ಮೊಡವೆ ತಡೆಯೋಕೆ ಹರ್ಷಿಕಾ ಪೂಣಚ್ಚ ಮಾಡೋದು ಹೀಗೆ; ಹ್ಯಾಂಡ್‌ಬ್ಯಾಗ್‌ ಸೀಕ್ರೆಟ್‌ ರಿವೀಲ್

By Suvarna News  |  First Published Apr 17, 2023, 1:08 PM IST

ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಅವರು ಹೆಚ್ಚಿನ ಸಂದರ್ಭದಲ್ಲಿ ತಮ್ಮ ಬಳಿ ಕಪ್ಪು ಬಣ್ಣದ ವ್ಯಾನಿಟಿ ಬ್ಯಾಗ್​ ಇಟ್ಟುಕೊಂಡಿರುತ್ತಾರೆ. ಈ ಬ್ಯಾಗ್​ನಲ್ಲಿ ಅಂಥದ್ದೇನಿದೆ ಎಂದು ತಲೆಕೆಡಿಸಿಕೊಂಡ ಫ್ಯಾನ್ಸ್​ಗೆ ಖುದ್ದು ನಟಿಯೇ ವಿವರಣೆ ನೀಡಿದ್ದಾರೆ. 
 


ಕನ್ನಡ, ತೆಲುಗು, ತಮಿಳು, ಕೊಡವ, ತುಳು, ಕೊಂಕಣಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ  ಕೊಡಗಿನ ಸುಂದರಿ ಹರ್ಷಿಕಾ ಪೂಣಚ್ಚ (Harshika Poonaccha). ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿ ದಕ್ಷಿಣ ಭಾರತದ ಹಲವಾರು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹರ್ಷಿಕಾ ಈಗ ಒಂದು ಹೆಜ್ಜೆ ಮುಂದಿಟ್ಟು ಭೋಜಪುರಿ ಸಿನಿರಂಗದತ್ತ ಕಾಲಿಟ್ಟಿದ್ದು, ಅಲ್ಲಿ ಅದೃಷ್ಟ ಪರೀಕ್ಷೆಗೆ  ಮುಂದಾಗಿದ್ದಾರೆ. ಭೋಜಪುರಿ ಹೀರೋ ಪವನ್​ ಸಿಂಗ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್​ ಆಗಿರೋ ಹರ್ಷಿಕಾ, ಇದೀಗ ಯೂಟ್ಯೂಬ್​ ಚಾನೆಲ್​ ಒಂದರಲ್ಲಿ ತಮ್ಮ ಬ್ಯಾಗ್​ನಲ್ಲಿ ತಾವು ಏನೇನು ಇಟ್ಟುಕೊಂಡಿದ್ದೇವೆ ಎಂಬ ಬಗ್ಗೆ ಕುತೂಹಲವನ್ನು ಕ್ರಿಯೇಟ್​ ಮಾಡಿ, ಬ್ಯಾಗ್​ನಲ್ಲಿರೋ ಒಂದೊಂದೇ ವಸ್ತುಗಳನ್ನು ತೋರಿಸಿದ್ದಾರೆ. ಈ ಮೂಲಕ ತಮ್ಮ ಬ್ಯಾಗ್​ನಲ್ಲಿ ಏನೆಲ್ಲಾ ಇದ್ದಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದ ಫ್ಯಾನ್ಸ್​ ಆಸೆಯನ್ನು ಪೂರ್ಣಗೊಳಿಸಿದ್ದಾರೆ. ಪುಟ್ಟ ಬ್ಯಾಗ್​ನಲ್ಲಿ ಏನೆಲ್ಲಾ ಬ್ರಹ್ಮಾಂಡ ಅಡಗಿರಬಹುದು ಎಂದು ಆಸೆ ಕಣ್ಣುಗಳಿಂದ ಕಾಯುತ್ತಿರೋ ಅಭಿಮಾನಿಗಳನ್ನು ನಟಿ ಫುಲ್​ ಖುಷ್​ ಮಾಡಿದ್ದಾರೆ. ​  

ಅಷ್ಟಕ್ಕೂ ಅವರ ಬ್ಯಾಗ್​ನಲ್ಲಿ (Bag) ಏನು ಇದ್ದರೆ ಯಾರಿಗೆ ಏನಂತೆ ಎಂದು ಒಂದು ವರ್ಗ ಕೇಳಬಹುದು. ಆದರೆ ಹೆಚ್ಚಿನ ಮಂದಿಗೆ ಚಿತ್ರತಾರೆಯರ ಪ್ರತಿಯೊಂದು ವಿಷಯವೂ ಬಹಳ ಕುತೂಹಲ ಎನ್ನಿಸುವುದು ಉಂಟು. ಅದರಲ್ಲಿಯೂ ನಟ-ನಟಿಯರ ಅಭಿಮಾನಿಯಾಗಿದ್ದರೆ ಸಾಕು, ಅಭಿಮಾನ ಅತಿರೇಕಕ್ಕೂ ಹೋಗುವ ಬಗ್ಗೆ ಹಲವಾರು ಘಟನೆಗಳನ್ನು ನೋಡಿದ್ದೇವೆ. ಇದರ ಹೊರತಾಗಿಯೂ ಸೆಲೆಬ್ರಿಟಿಗಳ ಜೀವನ ಕ್ರಮ, ಅವರು ಹೇಗೆ ಬದುಕುತ್ತಾರೆ, ಏನೇನು ತಿನ್ನುತ್ತಾರೆ, ಯಾವ ಬ್ರ್ಯಾಂಡ್​ ಉಪಯೋಗಿಸುತ್ತಾರೆ, ಅವರ ಜೀವನಶೈಲಿ (Life Style) ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ. ಆದರೆ ನೇರವಾಗಿ ಅವರ ಬಳಿ ಕೇಳಲು ಆಗದ ಕಾರಣದಿಂದಲೇ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಎನ್ನುವ ಕಾರಣಕ್ಕೆ ನಟ-ನಟಿಯರು ಅವರ ಆಸೆಯನ್ನು ಈ ರೀತಿ ಯೂಟ್ಯೂಬ್​ ಚಾನೆಲ್​ಗಳ ಮೂಲಕ ತೋರಿಸುವುದು ಉಂಟು. ಇದನ್ನೇ ಉಪಯೋಗಿಸಿಕೊಳ್ಳುವ ಕೆಲವು ಜಾಹೀರಾತು ಕಂಪೆನಿಗಳು, ತಮ್ಮ ಬ್ರ್ಯಾಂಡ್ ಪ್ರಮೋಷನ್​ ಮಾಡಿಕೊಳ್ಳುವುದೂ ಉಂಟು.  ಇದು ಜಾಹೀರಾತಿನ ಇನ್ನೊಂದು ಪಾರ್ಟ್​ ಅಷ್ಟೇ.

Tap to resize

Latest Videos

ನಾನು ರೈತನನ್ನೇ ಮದ್ವೆ ಆಗ್ತೇನೆ: ಹರ್ಷಿಕಾ ಪೂಣಚ್ಚ

ಅದೇನೇ ಇದ್ದರೂ, ಇದೀಗ ನಟಿ ತಾವು ದಿನವೂ ಏನೆಲ್ಲಾ ಕ್ಯಾರಿ ಮಾಡುತ್ತೇವೆ ಎಂಬ ಬಗ್ಗೆ ವಿಡಿಯೋದಲ್ಲಿ ಶೇರ್​ ಮಾಡಿದ್ದಾರೆ. ಕಪ್ಪು ಬಣ್ಣದ ಅಂದದ ಪುಟ್ಟ ಬ್ಯಾಗ್​ನಲ್ಲಿ ಹೆಚ್ಚಾಗಿ ಇದ್ದುದು ಮೇಕಪ್​ ಸಾಮಗ್ರಿಗಳು ಹಾಗೂ ಸ್ಕಿನ್​ ಕೇರ್​ ಪ್ರಾಡಕ್ಟ್ಸ್​ಗಳು  ಎಂದು ಬೇರೆ ಹೇಳಬೇಕಾಗಿಲ್ಲ. ಇಷ್ಟಿದ್ದರೂ ಆಕೆಯ ಬ್ಯಾಗ್​ ಒಳಗೆ ಏನಿರಬಹುದು ಎನ್ನುವ ಕುತೂಹಲ ತಣಿಸಿದ್ದಾರೆ ನಟಿ ಹರ್ಷಿಕಾ. ಇದಕ್ಕಾಗಿ ತಮ್ಮ ಬ್ಯಾಗ್​ನಲ್ಲಿ ಇರುವ ಒಂದೊಂದೇ ವಸ್ತುಗಳನ್ನು ಹೊರಕ್ಕೆ ಹಾಕುತ್ತಾ ಸಾಗಿದ್ದಾರೆ. ಮೊದಲಿಗೆ ಮಾಸ್ಕ್​ (Mask) ಹೊರ ತೆಗೆದಿದ್ದಾರೆ. ಕೊರೋನಾ ಟೈಮ್​ನಲ್ಲಿ ಮಾಸ್ಕ್​ ಕಡ್ಡಾಯವಾಗಿದ್ದರೂ ನಟಿ ಮಾಸ್ಕ್​ ಇಟ್ಟುಕೊಂಡಿರುವ ಹಿಂದೆ ಇನ್ನೂ ಎರಡು ಕಾರಣಗಳು ಇವೆ. ಅದನ್ನು ಖುದ್ದು ಅವರೇ ಹೇಳಿದ್ದಾರೆ. ಅದೇನೆಂದರೆ, ಮೇಕಪ್​ ಇಲ್ಲದ ಸಮಯದಲ್ಲಿ ಮಾಸ್ಕ್​ ಹಾಕಿಕೊಳ್ಳುತ್ತೇನೆ ಎಂದೂ ಇನ್ನು, ಮಾರ್ಕೆಟ್​, ಶಾಪಿಂಗ್​ ಇತ್ಯಾದಿ ಕಡೆ ಹೋದಾಗ  ತಮ್ಮ ಗುರುತನ್ನು ಯಾರೂ ಹಿಡಿಯಬಾರದು ಎನ್ನುವ ಕಾರಣಕ್ಕೆ ಇದನ್ನು ಉಪಯೋಗಿಸುವುದಾಗಿ ಹೇಳಿದ್ದಾರೆ.

ಇದಾದ ಬಳಿಕ, ನಟಿ ಬ್ಯಾಗ್​ನಲ್ಲಿ ಇರುವ ಸನ್​ಗ್ಲಾಸ್​, ಕಾರಿನ ಕೀ, ಡೆಬಿಟ್​ ಕಾರ್ಡ್​, ಪ್ಯಾನ್ ಕಾರ್ಡ್​​, ಆಧಾರ್​ ಕಾರ್ಡ್​ ತೋರಿಸಿದ್ದಾರೆ. ಜೊತೆಗೆ ಇಷ್ಟದ ಪರ್​ಫ್ಯೂಮ್​,  ಲಿಪ್​ಸ್ಟಿಕ್​, ಲಿಪ್​ಬಾಮ್​, ಮಾಯ್​ಶ್ಚರೈಸರ್​, ಎರಡೆರಡು ಸ್ಮಾರ್ಟ್​ಫೋನ್​,  ಸನ್​ಸ್ಕ್ರೀನ್​​ ಲೋಷನ್​ಗಳನ್ನು ಬ್ಯಾಗ್​ನಿಂದ ತೆಗೆದು ತೋರಿಸಿದ್ದಾರೆ. ಬಿಸಿಲಿನ ಝಳ ವಿಪರೀತ ಆಗಿರುವ ಹಿನ್ನೆಲೆಯಲ್ಲಿ ದಯವಿಟ್ಟು ಎಲ್ಲರೂ ಸನ್​ಸ್ಕ್ರೀನ್​​ ಲೋಷನ್​ ಬಳಸಿ ಎಂದು ನಟಿ ಟಿಪ್ಸ್​ (Tips) ಕೊಟ್ಟಿದ್ದಾರೆ. 'ಪಿಂಪಲ್​ ಮಾರ್ಕ್ಸ್​ ಏನು ಮಾಡಿದರೂ ಹೋಗ್ತಾ ಇಲ್ಲ, ಇನ್ನೂ ಡಾರ್ಕ್​ ಆಗ್ತಾ ಇದೆ ಎನಿಸುತ್ತಾ ಇರುತ್ತದೆ. ಅದಕ್ಕೆ ಕಾರಣ ನೀವು ಸರಿಯಾಗಿ ಎಸ್​ಪಿಎಫ್​ (Sun Protection Factor) ಯೂಸ್​ ಮಾಡ್ತಾ ಇಲ್ಲದೇ ಇರೋದು ಎಂದಿದ್ದಾರೆ ಹರ್ಷಿಕಾ.  ದಯವಿಟ್ಟು ಎಲ್ಲರೂ ಇದನ್ನು ಯೂಸ್​ ಮಾಡಿ ಎಂದಿರೋ ನಟಿ, ತಾವು SPF 30 ಬಳಸುತ್ತಿದ್ದು, SPF 50ರವರೆಗೂ ಬಳಸಬಹುದು. ದಿನವೂ ಅದನ್ನು ಯೂಸ್​ ಮಾಡಿದರೆ ಮೊಡವೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂದಿದ್ದಾರೆ. ಇದರ ಜೊತೆ ಮಿಂಟ್​ ಬಾಕ್ಸ್​, ವಿಟಮಿನ್​ ಸಿ ಟ್ಯಾಬ್ಲೆಷ್​ ಹಾಗೂ ಕ್ಯಾಷ್​ ತೋರಿಸಿದ ನಟಿ ತಮ್ಮ ಬ್ಯಾಗ್​ನಲ್ಲಿ ಏನಿದ್ದಿರಬಹುದು ಎಂಬ ಫ್ಯಾನ್ಸ್​ ಕುತೂಹಲ ತಣ್ಣಗಾಗಿಸಿದ್ದಾರೆ.

ಚಿಕ್ಕವಳಿದ್ದಾಗ ವಿಲನ್ ಅಮ್ಮ, ದೊಡ್ಡವಳಾದ ಮೇಲೆ ಹೀರೋ ಆದ್ರು: ಹರ್ಷಿಕಾ ಪೂಣಚ್ಚ

ಅಂದಹಾಗೆ ಎಷ್ಟೋ ಜನರಿಗೆ ಗೊತ್ತಿರಲಿಕ್ಕಿಲ್ಲ. 2008ನೇ ಸಾಲಿನಲ್ಲಿ  ಪಿಯುಸಿ ಓದುತ್ತಿರುವಾಗಲೇ  ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು (Career) ಪ್ರಾರಂಭಿಸಿದವರು ಹರ್ಷಿಕಾ.  ಪಿಯುಸಿಯ ಬಳಿಕ ಕೊಡವ ಭಾಷೆಯ ಪೊನ್ನಮ್ಮ,  ಕೊಂಕಣಿ ಚಲನಚಿತ್ರ ಕಜಾರ್ ಮತ್ತು ತೆಲುಗು ಚಲನಚಿತ್ರ ಎಡುಕೊಂಡಲವಾಡ ವೆಂಕಟರಮಣ ಅಂಡಾರು ಬಾಗುಂಡಲಿಯಲ್ಲಿ ನಟಿಸಿದರು. ಬಳಿಕ 2010ರಲ್ಲಿ  ಪುನೀತ್ ರಾಜ್‌ಕುಮಾರ್ (Puneeth Rajkumar) ಅವರೊಂದಿಗೆ ಜಾಕಿಯಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ನಂತರ ಶಿವರಾಜ್‌ಕುಮಾರ್‌ ಜೊತೆ ಥಮಸ್ಸುನಲ್ಲಿ ತೆರೆ ಹಂಚಿಕೊಂಡರು. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿತು.  ರವಿಚಂದ್ರನ್ ಜೊತೆ  ನಾರಿಯ ಸೀರೆ ಕದ್ದ, ಶಿವಾರ್ಜುನ್ ಜೊತೆ ಸೈಕಲ್,  ಹಾಸ್ಯ ಚಿತ್ರ 5 ಈಡಿಯಟ್ಸ್‌ನಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇಷ್ಟೇ ಅಲ್ಲದೇ,  ತಮಿಳು ಚಿತ್ರ ಆನಂದ ತೊಲ್ಲೈಗೆ ಸಹಿ ಹಾಕಿದ್ದಾರೆ.  ಹೂ ಮನಸೇ ಎಂಬ ವಿಡಿಯೋ ಆಲ್ಬಂನಲ್ಲಿಯೂ ಕಾಣಿಸಿಕೊಂಡಿದ್ದಾರೆ. 2021 ರಲ್ಲಿ ಪವನ್ ಸಿಂಗ್ ಅವರೊಂದಿಗೆ ಹಮ್ ಹೈ ರಾಹಿ ಪ್ಯಾರ್ ಕೆ ಚಿತ್ರದಿಂದ ಭೋಜ್‌ಪುರಿ ಪದಾರ್ಪಣೆ ಮಾಡಿದ್ದು, ಇದರ ಶೂಟಿಂಗ್​ ಮುಗಿದಿದೆ.

 

click me!