ನಟಿ ಸೌಂದರ್ಯ ಮೃತಪಟ್ಟು ಇಂದಿಗೆ 19 ವರ್ಷಗಳಾಗಿದ್ದು, ಅವರ ಸಾವಿನ ಕೊನೆಯ ದಿನ ನೆನಪಿಸಿಕೊಂಡಿದ್ದಾರೆ ನಟಿ ಪ್ರೇಮಾ. ಅವರು ಹೇಳಿದ್ದೇನು?
2004 ಏಪ್ರಿಲ್ 17.. ಅಂದರೆ ಇವತ್ತಿಗೆ ಬರೋಬ್ಬರಿ 19 ವರ್ಷಗಳ ಹಿಂದೆ... ಚಿತ್ರರಂಗದ ಪಾಲಿಗೆ ಕರಾಳ ದಿನ. ಭಾರತೀಯ ಚಿತ್ರರಂಗ ಕಂಡ ಟ್ಯಾಲೆಂಟೆಡ್ ನಟಿ ಸೌಂದರ್ಯ ದುರಂತ ಸಾವು ಕಂಡ ದಿನವಿದು. ತೆಲಂಗಾಣದ ಕರೀಂನಗರಕ್ಕೆ ಚುನಾವಣಾ ಪ್ರಚಾರಕ್ಕೆಂದು ಸೌಂದರ್ಯ ಅವರು ತಮ್ಮ ಸಹೋದರ ಅಮರನಾಥರೊಂದಿಗೆ ಬೆಂಗಳೂರಿನ ಮನೆಯಿಂದ ಹೊರಟಾಗ ವಿಮಾನ ದುರಂತ (Air Crash) ಸಂಭವಿಸಿ ಮೃತಪಟ್ಟರು. ಆ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದರು ಈಕೆ, ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋದರು. ಹೆಸರಿಗೆ ತಕ್ಕಂತೆ ಸೌಂದರ್ಯದ ಘನಿಯಾಗಿದ್ದ ನಟಿ, ಅದ್ಭುತ ನಟನೆಗೆ ಹೆಸರುವಾಸಿಯಾದವರು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಮುಂಚೂಣಿಯಲ್ಲಿದ್ದ ಕಲಾವಿದೆ. ಸೌಂದರ್ಯ ಎಂದಾಕ್ಷಣ ನೆನಪಾಗುವುದು ಆಪ್ತಮಿತ್ರ ಚಿತ್ರ. ವಿಭಜಿತ ವ್ಯಕ್ತಿತ್ವ (split personality) ನಟನೆಯಿಂದ ಮೋಡಿ ಮಾಡಿದ ಸೌಂದರ್ಯ 27ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಕಲಾವಿದೆ. ಈ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು, ಈಕೆಯ ಮರಣದ ನಂತರ ಬಹಿರಂಗಗೊಂಡಿತ್ತು. ಅಂಥ ವ್ಯಕ್ತಿತ್ವ ಈಕೆಯದ್ದು.
ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಬಿಟ್ಟುಹೋದ ಸೌಂದರ್ಯ (Soundarya) ಕುರಿತು ಅವರ ಸ್ನೇಹಿತೆ ಆಗಿದ್ದ ನಟಿ ಪ್ರೇಮಾ ಈ ಸಂದರ್ಭದಲ್ಲಿ ಅಂದಿನ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅವರ 19ನೇ ಪುಣ್ಯತಿಥಿ ಸಂದರ್ಭದಲ್ಲಿ, ಪ್ರೇಮಾ ಅವರ ಈ ಸಂದರ್ಶನ ವೈರಲ್ ಆಗುತ್ತಿದೆ. ಅಂದಹಾಗೆ, ಪ್ರೇಮಾ ಅವರು ಸೌಂದರ್ಯ ಜೊತೆ ನಾನು ನನ್ನ ಹೆಂಡ್ತೀರು, ಆಪ್ತಮಿತ್ರ ಕನ್ನಡ ಚಿತ್ರ ಸೇರಿದಂತೆ ನಾಲ್ಕು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ, ಇನ್ನೆರಡು ತೆಲುಗು ಚಿತ್ರ. ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿರುವ ಪ್ರೇಮಾ, ಕಣ್ಣಿನಿಂದಲೇ ಸಾವಿರ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ಅಪರೂಪದ ನಟಿ ಸೌಂದರ್ಯ ಎಂದಿದ್ದಾರೆ. ನಾಲ್ಕು ಚಿತ್ರಗಳಲ್ಲಿ ಒಟ್ಟಿಗೇ ನಟಿಸುವಾಗ ಸೌಂದರ್ಯ ಅವರ ಗುಣ ನನಗೆ ತುಂಬಾ ಮೆಚ್ಚುಗೆ ಆಗಿತ್ತು. ತುಂಬಾ ಸರಳ ಸ್ವಭಾವದವರು ಆಕೆ. ರಾಮ ನವಮಿ ಬಂತು ಅಂದರೆ ಎಲ್ಲರಿಗೂ ಸೌಂದರ್ಯ ನೆನಪಾಗುತ್ತಿದ್ದರು. ಏಕೆಂದರೆ ಎಲ್ಲರಿಗೂ ಪಾನಕ ಕುಡಿಸುತ್ತಿದ್ದರು ಅವರು ಎಂದಿದ್ದಾರೆ ಪ್ರೇಮಾ (Prema). ಸೌಂದರ್ಯ, ಸೌಂದರ್ಯದ ವಿಚಾರದಲ್ಲಂತೂ ತುಂಬ ಕಾಳಜಿ ವಹಿಸುತ್ತಿದ್ದರು. ಆಹಾರವನ್ನೂ ಮಿತವಾಗಿ ಸೇವಿಸುತ್ತಿದ್ದರು ಎಂದಿದ್ದಾರೆ.
undefined
ಮದ್ವೆ ಮಾಡ್ಕೊಂಡ್ರೆ ಅವಕಾಶ ಕಳೆದುಕೊಳ್ಳುವೆ; ನಟಿ ಸೌಂದರ್ಯಗಿದ್ದ ಭಯ ಇದಂತೆ
ಸಾವಿನ ಸುದ್ದಿ ಬಂದ ದಿನವನ್ನು ನೆನಪಿಸಿಕೊಂಡಿರುವ ಪ್ರೇಮಾ ಕಣ್ಣೀರು ಸುರಿಸಿದರು, 'ಆ ದಿನ ನನಗೆ ಇನ್ನೂ ನೆನಪಿದೆ. ಅಂದು ನಾನು ಸೌಂದರ್ಯ ಮನೆಗೆ ಹೋಗಿದ್ದೆ. ಅಲ್ಲಿ ಸೌಂದರ್ಯ ಅವರ ಶವವನ್ನು ಬಾಕ್ಸ್‌ನಲ್ಲಿ ಇಡಲಾಗಿತ್ತು. ಅದರಲ್ಲಿ ಆಕೆಯ ಶವವಿತ್ತು. ಆದರೆ, ರುಂಡದ ಭಾಗವೇ ಇರಲಿಲ್ಲ. ನಾನು ನೋಡಿ ಬೆಚ್ಚಿಬಿದ್ದಿದ್ದೆ, ತಲೆ ತಿರುಗಿದಂತೆ ಆಯಿತು. ಆ ವೇಳೆ ಮನುಷ್ಯದ ಅದರಲ್ಲಿಯೂ ಕಲಾವಿದರ ಜೀವನ ಇಷ್ಟೇನಾ ಅಂತ ಅನಿಸಿತ್ತು ಎಂದು ಸೌಂದರ್ಯ ಅವರನ್ನು ನೆನೆದು ಪ್ರೇಮಾ ಕಣ್ಣೀರು ಹಾಕಿದರು.
ಸೌಂದರ್ಯ ಮೂಲ ಹೆಸರು ಸೌಮ್ಯ ಸತ್ಯನಾರಾಯಣ (Sowmya Satyanarayana). ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡು ಕೋಟ್ಯಂತರ ಅಭಿಮಾನಿಗಳನ್ನು (Fans) ಗಳಿಸಿದ್ದ ಸೌಂದರ್ಯ, ಚಿಕ್ಕ ವಯಸ್ಸಿನಲ್ಲಿಯೇ ನಿರ್ಮಾಪಕಿಯೂ ಆಗಿದ್ದರು. ಇವರು ಕನ್ನಡದಲ್ಲಿ ನಿರ್ಮಾಣ ಮಾಡಿದ್ದ `ದ್ವೀಪ' (Dweepa) ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡು ಕೋಟ್ಯಂತರ ಅಭಿಮಾನಿಗಳನ್ನು (Fans) ಗಳಿಸಿದ್ದ ಸೌಂದರ್ಯ, ಚಿಕ್ಕ ವಯಸ್ಸಿನಲ್ಲಿಯೇ ನಿರ್ಮಾಪಕಿಯೂ ಆಗಿದ್ದರು. ಇವರು ಕನ್ನಡದಲ್ಲಿ ನಿರ್ಮಾಣ ಮಾಡಿದ್ದ `ದ್ವೀಪ' (Dweepa) ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
Priya Rajvansh: ನಿರ್ದೇಶಕನ ಮಕ್ಕಳಿಂದ ಕೊಲೆಯಾದ ಬಾಲಿವುಡ್ ನಟಿ, ಸೌಂದರ್ಯದ ಘನಿ!