'ಕುಚ್ ಕುಚ್ ಹೋತಾ ಹೈ' ಸಕ್ಸಸ್: ಚಿತ್ರದಲ್ಲಿ ನಟಿಸದ ಟ್ವಿಂಕಲ್​ ಖನ್ನಾಗೂ ಕಾದಿತ್ತು ಸಂಕಟ!

By Suvarna NewsFirst Published Apr 17, 2023, 1:37 PM IST
Highlights

25 ವರ್ಷಗಳ ಹಿಂದೆ ಕುಚ್ ಕುಚ್ ಹೋತಾ ಹೈ ಸಕ್ಸಸ್​ ಕಂಡಾಗ ಅದರಲ್ಲಿ ನಟಿಸದೇ ಇದ್ದರೂ ನಟಿ ಟ್ವಿಂಕಲ್​ ಖನ್ನಾ ಮನೆಯಿಂದ ಮಂಗಳಾರತಿ ಮಾಡಿಸಿಕೊಂಡದ್ದು ಯಾಕೆ? 
 

ಶಾರುಖ್ ಖಾನ್, ಕಾಜೋಲ್ (Kajol) ಮತ್ತು ರಾಣಿ ಮುಖರ್ಜಿ ಅಭಿನಯದ 'ಕುಚ್ ಕುಚ್ ಹೋತಾ' ಚಿತ್ರವು 1998 ರ ವರ್ಷದ ಸೂಪರ್ ಬ್ಲಾಕ್ಬಸ್ಟರ್ ಚಿತ್ರವಾಗಿತ್ತು. ಚಿತ್ರದ ಹಾಡುಗಳ ಜೊತೆಗೆ ಅದರ ಕಥೆಯೂ ಪ್ರೇಕ್ಷಕರಿಗೆ ಇಷ್ಟವಾಯಿತು. ಇನ್ನೊಂದೆಡೆ ಟೀನಾ ಪಾತ್ರದ ಮೂಲಕ ರಾಣಿ ಎಲ್ಲರ ಮನ ಗೆದ್ದಿದ್ದರು. ಆದರೆ ಕರಣ್ ಜೋಹರ್ ಅವರು ಟೀನಾ ಪಾತ್ರವನ್ನು ಟ್ವಿಂಕಲ್ ಖನ್ನಾಗಾಗಿ ಬರೆದಿದ್ದರು ಎನ್ನುವುದು ಗೊತ್ತೆ?  ಆದರೆ ಟ್ವಿಂಕಲ್ ಅವರು, ಕರಣ್ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದರಂತೆ. ಅದನ್ನು ಅವರು ಹಲವಾರು ವರ್ಷಗಳ ಬಳಿಕ ಬಹಿರಂಗಪಡಿಸಿದ್ದಾರೆ.  ವಾಸ್ತವವಾಗಿ, ಈಗ  'ಕುಚ್ ಕುಚ್ ಹೋತಾ ಹೈ'  25 ವರ್ಷಗಳನ್ನು ಪೂರೈಸಿದೆ.  ಈ ಸಂದರ್ಭದಲ್ಲಿ   ಟ್ವಿಂಕಲ್​ ಖನ್ನಾ ಹೇಳಿದ ಮಾತುಗಳು ವೈರಲ್​ ಆಗಿವೆ.   ಟ್ವಿಂಕಲ್ ಖನ್ನಾ (Twinkle Khanna) ಅವರನ್ನು 'ಕುಚ್ ಕುಚ್ ಹೋತಾ' ತೊರೆದಿದ್ದಕ್ಕಾಗಿ ಯಾವುದೇ ಪಶ್ಚಾತ್ತಾಪ ಅಥವಾ ಪಶ್ಚಾತ್ತಾಪವಿದೆಯೇ ಎಂದು ಕೇಳಿದಾಗ, 'ನಿಜ ಹೇಳಬೇಕೆಂದರೆ, ನನ್ನ ಕೈಯಿಂದ ಕುಚ್ ಕುಚ್ ಹೋತಾ ಹೊರಬಂದಿದ್ದಕ್ಕಾಗಿ ನನಗೆ ಯಾವುದೇ ಪಶ್ಚಾತ್ತಾಪ ಅಥವಾ ವಿಷಾದವಿಲ್ಲ. ದುಃಖವಿಲ್ಲ. ಆದರೆ, ಈಗ ಚಿತ್ರ ಸೂಪರ್ ಹಿಟ್ ಆದ ನಂತರ ಉಳಿದೆಲ್ಲ ಪ್ರಶಸ್ತಿಗಳ ವಿಡಿಯೋಗಳನ್ನು ನೋಡಿದಾಗ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದಿದ್ದಾರೆ. ಅಂದು ಕರಣ್​ ಅವರು ಕಥೆಯನ್ನು ಹೊತ್ತು ತಮ್ಮ ಮನೆಗೆ ಬಂದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.  

'ಚಿತ್ರದ ನಿರೂಪಣೆಗೆ ಕರಣ್ ನನ್ನ ಬಳಿಗೆ ಬಂದಿದ್ದರು. ಆ ಸಮಯದಲ್ಲಿ ನಾನು ನನ್ನ ಅಜ್ಜಿಯ ಮನೆಯಲ್ಲಿದ್ದೆ. ನಾವಿಬ್ಬರೂ ಟೆರೇಸ್ ಮೇಲೆ ಕುಳಿತಿದ್ದೆವು, ಟೆರೇಸ್​ನಿಂದ ನೀರು ಜಿನುಗುತ್ತಿತ್ತು. ಇಲ್ಲಿ ಕರಣ್  ಕಥೆ ಹೇಳುತ್ತಿದ್ದರು.  ಅದನ್ನು ಹೇಳುವಾಗ ತುಂಬಾ ಭಾವುಕರಾಗಿದ್ದರು.  ಕಥೆಯಲ್ಲಿ ಮುಳುಗಿಹೋಗಿದ್ದರು. ಆದರೆ ನಾನು ಆ ಪಾರ್ಟ್​ ಮಾಡಲು ಒಪ್ಪಲಿಲ್ಲ. ನಂತರ, ಅವರು ಶಾರುಖ್ ಖಾನ್, ಕಾಜೋಲ್ ಮತ್ತು ರಾಣಿಯಂತಹ ತಾರೆಗಳನ್ನು ಆಯ್ಕೆ ಮಾಡಿಕೊಂಡರು. ಚಿತ್ರ ತುಂಬಾ  ಅದ್ಭುತವಾಗಿ ಮೂಡಿಬಂತು.  ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ ಮತ್ತು ಚಿತ್ರವು ಸೂಪರ್​ ಹಿಟ್ ಆಯಿತು. ಆಗ ನಾನು ಹೋಗದಿದ್ದುದೇ ಒಳ್ಳೇದಾಯ್ತು ಎನ್ನಿಸ್ತು.  ಏಕೆಂದರೆ, ಈ ಚಿತ್ರಕ್ಕೆ ನಾನು ಹೋಗಿದ್ದರೆ ಬಹುಶಃ ಈ ಚಿತ್ರ ಇಷ್ಟೊಂದು ಸೂಪರ್​ಹಿಟ್​ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಅದಕ್ಕಾಗಿಯೇ ಒಳ್ಳೇಯದೇ ಆಯ್ತು ಎಂದುಕೊಳ್ಳುತ್ತೇನೆ ಎಂದಿದ್ದಾರೆ ಟ್ವಿಂಕಲ್​ ಖನ್ನಾ.

Latest Videos

ಆಮೀರ್​ ಖಾನ್​ ಚಿತ್ರ ಹಿಟ್​ ಆಗಿದ್ರೆ ಅಕ್ಷಯ್​ ಕುಮಾರ್​ ಮದ್ವೆನೇ ಆಗ್ತಿರಲಿಲ್ಲ, ಯಾಕೆ ಗೊತ್ತಾ?
 
ಆದರೆ ನಮ್ಮ ಮನೆಯ ವಾತಾವರಣ ಈ ಹಿಟ್​ನಿಂದ ಬದಲಾಯ್ತು. 'ಕುಚ್ ಕುಚ್ ಹೋತಾ' ಸೂಪರ್ ಹಿಟ್ ಆದ ನಂತರ ನಾನು ಆಗಾಗ್ಗೆ ಅಪಹಾಸ್ಯಕ್ಕೆ ಒಳಗಾಗುತ್ತಾ ಬಂದೆ ಎಂದಿದ್ದಾರೆ  ಟ್ವಿಂಕಲ್ ಖನ್ನಾ. ಕೆಲವೊಮ್ಮೆ ನನ್ನ  ಪತಿ ಅಕ್ಷಯ್ ಕುಮಾರ್ ಮತ್ತು ಕೆಲವೊಮ್ಮೆ ಅಮ್ಮ ಡಿಂಪಲ್​ ಕಪಾಡಿಯಾ (Dimple kapadia) ನನ್ನನ್ನು ಹಂಗಿಸತೊಡಗಿದರು.  ಪ್ರತಿ ಹಂತದಲ್ಲೂ ಬೈಯುತ್ತಿದ್ದರು ಎಂದು ನೆನಪಿಸಿಕೊಂಡರು ಟ್ವಿಂಕಲ್​. ಈ ಸಂದರ್ಭದಲ್ಲಿ ಘಟನೆಯೊಂದನ್ನು ನೆನಪಿಸಿಕೊಂಡ ನಟಿ, ಒಂದು ದಿನ ನನ್ನ ತಾಯಿ (ಡಿಂಪಲ್ ಕಪಾಡಿಯಾ) ನನ್ನನ್ನು ಕೇಳಿದ್ದು ನೆನಪಿದೆ, ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿನ ವಿಶೇಷತೆ ಏನು ಎಂದು ನಿಮಗೆ ತಿಳಿದಿದೆಯೇ? ಅದಕ್ಕೆ ಉತ್ತರವಾಗಿ ನಾನು ಹೇಳಿದ್ದು, ಚಿತ್ರದ ಹಾಡುಗಳು. ತಾಯಿ ಹೇಳಿದರು, ಹಾಡುಗಳಿಲ್ಲ, ಚಿತ್ರದ ಉತ್ತಮ ವಿಷಯವೆಂದರೆ ನೀನು ಅದರಲ್ಲಿಲ್ಲ ಅದಕ್ಕೇ ಎಂದರು. ನನಗೆ ಅವರು ನನ್ನನ್ನು ಹಂಗಿಸುತ್ತಿದ್ದಾರೆ ಎಂದು ತಿಳಿಯಿತು ಎಂದರು ನಟಿ.

ಇದಾದ ನಂತರ ಅವರು  ನನ್ನ ಪತಿ ಅಕ್ಷಯ್ ಕುಮಾರ್ (Akshay Kumar) ಬಗ್ಗೆ ಬಹಿರಂಗಪಡಿಸಿದರು. ನಾನು ಈ ಚಿತ್ರವನ್ನು ನಿರಾಕರಿಸಿದ್ದಕ್ಕೆ ಅಕ್ಷಯ್​ ಕುಮಾರ್​ ಅದೆಷ್ಟು ಕೆಟ್ಟಿದಾಗಿ ವರ್ತಿಸುತ್ತಿದ್ದರು ಎಂದರೆ, ಯಾವುದಾದರೂ ಚಿತ್ರಕ್ಕೆ ಅವರಿಗೆ ಸಲಹೆ ನೀಡಲು ಹೋದರೆ, ಅರೆ ನೀನು ಸಲಹೆ ಕೊಡುವುದು ಬೇಡ, ನೀನೇ ತಾನೆ ಕುಚ್​ ಕುಚ್​ ಹೋತಾ ಹೈ ಬೇಡ ಅಂದವಳು, ಈಗ ನನಗೆ ಸಲಹೆ ಕೊಡ್ತಿಯಾ ಎಂದು ಕೇಳುತ್ತಿದ್ದರು ಎಂದಿದ್ದಾರೆ. 

Akshay Kumar: ಥೂ ನಿಮ್ಗೆ ನಾಚಿಕೆ ಆಗಲ್ವಾ ಎಂದು ನಟ ಅಕ್ಷಯ್​ ಕುಮಾರ್​ಗೆ ನೆಟ್ಟಿಗರಿಂದ ತರಾಟೆ!

click me!