಿತಾ ತಡವಾಗಿ ಬಹಿರಂಗ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಫಿಟ್ ಅಂಡ್ ಫೈನ್ ಆಗಿದ್ದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಅವರಿಗೆ ಮ್ಯಾಸಿವ್ ಹಾಟ್ ಅಟ್ಯಾಕ್ ಆದ ವಿಚಾರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಸುಮಾರು  95 % ಬ್ಲಾಕೇಜ್ ಆಗಿದ್ದು ಸುಶ್ಮಿತಾ ಬದುಕಿ ಉಳಿದಿದ್ದೆ ಪವಾಡ. ಈ ಬಗ್ಗೆ ಸ್ವತಃ ಸುಶ್ಮಿತಾ ಅವರೇ ಬಹಿರಂಗ ಪಡಿಸಿದ್ದರು. ಹೃದಯಾಘಾತದ ಬಳಿಕ ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದಿದ್ದ ಸುಶ್ಮಿತಾ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಭೀಕರ ಘಟನೆ ಬಗ್ಗೆ ಬಹಿರಂಗ ಪಡಿಸಿದ್ದರು. ಪ್ರತಿದಿನ ವರ್ಕೌಟ್, ಯೋಗ ಅಂತ ಆರೋಗ್ಯಕರ ಜೀವನ ನಡೆಸುತ್ತಿದ್ದ ಸುಶ್ಮಿತಾ ಅವರಿಗೆ ಹೃದಯಾಘಾತ ಆಗಿರುವ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಸುಶ್ಮಿತಾ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. 

ಇದೀಗ ಸುಶ್ಮಿತಾ ಮತ್ತೆ ಫಾರ್ಮ್‌ಗೆ ಮರಳುತ್ತಿದ್ದಾರೆ. ವಿಶೇಷ ಎಂದರೆ ಮತ್ತೆ ವರ್ಕೌಟ್ ಪ್ರಾರಂಭಿಸಿದ್ದಾರೆ.  ಹೃದ್ರೋಗ ತಜ್ಞರ ಸಲಹೆಯ ಮೇರೆಗೆ ಮತ್ತೆ ವರ್ಕೌಟ್ ಮಾಡಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿ ಕೆಲವೇ ದಿನಗಳಲ್ಲಿ ಸುಶ್ಮಿತಾ ಮತ್ತೆ ಯೋಗ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿರುವ ಸುಶ್ಮಿತಾ ಸೇನ್, 'ಹೃದ್ರೋಗ ತಜ್ಞರ ಸಲಹೆ ಮೇರೆಗೆ.  ಸ್ಟ್ರೆಚಿಂಗ್ ಪ್ರಾರಂಭವಾಗುತ್ತದೆ. ನಂಥ ಫೀಲಿಂಗ್' ಎಂದು ಬರೆದುಕೊಂಡಿದ್ದಾರೆ. 

ವರ್ಕೌಟ್ ಸೆಷನ್ ಆರಂಭಿಸಿದ ಫೋಟೋವನ್ನು ಸುಶ್ಮಿತಾ ಸೇನ್ ಶೇರ್ ಮಾಡಿದ್ದಾರೆ. ಸುಶ್ಮಿತಾ ಫೋಟೋಗೆ ಅಭಿಮಾನಿಗಳಿಂದ ಮತ್ತು ಸಿನಿಮಾ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

95% ಬ್ಲಾಕೇಜ್ ಆಗಿತ್ತು; ಹೃದಯಾಘಾತದ ಬಳಿಕ ಸುಷ್ಮಿತಾ ಸೇನ್ ಮೊದಲ ವಿಡಿಯೋ ಪ್ರತಿಕ್ರಿಯೆ

ವರ್ಕೌಟ್ ಬಗ್ಗೆ  ಸುಶ್ಮಿತಾ ಸೇನ್ ಮಾತು 

ಇತ್ತೀಚೆಗಷ್ಟೆ ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿದ್ದ ನಟಿ ಸುಶ್ಮಿತಾ ಸೇನ್ 'ಪ್ರತಿದಿನ ವ್ಯಾಯಮ ಮಾಡಿದರೂ ಆರೋಗ್ಯ ಹಾಳಾಗುತ್ತೆ, ವ್ಯಾಯಾಮದಿಂದ ಏನು ಪ್ರಯೋಜನವಿಲ್ಲ, ವರ್ಕೌಟ್ ಮಾಡಿದ್ರು ಅವಳಿಗೆ ಹಾಗೆ ಆಗಿದೆ ಅಂದ್ಮೇಲೆ ಯಾಕೆ ಮಾಡಬೇಕು ಎಂದು ಜಿಮ್ ಗೆ ಹೋಗುವುದನ್ನೇ ನಿಲ್ಲಿಸುತ್ತೀರಿ. ಹೀಗೆ ಮಾಡ ಬೇಡಿ. ವ್ಯಾಯಾಮ ತುಂಬಾ ಸಹಾಯ ಮಾಡುತ್ತದೆ' ಎಂದು ಹೇಳಿದರು.

'ನನಗೆ ವರ್ಕೌಟ್ ಸಹಾಯ ಮಾಡಿದೆ. ನಾನು ಮ್ಯಾಸಿವ್ ಹಾರ್ಟ್ ಅಟ್ಯಾಕ್ ಇಂದ ಬದುಕುಳಿದೆ. 95 ಪರ್ಸೆಂಟ್ ಬ್ಲಾಕೇಜ್ ಇತ್ತು. ನಾನು ಆಕ್ಟೀವ್ ಲೈಫ್‌ಸ್ಟೈಲ್ ಹೊಂದಿದ್ದರಿಂದ ನಾನು ಬದುಕುಳಿದೆ. ಮತ್ತೊಂದೆ ಕಡೆ ನೋಡಿದ್ರೆ ನಾನು ತುಂಬಾ ಲಕ್ಕಿ. ಇದು ನನ್ನಲ್ಲಿ ಭಯವನ್ನು ಉಂಟುಮಾಡುವುದಿಲ್ಲ, ಬದಲಿಗೆ, ನಾನು ಈಗ ಏನನ್ನಾದರೂ ಎದುರುನೋಡುವ ಭರವಸೆಯ ಭಾವನೆಯನ್ನು ಹೊಂದಿದ್ದೇನೆ' ಎಂದು ಹೇಳಿದ್ದರು.

ಹಾರ್ಟ್ ಅಟ್ಯಾಕ್‌ ಆದ್ರೂ ಆಂಜಿಯೋಪ್ಲಾಸ್ಟಿ ಸರ್ಜರಿಯಿಂದ ಬದುಕುಳಿದ ಸುಶ್ಮಿತಾ ಸೇನ್‌, ಹಾಗಂದ್ರೇನು ?

ಸುಷ್ಮಿತಾ 2015ರ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. 2015ರಲ್ಲಿ ಬೆಂಗಾಳಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಬಳಿಕ ಅನೇಕ ವೆಬ್ ಸೀರಿಸ್ ಗಳಲ್ಲಿ ಮಿಂಚಿದ್ದಾರೆ. ಆರ್ಯ, ತಾಲಿ ಸೀರಿಸ್ ನಲ್ಲಿ ಸುಶ್ಮಿತಾ ಮಿಂಚಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್