ಹಿರಿಯ ನಟಿ ಶ್ರುತಿ ಅವರ ತಂದೆ ಕೆಜಿಎಫ್-2 ಸಿನಿಮಾದಲ್ಲಿ ಯಶ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಚಿತ್ರದ ಈಶ್ವರಿ ಅವರ ಪಾತ್ರಕ್ಕೆ ನಟಿ ಶ್ರುತಿ ಧ್ವನಿ ನೀಡಿದ್ದಾರೆ.
ಸಿನಿ ಪ್ರಿಯರು ಭಾರಿ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷೆಯ ಕೆಜಿಎಫ್ 2 (KGF 2) ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ. ವಿಶ್ವದಾದ್ಯಂತ 12ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ರಾರಾಜಿಸುತ್ತಿದೆ. ಏಪ್ರಿಲ್ 14ರಂದು ತೆರೆಗೆ ಬಂದ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಅಭಿಮಾನಿಗಳು ಮತ್ತು ಅನೇಕ ಸಿನಿಮಾ ಗಣ್ಯರು ಸಹ ಚಿತ್ರ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಕೆಜಿಎಫ್-2 ಸಿನಿಮಾತಂಡದವರಾದ ಶ್ರೀನಿಧಿ ಶೆಟ್ಟಿ, ಹರೀಶ್ ರೈ, ಗರುಡ, ಅಯ್ಯಪ್ಪ, ಅರ್ಚನಾ ಇಂದು ಬೆಳಗ್ಗೆ ಊರ್ವಶಿ ಚಿತ್ರಮಂದಿರದಲ್ಲಿ ಮೊದಲ ಶೋ ವೀಕ್ಷಿಸಿದ್ದಾರೆ. ಇವರ ಜೊತೆಯೇ ನಟಿ ಆಶಾ ಭಟ್, ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಸೇರಿದಂತೆ ಅನೇಕರು ಕೆಜಿಎಫ್-2 ನೋಡಿ ಕಣ್ತುಂಬಿಕೊಂಡಿದ್ದಾರೆ.
ಈ ನಡುವೆ ಹಿರಿಯ ನಟಿ ಶ್ರುತಿ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ ಅವರ ತಂದೆ ಕೂಡ ನಟಿಸಿದ್ದಾರೆ. ಈ ಬಗ್ಗೆ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಯಶ್ ತಂದೆಯ ಪಾತ್ರದಲ್ಲಿ ಶ್ರುತಿ ತಂದೆ ನಟಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಕುಟುಂಬದ ಜೊತೆ ಸಿನಿಮಾ ವೀಕ್ಷಿಸಿದ ಶ್ರುತಿ ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕನ್ನಡದ ಹೆಮ್ಮೆ ರಾಕಿಂಗ್ ಸ್ಟಾರ್ ಯಶ್ ಎಂದು ಬಣ್ಣಿಸಿದ್ದಾರೆ. ಶ್ರುತಿ ತಂದೆಗೆ 75 ವರ್ಷ. ಈ ವಯಸ್ಸಿನಲ್ಲಿ ಯಶ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ತುಂಬಾ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. ಇನ್ನು ಮತ್ತೊಂದು ವಿಶೇಷ ಎಂದರೆ ನಟಿ ಶ್ರುತಿ ಈ ಸಿನಿಮಾದಲ್ಲಿ ನಟಿಸಿರುವ ಈಶ್ವರಿ ಅವರ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.
'KGF ಕನ್ನಡದ ಹೆಮ್ಮೆ. ಚಿತ್ರ ತಂಡಕ್ಕೆ ಪ್ರೀತಿಯ ಅಭಿನಂದನೆಗಳು ಮುಖ್ಯವಾಗಿ ನನ್ನ ಪ್ರೀತಿಯ ಸಹೋದರ, ನಾಡಿನ ಹೆಮ್ಮೆಯ ಕಲಾವಿದ ಯಶ್. What an acting, what an attitude you made us proud ಈ ಚಿತ್ರದಲ್ಲಿ ಇನ್ನೊಂದು ವಿಶೇಷ ಅಂದ್ರೆ ಯಶ್ ಅವರ ತಂದೆ ಪಾತ್ರದಲ್ಲಿ ನನ್ನ ತಂದೆ ಅಭಿನಯಿಸಿರೋದು. 75ನೇ ವರ್ಷದಲ್ಲಿ ನನ್ನ ತಂದೆ act ಮಾಡಿರೋದು ನನ್ನ ಹೆಮ್ಮೆಯ ವಿಚಾರ ಹಾಗು ಈ ಚಿತ್ರದಲ್ಲಿ ಅಭಿನಯಿಸಿರುವ ಈಶ್ವರಿ ಅವರಿಗೆ ನಾನು ಡಬ್ಬಿಂಗ್ ಮಾಡಿರುವುದು ಮೊದಲನೆ ಅನುಭವ thanks to the director prashanth sir'ಎಂದು ಹೇಳಿದ್ದಾರೆ.
KGF 2 ಮುಂದೆ ಯಾವ ಬಾಹುಬಲೀನೂ ಇಲ್ಲ, ಕೊನೆಯ ಟ್ವಿಸ್ಟ್ ನೋಡಿದ್ರೆ KGF 3 ಪಕ್ಕಾ! ಸಿನಿಮಾ ಹೈಲೈಟ್ಸ್ ಏನು?
ಅಂದಹಾಗೆ ಕೆಜಿಎಫ್-2 ವೀಕ್ಷಿಸಿದ ಪ್ರತಿಯೊಬ್ಬರು ಹಾಡಿಹೊಗಳುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಅನೇಕ ಸಿನಿ ಗಣ್ಯರು ಸಹ ಚಿತ್ರ ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ನಟನೆ, ಸಂಜಯ್ ದತ್ ಪಾತ್ರ ಪ್ರತಿಯೊಂದು ಸಹ ಸಿನಿ ರಸಿಕರ ಹೃದಯ ಗೆದ್ದಿದೆ. ದಾಖಲೆ ಮಟ್ಟದಲ್ಲಿ ರಿಲೀಸ್ ಆಗಿರುವುದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಮ್ಮೆ ಎನ್ನುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಕೆಜಿಎಫ್-2 ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಯಶ್ ವಿರುದ್ಧ ತೆಲುಗು ಮಾಧ್ಯಮ ಗರಂ; ಅಲ್ಲು ಅರ್ಜುನ್ ಗಾಗಿದ್ದ ಅವಮಾನಕ್ಕೆ ಸೇಡು ತೀರಿಸಿಕೊಂಡ್ರಾ?
ಬೆಂಗಳೂರಿನ ಊರ್ವಶಿ, ಮೈಸೂರಿನ ಡಿಸಿಆರ್ ಸೇರಿದಂತೆ ರಾಜ್ಯದ ಹಲವು ಥಿಯೇಟರ್‌ನಲ್ಲಿ(Theatre) ಕೆಜಿಎಫ್-2 (KGF 2) ಸಿನಿಮಾ ಬುಧವಾರ ರಾತ್ರಿ 12 ಗಂಟೆಗೆ ಮೊದಲೇ ಪ್ರದರ್ಶನ ಕಂಡಿದೆ. ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಬೃಹತ್ ಕಟೌಟ್ ಗಳು ರಾರಾಜಿಸುತ್ತಿವೆ. ಡೊಳ್ಳು ಕುಣಿತ, ಹೂವಿನ ಹಾರಗಳ ಅಲಂಕಾರದಿಂದ ಚಿತ್ರಮಂದಿರಗಳನ್ನು ಸಿಂಗರಿಸಲಾಗಿದೆ. ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ.