ಪಠಾಣ್ ಚಿತ್ರವು ಒಂದು ಸಾವಿರ ಕೋಟಿ ರೂಪಾಯಿಗಳನ್ನು ಮೀರಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಭರ್ಜರಿ ಯಶಸ್ಸಿನ ಕುರಿತು ನಟ ಶಾರುಖ್ ಖಾನ್ ಕುತೂಹಲದ ಟ್ವೀಟ್ ಒಂದನ್ನು ಮಾಡಿದ್ದಾರೆ. ಏನದು?
ಕಳೆದ ಜನವರಿ 26ರಂದು ಬಿಡುಗಡೆಗೊಂಡ ನಟ ಶಾರುಖ್ ಖಾನ್ ( Shahrukh Khan), ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆಯ 'ಪಠಾಣ್' (Pathaan) ಸಿನಿಮಾ ಇಂದಿಗೂ ಭರ್ಜರಿಯಾಗಿಯೇ ಓಡುತ್ತಿದೆ. ಬಿಡುಗಡೆಗೆ ಮುನ್ನವೇ ಪಠಾಣ್ ಭಾರಿ ವಿವಾದ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಚಿತ್ರದಲ್ಲಿ ಕೇಸರಿ ಬಿಕಿನಿ ತೊಟ್ಟು ನಟಿ ದೀಪಿಕಾ ಪಡುಕೋಣೆ ಬೇಷರಂ ರಂಗ್ ಹಾಡಿಗೆ ಸ್ಟೆಪ್ ಹಾಕಿ, ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಪಠಾಣ್ ಬೈಕಾಟ್ ಟ್ರೆಂಡ್ (Boycott trend) ಶುರುವಾಗಿತ್ತು. ಇದರ ಬಳಿಕ ಕೇಸರಿ ಬಿಕಿನಿ ಬದಲು ಕೇಸರಿ ಲುಂಗಿ ತೊಟ್ಟು ರೀಶೂಟ್ ಮಾಡಲಾಗಿತ್ತು. ಇವೆಲ್ಲವೂ ಈಗ ಹಳೆಯ ಸುದ್ದಿ.
ಇವೆಲ್ಲವುಗಳ ಹೊರತಾಗಿಯೂ ಪಠಾಣ್ ಮಕಾಡೆ ಮಲಗಿದ್ದ ಬಾಲಿವುಡ್ ಅನ್ನು ಮತ್ತೆ ಚಿಗುರಿಸಿದೆ. ಹಲವಾರು ದಾಖಲೆಗಳನ್ನು ಮುರಿದು ಇನ್ನೂ ಮುನ್ನುಗ್ಗುತ್ತಿದೆ. ಈಗಾಗಲೇ ಸೂಪರ್ ಹಿಟ್ (Superhit) ಚಿತ್ರಗಳ ಸಾಲಿಗೆ ಸೇರಿ, ಬಾಲಿವುಡ್ (Bollywood) ವೈಭವವನ್ನು ಮರುಕಳಿಸುವಂತೆ ಮಾಡಿದೆ. 510.99 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ 'ಬಾಹುಬಲಿ 2' ಚಿತ್ರಕ್ಕೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆ ಇತ್ತು. 434.70 ಕೋಟಿ ರೂಪಾಯಿ ಗಳಿಸುವ ಮೂಲಕ ಆ ನಂತರದ ಸ್ಥಾನವನ್ನು 'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಆಕ್ರಮಿಸಿಕೊಂಡಿತ್ತು. ಈಗ ಈ ದಾಖಲೆಗಳನ್ನು 'ಪಠಾಣ್' ಸಿನಿಮಾ ಮುರಿದಿದೆ. 'ಪಠಾಣ್' ಸಿನಿಮಾ ಈಗಾಗಲೇ 1000 ಕೋಟಿ ರೂಪಾಯಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ.
Besham Rang: ಮೊದಲ ಬಾರಿಗೆ ಮೌನ ಮುರಿದ ನಟಿ ದೀಪಿಕಾ ಪಡುಕೋಣೆ
ಚಿತ್ರಕ್ಕೆ ಕುರಿತಂತೆ ಇದ್ದ ಎಲ್ಲಾ ಗಲಾಟೆಗಳು ಶಾಂತವಾಗುತ್ತಿದ್ದಂತೆಯೇ ಪಠಾಣ್ ಕುರಿತು ದಿಢೀರ್ ಎಂದು ಟ್ವಿಟರ್ನಲ್ಲಿ (Tweet) ನಟ ಶಾರುಖ್ ಖಾನ್ ಮಾತನಾಡಿದ್ದಾರೆ. 'ಪಠಾಣ್' ಸಿನಿಮಾ ಈಗಾಗಲೇ 1000 ಕೋಟಿ ರೂಪಾಯಿಗೂ ಅಧಿಕ ಹಣ ಕಲೆಕ್ಷನ್ ಮಾಡಿದ ಬೆನ್ನಲ್ಲೇ ಟ್ವೀಟ್ ಮೂಲಕ ಮನಸಿನ ಮಾತೊಂದನ್ನು ಶಾರುಖ್ ಹಂಚಿಕೊಂಡಿದ್ದಾರೆ. ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡುತ್ತ ಶಾರುಖ್ ಖಾನ್ ಅವರು, ' ಸಿನಿಮಾದ ಯಶಸ್ಸು ವೈಯಕ್ತಿಕವಾದದ್ದು' ಎಂದು ಹೇಳಿದ್ದಾರೆ. ಟ್ವಿಟರ್ನಲ್ಲಿ (Tweet) ನಟ 'ಇದು ವ್ಯವಹಾರ (Business) ಅಲ್ಲ, ಇದು ವೈಯಕ್ತಿಕವಾಗಿದೆ. ಜನರನ್ನು ರಂಜಿಸೋದು, ನಗಿಸೋದು ನಮ್ಮ ಕೆಲಸ. ಆದರೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ ಅಂದರೆ ಅದು ಎತ್ತರಕ್ಕೆ ಹೋಗೋದಿಲ್ಲ. ಪಠಾಣ್ ಸಿನಿಮಾಕ್ಕೆ ನೀಡಿದ ಪ್ರೀತಿಗೆ, ಈ ಚಿತ್ರಕ್ಕಾಗಿ ಕೆಲಸ ಮಾಡಿದವರಿಗೆ ಧನ್ಯವಾದಗಳು. ಶ್ರಮ ಹಾಕಬೇಕು, ಭರವಸೆ ಇಡಬೇಕು ಎಂದು ಸಾಬೀತು ಆಗಿದೆ' ಎಂದು ಬರೆದುಕೊಂಡಿದ್ದಾರೆ.
ಸದ್ಯ ಶಾರುಖ್ ಅವರು ಅಟ್ಲೀ ಅವರ ನಿರ್ದೇಶನದ ಜವಾನ್ (Jawan) ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅವರು ಇತ್ತೀಚೆಗೆ ಚಿತ್ರದ ಚಿತ್ರೀಕರಣಕ್ಕಾಗಿ ಪುಣೆಗೆ ತೆರಳಿದ್ದರು. ನಯನತಾರಾ ಕೂಡ ನಟಿಸಿರುವ ಈ ಚಿತ್ರವು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಐದು ಭಾಷೆಗಳಲ್ಲಿ ಜೂನ್ 2 ರಂದು ಥಿಯೇಟರ್‌ಗಳನ್ನು ಹಿಟ್ ಮಾಡಲು ಸಿದ್ಧವಾಗಿದೆ. ಇದು ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳೊಂದಿಗೆ ಈವೆಂಟ್ ಫಿಲ್ಮ್ ಎಂದು ಬಿಂಬಿಸಲಾಗಿದೆ. ಶಾರುಖ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಇದನ್ನು ನಿರ್ಮಿಸಿದೆ. ಜೂನ್ 2022 ರಲ್ಲಿ, ಚಿತ್ರದ ಟೀಸರ್ ಅನ್ನು ಶಾರುಖ್ ಖಾನ್ ಅನಾವರಣಗೊಳಿಸಿದ್ದರು.
ಬೇಷರಂ ರಂಗ್ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಮೌನ ಮುರಿದಿದ್ದ ನಟಿ ದೀಪಿಕಾ, ‘ನಾನು ಮತ್ತು ಶಾರುಖ್ ಬದ್ಧತೆ, ಕಠಿಣ ಪರಿಶ್ರಮ ಮತ್ತು ವಿನಯವನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತೇವೆ. ನಾವು ಕ್ರೀಡಾ ಹಿನ್ನೆಲೆಯಿಂದ ಬಂದವರು, ಇದರಿಂದಾಗಿ ಸಂಯಮದ ಬಗ್ಗೆ ಸಾಕಷ್ಟು ಕಲಿತಿದ್ದೇವೆ. ಬೈಕಾಟ್ ಟ್ರೆಂಡ್ ಶುರುವಾದಾಗ ಅದನ್ನು ಎದುರಿಸಲು ನಮಗೆ ಬೇರೆ ಮಾರ್ಗಗಳು ತಿಳಿದಿರಲಿಲ್ಲ. ನಮ್ಮ ಕುಟುಂಬ ನಮ್ಮನ್ನು ಚೆನ್ನಾಗಿ ಬೆಳೆಸಿದೆ ಎಂದಷ್ಟೇ ಹೇಳಬಲ್ಲೆ. ನಾನು ಕನಸುಗಳನ್ನು ಹೊತ್ತು ಹೊಸ ಆಕಾಂಕ್ಷೆಗಳೊಂದಿಗೆ ಒಂಟಿಯಾಗಿ ಮುಂಬೈಗೆ (Mumbai) ಬಂದಿದ್ದೇನೆ. ನನಗೆ ಬದ್ಧತೆ , ಕಠಿಣ ಪರಿಶ್ರಮ ಮತ್ತು ನಮ್ರತೆಯ ಬಗ್ಗೆ ತಿಳಿದಿದೆ. ಅದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಪ್ರಬುದ್ಧವಾಗಿರುವುದು ನನಗೆ ತಿಳಿದಿದೆ. ನಾವಿಬ್ಬರೂ ಕ್ರೀಡಾಪಟುಗಳು. ತಂದೆ ಪ್ರಕಾಶ್ ಪಡುಕೋಣೆ (Praksh Padukone) ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯರಾಗಿದ್ದಾರೆ ಅವರು ಎಲ್ಲಾ ಸಮಯದಲ್ಲೂ ತಾಳ್ಮೆ ಹಾಗೂ ಶಾಂತಂತೆಗೆ ಗೌರವ ನೀಡುತ್ತಿದ್ದರು. ಶಾರುಖ್ ಶಾಲೆ ಮತ್ತು ಕಾಲೇಜಿನಲ್ಲಿ ಕ್ರೀಡೆಗಳನ್ನು ಆಡುತ್ತಿದ್ದರು ಎಂದು ನನಗೆ ತಿಳಿದಿದೆ. ಕ್ರೀಡೆಯು ಸಾಕಷ್ಟು ತಾಳ್ಮೆಯನ್ನು ಕಲಿಸುತ್ತದೆ ಎಂದಿದ್ದರು.
Shah Rukh Khan ಮನೆಯಲ್ಲಿ ಎಂಟು ಗಂಟೆ ಅಡಗಿಕುಳಿತಿದ್ದ ಆಗಂತುಕರು!
“ITS NOT THE BUSINESS….ITS STRICTLY PERSONAL”. Making ppl smile & entertaining them is our business & if we don’t take it personally….it will never fly. Thanks to all who gave Pathaan love & all who worked on the film & proved ki mehnat lagan aur bharosa abhi Zinda Hai.Jai Hind
— Shah Rukh Khan (@iamsrk)